ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಿರ್ವಾ:  ಪಿರ್ಯಾದಿ ಶ್ರೀಮತಿ ಸೌಮ್ಯ (30), ಗಂಡ: ಸತೀಶ್‌ ಕುಂದರ, ವಾಸ: ಪ್ರೀಯ ನಿಲಯ ಜೂಬ್ಬಾಕ್ಸಾರ್‌ ಮನೆ, ಎಡ್ಮೇರು, ಕಾಪು ತಾಲೂಕು, ಇವರ ತಂಗಿ ಸಹನಾ (23) ರವರು 1 ½ ವರ್ಷದ ಹಿಂದೆ MBA (HR) ವಿದ್ಯಾಬ್ಯಾಸವನ್ನು SDM ಮಂಗಳೂರಿನ ಕಾಲೇಜ್‌ ನಲ್ಲಿ ಮುಗಿಸಿಕೊಂಡಿದ್ದು, ಈವರೆಗೆ ಯಾವುದೇ  ಉದ್ಯೋಗ ದೊರಕಿರುವುದಿಲ್ಲ ದಿನಾಂಕ 30.04.2022 ರಂದು 16:00 ಗಂಟೆಗೆ ತನ್ನ ಅಕ್ಕನ ಮನೆಯಾದ ಕಟ್ಟಿಂಗೇರಿ ಗ್ರಾಮದ ಎಡ್ಮೇರು ಎಂಬಲ್ಲಿಗೆ ಬಂದು  ದಿನಾಂಕ 01/05/2022 ರಂದು ಸಮಯ ಸುಮಾರು ಬೆಳಿಗ್ಗಿನ ಜಾವ 3:00 ಗಂಟೆಗೆ ವಾಂತಿ ಮಾಡುತ್ತಿದ್ದವರನ್ನು ಚಿಕಿತ್ಸೆಯ ಬಗ್ಗೆ ಮೂಡುಬೆಳ್ಳೆಯ ಸ್ವಾತಿ ಕ್ಲಿನಿಕ್‌ಗೆ  ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಪಡೆದು ನಂತರ ದಿನಾಂಕ 02/05/2022 ರಂದು ವಾಪಾಸು ವಾಂತಿ ಮಾಡಲು ಪ್ರಾರಂಭಿಸಿದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ KMC ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಸಹನಾಳ ಆರೋಗ್ಯ  ತೀರಾ ಹದೆಗೆಟ್ಟಿರುವುದರಿಂದ ದಿನಾಂಕ 07/05/2022ರಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಸಹಾನಳು ಚಿಕಿತ್ಸೆಗೆ ಸ್ವಂದಿಸದೇ ದಿನಾಂಕ 09/05/2022 ರಂದು ಬೆಳಿಗ್ಗೆ  06:45  ಗಂಟೆಗೆ  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಮೃತಪಟ್ಟಿರುತ್ತಾರೆ.  ಸಹನಾಳು ವಿದ್ಯಾಬ್ಯಾಸ ಮಾಡಿ ಯಾವುದೇ ಉದ್ಯೋಗ ದೊರಕದೇ ಇದ್ದುದ್ದರಿಂದ ಇದೇ  ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷಪದಾರ್ಥವನ್ನು ಸೇವಿಸಿ  ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ  ಸ್ವಂದಿಸದೇ  ಮೃತಪಟ್ಟಿರುವುದಾಗಿದೆ. ಆಕೆಯ ಮರಣದಲ್ಲಿ ಬೇರೆ  ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಯುಡಿಆರ್ ನಂ.11/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಕಲಿಸಲಾಗದೆ.
  • ಬ್ರಹ್ಮಾವರ:  ಬ್ರಹ್ಮಾವರ  ತಾಲೂಕು ಬೈಕಾಡಿ ಗ್ರಾಮದ ಗಾಂಧಿ ನಗರ ಎಂಬಲ್ಲಿ  ವಾಸವಾಗಿರುವ ಪಿರ್ಯಾದಿ ಪ್ರಭಾಕರ ಶೆಟ್ಟಿಗಾರ್  (52), ತಂದೆ: ಕೊರಗು ಶೆಟ್ಟಿಗಾರ್, ವಾಸ:ಗಾಂಧಿನಗರ, ಬೈಕಾಡಿ ಇವರ ಮಗನಾದ ಪ್ರಥ್ವಿರಾಜ್, ಪ್ರಾಯ: 27 ವರ್ಷ, ಎಂಬವರು ಸುಮಾರು ಒಂದೂವರೆ ವರ್ಷದ ಹಿಂದೆ ಹಾಸನದಲ್ಲಿ ಸುಮಾರು 14 ಲಕ್ಷ ಖರ್ಚು ಮಾಡಿ ಹೊಟೇಲ್ ವ್ಯವಹಾರ ಮಾಡಿಕೊಂಡಿದ್ದು, ಹೊಟೇಲ್  ವ್ಯವಹಾರ ನಷ್ಟ ಆಗಿ ಪ್ರಸ್ತುತ 6 ತಿಂಗಳಿಂದ ಮನೆಯಲ್ಲಿಯೇ ಇದ್ದು ಪೈಂಟಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಹೊಟೇಲ್ ವ್ಯವಹಾರ ನಷ್ಟ ಆದ ನಂತರ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ, ಅದೇ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿ ಮನನೊಂದು ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ: 09.05.2022 ರಂದು ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 12:00 ಗಂಟೆಯ ಮಧ್ಯಾವದಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ  ಮಲಗುವ ಕೋಣೆಯ ಪಕ್ಕಾಸಿಗೆ ಪಾಲಿಸ್ಟರ್ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅವರ ಮರಣದಲ್ಲಿ ಯಾವುದೇ ಸಂಶಯ ವಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 23/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
  • ಅಜೆಕಾರು: ಪಿರ್ಯಾದಿ ಕರುಣಾಕರ ಆನಂದ ಶೆಟ್ಟಿ (56) ತಂದೆ: ಆನಂದ ಶೆಟ್ಟಿ ವಾಸ: ಕಸ್ತೂರಿ ನಿವಾಸ ನೆಕ್ಕರ್  ಬೆಟ್ಟು ಪಡುಕುಡೂರು ಗ್ರಾಮ ಹೆಬ್ರಿ ಇವರ ತಮ್ಮ ಸುರೇಶ (48 ವರ್ಷ) ರವರು ಹೆಬ್ರಿ ತಾಲೂಕು ಪಡುಕುಡೂರು ಗ್ರಾಮದ ನೆಕ್ಕರ್ ಬೆಟ್ಟು ವಿನಲ್ಲಿ ತನ್ನ ತಾಯಿ ಹಾಗೂ ಹೆಂಡತಿ ಶ್ರೀಮತಿ ಶೋಭಾ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು, ಸುರೇಶನಿಗೆ ವಿಪರೀತ ಸಾರಾಯಿ ಕುಡಿಯುವ ಚಟವಿದ್ದು ಇದರಿಂದ ಹೆಂಡತಿಯ ನಡುವೆ ಮನಸ್ತಾಪ ಉಂಟಾಗಿ 2 ತಿಂಗಳ ಹಿಂದೆ ಶ್ರೀಮತಿ ಶೋಭಾರವರು ಮನೆ ಬಿಟ್ಟು ಹೋದವಳು ಬರದೇ ಇದ್ದು, ಅಲ್ಲದೇ ವಿಪರೀತ ಸಾರಾಯಿ ಸೇವನೆ ಮಾಡುತ್ತಿದ್ದು, ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ: 09/05/2022  ರಂದು ಬೆಳಿಗ್ಗೆ 9:30 ಗಂಟೆಯಿಂದ ಬೆಳಿಗ್ಗೆ 9:45 ಗಂಟೆಯ ಮಧ್ಯ ಅವಧಿಯಲ್ಲಿ ಮನೆಯ ಮಲಗುವ ಕೋಣೆಯಲ್ಲಿನ ಮರದ ಪಕ್ಕಾಸಿಗೆ ಹಸಿರು ಬಣ್ಣದ ಚೂಡಿದಾರದ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಅತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ  ಯುಡಿಆರ್ ನಂ.08/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಕಲಿಸಲಾಗದೆ.

ಇತ್ತೀಚಿನ ನವೀಕರಣ​ : 09-05-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080