ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ :

 • ಕಾಪು : ಪಿರ್ಯಾದು ಕೃಷ್ಣರಾಜ್ ಪುರಾಣಿಕ್ ಪ್ರಾಯ : 41 ವರ್ಷ ತಂದೆ : ಶ್ರೀನಿವಾಸ್ ಪುರಾಣಿಕ್ ವಾಸ : 6/44, ರಾಧಾಕೃಷ್ಣ ನಿಲಯ, ನೂಜಿ ರಸ್ತೆ, ಸುಭಾಷ್ ನಗರ, ಕುರ್ಕಾಲು ಗ್ರಾಮ, ಕಾಪು ತಾಲ್ಲೂಕು ಉಡಪಿ ಇವರ ಭಾವನ ಅಣ್ಣನಾದ ಶ್ರೀನಿವಾಸ್ ರಾವ್ ರವರು ಪೈರೋಹಿತ್ಯ ಕೆಲಸದ ನಿಮಿತ್ತ ಕಟಪಾಡಿ ಹೋಗುವರೇ ಅವರ ಬಾಬ್ತು KA-20-Y-2934ನೇ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಹೊರಟು ಕಟಪಾಡಿ-ಶಿರ್ವಾ ರಸ್ತೆಯ ಮೂಲಕ ಕಟಪಾಡಿಗೆ ಹೋಗುತ್ತಾ ಬೆಳಿಗ್ಗೆ 7:30 ಗಂಟೆಯ ಸುಮಾರಿಗೆ ಏಣಗುಡ್ಡೆ ಗ್ರಾಮದ, ಥಂಡರ್ ಬೇ ಹಾಲ್ ನ್ನು ತಲುಪುತ್ತಿದ್ದಂತೆ ಎದುರಿನಿಂದ ಅಂದರೇ ಕಟಪಾಡಿ ಕಡೆಯಿಂದ ಶಿರ್ವಾ ಕಡೆಗೆ ರವಿ ಮಡಿವಾಳ ಎಂಬುವವರು ತನ್ನ ಬಾಬ್ತು KA-20-D-4995ನೇ ಟೆಂಪೋ ವಾಹನವನ್ನು ಅತೀ ವೇಗ ಹಾಗೂ ತೀವ್ರ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸ್ ರಾವ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ಶ್ರೀನಿವಾಸ್ ರಾವ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ KA-20-D-4995ನೇ ಟೆಂಪೋ ವಾಹನದ ಚಾಲಕ ರವಿ ಮಡಿವಾಳ ರವರ ಅತೀ ವೇಗ ಹಾಗೂ ತೀವ್ರ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 80/2023 ಕಲಂ 279, 304(A) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕೋಟ : ದಿನಾಂಕ: 08.05.2023ರಂದು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದಲ್ಲಿ ಹಾದುಹೋಗಿರುವ ರಾ.ಹೆ. 66 ಉಡುಪಿ - ಕುಂದಾಪುರ ಮುಖ್ಯರಸ್ತೆಯಲ್ಲಿ ಪಾದಾಚಾರಿ ಮಂಜುನಾಥ ಕುಲಾಲ್‌ ಎಂಬವರು ಸಂಜೆ 5:30 ಗಂಟೆಗೆ ಹನುಮಾನ್‌ ರೈಸ್‌ಮಿಲ್‌ ಎದುರು ಪಶ್ಚಿಮ ಬದಿಯ ರಸ್ತೆಯನ್ನು ದಾಟುತ್ತಿದ್ದು, ಆಗ ಉಡುಪಿ ಕಡೆಯಿಂದ ಚಾಲಕ ವಿಶ್ವಾಸ್‌ ಶೆಟ್ಟಿ ಎಂಬಾತನು ತನ್ನ ಬಾಬ್ತು ಬಿಳಿ ಬಣ್ಣದ ನಂ. KA 20 MA 4816ನೇ ಮಾರುತಿ ರಿಟ್ಜ್‌ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಾದಾಚಾರಿಗೆ ಢಿಕ್ಕಿ ಹೊಡೆದನು. ಆ ಸಮಯ ಹಿಂಬದಿಯಿಂದ ಅಂದರೆ ಉಡುಪಿ ಕಡೆಯಿಂದಲೇ ಬಂದ ಬಿಳಿ ಬಣ್ಣದ ನಂ. KA 29 N 0502 ನೇ ಮಾರುತಿ ಸ್ವಿಫ್ಟ್‌ ಕಾರನ್ನು ಅದರ ಚಾಲಕ ದೇವೇಂದ್ರ ಮಾದರ ಎಂಬಾತನು ರಸ್ತೆಯಲ್ಲಿ ವಾಹನಗಳ ಮಧ್ಯೆ ಅಂತರ ಕಾಯ್ದುಕೊಳ್ಳದೇ ಅತೀವೇಗವಾಗಿ ಬಂದು ರಿಡ್ಜ್‌ ಕಾರಿಗೆ ಢಿಕ್ಕಿ ಹೊಡೆದನು. ಅದೇ ಸಮಯ ನಂ. KA 20 HA 5136ನೇ ಬಜಾಜ್‌ ಪಲ್ಸರ್‌ ಬೈಕ್‌ ಅನ್ನು ಅದರ ಸವಾರ ವಿಜೇತ್‌ ಎಂಬಾತನು ತನ್ನ ಹಿಂಬದಿ ಅರುಣ್‌ನನ್ನು ಕುಳ್ಳಿರಿಸಿಕೊಂಡು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಸ್ವಿಫ್ಟ್‌ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದು ಬೈಕ್‌ ಸಮೇತ ರಸ್ತೆಗೆ ಬಿದ್ದರು. ಅಪಘಾತದಲ್ಲಿ ಪಾದಾಚಾರಿ ಮಂಜುನಾಥ ಕುಲಾಲ್‌ ರವರ ಮುಖಕ್ಕೆ, ತಲೆಗೆ ಹಾಗೂ ಸೊಂಟಕ್ಕೆ ತೀವ್ರ ರಕ್ತಗಾಯವೂ ಮತ್ತು ಸ್ವಿಫ್ಟ್‌ ಕಾರು ಚಾಲಕ ದೇವೇಂದ್ರ ಮಾದರ ರವರಿಗೆ ಹೊಟ್ಟೆಗೆ ಒಳನೋವು ಮತ್ತು ಬೈಕ್‌ ಸವಾರ ವಿಜೇತ್‌ ರವರ ಬಲಕಾಲಿಗೆ ತೀವ್ರ ಗಾಯ, ಕೈಕಾಲುಗಳಿಗೆ ತರಚಿದ ಗಾಯಗಳು ಹಾಗೂ ಸಹಸವಾರ ಅರುಣ್‌ನ ಕೈಕಾಲುಗಳಿಗೆ ತರಚಿದ ಗಾಯಗಳಾಗಿರುತ್ತದೆ. ಅಪಘಾತದಲ್ಲಿ ರಿಡ್ಜ್‌ ಕಾರಿನ ಮುಂದಿನ ಗ್ಲಾಸ್‌, ಬಂಪರ್‌ ಮತ್ತು ಹಿಂಭಾಗ ಜಖಂ ಗೊಂಡಿದ್ದು ಮತ್ತು ಸ್ವಿಫ್ಟ್‌ ಕಾರಿನ ಮುಂಭಾಗ ಸಂಪೂರ್ಣ ಜಖಂ, ಹಿಂಬದಿ ಬೈಕ್‌ ಗುದ್ದಿ ಸ್ವಲ್ಪ ಜಖಂಗೊಂಡಿದ್ದು ಹಾಗೂ ಬೈಕಿನ ಮುಂಭಾಗ ಸಂಪೂರ್ಣ ಜಖಂ ಆಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮೊದಲಿಗೆ ಕೋಟೇಶ್ವರ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೂ ಹಾಗೂ ಗಾಯಾಳುಗಳ ಪೈಕಿ ಪಾದಾಚಾರಿ ಮಂಜುನಾಥ ಕುಲಾಲ್‌ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಗೆ ವರ್ಗಾಯಿಸಿರುತ್ತಾರೆ. ಈ ಅಪಘಾತಕ್ಕೆ ನಂ. KA 20 MA 4816ನೇ ಮಾರುತಿ ರಿಟ್ಜ್‌ ಕಾರು ಚಾಲಕ ವಿಶ್ವಾಸ್‌ ಶೆಟ್ಟಿ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆ ಮತ್ತು ನಂ. KA 29 N 0502ನೇ ಮಾರುತಿ ಸ್ವಿಫ್ಟ್‌ ಕಾರು ಚಾಲಕ ದೇವೇಂದ್ರ ಮಾದರ ರವರು ಹಾಗೂ ನಂ. KA 20 HA 5136ನೇ ಬಜಾಜ್‌ ಪಲ್ಸರ್‌ ಬೈಕ್‌ ಸವಾರ ವಿಜೇತ್‌ ರವರು ವಾಹನ ಚಾಲನೆಯ ಸಮಯ ವಾಹನಗಳ ಮಧ್ಯೆ ಅಂತರ ಕಾಯ್ದುಕೊಳ್ಳದೇ ಅತೀವೇಗವಾಗಿ ವಾಹನ ಚಲಾಯಿಸಿದ್ದೇ ಕಾರಣವಾಗಿರುತ್ತದೆ ಎಂಬುದಾಗಿ ಭರತ್‌ (35 ವರ್ಷ) ತಂದೆ: ಗೋಪಾಲ ಗಾಣಿಗ, ವಾಸ: ಕಾರಂತ ಥೀಮ್‌ ಪಾರ್ಕ್‌ ಬಳಿ, ಕೋಟತಟ್ಟು ಗ್ರಾಮ, ಬ್ರಹ್ಮಾವರ ಇವರು ನೀಡಿದ ದೂರಿನಂ ತೆ ಕೊಟಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 85/2023 ಕಲಂ: 279,  337, 338 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕಾರ್ಕಳ  : ಪಿರ್ಯಾದು ಲಕ್ಷ್ಮಿ ನಾರಾಯಣ ಭಟ್ ಪ್ರಾಯ: 53 ವರ್ಷ ತಂದೆ: ವಾಸುದೇವ ಭಟ್. ವಾಸ: ಶೆಟ್ಟಿಬೆಟ್ಟು ಮನೆ, ಬೆಳ್ಮಣ್ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು. ಇವರು ದಿನಾಂಕ 05/05/2023 ರಂದು ಸಂಜೆ 5:00 ಗಂಟೆಗೆ ಬೆಳ್ಮಣ್ ಗ್ರಾಮದ ಶೆಟ್ಟಿಬೆಟ್ಟುವಿನ ಪೆರಲ್ಪಾದೆ ಎಂಬಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾರ್ಕಳ -ಪಡುಬಿದ್ರೆ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಬೆಳ್ಮಣ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಬೆಳ್ಮಣ್ ಕಡೆಗೆ ಪ್ರತೀಕ್ಷಾ ಎಂಬವರು ಸ್ಕೂಟಿಯಲ್ಲಿ ಆಕೆಯ ತಮ್ಮ ರೋಹಿತ್ ನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ಎಡಗಡೆಗೆ ಮಗುಚಿ ಬಿದ್ದಿದ್ದು, ಅಪಘತದಿಂದ ಸಹ ಸವಾರ ರೋಹಿತ್ ನ ಬೆನ್ನಿಗೆ ಹಾಗೂ ಎಡ ಕಾಲಿಗೆ ತರಚಿದ ಗಾಯವಾಗಿದ್ದು, ಸವಾರೇ ಪ್ರತೀಕ್ಷಾ ರವರಿಗೆ ಯಾವುದೇ ಗಾಯಳಲಾಗಿರುವುದಿಲ್ಲ, ಪ್ರತೀಕ್ಷಾ ರವರು ಸವಾರಿ ಮಾಡಿಕೊಂಡು ಬಂದ  ಸ್ಕೂಟಿಯ ನಂಬ್ರ ನೋಡಲಾಗಿ KA20 ER 5779 ಆಗಿದ್ದು ಸ್ಕೂಟಿಯ ಎಡ ಬದಿಯ ಕನ್ನಡಿ ಹಾಗು ಎಡ ಬದಿಯ ಬಾಡಿ ಜಖಂ ಆಗಿರುತ್ತದೆ. ಕೂಡಲೆ ಗಾಯಳುವನ್ನು ಪಿರ್ಯಾದುದಾರರು ಮತ್ತು ಪ್ರತೀಕ್ಷಾ ಹಾಗು ಸ್ಥಳಕ್ಕೆ ಬಂದ ಗಾಯಾಳುವಿನ ತಂದೆ  ಪ್ರಭಾಕರ ಶೆಟ್ಟಿ ರವರು ಒಂದು ಓಮಿನಿಯಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಗಾಯಾಳುವನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 61/2023 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಉಡುಪಿ : ದಿನಾಂಕ 08/05/2023 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದು ಯಮುನಾ ಪ್ರಾಯ: 49 ವರ್ಷ ತಂದೆ: ದಿ. ಶಂಕ್ರೆ ಗೌಡ ವಾಸ: ಎನ್.56, ಶಾಂತನಂದ ರೆಸಿಡೆನ್ಸಿ, ಮಿಷನ್ ಕಂಪೌಂಡ್, ಉಡುಪಿ ಇವರು ತನ್ನ ಬಾಬ್ತು KA20JD3042ನೇ ಸ್ಕೂಟರಿನಲ್ಲಿ ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ ದೇವಸ್ಥಾನದ ಕಡೆಗೆ ಹೋಗಲು ಅಂಬಲಪಾಡಿ ಜಂಕ್ಷನ್ ರಾ,ಹೆ 66 ರ ರಸ್ತೆಯ ಪೂರ್ವಬದಿ ಅಂಚಿನಲ್ಲಿ ರಸ್ತೆ ಪಾಸಾಗಲು ಸ್ಕೂಟರಿನಲ್ಲಿ ನಿಂತಿರುವಾಗ ಬ್ರಹ್ಮಾವರ ಕಡೆಯಿಂದ ಮುಲ್ಕಿ ಕಡೆಗೆ KA20AA7151ನೇ ಗೂಡ್ಸ್ ಕ್ಯಾರಿಯರ್ ಟ್ರಕ್ ಚಾಲಕ ಮುತ್ತಪ್ಪ ಹಾದಿಮನಿ ಎಂಬಾತನು ತನ್ನ ಟ್ರಕ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರಾ ಎಡಬದಿಗೆಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬೆನ್ನಿನ ಮೂಳೆ ಎಡಕಾಲಿನ ರಿಪ್ ಬೋನ್ ಜಖಂಗೊಂಡಿರುತ್ತದೆ. ಹಾಗೂ ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರನ್ನು ಟ್ರಕ್ ಚಾಲಕ ಹಾಗೂ ಸಾರ್ವಜನಿಕರು ಸೇರಿ ಹೈಟೆಕ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿ ನಂತರ ಪ್ರಸ್ತುತ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಅಪರಾಧ ಕ್ರಮಾಂಕ : 46/2023 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಬೈಂದೂರು : ಪಿರ್ಯಾದಿ ಅಶೋಕ್ ದೇವಾಡಿಗ ಪ್ರಾಯ: (30 ವರ್ಷ) ತಂದೆ: ರಾಮ ದೇವಾಡಿಗ ವಾಸ:ಭದ್ರ ನಾಯ್ಕರ ಮನೆ , ಬಾಯಾಮಿತ್ಲು  ಉಪ್ಪುಂದ ಗ್ರಾಮ ಬೈಂದೂರು ಇವರು ದಿನಾಂಕ 08/05/2023 ರಂದು ಮಧ್ಯಾಹ್ನ 3:15 ಗಂಟೆಗೆ  ತನ್ನ ಮನೆಯಾದ ಬಾಯಮಿತ್ಲಿನಿಂದ ಶಾಲೆಬಾಗಿಲಿಗೆ  ಮೋಟಾರು ಸೈಕಲ್ ನಲ್ಲಿ  ಶಾಲೆಬಾಗಿಲು- ತಾರಾಪತಿ ರಸ್ತೆಯಲ್ಲಿ  ಬರುತ್ತಿರುವಾಗ ಮಯ್ಯರಕೇರಿ  ಬಳಿ  ಫಿರ್ಯಾದುದಾರರ ಎದುರಿನಿಂದ KA 20 AB 7200ನೇ ಪಿಕಪ್ ವಾಹನದ  ಚಾಲಕ ಪುರಂದರ ಗಾಣಿಗ ರವರು ಅವರ ಬಾಬ್ತು ಪಿಕಪ್ ವಾಹನವನ್ನು ಅತೀ ವೇಗ ಹಾಗೂ  ಅಜಾಗರೂ ಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗುತ್ತಿದ್ದು  ರಸ್ತೆಯ ತಿರುವಿನಲ್ಲಿ  ಶಾಲೆಬಾಗಿಲು ಕಡೆಯಿಂದ  ತಾರಾಪತಿ ಕಡೆಗೆ    ಬರುತ್ತಿದ್ದ KA 20 ER 8733ನೇ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದನು. ಪರಿಣಾಮ ಮೋಟಾರು ಸೈಕಲ್ ನಲ್ಲಿದ್ದ ಸವಾರ ಹಾಗೂ ಸಹ ಸವಾರ  ರಸ್ತೆ ಬದಿಯಲ್ಲಿದ್ದ ಚರಂಡಿಗೆ ಬಿದ್ದಿದ್ದು, ಫಿರ್ಯಾದುದಾರರು ಮೋಟಾರು ಸೈಕಲ್  ನಿಲ್ಲಿಸಿ ಹೋಗಿ ನೋಡಿದಲ್ಲಿ ಪರಿಚಯದ ಮುತ್ತಯ್ಯ ಹಾಗೂ ರಾಘವ ಎಂಬವರಾಗಿದ್ದು, ಫಿರ್ಯಾದುದಾರರು ದಿನೇಶ್ ಹಾಗೂ ಸಂತೋಷ್ ಎಂಬವರ ಜೊತೆ ಸೇರಿ ಗಾಯಗೊಂಡವರನ್ನು ಎತ್ತಿ ಉಪಚರಿಸಿದ್ದು ಮೋಟಾರು ಸೈಕಲ್  ಸವಾರ ಮುತ್ತಯ್ಯ ರವರಿಗೆ  ಬಲಕಾಲಿಗೆ ಹಾಗೂ  ಬೆನ್ನಿಗೆ ತರಚಿದ ಗಾಯಗಳಾಗಿದ್ದು, ಸಹ ಸವಾರ ರಾಘವರವರಿಗೆ ಬಲ ಕಾಲಿಗೆ ಮೂಳೆ ಮುರಿತದ ಗಾಯ, ಬಲ ಕೈ, ಭುಜಕ್ಕೆಮತ್ತು ಸೊಂಟಕ್ಕೆ ಒಳನೋವು  ಉಂಟಾಗಿರುತ್ತದೆ. ದಿನೇಶ್ ಮತ್ತು ಸಂತೋಷ್ ಎಂಬವರು ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ 108 ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮುತ್ತಯ್ಯ ರವರನ್ನು ಒಳ ರೋಗಿಯಾಗಿ ದಾಖಲಿಸಿಕೊಂಡು ರಾಘವ ರವರಿಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲಕ್ಕೆ  ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ  ಮಣಿಪಾಲ ಕೆಂ ಎಂ ಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ :  76/2023 ಕಲಂ: 279, 338 ಭಾದಂಸಂಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 09-05-2023 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080