ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಬಿ ಸುರೇಶ ಶೆಟ್ಟಿ , ತಂದೆ: ದಿ. ಕೆ ಕುಶಲ ಶೆಟ್ಟಿ, ವಾಸ: ಅನುಗೃಹ ನಿಲಯ ಬಡನಿಡಿಯೂರು ಇವರ ತಮ್ಮ ಸುಜೀರ್ ಶೆಟ್ಟಿ(53) ರವರು 20 ವರ್ಷದ ಹಿಂದೆ  ಬಾಂಬೆಯಲ್ಲಿ ಇರುವಾಗ ಅಫಘಾತಕ್ಕೊಳಗಾಗಿ  ತಲೆಗೆ  ಜಖಂ ಆಗಿದ್ದು , ಚಿಕಿತ್ಸೆ ಪಡೆದು  ಊರಿನಲ್ಲಿದ್ದು  ಅದೇ ವಿಚಾರದಲ್ಲಿ  ಮಾನಸಿಕವಾಗಿದ್ದು  ಆ ಬಗ್ಗೆ  ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ  ಚಿಕಿತ್ಸೆಯನ್ನು  ಪಡೆಯುತ್ತಿದ್ದರು , ದಿನಾಂಕ 07/06/2021 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 08/06/2021 ರಂದು  ಮಧ್ಯಾಹ್ನ 2:00 ಗಂಟೆಯ  ಮಧ್ಯಾವದಿಯಲ್ಲಿ  ಸುಜೀರ್ ಶೆಟ್ಟಿ ಇವರು  ಮಾನಸಿಕ ಕಾಯಿಲೆ  ಗುಣವಾಗದೇ ಇದ್ದುದರಿಂದ  ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ಅವರ ಮನೆಯ ಅಂಗಳದಲ್ಲಿದ್ದ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 29/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ಶ್ರೀಮತಿ ಜಯ (35), ಗಂಡ: ಮಂಜುನಾಥ ನಾಯ್ಕ, ವಾಸ: ಉಪ್ಪಳ ಶಾಲೆಯ ಬಳಿ ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು ಇವರ ಗಂಡ ಮಂಜುನಾಥ ನಾಯ್ಕ (48) ರವರು ಗಾರೇ ಕೆಲಸವನ್ನು ಮಾಡಿಕೊಂಡಿದ್ದು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿರುತ್ತಾರೆ.  ಅವರು ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಜಗಳವನ್ನು ಮಾಡುತ್ತಿದ್ದರು ಮಂಜುನಾಥ ನಾಯ್ಕ ರವರು ವಿಪರೀತ ಮದ್ಯಪಾನದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 07/06/2021 ರಂದು ಮಧ್ಯಾಹ್ನ 03:00 ಗಂಟೆಯಿಂದ ದಿನಾಂಕ 08/06/2021 ರಂದು ಸಂಜೆ 05:30 ಗಂಟೆಯ ಮಧ್ಯಾವಧಿಯಲ್ಲಿ ಮುದ್ರಾಡಿ ಗ್ರಾಮದ ಉಪ್ಪಳ ಶಾಲೆಯ ಬಳಿ ಇರುವ  ಅವರ ವಾಸದ ಮನೆಯ ಹಾಲ್ ನಲ್ಲಿ ಮನೆಯ 2 ಬದಿಯ ಬಾಗಿಲನ್ನು ಹಾಕಿ ಹಾಲ್ ನಲ್ಲಿ ಇದ್ದ ಪ್ಲಾಸ್ಟಿಕ್ ಟೇಬಲ್ ಹತ್ತಿ ಕೇಬಲ್ ವೈಯರ್ ನ್ನು ಕಬ್ಬಿಣದ ಆ್ಯಂಗಲರ್ ಗೆ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಕೆಳಗೆ ಹಾರುವಾಗ ಆ್ಯಂಗಲರ್ ಗೆ ಕಟ್ಟಿದ ವೈಯರ್ ತುಂಡಾಗಿ ಅವರು ನೆಲದ ಮೇಲೆ ಬಿದ್ದ ಪರಿಣಾಮ ಅವರ ಬಲಬದಿಯ ತಲೆಗೆ ಗಾಯವಾಗಿ ವಿಪರೀತ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 21/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಬ್ರಹ್ಮಾವರ: ದಿನಾಂಕ 08/06/2021 ರಂದು ಗುರುನಾಥ ಬಿ. ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ನಂದಿನ ಡೈರಿ ಎದುರು ಇರುವ ಹಾಡಿ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಿ ಓಡಿ ಹೋಗಲು ಪ್ರಯತ್ನಿಸಿದ ಆರೋಪಿಗಳಾದ 11) ಸುನಿಲ್‌ನಾಯಕ್‌‌‌‌ ಪ್ರಾಯ : 29 ವರ್ಷ ತಂದೆ : ಸೀತಾ ರಾಮ ನಾಯಕ ವಾಸ :ಶ್ರೀ ನಿಲಯ, ಆತ್ರಾಡಿ, 80 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು, 2) ಶ್ರೀಧರ ಪೂಜಾರಿ ಪ್ರಾಯ : 30 ವರ್ಷ ತಂದೆ :ಶಂಕರ ಪೂಜಾರಿ ವಾಸ : ಸಾಸ್ತಾನ, ಪಾಂಡೇಶ್ವರ ಗ್ರಾಮ, ಬ್ರಹ್ಮಾವರ ತಾಲೂಕು ,3) ಸಂದೀಪ್‌‌‌ ಪೂಜಾರಿ ಪ್ರಾಯ : 32 ವರ್ಷ ತಂದೆ : ಸುರೇಶ ಪೂಜಾರಿ ವಾಸ : ಕೆರ್ಳಾಕಲ ಬೆಟ್ಟು, ತೆಂಕನಿಡಿಯೂರು ಗ್ರಾಮ, ಉಡುಪಿ ತಾಲೂಕು , 4) ರಾಘವೇಂದ್ರ ಶೆಣೈ ಪ್ರಾಯ : 28 ವರ್ಷ ತಂದೆ : ಗೋವಿಂದ ಶೆಣೈ ವಾಸ : ಲಕ್ಷ್ಮೀ ನಿವಾಸ, ಹೆರ್ಗಾ ಅಂಚೆ ಪರ್ಕಳ 80 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು, 5) ಆಶೋಕ ನಾಯಕ್‌ಪ್ರಾಯ : 26 ವರ್ಷ ತಂದೆ : ಕೃಷ್ಣ ನಾಯಕ ವಾಸ : ಮಾಣಿಬೆಟ್ಟು, ಪರ್ಕಳ,80 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ,6) ಗುರುರಾಜ ಶೆಟ್ಟಿ ಪ್ರಾಯ : 32 ವರ್ಷ ತಂದೆ : ಜಯಪ್ರಕಾಶ ಶೆಟ್ಟಿ ವಾಸ : ಶ್ರೀನಿಧಿ ನಿಲಯ ಖಾಜಾನೆ ಶಿವಪುರ ಗ್ರಾಮ, ಹೆಬ್ರಿ ತಾಲೂಕು, 7). ಸತೀಶ ಕುಲಾಲ್‌‌ ಪ್ರಾಯ:33 ವರ್ಷ ತಂದೆ:ದುಗ್ಗಪ್ಪ ಕುಲಾಲ್‌ ‌ವಾಸ: ಬಜ್ಜಾಳು ಪೆರ್ಡೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು 8. ವಿರೇಶ ಗುಂಡ ನಾಯ್ಕ್‌‌‌ಪ್ರಾಯ 24 ವರ್ಷ ತಂದೆ: ತುಕಾರಾಮ ವಾಸ :  ಗಿರಿ, ಉಪ್ಪೂರು ಗ್ರಾಮ ಇವರನ್ನು  ಹಿಡಿದು ಆರೋಪಿತರು ಇಸ್ಪಿಟ್‌ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 3,400/- ಮತ್ತು ಇಸ್ಪೀಟ್ ಎಲೆಗಳು 52, ಹಾಗೂ ಅವುಗಳನ್ನು ಹಾಕಿದ್ದ ಹಳೇಯ ಪೇಪರ್‌‌ನ್ನು ಮತ್ತು ಆರೋಪಿತರು ಇಸ್ಪೀಟ್‌ ಆಡಲು ಬಂದ KA-20-MD-3614 ನೇ ನೊಂದಣಿ ನಂಬ್ರದ ಬ್ಲ್ಯೂ ಬಣ್ಣದ ಮಾರುತಿ ಕಂಪನಿಯ ಬೆಲೇನೋ ಕಾರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ, ಕಾರಿನ  ಮೌಲ್ಯ ರೂಪಾಯಿ 5,00,000/- ಆಗಿರುತ್ತದೆ. ಅಲ್ಲದೇ  ಆರೋಪಿಗಳು ಕೋವಿಡ್‌‌‌19, ಲಾಕ್‌‌ಡೌನ್‌‌ಇದ್ದರೂ ಸಹಾ ಕೋವಿಡ್‌‌-19 ರ ಮಾಹಿತಿಯನ್ನು ತಿಳಿದರು ಸಹಾ   ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116/2021 ಕಲಂ:  269 ಐಪಿಸಿ & 87 ಕೆಪಿ ಆ್ಯಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ನೇತ್ರಾವತಿ ಖಾರ್ವಿ (32), ಗಂಡ: ರಾಮಚಂದ್ರ ಖಾರ್ವಿ, ವಾಸ: ಚೌಕಿಮನೆ, ಕೊಡೇರಿ, ಕಿರಿಮಂಜೇಶ್ವರ  ಗ್ರಾಮ, ಬೈಂದೂರು ತಾಲೂಕು ಹಾಗೂ ಅವರ ಸಂಬಂಧಿ ಲಕ್ಮ್ಷಿಖಾರ್ವಿರವರಿಗೂ ರಸ್ತೆಯ ವಿಚಾರದಲ್ಲಿ ತಕರಾರು ಇದ್ದು,  ದಿನಾಂಕ 08/06/2021 ರಂದು ಪಿರ್ಯಾದಿದಾರರ ಗಂಡ ರಾಮಚಂದ್ರ ಖಾರ್ವಿರವರು ಸೊಸೈಟಿಗೆ ಹೋಗಿ ಅಕ್ಕಿ ಮತ್ತು ಇತರ ಸಾಮಾನುಗಳನ್ನು ಮನೆಗೆ ತಂದು ರಿಕ್ಷಾವನ್ನು ವಾಪಾಸ್ ಹೋಗಲು ತಿಳಿಸಿದಾಗ ಬೆಳಿಗ್ಗೆ 10:30 ಗಂಟೆಗೆ ಆರೋಪಿತರಾದ ಭೋಜಖಾರ್ವಿ ಮತ್ತು ರೇಖಾರವರು ರಿಕ್ಷಾವನ್ನು ತಡೆದು ನಿಲ್ಲಿಸಿ ಈ ದಾರಿಯಲ್ಲಿ ಹೋಗಬಾರದು ಎಂದು ರಿಕ್ಷಾ ಚಾಲಕನ ಹತ್ತಿರ ಹೇಳಿದಾಗ ಪಿರ್ಯಾದಿದಾರರು ಮತ್ತು ಅವರ ಗಂಡ ಹೋಗಿ ಭೋಜಖಾರ್ವಿ ಮತ್ತು ರೇಖಾಳ ಹತ್ತಿರ ಕೇಳಿದಾಗ ಆಪಾದಿತರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ಸಗಳಿಂದ ಬೈದು ಪಿರ್ಯಾದಿದಾರರಿಗೆ ಹಾಗೂ ಅವರ ಗಂಡನಿಗೆ ತೆಂಗಿನ ಹೆಡೆಯಿಂದ ತಲೆಗೆ, ಮೈಗೆ ಹೊಡೆದಿದ್ದಲ್ಲದೇ ಭೋಜ ಖಾರ್ವಿಯು ನೀರಿನ ಪೈಪಿನಿಂದ ಪಿರ್ಯಾದಿದಾರರಿಗೆ ಹಾಗೂ ಅವರ ಗಂಡನಿಗೆ ಮತ್ತು ಮಾವ ನಾರಾಯಣ ರವರಿಗೆ ಹೊಡೆದಿರುತ್ತಾರೆ. ಅಲ್ಲದೇ ಇನ್ನೂ ಮುಂದಕ್ಕೆ ಈ ದಾರಿಯಲ್ಲಿ ನಡೆದಾಡಿದರೆ ನಿಮ್ಮನ್ನು ಕೊಂದು ಮುಗಿಸುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾರೆ, ಅಲ್ಲದೇ ಪಿರ್ಯಾದಿದಾರರು ಹಾಗೂ ಅವರ ಗಂಡ, ಮಾವ ತಮಗಾದ ನೋವಿನ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021 ಕಲಂ:341, 504, 354, 324, 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-06-2021 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080