ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಬ್ರಹ್ಮಾವರ: ದಿನಾಂಕ 07/05/2021 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಪ್ರಕಾಶ್ ಪೀಟರ್ ಡೆಸಾ ರವರು ತನ್ನ ಸ್ನೇಹಿತನೊಂದಿಗೆ ಅವರ ಕಾರಿನಲ್ಲಿ ಉಪ್ಪೂರಿನಿಂದ ಕುಕ್ಕೆಹಳ್ಳಿಗೆ ಹೋಗುತ್ತಿರುವಾಗ ಬೆಳಿಗ್ಗೆ 07:30 ಗಂಟೆಯ ಸಮಯಕ್ಕೆ ಉಪ್ಪೂರು ಗ್ರಾಮದ ತೆಂಕಬೆಟ್ಟು ರುಕ್ಮಿಣಿ ಆಟೋ ಪ್ಯೂಯಿಲ್ಸ್ ಬಳಿ ತಲುಪುವಾಗ ಅವರ ಎದುರು ಕಡೆಯಿಂದ ಅಂದರೆ ಕುಕ್ಕೆಹಳ್ಳಿ ಕಡೆಯಿಂದ ಉಪ್ಪೂರು ಕಡೆಗೆ ರೆಜಿನಾಲ್ಡ್ ಪ್ರವಿಣ್ ಡಿಸಿಲ್ವಾ ರವರು ಅವರ KA20ER5359 ನೇ ಹೊಂಡಾ ಆ್ಯಕ್ಟಿವ್ ಮೋಟಾರ್ ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಅವರ ಎದುರಿನಿಂದ ಬರುತ್ತಿದ್ದ ವಾಹನವೊಂದನ್ನು ನೋಡಿ ಗಾಬರಿಗೊಂಡು ಒಮ್ಮೇಲೆ ಬ್ರೇಕ್ ಹಾಕಿದ್ದು, ಪರಿಣಾಮ ಹೊಂಡಾ ಆ್ಯಕ್ಟಿವ್ ಮೋಟಾರ್ ಸೈಕಲ್‌ ಸ್ಕಿಡ್ ಆಗಿ ಡಾಮರ್ ರಸ್ತೆಯಿಂದ ಜಾರಿಕೊಂಡು ಹೋಗಿ ಮೋಟಾರ್ ಸೈಕಲ್ ಸಮೇತ ರೆಜಿನಾಲ್ಡ್ ಪ್ರವಿಣ್ ಡಿಸಿಲ್ವಾ ರವರು ಮಣ್ಣು ರಸ್ತೆಯಲ್ಲಿ ಬಿದ್ದಿರುವುದಾಗಿದೆ. ಈ ಅಪಘಾತದಿಂದ ರೆಜಿನಾಲ್ಡ್ ಪ್ರವಿಣ್ ಡಿಸಿಲ್ವಾ ರವರ ಬಲಕೈ, ಭಲ ಭುಜಕ್ಕೆ ಗುದ್ದಿದ ನೋವು, ಎಡಕಾಲು ಮೊಣಗಂಟಿಗೆ ರಕ್ತಗಾಯ, ಎಡಕಾಲಿನ ಪಾದದ ಬೆರಳುಗಳಿಗೆ ತರಚಿದ ಗಾಯ ಆಗಿರುತ್ತದೆ. ಗಾಯಗೊಂಡ ರೆಜಿನಾಲ್ಡ್ ಪ್ರವಿಣ್ ಡಿಸಿಲ್ವಾ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಕೃಷ್ಣ ಕಾಂಚನ್‌ (54), ತಂದೆ: ಅಣ್ಣಯ್ಯ ಬಂಗೇರ, ವಾಸ: ದಾರುಜ್ಜಿ ಮನೆ, ಕೋಟತಟ್ಟು ಪಡುಕೆರೆ, ಮಣೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 07/05/2021 ರಂದು ಬೆಳಿಗ್ಗೆ ಸಮಯ 10:00 ಗಂಟೆಗೆ ತನ್ನ ಬೈಕಿನಲ್ಲಿ ಪಡುಕೆರೆಯಿಂದ ಹಂದಟ್ಟು ರಸ್ತೆಯಲ್ಲಿ ಹಂದಟ್ಟು ಟವರ್‌ ಬಳಿ ಬರುತ್ತಿರುವಾಗ ಎದುರುಗಡೆಯಿಂದ KA 20 V 2406 ನೇ ಬಜಾಜ್‌ ಪ್ಲಾಟಿನಾ ಬೈಕ್‌ನಲ್ಲಿ ಇಬ್ಬರು ಸವಾರರು ಕುಳಿತು ಚಲಾಯಿಸಿಕೊಂಡು ಬರುತ್ತಿದ್ದು ಆಗ ರಸ್ತೆಯ ಎಡಬದಿಯಲ್ಲಿರುವ ಇಳಿಜಾರು ರಸ್ತೆಯಿಂದ ಮೇಲಕ್ಕೆ ರಸ್ತೆಗೆ KA 20 7381 ನೇ ಮೆಟಡೋರ್‌ ವ್ಯಾನ್‌ನ್ನು ಅದರ ಚಾಲಕ ಅಬ್ದುಲ್‌ ರಹಮಾನ್‌ ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಗೆ ಒಮ್ಮೇಲೆ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಬರುತ್ತಿದ್ದ KA 20 V 2406 ನೇ ಬಜಾಜ್‌ ಪ್ಲಾಟಿನಾ ಬೈಕ್‌ನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರು ಬೈಕ್‌ ಸಮೇತ ರಸ್ತೆಯ ಮೇಲೆ ಬಲಮಗ್ಗಲಾಗಿ ಬಿದ್ದಿದ್ದರಿಂದ ಬೈಕ್‌ನ ಹಿಂಬದಿ ಸವಾರ ಅಭಿನವ್‌ ಎಂಬಾತನಿಗೆ ಬಲಕಾಲಿಗೆ ತೀವೃ ಗಾಯ ಹಾಗೂ ಎಡಕೈ ಮುಂಗೈ ಬಳಿ ಮತ್ತು ಬಲ ಕೈ ಮದ್ಯ ಗಂಟಿನ ಬಳಿ ರಕ್ತ ಗಾಯವಾಗಿದ್ದು ಚಿಕಿತ್ಸೆಗೆ ಒಂದು ಖಾಸಗೀ ಅಂಬುಲೆನ್ಸ್‌ನಲ್ಲಿ ಹಾಕಿಕೊಂಡು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ನಾರಾಯಣ ಭೋವಿ (49), ತಂದೆ: ರಾಜು ಭೋವಿ ವಾಸ: 8-69-53 ಆಶ್ರಯ ಕಾಲೊನಿ ಟಿಟಿ ರೋಡ್ ವಡೇರ ಹೋಬಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ: 06/05/2021 ರಂದು ಬೆಳಿಗ್ಗೆ 6.00 ಗಂಟೆಗೆ ಕೆಲಸದ ನಿಮಿತ್ತ ಕುಂದಾಪುರದಿಂದ ಬ್ರಹ್ಮಾವರದ ಕಡೆಗೆ ತನ್ನ KA 20EF 3148 ನೇ ವಿಗೋ ದ್ವಿಚಕ್ರ ವಾಹನದಲ್ಲಿಸ್ನೇಹಿತ ಮಾಮಿನ್ ರಾಹಿತ್ ನನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಕುಂದಾಪುರ –ಉಡುಪಿ ರಾ ಹೆ 66ರ ರಸ್ತೆಯಲ್ಲಿ ಹೊರಟು ಗುಂಡ್ಮಿ ಗ್ರಾಮದ ಟೋಲ್ ಗೇಟಿನ ಸ್ವಲ್ಪ ಹಿಂದೆ ಪೆಟ್ರೋಲ್ ಬಂಕ್ ಬಳಿಯಲ್ಲಿ ಬರುತ್ತಿರುವಾಗ ಪಿರ್ಯಾದಿದಾರರ ಹಿಂಬದಿಯಿಂದ ಕುಂದಾಪುರದಿಂದ ಉಡುಪಿ ಕಡೆಗೆ TATA ACE NO KA20B6303 ನೇ ಟೆಂಪೋ ಚಾಲಕ ಕೆ.ಸುರೇಶ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೆ ವಾಹನವನ್ನು ಎಡಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಚಲಾಯಿಸಿಕೊಂಡಿದ್ದ ದ್ವಿಚಕ್ರ ವಾಹನದ ಎಡಕ್ಕೆ ತಾಗಿದ ಪರಿಣಾಮ ಪಿರ್ಯಾದಿದಾರರು ಹಾಗೂ ಹಿಂಬದಿ ಸವಾರ ಮಾಮಿನ ರಾಹತ್ ರಸ್ತೆಗೆ ಬಿದ್ದಿದ್ದು ,ಪರಿಣಾಮ ಪಿರ್ಯಾದಿದಾರರ ಎಡ ಕಾಲಿನ ಪಾದದ ಬೆರಳಿಗೆ ತರಚಿದ ಗಾಯವಾಗಿರುತ್ತದೆ .ರಾಹತ ನಿಗೆ ಎಡಕಾಲಿನ ಮೊಣ ಗಂಟಿನ ಕೆಳಗೆ ಹಾಗೂ ಬಲ ಕಾಲಿನ ಪಾದದ ಬಳಿಯಲ್ಲಿ ರಕ್ತಗಾಯವಾಗಿರುತ್ತದೆ.TATA ACE NO KA20B6303 ನೇ ಟೆಂಪೋ ಚಾಲಕ ಕೆ.ಸುರೇಶ ಗಾಯಗೊಂಡ ರಾಹತನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದರಿಂದ ಆದರೆ ಈ ವರೆಗೆ ಯಾವುದೇ ಚಿಕಿತ್ಸಾ ವೆಚ್ಚವನ್ನು ಭರಿಸದೇ ಇದ್ದುದರಿಂದ ಠಾಣೆಗೆ ಬಂದು ದೂರು ನೀಡಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಉಡುಪಿ: ದಿನಾಂಕ 08/05/2021 ರಂದು ಬೆಳಿಗ್ಗೆ 9:00 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಯಂಪಳ್ಳಿ ಮಡಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಪಿರ್ಯಾದಿದಾರರಾದ ನವೀನ್ ನಾಯ್ಕ್ (39), ತಂದೆ :ಕೃಷ್ಣಪ್ಪ ನಾಯ್ಕ್ ,ವಾಸ: 4-38, ನಂದಾದೀಪ, ನಯಂಪಳ್ಳಿ, 3ನೇ ಕ್ರಾಸ್, ಸಂತೆಕಟ್ಟೆ ಅಂಚೆ ಪುತ್ತೂರು ಗ್ರಾಮ, ಉಡುಪಿ ಹಾಗೂ ಮಧುಕರ ಆಚಾರ್ಯ ಎಂಬುವವರು ಗದ್ದೆಯ ಬಳಿ ಹಡಿಲು ಭೂಮಿಯ ತೋಡಿನ ಹೂಳು ಎತ್ತುವ ಕಾರ್ಯ ನಡೆಯುತ್ತಿದ್ದ ಸಮಯ ತೋಡಿನ ಬಳಿ ಬೀಳುವ ಸ್ಥಿತಿಯಲ್ಲಿ ಇದ್ದ ತೆಂಗಿನ ಮರವನ್ನು ಮಧುಕರ ಆಚಾರ್ಯರವರ ಸೂಚನೆಯಂತೆ ಪಿರ್ಯಾದಿದಾರರು ತೆಗೆಸಿದ್ದಕ್ಕೆ ಆರೋಪಿ ಕೇಶವ ಪೂಜಾರಿ ರವರು ಆ ತೆಂಗಿನ ಮರ ತನಗೆ ಸೇರಿದ್ದಾಗಿ ಹೇಳಿ ದ್ವೇಷಗೊಂಡು, ಪಿರ್ಯಾದಿದಾರರ ಕುತ್ತಿಗೆ ಹಿಡಿದು ದೂಡಿ, ತನ್ನ ಕೈಗಳಿಂದ ಹಲ್ಲೆ ನಡೆಸಿದ್ದು ಅಲ್ಲದೇ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ:323, 506 ಐಪಿಸಿ & ಕಲಂ: 3(1)(r), 3(1)(s), 3(2)(v-a) SC/ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ: 08/05/2021 ರಂದು ಬೆಳಿಗ್ಗೆ 9:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಯಂಪಳ್ಳಿ ಎಂಬಲ್ಲಿ ಪಿರ್ಯಾದಿದಾರರಾದ ಕೇಶವ ಕೋಟ್ಯಾನ್ (42) ತಂದೆ:ದಿ. ಕೃಷ್ಣ ಪೂಜಾರಿ ವಾಸ: 3ನೇ ಕ್ರಾಸ್, ನಯಂಪಳ್ಳಿ ಸಂತೆಕಟ್ಟೆ ಅಂಚೆ ಪುತ್ತೂರು ಗ್ರಾಮ, ಉಡುಪಿ ಇವರ ಮನೆಯ ಹತ್ತಿರ ಇರುವ ಮಧುಕರ ಆಚಾರ್ಯ ರವರ ಗದ್ದೆಯ ಬಳಿ ಸರ್ಕಾರದ ವತಿಯಿಂದ ಹೂಳು ತೆಗೆಯುವ ಕೆಲಸವು ಪಿರ್ಯಾದಿದಾರರ ಪರಿಚಯದ ಹಾಗೂ ನೆರೆಕೆರೆ ವಾಸಿ 1ನೇ ಆರೋಪಿ ನವೀನ ನಾಯ್ಕ್ ರವರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದಾಗ ಆರೋಪಿಯು ಮಧುಕರ ಆಚಾರ್ಯ ಎಂಬುವವರ ಗದ್ದೆಯ ಬಳಿ ಇರುವ ಪಿರ್ಯಾದಿದಾರರು ತೆಂಗಿನ ಕಾಯಿಗಳನ್ನು ತೆಗೆಯುತ್ತಿದ್ದ ಮರವನ್ನು ಜೆ.ಸಿ.ಬಿ ಯಿಂದ ತೆಗೆಸಿರುತ್ತಾರೆ. ಆಗ ಪಿರ್ಯಾದಿದಾರರು ಈ ಬಗ್ಗೆ ಆಕ್ಷೇಪಿಸಿದ್ದಕ್ಕೆ ಆರೋಪಿಯು ದ್ವೇಷಗೊಂಡು ಪಿರ್ಯಾದಿದಾರರಿಗೆ ಮರದ ಬಳಿ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ದೂಡಿ ಹಾಕಿದ್ದಲ್ಲದೇ 2ನೇ ಆರೋಪಿ ಶ್ರೀಮತಿ ಜಯಶ್ರೀ ರವರು ಮರದ ಸೊಂಟೆಯಿಂದ ಪಿರ್ಯಾದಿದಾರರ ತಲೆಯ ಹಿಂಭಾಗ ಹಾಗೂ 1ನೇ ಆರೋಪಿಯ ತಾಯಿಯಾದ 3ನೇ ಆರೋಪಿಯು ಕೋಲಿನಿಂದ ಮೈ ಕೈಗೆ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2021 ಕಲಂ:341, 504, 323, 324 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಸಂತೋಷ ಬಿಪಿ , ಪೊಲೀಸ್ ಉಪನಿರೀಕ್ಷಕರು ಕೋಟ ಪೊಲೀಸ್‌ ಠಾಣೆ ಇವರು ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 09.30 ಗಂಟೆಗೆ ಸಾಲಿಗ್ರಾಮ ಪೇಟೆಯ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರ ಸಾಲಿಗ್ರಾಮ ಮೊಬೈಲ್‌ ಹೆಸರಿನ ಮೊಬೈಲ್‌ ಅಂಗಡಿ ತೆರೆದುಕೊಂಡಿದ್ದು ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕನಾಗಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ವಿಳಾಸ ಕೇಳಲಾಗಿ ಗಣೇಶ ಎಂಬುದಾಗಿ ತಿಳಿಸಿದ್ದು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ತನ್ನ ಮೊಬೈಲ್ ಅಂಗಡಿಯನ್ನು ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 07/05/2021 ರಂದು ಶ್ರೀಮತಿ ವೇದಾವತಿ ,ಪೊಲೀಸ್‌ ಉಪನಿರೀಕ್ಷಕರು ಶಿರ್ವಾ ಪೊಲೀಸ್ ಠಾಣೆ ಇವರು ಶಿರ್ವಾ ಗ್ರಾಮದ ಶಿರ್ವಾ ಪೇಟೆಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಸ ಓರ್ವ ವ್ಯಕ್ತಿ ಬಜಾಜ್ ಡಿಸ್ಕವರ್ ಕಂಪೆನಿಯ ಮೋಟಾರ್ ಸೈಕಲ್ ನಂಬ್ರ ಕೆಎ 20 ಇಡಿ 3361 ನೇದನ್ನು ಚಲಾಯಿಸಿಕೊಂಡು ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ ಪ್ರಕಾಶ್ ಪ್ರಾಯ 30 ವರ್ಷ ತಂದೆ: ಹುಲ್ಲಪ್ಪ ವಾಸ: ಬಾಳಂ ಬೀಡು, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ ಹಾಲಿ ವಿಳಾಸ : ಶಿರ್ವಾ ಏರಿಕ್ ಫೆರ್ನಾಂಡಿಸ್ ರವರ ಮನೆ ಹತ್ತಿರ ಇರುವ ಬಾಡಿಗೆ ಮನೆ ಶಿರ್ವಾ ಗ್ರಾಮ ಎಂಬುದಾಗಿ ತಿಳಿಸಿದ್ದು, ಅಪಾದಿತನು ಸಮಂಜಸ ಕಾರಣವಿಲ್ಲದೇ ಅನಗತ್ಯವಾಗಿ ಸಂಚರಿಸುತ್ತಿರುವುದಾಗಿದೆ. ಅಪಾದಿತನು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ: 27/04/2021 ರಿಂದ ದಿನಾಂಕ: 12/05/2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 08/05/2021 ರಂದು ಜನಾರ್ಧನ ಜೋಗಿ ,ಎಎಸ್ಐ ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಸರಹದ್ದಿನ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಕ್ರಾಸ್ ಎಂಬಲ್ಲಿ ವಾಹನ ತಪಾಸಣಾ ಕರ್ತವ್ಯದಲ್ಲಿರುವಾಗ ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡಿದ್ದ 1) ಹೀರೋ ಸ್ಪ್ಲೆಂಡರ್ ಪ್ರೋ ಮೋಟಾರು ಸೈಕಲ್ ನಂಬ್ರ KA20EH7027,2) ಹಿರೋ ಹೊಂಡಾ ಫ್ಯಾಶನ್ ಪ್ರೋ ಮೋಟಾರು ಸೈಕಲ್ ನಂಬ್ರ KA19EB8853 ,3) ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಂಬ್ರ KA20Y4008 ಮೇಲ್ಕಂಡ ದ್ವಿ-ಚಕ್ರ ವಾಹನದ ಸವಾರರು ಕೋವಿಡ್-19 ಕೊರೋನ ವೈರಸ್ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರೋನ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪ್ರಸ್ತುತ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆ ಯಂತೆ ಅನಗತ್ಯವಾಗಿ ತೆರೆದ ಅಂಗಡಿಗಳ ತಪಾಸಣೆಯ ಬಗ್ಗೆ ಪ್ರಕಾಶ್,ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ, ಕಾಪು ಇವರು ದಿನಾಂಕ 08/05/2021 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 12:25 ಗಂಟೆಗೆ ಆರೋಪಿ ಬಿ.ಎಂ. ಮೊಹಮ್ಮದ್ ಇಸ್ಮಾಯಿಲ್ ರವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಕಾಪು ತಾಲೂಕು, ಬಡಾ ಗ್ರಾಮದ ಉಚ್ಚಿಲ ಭಾಸ್ಕರನಗರ ದಲ್ಲಿರುವ ಫಾತಿಮಾ ಜನರಲ್ ಸ್ಟೋರ್‌ ಅಂಗಡಿ ಯನ್ನು ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ: 08/05/2021 ರಂದು ಸುದರ್ಶನ್ ಬಿ.ಎನ್, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಸಂಚಾರ ಪೊಲೀಸ್ ಠಾಣೆ. ಇವರು ಸಿಬ್ಬಂದಿಯವರೊಂದಿಗೆ ಹಂಗಳೂರು ಗ್ರಾಮದ ಹಂಗಳೂರು ಜುಮ್ಮಾ ಮಸೀದಿಯ ಬಳಿ ಪೂರ್ವ ಬದಿಯ NH 66 ರಸ್ತೆಯಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ 12:00 ಗಂಟೆಯಿಂದ 19.30 ಗಂಟೆಯ ಮದ್ಯಾವಧಿಯಲ್ಲಿ ಕೋಟೇಶ್ವರ- ಹಳೆ ಅಳಿವೆ ಮಾರ್ಗವಾಗಿ ಈ ಕೆಳಕಂಡ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದ್ವಿಚಕ್ರ ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ 1)KA-19-MF-0291ನೇ ಮಾರುತಿ ವ್ಯಾಗನರ್‌ ಕಾರು -1, ಚಾಲಕ & ವಿಳಾಸ ; ಸುಧೀರ ಪ್ರಾಯ :34 ವರ್ಷ ತಂದೆ : ಗಣಪ ವಾಸ: ಕೆಳಪೇಟೆ, ಬಸ್ರೂರು ಗ್ರಾಮ ಕುಂದಾಪುರ ತಾಲೂಕು ,2). KA-20-EN-5967 ನೇ ಸ್ಕೂಟಿ-1, ಸವಾರ & ವಿಳಾಸ : ವಿನಯ ಪ್ರಾಯ 30 ವರ್ಷ ತಂದೆ:ಸೀತಾರಾಮ ವಾಸ: ಕಾಮತ್‌ ಮೋಟಾರ್ಸ್‌‌ ರಸ್ತೆ, ಹಂಗಳೂರು ಗ್ರಾಮ ಕುಂದಾಪುರ, ಕುಂದಾಫುರ ತಾಲೂಕು ,3). KA-20-EP-9223 ನೇ ಬೈಕ್‌ -1, ಸವಾರ & ವಿಳಾಸ : ಅರುಣ್ ಪ್ರಾಯ:25 ವರ್ಷ ತಂದೆ : ಚಂದ್ರಶೇಖರ ಶೆಟ್ಟಿ ವಾಸ : ಮಲ್ಯಾಡಿ, ಉಳ್ತೂರು, ಉಳ್ತೂರು ಗ್ರಾಮ ಕುಂದಾಪುರ, ಕುಂದಾಫುರ ತಾಲೂಕು ,4). KA-20-ES-6161 ನೇ ಸ್ಕೂಟಿ -1 ಸವಾರ : & ವಿಳಾಸ ಸಂತೋಷ ಪ್ರಾಯ: 35 ವರ್ಷ ತಂದೆ : ಮಹಾಲಿಂಗ ಶೆಟ್ಟಿ ವಾಸ : ಉಳ್ತೂರು, ತೆಕ್ಕಟ್ಟೆ ಕುಂದಾಫುರ ತಾಲೂಕು ,5). KA-20-EB-5520 ನೇ ಬೈಕ್‌‌ -1, ಸವಾರ: & ವಿಳಾಸ ಸಚ್ಚಿದಾನಂದ ಪ್ರಾಯ :45 ವರ್ಷ ತಂದೆ : ನರಸಿಂಹ ಆಚಾರ್‌ ವಾಸ : ಕುಂತಿಯಮ್ಮ ದೇವಸ್ಥಾನದ ಹತ್ತಿರ, ತಲ್ಲೂರು ಕುಂದಾಫುರ ತಾಲೂಕು ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ : ದಿನಾಂಕ 08/05/2021 ರಂದು 13:30 ಗಂಟೆಗೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶಂಕರನಾರಾಯಣ ಬಸ್ಸು ನಿಲ್ದಾಣದ ಸ್ವಲ್ಪ ಮುಂದುಗಡೆ ಅಂಪಾರು ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ 1. ಕೆಎ.20 ಇಜಿ, 4147 2. ಕೆಎ,20 ವಿ.7517 3. ಕೆಎ,20 ಇಯು.0727 4. ಕೆಎ.20 ಇಟಿ.4753 ಕೆಎ.20 ಇಎಮ್, 6756 ನೇ ನಂಬ್ರದ ಮೋಟಾರ್ ಸೈಕಲ್‌ ಸವಾರರು ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣ ಗೊಳ್ಳುತ್ತಿರುವ ಕಾರಣ ಸೋಂಕನ್ನು ತಡೆಗಟ್ಟುವ ಕಾರಣ ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾ ದಂಢಾಧಿಕಾರಿಯರು ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾ ದಂಢಾಧಿಕಾರಿಯವರು ಹಾಗೂ ಘನ ಸರಕಾರದ ಆದೇಶವನ್ನು ಉಲ್ಲಂಘಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಗುಂಪುಗೂಡಿಕೊಂಡು ನಿಂತುಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021ಕಲಂ: 269 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-05-2021 11:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080