ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೊಲ್ಲೂರು: ಪಿರ್ಯಾದಿದಾರರಾದ ರೋಶನ್ ಶೆಟ್ಟಿ (27) ,ತಂದೆ:ಚಂದ್ರ ಶೇಖರ ಶೆಟ್ಟಿ ,ವಾಸ: ಅನಂತನ ಕೊಡ್ಲು ಕೆರಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 09/05/2021 ರಂದು ಮಧ್ಯಾಹ್ನ 12:00 ಗಂಟೆಗೆ ಚಿತ್ತೂರು ಮೆಡಿಕಲ್ ಶಾಪ್ ಗೆ ಬಂದವರು ಚಿತ್ತೂರಿನಿಂದ ಕೆರಾಡಿ ಕಡೆಗೆ ತನ್ನ ಮೊಟಾರು ಸೈಕಲ್ ನ್ನು ಸವಾರಿ ಮಾಡಿಕೊಂಡು ಕೆರಾಡಿ-ಮೂಡುಗಲ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಪಿರ್ಯಾದಿದಾರರ ಹಿಂದಿನಿಂದ ಆರೋಪಿ ಪ್ರವೀಣ್ ನಾಯ್ಕ KA 20 C 3677 ನೇ 407 ಟೆಂಪೋ ವನ್ನು ಕೆರಾಡಿ ಕಡೆಯಿಂದ ಮೂಡಗಲ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರ ಮೋಟಾರು ಸೈಕಲ್ ನ್ನು ಓವರ್ ಟೇಕ್ ಮಾಡಿ ಕೊಡಗಡಿಗೆ ಎಂಬಲ್ಲಿ ತಿರುವು ರಸ್ತೆಯಲ್ಲಿ ತೀರಾ ಬಲಕ್ಕೆ ಚಲಾಯಿಸಿ ಮೂಡುಗಲ್ ಕಡೆಯಿಂದ ಕೆರಾಡಿ ಕಡೆಗೆ ಶ್ರೀಧರ್ ಶೆಟ್ಟಿ ಎಂಬುವವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20 EE 9202 ನೇ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೊಟಾರ್ ಸೈಕಲ್ ಸವಾರ ಶ್ರೀಧರ ಶೆಟ್ಟಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಮತ್ತು ಬಲ ಕಾಲಿಗೆ ರಕ್ತಗಾಯವಾಗಿ ಎದೆಗೆ ಗುದ್ದಿದ ಒಳನೋವು ಉಂಟಾಗಿ ಚಿಕಿತ್ಸೆಗೆ ಕುಂದಾಪುರಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದವರನ್ನು ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವುದಾಗಿ ವೈದ್ಯರು ಸೂಚಿಸಿದಂತೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ 

  • ಬ್ರಹ್ಮಾವರ :ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಅದರಂತೆ ದಿನಾಂಕ: 08.05.2021ರಂದು ಬ್ರಹ್ಮಾವರ ತಾಲೂಕು, ವಾರಂಬಳ್ಳಿ ಗ್ರಾಮದ ಮದರ್‌ ಪ್ಯಾಲೇಸ್‌ ಹೋಟೆಲ್‌‌‌ ಎದುರು ಉಡುಪಿ-ಕುಂದಾಪುರ ರಾ.ಹೆ 66 ರಲ್ಲಿ ಶಾಂತರಾಜ್‌, ಎಎಸ್‌ಐ ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವ ಸಮಯ ಸಂಜೆ 6:05 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ KA20MA7300 i-10 ಕಾರನ್ನು ಹಾಗೂ KA19EE9260 ಮೋಟಾರು ಸೈಕಲ್‌ನ್ನು ಪರಿಶೀಲಿಸಿದಾಗ, ಕಾರಿನಲ್ಲಿ ಆರೋಪಿಗಳಾದ 1) ಶಿವಾನಂದ ಪ್ರಾಯ : 43 ವರ್ಷ 2) ಪ್ರದೀಪ (29), 3) ಸುಭೋದ್‌ (32), 4) ಶಿವಾನಂದ ಪ್ರಾಯ: 28 ವರ್ಷ ,5) ಪಕೀರಪ್ಪ , ಪ್ರಾಯ: 24 ವರ್ಷ ರವರು ಹಾಗೂ ಮೋಟಾರ್‌ ಸೈಕಲ್ ಸವಾರ 6) ಶಂಕರ ಮಲ್ಲಪ್ಪ , ಪ್ರಾಯ: 35 ವರ್ಷ ಇವರುಗಳು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿ ಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ತಮ್ಮತಮ್ಮ ಮುಖಕ್ಕೆ ಮಾಸ್ಕನ್ನು ಧರಿಸದೇ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಕಾರಿನಲ್ಲಿ ಹಾಗೂ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಅದರಂತೆ ದಿನಾಂಕ: 08.05.2021ರಂದು ಬ್ರಹ್ಮಾವರ ತಾಲೂಕು, ವಾರಂಬಳ್ಳಿ ಗ್ರಾಮದ ಮದರ್‌ ಪ್ಯಾಲೇಸ್‌ ಹೋಟೆಲ್‌‌‌ ಎದುರು ಉಡುಪಿ-ಕುಂದಾಪುರ ರಾ.ಹೆ 66 ರಲ್ಲಿ ಸುಂದರ, ಎಎಸ್‌ಐ ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವ ಸಮಯ ಸಂಜೆ 6:15 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ KA32A3210 ನೇ ನಂಬ್ರದ ಬಿಳಿ ಬಣ್ಣದ ಟೊಯೋಟಾ ಇಟಿಯೋಸ್‌ ಕಾರಿನಲ್ಲಿ 1ನೇ ಆರೋಪಿ ಗಂಗಾಧರ ಹನುಮಂತ ಪ್ರಾಯ : 30 ವರ್ಷ , ಅಲ್ಲದೇ KA20EM8672 ನೇ ನೊಂದಣಿ ನಂಬ್ರದ ಟಿವಿಎಸ್ ಎವೆಂಜರ್‌ ಮೋಟಾರು ಸೈಕಲ್‌ನಲ್ಲಿ ಸವಾರಿ ಮಾಡುತ್ತಿದ್ದ 2ನೇ ಆರೋಪಿ ಬಾಬು ಗೊಳಬಾಳ ಪ್ರಾಯ : 25 ವರ್ಷ ಹಾಗೂ ಸಹಸವಾರ 3ನೇ ಆರೋಪಿ ದೇವಪ್ಪ ಪ್ರಾಯ : 35 ವರ್ಷ ಮತ್ತು KA20EN8631 ನೇ ನೊಂದಣಿ ನಂಬ್ರದ ಕೆಂಪು ಬಣ್ಣದ ಬುಲೇಟ್‌ ಮೋಟಾರು ಸೈಕಲ್‌ ಸವಾರ 4ನೇ ಆರೋಪಿ ಪುನೀತ್‌ ರಾಜ್‌ ಪ್ರಾಯ : 29 ವರ್ಷ ಇವರುಗಳು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿ ಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ತಮ್ಮತಮ್ಮ ಮುಖಕ್ಕೆ ಮಾಸ್ಕನ್ನು ಧರಿಸದೇ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಕಾರಿನಲ್ಲಿ ಹಾಗೂ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ : 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಅದರಂತೆ ದಿನಾಂಕ: 08.05.2021ರಂದು ಬ್ರಹ್ಮಾವರ ತಾಲೂಕು, ವಾರಂಬಳ್ಳಿ ಗ್ರಾಮದ ಮದರ್‌ ಪ್ಯಾಲೇಸ್‌ ಹೋಟೆಲ್‌‌‌ ಎದುರು ಉಡುಪಿ – ಕುಂದಾಪುರ ರಾ.ಹೆ 66 ರಲ್ಲಿ ಗುರುನಾಥ ಬಿ ಹಾದಿಮನಿ, ಪಿಎಸ್‌ಐ ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವ ಸಮಯ ಸಂಜೆ 5:45 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ KA19AB5159 ಚರ್ವೋಲೆಟ್‌ ಸೈಲ್‌ ಕಾರನ್ನು ಪರಿಶೀಲಿಸಿದಾಗ, ಕಾರಿನಲ್ಲಿ ಆರೋಪಿಗಳಾದ 1) ಚಂದ್ರಕಾಂತ ಎಸ್‌. ಸಾಸನೂರು, (26), 2) ಚಂದ್ರಶೇಖರ (22), 3) ರಮೇಶ(20), 4) ಮಂಜುನಾಥ (25), 5) ಮುತ್ತು (23) ರವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿ ಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಮುಖಕ್ಕೆ ಮಾಸ್ಕನ್ನು ಧರಿಸದೇ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಕಾರಿನಲ್ಲಿ ಪ್ರಯಾಣಿಸುತ್ತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2021 ಕಲಂ :269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

 

ಇತ್ತೀಚಿನ ನವೀಕರಣ​ : 09-05-2021 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080