ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ :

  • ಕಾಪು : ಪಿಯಾ೯ದಿ ಶಮಿ೯ಳಾ(36) ಗಂಡ:ವಸಂತ ವಾಸ:ಸುಂದರ ಶೆಟ್ಟಿರವರ ಬಾಡಿಗೆ ಮನೆ  ಉಳಿಯಾರಗೋಳಿ ಗ್ರಾಮ ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ವಸಂತ್ ರವರು ವಿಪರೀತ ಮಧ್ಯ ಸೇವನೆಯ ಅಭ್ಯಾಸ ಹೊಂದಿದ್ದು, ಮಧ್ಯ ಸೇವನೆ ಮಾಡಿ ಪಿಯಾ೯ದಿದಾರರೊಂದಿಗೆ ಜಗಳಮಾಡುತ್ತಿದ್ದರು. ಪಿಯಾ೯ದಿದಾರರ ತಂದೆ ಹಾಗೂ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಪಿಯಾ೯ದಿದಾರರು ಕಳೆದ ಒಂದು ತಿಂಗಳಿನಿಂದ ತಮ್ಮ ತಾಯಿಯ ಮನೆಗೆ ಮಕ್ಕಳೊಂದಿಗೆ ಹೋಗಿ ಅಲ್ಲಿಯೇ ಇದ್ದು, ಈ ಬಗ್ಗೆ ಆಕ್ಷೇಪ ಪಡಿಸಿದ ವಸಂತ್ ರವರು ಪಿಯಾ೯ದಿದಾರರನ್ನು ಮನೆಗೆ ಬರುವಂತೆ ಕರೆದಿದ್ದು, ಪಿಯಾ೯ದಿದಾರರು ದಿನಾಂಕ: 07/05/2023 ರಂದು ಗಂಡ ವಸಂತ್ ರವರಿಗೆ ಕರೆ ಮಾಡಿ ತಾನು ತನ್ನ ಚಿಕ್ಕಮ್ಮನ ಮಗನ ಮದುವೆ ದಿನಾಂಕ 08/05/2023 ರಂದು ಇದ್ದು ಅದನ್ನು ಪೂರೈಸಿ ಬಳಿಕ ಮನೆಗೆ ಬರುವುದಾಗಿ ತಿಳಿಸಿದ್ದು,  ಅದಕ್ಕೆ ವಸಂತ್ ರವರು “ನೀನು ಅಲ್ಲಿಯೇ ಸಾಯಿ ನಾನು ಇಲ್ಲಿ ಸಾಯುತ್ತೇನೆ” ಎಂದು ಹೇಳಿ ಕರೆ ಕಟ್ಟು ಮಾಡಿದ್ದು ಬಳಿಕ ಪಿಯಾ೯ದಿದಾರರು ಹಲವು ಬಾರಿ ಕರೆ ಮಾಡಿದರು ಮೊಬೈಲ್ ಸ್ವಿಚ್ ಆಪ್ ಎಂಬುದಾಗಿ ಬಂದಿರುತ್ತದೆ. ದಿನಾಂಕ 08/05/2023ರಂದು ಸಂಜೆ 6:30 ಗಂಟೆಗೆ ಪಿಯಾ೯ದಿದಾರರಿಗೆ ಬಾಡಿಗೆ ಮನೆಯ ಮಾಲಕರು ಪಿಯಾ೯ದಿದಾರರಿಗೆ ಕರೆ ಮಾಡಿ ನಿಮ್ಮ ಪತಿ ಮನೆಯ ಆರ್.ಸಿ.ಸಿ ಗೆ ಅಳವಡಿಸಿದ ಕಬ್ಬಿಣದ ಹುಕ್ಕಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಮರಣ ಹೊಂದಿರುವುದಾಗಿ ತಿಳಿಸಿರುತ್ತಾರೆ. ವಸಂತ್ ರವರು ವೀಪರೀತ ಮಧ್ಯ ಸೇವನೆಯ ಚಟ ಹಾಗೂ ಪಿಯಾ೯ದಿದಾರರ ಮೇಲಿನ ಕೋಪದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ :  16/2023 ಕಲಂ 174 ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಶಿರ್ವ : ಪಿರ್ಯಾದು ಸತೀಶ್‌ (37) ತಂದೆ: ದಿ. ಕೆಂಚು, ವಾಸ: 4-23 ಕೊರಗಬೆಟ್ಟು ಮನೆ, ಕುತ್ಯಾರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಉಡುಪಿ ಇವರ ಅಕ್ಕ ರತ್ನಾ ಕುತ್ಯಾರು (44) ರವರಿಗೆ ಮದುವೆಯಾಗಿರುವುದಿಲ್ಲ. ಅವರಿಗೆ ದಿನಾಂಕ  04.05.2023 ರಂದು ಬೆಳಿಗ್ಗೆ 10-00 ಗಂಟೆಗೆ ಕೆಮ್ಮು ಮತ್ತು ಉಸಿರಾಟದ ತೊಂದರೆಯುಂಟಾಗಿದ್ದರಿಂದ ಶಿರ್ವದ ಅಕ್ಕನ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 08.05.2023 ರಂದು ಬೆಳಿಗ್ಗೆ 09:20 ಗಂಟೆಗೆ ಕೆಮ್ಮು ಮತ್ತು ಉಸಿರಾಟದ ತೊಂದರೆ ವಿಪರೀತವಾಗಿದ್ದರಿಂದ ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಉಡುಪಿ ಟಿಎಂಎಪೈ ಆಸ್ಪತ್ರೆಗೆ ಕರೆದಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮಧ್ಯಾಹ್ನ 13-20 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ : 10/2023   U/S 174  CRPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ಪಿರ್ಯಾದಿ ಗಣೇಶ (40), ತಂದೆ: ದಿ. ಅಣ್ಣಪ್ಪ, ವಾಸ: ಹರೆಗೋಡು ಕೊತ್ತಾಡಿಮನೆ, ಕಟ್‌ಬೆಲ್ತೂರು  ಗ್ರಾಮ, ಕುಂದಾಪುರ ತಾಲೂಕು ಇವರ ದೊಡ್ಡಮ್ಮನ ಮಗ ರಾಜು (48) ಎಂಬವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಅಲ್ಲದೇ ಮಾನಸಿಕ ವಾಗಿ ಖಿನ್ನತೆಗೆ ಒಳಗಾಗಿದ್ದವರು ದಿನಾಂಕ 08.05.2023 ರಂದು 18:00 ಗಂಟೆಯಿಂದ 18:30 ಗಂಟೆ ಮದ್ಯದ ಅವದಿಯಲ್ಲಿ ಕುಂದಾಪುರ ತಾಲೂಕು ಕಟ್‌ಬೆಲ್ತೂರು ಗ್ರಾಮದ ಹರೆಗೋಡು ಕೊತ್ತಾಡಿಮನೆ ಎಂಬಲ್ಲಿ ತನ್ನ ಮನೆಯ ಕಡುಮಾಡಿನ ಜಂತಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ 14/2023 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ :

  • ಕೋಟ : ಫಿರ್ಯಾದು ಶ್ರೀಮತಿ. ಶ್ಯಾಮಲಾ ಪೂಜಾರಿ (37), ಗಂಡ: ಧರ್ಮೇಂದ್ರ, ವಾಸ: ಹೊಳೆಹೊದ್ದಿನ ಮನೆ ಸಾಲಿಗ್ರಾಮ, ಪಾರಂಪಳ್ಳಿ ಗ್ರಾಮ ಮತ್ತು ಅಂಚೆ, ಬ್ರಹ್ಮಾವರ ಇವರ ತಂದೆ ಪಾದಾಚಾರಿ ಅನಂತ ಪೂಜಾರಿರವರು ದಿನಾಂಕ: 07.05.2023 ರಂದು ಸಂಜೆ 4 ಗಂಟೆಗೆ ಹಾಡಿಮನೆ ಹೋಟೇಲ್‌ ಎದುರು ರಾ.ಹೆ. 66 ಉಡುಪಿ-ಕುಂದಾಪುರ ಮುಖ್ಯರಸ್ತೆಯ ಪಶ್ವಿಮ ಬದಿಯ ರಸ್ತೆಯನ್ನು ದಾಟಿ, ಪೂರ್ವ ಬದಿಯ ರಸ್ತೆಯನ್ನು ದಾಟುತ್ತಿರುವಾಗ, ರಾ.ಹೆ. 66ರಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕಪ್ಪು ಬಣ್ಣದ ನಂ. KA 20 EN 7181ನೇ ಪಲ್ಸರ್‌ ಬೈಕ್‌ ಅನ್ನು ಅದರ ಸವಾರ ಪ್ರದೀಪ್‌ ಎಂಬಾತನು ತನ್ನ ಹಿಂಬದಿ ಪೂರ್ಣಿಮಾ ರವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಪಾದಾಚಾರಿ ಅನಂತ ಪೂಜಾರಿ ರವರಿಗೆ ಢಿಕ್ಕಿ ಹೊಡೆದನು. ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಅನಂತ ಪೂಜಾರಿ ಮತ್ತು ಬೈಕ್‌ ನಲ್ಲಿದ್ದ ಸವಾರ ಪ್ರದೀಪ್‌ ಮತ್ತು ಸಹ ಸವಾರಿಣಿ ಪೂರ್ಣಿಮಾರವರು ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದು, ಆ ಪೈಕಿ ಪಾದಾಚಾರಿ ಅನಂತ ಪೂಜಾರಿ ರವರ ತಲೆಗೆ ಹಾಗೂ ಸೊಂಟಕ್ಕೆ ತೀವ್ರ ತರಹದ, ಇತರೆಡೆಗಳಿಗೆ ತರಚಿದ ರಕ್ತಗಾಯ ಮತ್ತು ಬೈಕ್‌ ಸವಾರ ಪ್ರದೀಪ್‌ ರವರ ಎದೆಗೆ ಒಳಜಖಂ, ಮೈಕೈಗೆ ತರಚಿದ ಗಾಯಗಳು ಹಾಗೂ ಹಿಂಬದಿ ಕುಳಿತ ಸಹ ಸವಾರಿಣಿ ಪೂರ್ಣಿಮಾ ರವರ ಮೈಕೈಗೆ ತರಚಿದ ಸಾದಾ ಗಾಯಗಳಾಗಿರುತ್ತದೆ. ನಂತರ ಗಾಯಗೊಂಡ ಎಲ್ಲರೂ ಚಿಕಿತ್ಸೆಯ ಬಗ್ಗೆ ಖಾಸಗಿ ವಾಹನದಲ್ಲಿ ಮೊದಲಿಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೂ ಹಾಗೂ ಆ ಪೈಕಿ ಪಾದಾಚಾರಿ ಅನಂತ ಪೂಜಾರಿ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಅಪಘಾತಕ್ಕೆ ಕಪ್ಪು ಬಣ್ಣದ ನಂ. KA 20 EN 7181ನೇ ಪಲ್ಸರ್‌ ಬೈಕ್‌ ಸವಾರ ಪ್ರದೀಪ್‌ ಎಂಬವರ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೇ ಕಾರಣವಾಗಿರುತ್ತದೆ ಎಂದು ನೀಡಲಾದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 84/2023 ಕಲಂ: 279,  337, 338 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ : ಪಿರ್ಯಾದಿ ರಾಘವೇಂದ್ರ ಮರಕಾಲ (40 ವರ್ಷ), ತಂದೆ: ದಿ: ರಾಮ ಮರಕಾಲ, ವಾಸ: ಕಾಂಚನ ನಿಲಯ, ಪಡುಕೆರೆ, ಕೋಟತಟ್ಟು ಗ್ರಾಮ, ಬ್ರಹ್ಮಾವರ ಇವರು ದಿನಾಂಕ: 07.05.2023 ರಂದು ರಾತ್ರಿ ಸಮಯ 08:00 ಗಂಟೆಗೆ ಕೆಲಸ ಮುಗಿಸಿ ಕೋಟತಟ್ಟು ಗ್ರಾಮದ ಕೋಟ - ಪಡುಕೆರೆ ರಸ್ತೆಯಲ್ಲಿ ಪಡುಕೆರೆ ಕಡೆಯಿಂದ ಕೋಟ ಕಡೆಗೆ ಹೋಗುತ್ತಿರುವಾಗ, ಪಿರ್ಯಾದಿದಾರರ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ನಂ. KA20Z5685ನೇ ಮಾರುತಿ ರಿಡ್ಜ್‌ ಕಾರನ್ನು ಅದರ ಚಾಲಕ ರಾಘವೇಂದ್ರನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿದ್ದು, ಆಗ ರಸ್ತೆಯಲ್ಲಿ ಪಿರ್ಯಾದಿದಾರರ ಎದುರಿನಿಂದ ಅಂದರೆ ಕೋಟ ಕಡೆಯಿಂದ ಪಡುಕೆರೆ ಕಡೆಗೆ ಕ್ರಮದಂತೆ ಬರುತ್ತಿದ್ದ ಗ್ರೇ ಬಣ್ಣದ KA 20 ES 0443ನೇ ಜುಪಿಟರ್‌ ಸ್ಕೂಟಿಗೆ ಢಿಕ್ಕಿ ಹೊಡೆದನು. ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಶರತ್ ನು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಬಲಕಾಲು ಮೊಣಗಂಟಿನ ಕೆಳಗೆ ಮತ್ತು ಬಲ ಕೈಗೆ ತೀವ್ರ ತರದ ಹಾಗೂ ಇತರೆಡೆಗಳಿಗೆ ತರಚಿದ ರಕ್ತಗಾಯಗೊಂಡಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 83/2023 ಕಲಂ: 279,  338 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಿರ್ವ : ಪಿರ್ಯಾದಿ ಪೂಜಾ ಆಚಾರ್ಯ(19) ತಂದೆ: ತಮ್ಮಯ್ಯ ಆಚಾರ್ಯ, ವಾಸ: ಮನೆ ನಂ 6-38-1, ಮೂಡುಮಟ್ಟಾರು, ಕಂಡಿನ ಮನೆ, ಮಟ್ಟಾರು ಪೋಸ್ಟ್, ಶಿರ್ವಾ ಗ್ರಾಮ, ಕಾಪು ತಾಲೂ̧ಕು ಉಡುಪಿ ಜಿಲ್ಲೆ ಇವರು ದಿನಾಂಕ:07/05/2023 ರಂದು ಸಂಜೆ ಸಮಯ ತನ್ನ ತಂಗಿಯರಾದ ಪ್ರಜ್ಞಾ ಮತ್ತು ಪೂರ್ಣಳೊಂದಿಗೆ ಸ್ನೇಹಿತ ಪ್ರವೀಣ್ ರವರ ಕಾರು ನಂ KA20N6908ನೇದರಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಂಡು ತಂಗಿಯರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು  ಉಡುಪಿಗೆ ಹೋಗಿದ್ದು ಕಾರನ್ನು ಪ್ರವೀಣ್ ನು ಚಲಾಯಿಸುತ್ತಿದ್ದನು. ಕಾರಿನಲ್ಲಿ ಉಡುಪಿಯಿಂದ ಮನೆಗೆ ವಾಪಾಸು ಬರುವಾಗ ಸಮಯ ಸುಮಾರು ರಾತ್ರಿ 8.15 ಗಂಟೆಗೆ ಕಾಪು ತಾಲೂಕು ಬೆಳ್ಳೆ ಗ್ರಾಮದ ಮೂಡುಬೆಳ್ಳೆಯ  ಪೆಟ್ರೋಲ್ ಪಂಪ್ ಸಾರ್ವಜನಿಕ ರಸ್ತೆಯ ಬಳಿ ತಲುಪುವಾಗ ನಮ್ಮಎದುರುಗಡೆಯಿಂದ ಅಂದರೆ ಮೂಡುಬೆಳ್ಳೆಯಿಂದ ಉಡುಪಿ ಕಡೆಗೆ KA20C1577ನೇ ಟೆಂಪೋ ಚಾಲಕ ಪ್ರದೀಪ ಕುಮಾರ್ ರವರು ಟೆಂಪೋವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದನು. ಪರಿಣಾಮ ಕಾರು ಹಾಗೂ ಟೆಂಪೋದ ಎದುರು ಭಾಗ ಜಖಂಗೊಂಡಿರುತ್ತದೆ. ಕಾರು ಚಲಾಯಿಸುತ್ತಿದ್ದ ಪ್ರವೀಣನಿಗೆ ಮುಖಕ್ಕೆ ರಕ್ತಗಾಯ ಹಾಗೂ ಎರಡೂ ಕಾಲಿನತೊಡೆಗಳ ಮೂಳೆಮುರಿತವಾಗಿರುತ್ತದೆ. ಪಿರ್ಯಾದಿದಾರರಿಗೆ ತಲೆಯ ಎಡಭಾಗದಲ್ಲಿ ತಲೆಗೆ ರಕ್ತಗಾಯ ಹಾಗೂ ಎಡಕಾಲಿನ ತೊಡೆಭಾಗದ ಮೂಳೆ ಮುರಿತವಾಗಿರುತ್ತದೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ ಪ್ರಜ್ಞಾಳಿಗೆ ತಲೆಗೆ ತೀವ್ರ ಒಳನೋವು ಹಾಗೂ ಪೂರ್ಣಳಿಗೆ ಮುಖಕ್ಕೆ ಕಣ್ಣಿಗೆ ರಕ್ತಗಾಯವಾಗಿರುತ್ತದೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಕೆ.ಎಮ್.ಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ನಂತರ ಪಿರ್ಯಾದಿದಾರರು ಹಾಗೂ ಕಾರು ಚಾಲಕ ಪ್ರವೀಣ್ ರವರು ಉಡುಪಿಯ ಅಜ್ಜರಕಾಡುವಿನ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ KA 20C 1577ನೇ ಟೆಂಪೋ ಚಾಲಕ ಪ್ರದೀಪ ಕುಮಾರ್ ಈತನ ಅತೀ  ವೇಗ  ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು ಆತನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 44/2023, ಕಲಂ 279,337,338 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ : ದಿನಾಂಕ ದಿನಾಂಕ 07.05/2023 ರಂದು ಪಿರ್ಯಾದು ಹರ್ಷ (28) ತಂದೆ: ರವಿಚಂದ್ರ ದೇವಾಡಿಗ  ವಾಸ: ಶಾರದ ನಿಲಯ ಹನುಮಂತ ನಗರ, ಪುತ್ತೂರು ಗ್ರಾಮ ಉಡುಪಿ ತಾಲೂಕು ಇವರ ತಂದೆ ರವಿಚಂದ್ರ ಪ್ರಾಯ (57) ರವರು ಸಂಜೆ ಸಮಯ ಅಂಬಾಗಿಲಿಗೆ ದಿನಸಿ ಸಾಮಾನು ತರಲು ಹೋಗಿದ್ದು ವಾಪಾಸು ಬರುವಾಗ ಸಂಜೆ ಸಮಯ ಸುಮಾರು 06.45 ಗಂಟೆಗೆ ಅಂಬಾಗಿಲಿನಿಂದ ಕಲ್ಸಂಕ ಹೋಗುವ ರಸ್ತೆಯಲ್ಲಿ ದುರ್ಗಾ ಜನರಲ್ ಸ್ಟೋರ್  ಎದುರು ತನ್ನ ಬಾಬ್ತು KA20Y6566ನೇ ಸ್ಕೂಟರ್ ನಲ್ಲಿ ಡಿವೈಡರ್ ಬಳಿ ಸೂಚನೆ ನೀಡಿ ತಿರಗಿಸುತ್ತಿರುವಾಗ ಅದೇ ರಸ್ತೆಯಲ್ಲಿ KA41M9193ನೇ ಮಾರುತಿ ಆಲ್ಟೋ ಕಾರಿನ ಚಾಲಕ ಪ್ರಸಾದ್ ಎನ್ ಎಂಬಾತನು ತನ್ನ ಬಾಬ್ತು ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಬಂದು ಪಿರ್ಯಾದುದಾರರ ತಂದೆಯ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ತಂದೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅವರನ್ನು ಪರೀಕ್ಷಿಸಿದ ಕೆಎಂಸಿ ಆಸ್ಪತ್ರೆಯ ವೈಧ್ಯರು ಗಾಯಾಳುವನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಸಮಯ ಸುಮಾರು ರಾತ್ರಿ 07.00 ಗಂಟೆಗೆ ಗಾಯಾಳು ರವಿಚಂದ್ರರವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 45/2023 ಕಲಂ 279, 304A ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 09-05-2023 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080