ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 07.04.2023 ರಂದು ಫಿರ್ಯಾದಿ: ಅಕ್ಬರ್‌ ಬಾಷಾ (49), ತಂದೆ: ಅಬ್ದುಲ್‌ ಗಫುರ್‌ ಸಾಹೇಬ್‌,ವಾಸ:ಬೇಳೂರು ಜೆಡ್ಡು ಹಂದಾಡಿ ಗ್ರಾಮ, ಇವರು ರಿಕ್ಷಾದಲ್ಲಿ ಕುಮ್ರಗೋಡಿಗೆ ಬಾಡಿಗೆ ಹೋಗಿ ವಾಪಸ್ಸು ಬ್ರಹ್ಮಾವರ ಕಡೆಗೆ ರಾ.ಹೆ 66 ರಲ್ಲಿ ಸಮಯ ಸುಮಾರು ಸಂಜೆ 07:00 ಗಂಟೆಗೆ ಧರ್ಮಾವರಂ ಬಳಿ ಇರುವ ಯುಟರ್ನ್‌ ತಲುಪುವಾಗ ಫಿರ್ಯಾಧಿದಾರರ ಹಿಂದಿನಿಂದ ಬರುತ್ತಿದ್ದ KA20.AA.1402 ಇಕೋ ಕಾರಿನ ಚಾಲಕನು ಅತೀವೇಗ ಹಾಗೂ ಅಜಾಗರೂಕತೆ ಇಂದ  ಚಲಾಯಿಸಿ ಯು ಟರ್ನ್‌ ತೆಗೆದುಕೊಳ್ಳುತ್ತಿದ್ದ KA.20.A.5231 ಬಜಾಜ್‌ ರಿಕ್ಷಾದ ಬಲಬಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಆಟೋ ಚಾಲಕ ಸಂಜೀವ ಕಾಂಚಾನರವರ ರಿಕ್ಷಾದಿಂದ ರಸ್ತೆಗೆ ಬಿದ್ದಿರುತ್ತಾರೆ. ಕೂಡಲೇ ಫೀರ್ಯಾಧಿದಾರರು ಅವರ  ರಿಕ್ಷಾವನ್ನು ರಸ್ತೆಬದಿ ನಿಲ್ಲಿಸಿ ಸ್ಥಳಕ್ಕೆ ಹೋಗುವರಷ್ಟರಲ್ಲಿ ರಿಕ್ಷಾ ಚಾಲಕನ ಮಗ ಪ್ರಮೋದ್‌ ಹಾಗೂ ಅಳಿಯ ರಾಘವೇಂದ್ರ ಸ್ಥಳಕ್ಕೆ ಬಂದಿದ್ದು, ಒಂದು ಅಂಬುಲೆನ್ಸ್‌ ನಲ್ಲಿ ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ  74/2023 : ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಶಿರ್ವ: ಪಿರ್ಯಾದಿ: ಮೆಗೇಶ್‌ಪೂಜಾರಿ (51),ತಂದೆ: ದಿ: ವಾಸು ಪೂಜಾರಿ,ವಾಸ: ಮನೆ ನಂ. 9-3, ಗುರುಕೃಪಾ ನಿವಾಸ,ಕಲ್ಲೊಟ್ಟು ಹೌಸ್‌, ಶಿರ್ವ ಅಂಚೆ ಮತ್ತು  ಗ್ರಾಮ ಇವರು ದಿನಾಂಕ 08.04.2023  ರಂದು ಅಟೋ  ರಿಕ್ಷಾದಲ್ಲಿ ಶಿರ್ವ ಪೇಟೆಯಿಂದ    ಮನೆ ಕಡೆಗೆ   ಹೋಗುವರೇ ಶಿರ್ವ ಪದವು ರಸ್ತೆ  ಮಾರ್ಗವಾಗಿ  ಕಲ್ಲೊಟ್ಟು ಕಡೆಗೆ  ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೆಟ್‌ ರಸ್ತೆಯಲ್ಲಿ ಹೋಗುತ್ತಿರುವಾಗ ಶಿರ್ವ  ಗ್ರಾಮದ  ಶಿರ್ವ  ಪದವು  ಶ್ರೀ ಬಬ್ಬುಸ್ವಾಮಿ  ದೈವಸ್ಥಾನದ ಬಳಿ ತಲುಪುವಾಗ ಮಧ್ಯಾಹ್ನ 1:00 ಗಂಟೆ ಸುಮಾರಿಗೆ   ಪಿರ್ಯಾದಿದಾರರ  ಮುಂದಿನಿಂದ  ಅಂದರೆ  ಶಿರ್ವ  ಪೇಟೆಯಿಂದ ಕಲ್ಲೊಟ್ಟು ಕಡೆಗೆ KA19Y6535 ನೇ ದ್ವಿಚಕ್ರ  ವಾಹನ   ಸವಾರನು ಅತೀ  ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಹೋದ ಪರಿಣಾಮ ದ್ವಿಚಕ್ರ ವಾಹನದ  ನಿಯಂತ್ರಣ ತಪ್ಪಿ ರಸ್ತೆಯ ತೀರಾ ಬಲಬದಿಗೆ ಹೋಗಿ ಮರಕ್ಕೆ ಡಿಕ್ಕಿ  ಹೊಡೆದು ದ್ವಿಚಕ್ರ  ವಾಹನ  ಸಮೇತ ಹೊಂಡಕ್ಕೆ ಬಿದ್ದು ಆತನ ತಲೆಗೆ  ತೀವ್ರ ತರದ  ಗಾಯವಾಗಿರುತ್ತದೆ. ಆತನನ್ನು ಚಿಕಿತ್ಸೆ  ಬಗ್ಗೆ ಶಿರ್ವ  ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು  ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು ಹೋಗಿರುವ ವಿಚಾರ  ತಿಳಿಯಿತು.  ಈ  ಅಪಘಾತಕ್ಕೆ  KA19Y6535 ನೇ ದ್ವಿಚಕ್ರ ವಾಹನ  ಸವಾರ ಸತೀಶ್‌ಪೂಜಾರಿ  ರವರ  ಅತೀ  ವೇಗ  ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  30/2023 : ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಕೋಟ: ಪಿರ್ಯಾದಿ: ಶರತ್‌‌‌‌‌‌‌(29),   ತಂದೆ ಕೃಷ್ಣ  ದೇವಾಡಿಗ,   ಕಣ್ಣುಕೆರೆ,  ಆಲುಗುಡ್ಡೆ,  ತೆಕ್ಕಟ್ಟೆ  ಗ್ರಾಮ ಇವರು ದಿನಾಂಕ  08/04/2023  ರಂದು  ಬೆಳಿಗ್ಗೆ  ಕೋಟ  ಅಮೃತೇಶ್ವರಿ  ದೇವಸ್ಥಾನಕ್ಕೆ  ಹೋಗಲು  ತನ್ನ ಮೋಟಾರು  ಸೈಕಲಿನಲ್ಲಿ  ಹೊರಟಿದ್ದು, ಅವರ    ಚಿಕ್ಕಮ್ಮನ  ಮಗ  ಸಚಿನ್‌ (20) ನು  ಅವನ  ಮೋಟಾರು  ಸೈಕಲ್‌‌ ಕೆ.ಎ-20-ಹೆಚ್‌‌‌ಎ-5188 ರಲ್ಲಿ  ಚಿಕ್ಕಮ್ಮನ  ಮಗಳು ರಕ್ಷಿತಾ (19)  ಳನ್ನು  ಮೋಟಾರು  ಸೈಕಲ್‌‌‌‌‌ನಲ್ಲಿ  ಹಿಂಬದಿ  ಸವಾರಳಾಗಿ  ಕುಳ್ಳಿರಿಸಿಕೊಂಡು  ಹೊರಟಿದ್ದು  ಪೂಜೆ  ಮುಗಿಸಿ ನಂತರ  ವಾಪಾಸು ಕಣ್ಣುಕೆರೆ ಮನೆಗೆ  ಹೊರಟು  ಪಿರ್ಯಾದಿದಾರರು ಅವರ  ಹಿಂದಿನಿಂದಾಗಿ ತನ್ನ   ಮೋಟಾರು  ಸೈಕಲ್‌‌‌‌‌ನಲ್ಲಿ  ಹೋಗುತ್ತಾ  ಮಣೂರು  ಗ್ರಾಮದ  ಮಾಸ್‌‌‌‌‌‌‌‌ಇಂಜಿನಿಯರಿಂಗ್‌‌‌‌‌‌‌ವರ್ಕ್ಸ್  ಎದುರು  ತಲುಪುವಾಗ  ಬೆಳಿಗ್ಗೆ ಸುಮಾರು  09:15  ಗಂಟೆಗೆ  ಹಿಂದಿನಿಂದ  ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದ  ಲಾರಿ  ಪಿರ್ಯಾದಿದಾರರನ್ನು   ಓವರ್‌‌‌ಟೇಕ್‌‌‌‌‌‌‌ಮಾಡಿ  ಮುಂದೆ  ಹೋಗಿ  ತೀರಾ  ಎಡಬದಿಗೆ  ಚಲಾಯಿಸಿ ಪಿರ್ಯಾದಿದಾರರ  ಎದುರಿನಿಂದ    ಪಿರ್ಯಾದಿದಾರರ   ತಮ್ಮ ಸಚಿನ್‌‌‌‌‌‌‌ಸವಾರಿ  ಮಾಡಿಕೊಂಡು  ಹೋಗುತ್ತಿದ್ದ  ಮೋಟಾರು  ಸೈಕಲ್‌‌‌ಗೆ  ಬಲಬದಿಗೆ  ಡಿಕ್ಕಿ ಹೊಡೆದನು.  ಪರಿಣಾಮ  ಸಚಿನ್‌‌‌‌‌ಮತ್ತು  ರಕ್ಷಿತಾ  ಮೋಟಾರು  ಸೈಕಲ್‌‌‌‌‌‌ಸಮೇತ  ರಸ್ತೆಗೆ  ಬಿದ್ದರು.  ಅಪಘಾತದಿಂದ  ಸಚಿನ್‌‌‌‌ನ ಎಡಮಣಿಗಂಟು,  ಬಲಕಾಲಿನ ಪಾದದ  ಬಳಿ  ಮೂಳೆ  ಮುರಿತದ  ಗಾಯ,  ಹಾಗೂ  ಮುಖ,  ಮೂಗು,  ಹಣೆಗೆ  ರಕ್ತಗಾಯವಾಗಿರುತ್ತದೆ. ರಕ್ಷಿತಾಳಿಗೆ  ಎಡಬದಿ  ಭುಜಕ್ಕೆ  ಒಳಜಖಂ  ಆಗಿರುತ್ತದೆ.  ಈ ಬಗ್ಗೆ  ಕೋಟ ಠಾಣಾ ಅಪರಾಧ ಕ್ರಮಾಂಕ  57/2023  ಕಲಂ: 279, 337,338   IPCಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಅಮಾಸೆಬೈಲು: ಫಿರ್ಯಾಧಿ: ರಾಜೇಂದ್ರ ಪ್ರಾಯ 45 ವರ್ಷ ತಂದೆ: ಮಹಾಬಲ ಆಚಾರ್ಯ ವಾಸ: ಕೆರಾರಡಿ ಮಚ್ಚಟ್ಟು ಗ್ರಾಮ ಇವರು ಮತ್ತು ಫಿರ್ಯಾಧಿದಾರರ ಸಂಬಂಧಿ ಸುಮಂತ್‌ ( 23 ವರ್ಷ) ಎಂಬವರು ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದು ದಿನಾಂಕ 07-04-2023  ರಂದು ಇಬ್ಬರೂ ಹಾಲಾಡಿ ಮಾವಿನಕೋಡ್ಲು ಎಂಬಲ್ಲಿ ಜೊತೆಯಾಗಿ ವೆಲ್ಡಿಂಗ್‌ ಕೆಲಸ ಮುಗಿಸಿಕೊಂಡು  ಹಾಲಾಡಿ ಅಮಾಸೆಬೈಲು ಮಾರ್ಗವಾಗಿ ಅಮಾಸೆಬೈಲು ಕಡೆಗೆ ಫಿರ್ಯಾಧಿದಾರರು ಅವರ ದ್ವಿಚಕ್ರ  ವಾಹನದಲ್ಲಿ ಹಾಗೂ ಸುಮಂತ್‌ ಆತನ ಜ್ಯುಪಿಟರ್‌ ಸ್ಕೂಟಿ ನಂಬ್ರ KA  15 X 7853 ರಲ್ಲಿ ಹಾಲಾಡಿ ಕಡೆಯಿಂದ ತಮ್ಮ ಮನೆಯಾದ ಅಮಾಸೆಬೈಲು ಕಡೆಗೆ ಹೋಗುತ್ತಿರುವಾಗ  16:45 ಗಂಟೆ ಸಮಯಕ್ಕೆ ಕುಂದಾಪುರ ತಾಲೂಕು ರಟ್ಟಾಡಿ  ಗ್ರಾಮದ ರಟ್ಟಾಡಿ ಶಾಲೆಯ  ಬಳಿ ತಲುಪುವಾಗ ಹಾಲಾಡಿ  ಅಮಾಸೆಬೈಲು  ರಸ್ತೆಯಲ್ಲಿ ಅಮಾಸೆಬೈಲು ಕಡೆಯಿಂದ    KA 20 EL 1293 ನೇ ನಂಬ್ರದ   ಮೋಟಾರು ಸೈಕಲ್ಲು ಸವಾರ ರಾಮ ಪೂಜಾರಿ  ಎಂಬವರು ತನ್ನ ಬಾಬ್ತು ಮೋಟಾರು ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿದಾರರ ಎದುರುಗಡೆಯಿಂದ ಸುಮಂತ್‌ ಎಂಬವರು ಚಲಾಯಿಸಿಕೊಂಡು  ಹೋಗುತ್ತಿದ್ದ KA 15 X 7853   ನೇ ಸ್ಕೂಟಿಗೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ  ಸುಮಂತ್‌  ಸ್ಕೂಟಿ ಸಮೇತ ರಸ್ತೆಗೆ ಬಿದ್ದು  ತಲೆಯ ಹಿಂಬದಿ ಹಣೆ ಹಾಗೂ ಮೈಕೈಗೆ   ರಕ್ತ ಗಾಯವುಂಟಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  09/2023   ಕಲಂ 279, 337 ,  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತರ ಪ್ರಕರಣಗಳು

 • ಗಂಗೊಳ್ಳಿ: ಪಿರ್ಯಾದಿ: ಡಾ, ಚಂದ್ರಶೇಖರ ಶೆಟ್ಟಿ, 80 ವರ್ಷ, ತಂದೆ: ದಿ, ಕೆ ಮೋನಪ್ಪ ಏಟ್ಟಿ, ವಾಸ: ಭವಾನಿ ನಿಲಯ, ನೂಜಾಡಿ ಗ್ರಾಮ ರವರು ದಿನಾಂಕ: 07.04.2023 ರಂದು ಕುಂದಾಪುರ ತಾಲೂಕು ನೂಜಾಡಿ ಗ್ರಾಮದ ಭವಾನಿ ನಿಲಯ ಎಂಬ ಮನೆಯಲ್ಲಿ ಇರುವುವಾಗ ಸಮಯ ಸುಮಾರು 14:30 ಗಂಟೆಗೆ ಪಕ್ಕದ ಮನೆಯ ಪ್ರಭಾವತಿ ಶೆಡ್ತಿ ಎಂಬವರು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಮನೆಯಿಂದ ಹೊರಗೆ ಬಾ ಎಂದು ಹೇಳಿದ್ದು ಆಗ ಪಿರ್ಯಾದಿದಾರರು ಮನೆಯ ಹೊರಗೆ ಬಂದಾಗ ನೀನು ಆನಂದ ಶೆಟ್ಟಿಯವರಿಗೆ ಬೆಂಬಲ ಕೋಡುತ್ತೀಯಾ ಮುಂದಕ್ಕೆ ಆತನಿಗೆ ಬೆಂಬಲ ನೀಡಿದರೆ ನಿನ್ನನ್ನು ಹಾಗೂ ನಿನ್ನ ಹೆಂಡತಿಯನ್ನು ಕೊಲ್ಲದೇ ಬಿಡುವುದಿಲ್ಲ ಎಂಬುವುದಾಗಿ ಬೆದರಿಕೆ ಹಾಕಿ ಹೋಗಿರುತ್ತಾರೆ. ಆಪಾದಿತೆ ಹಾಗೂ ಆನಂದ ಶೆಟ್ಟಿಯವರಿಗೆ ಜಾಗದ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರಕ್ಕೆ ಪಿರ್ಯಾದಿದಾರರು ಆನಂದ ಶೆಟ್ಟಿಯವರಿಗೆ ಬೆಂಬಲ ನೀಡಿರುವುದಾಗಿ ತಿಳಿದು   ಆಪಾದಿತೆಯು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ  ಅಪರಾಧ ಕ್ರಮಾಂಕ  42/2023 ಕಲಂ: 447, 504, 506 IPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಮಲು ಪದಾರ್ಥ ಸೇವನೆ ಪ್ರಕರಣ

 • ಮಲ್ಪೆ: ದಿನಾಂಕ 07/04/2023  ರಂದು ಪಿರ್ಯಾದಿ: ಗುರುನಾಥ್ ಬಿ ಹಾದಿಮನಿ ಪಿಎಸ್ಐ ಮಲ್ಪೆ ಪೊಲೀಸ್‌ ಠಾಣೆ ಇವರು ಮತ್ತು ಸಿಬ್ಬಂದಿಯವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ಸ ಕರ್ತವ್ಯದಲ್ಲಿರುವ ಸಮಯ ಮಧ್ಯಾಹ್ನ 15:00  ಗಂಟೆಗೆ ತೆಂಕನಿಡಿಯೂರು ಗ್ರಾಮದ ಲಕ್ಷ್ಮೀ ನಗರ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಮಲುಭರಿತನಾಗಿ ತೂಗಾಡುವಂತೆ ಕಂಡು ಬರುತ್ತಿದ್ದು ಅವನ ಬಳಿ ಹೋಗಿ ಅವನ ಹೆಸರು ಕೇಳಿದಾಗ ಅವನು ತೊದಲುತ್ತಾ ನಕ್ಷೀತ್ ಪ್ರಾಯ: 24 ವರ್ಷ ತಂದೆ: ಹರಿಶ್ಚಂದ್ರ ವಾಸ: ಕರ್ಜೆ ಕುರ್ಪಾಡಿ ಬ್ರಹ್ಮಾವರ ಎಂದು ತಿಳಿಸಿದ್ದು.  ನಾವು ಅವನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಅವರನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಅವನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು ಆತನನ್ನುವೈದ್ಯಕೀಯ ತಪಾಸಣೆ ಬಗ್ಗೆ ಪಿಸಿ 2507 ರವಿರಾಜ ರವರೊಂದಿಗೆ ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸುವಂತೆ ನೇಮಿಸಿ ಕಳುಹಿಸಿದ್ದು, ಆತನನ್ನು  ಪರೀಕ್ಷಿಸಿದ ವೈದ್ಯರು ನಕ್ಷೀತ್ ಪ್ರಾಯ: 24 ವರ್ಷ ಇವರು ಗಾಂಜಾ ಸೇವಿಸಿರುವ ಬಗ್ಗೆ  ದಿನಾಂಕ : 08/04/2023 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ  35/2023 ಕಲಂ 27b NDPS ACT ಯಂತೆ ಪ್ರಕರಣ ದಾಖಲಿಸಲಾಗಿದೆ. 

ಮನುಷ್ಯ ಕಾಣೆ ಪ್ರಕರಣ

 • ಕೊಲ್ಲೂರು: ಪಿರ್ಯಾದಿ: ಅನಿಲ್‌ಕುಮಾರ್‌(31 ವರ್ಷ) ತಂದೆ: ವೆಂಕಟರಾಮಪ್ಪ ವಾಸ:ಅಚ್ಚಗೇರಿ  ವೆಂಕಟರಾಮಪ್ಪ  ಕೋಡಿಹಳ್ಳಿ  ಅಂಜನೇಯ ಸ್ವಾಮಿ ದೇವಸ್ಥಾನ ಬಳಿ  ಕೋಡಿಹಳ್ಳಿ ಗ್ರಾಮ  ಇವರ ತಂದೆ ವೆಂಕಟರಾಮಪ್ಪ (55 ವರ್ಷ) ಎಂಬವರು ತಮ್ಮ ಊರಾದ ಚಿಕ್ಕಬಳ್ಳಾಪುರದ ಕೋಡಿಹಳ್ಳಿ ಗ್ರಾಮಸ್ಥರೊಂದಿಗೆ ಪ್ರಸಿದ್ದ ದೇವಸ್ಥಾನಗಳ ಯಾತ್ರೆಯ ಬಗ್ಗೆ ದಿನಾಂಕ: 04/04/2023 ರಂದು ಪರಿಚಯದ ರಘನಾಥ ರೆಡ್ಡಿ, ಸಿದ್ದ ರೆಡ್ಡಿ, ಶಿವಕುಮಾರ್‌, ಶಿವಪ್ಪ  ಹಾಗೂ ಇತರರೊಂದಿಗೆ KA 11 A 8929 ನೇ ಎಸ್‌.ವಿ.ಎಸ್‌ ಟೂರ್‌& ಟ್ರಾವೆಲ್ಸ್‌ ಬಸ್ಸಿನಲ್ಲಿ ಹೊರಟು ದಿನಾಂಕ : 05/04/ 2023 ರಂದು ರಾತ್ರಿ 8:30 ಗಂಟೆಗೆ  ಕೊಲ್ಲೂರಿಗೆ ಬಂದು ಕೊಲ್ಲೂರು ಶ್ರೀ. ಮೂಕಾಂಬಿಕಾ ದೇವಸ್ಥಾನದ ಲಲಿತಾಂಬಿಕ ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಂಡವರು ದಿನಾಂಕ: 06/04/2023 ರಂದು ಬೆಳಗ್ಗಿನ ಜಾವ 04:00 ಗಂಟೆಗೆ ಬರ್ಹಿದೆಸೆಗೆ ಎಂದು ಹೋದವರು ನಾಪತ್ತೆಯಾಗಿದ್ದು ಈ ತನಕ ಹುಡುಕಾಡಿ ದರೂ ಪತ್ತೆಗೆಯಾಗದೇ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ  :20/2023  ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಹಲ್ಲೆ ಪ್ರಕರಣ

 • ಕುಂದಾಪುರ: ಪಿರ್ಯಾದಿ: ಇಬ್ರಾಹಿಂ ಖಲೀಲ್‌, ಪ್ರಾಯ: 26 ವರ್ಷ, ತಂದೆ: ಹೆಚ್‌.ಎಮ್‌ಹಂಝ, ವಾಸ: ಗುಲ್ವಾಡಿ ಗ್ರಾಮ ಪಂಚಾಯತ್‌ಕಛೇರಿ ಹತ್ತಿರ, ಗುಲ್ವಾಡಿ ಗ್ರಾಮ ಇವರಿಗೆ  ದಿನಾಂಕ 07.04.2023 ರಂದು ಆಪಾದಿತರಾದ  1) ಇರ್ಷಾದ್‌, 2) ಇರ್ಪಾನ್‌3) ಅಪ್ರಾನ್‌ ಹಾಗೂ ಇತರ ಇಬ್ಬರೂ ಪೋನ್‌ಮಾಡಿ ನಿನ್ನ ಜೊತೆ ಸ್ವಲ್ಪ ಮಾತನಾಡುವುದಿದೆ ಗುಲ್ವಾಡಿ ಸೇತುವೆ ಹತ್ತಿರ ಬರುವಂತೆ ಹೇಳಿದ್ದು ಅದರಂತೆ ಪಿರ್ಯಾದಿದಾರರು ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಗುಲ್ವಾಡಿ ಸೇತುವೆಯ ಬಳಿ 21:00 ಗಂಟೆಗೆ ಬಂದಾಗ,KA 27 M 6472 ನೇ ಕಾರಿನಲ್ಲಿ ಹಾಗೂ ಸ್ಕೂಟಿಯಲ್ಲಿ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಬಂದ ಆಪಾದಿತರು ಪಿರ್ಯಾದಿದಾರರಲ್ಲಿ ಆಪಾದಿತರ ಪೈಕಿ ಇರ್ಷಾದ್‌ನು ನೀನು ನಮ್ಮ ಕಾರನ್ನು ಮಾಂಸದ ವ್ಯವಹಾರಗಳಿಗೆ ಬಾಡಿಗೆಗೆ ನೀಡುವ ವಿಚಾರ ಹಾಗೂ ಕಾರಿನ ಬಣ್ಣವನ್ನು ಬದಲಾಯಿಸಿದ ವಿಚಾರವನ್ನು ಪೊಲೀಸರಿಗೆ ತಿಳಿಸುತ್ತಿಯಾ ಎಂದು ಕೇಳಿದ್ದು ಅದಕ್ಕೆ ಪಿರ್ಯಾದಿದಾರರು ನನಗೆ ಯಾವುದೇ ವಿಚಾರ ಗೊತ್ತಿರುವುದಿಲ್ಲ ಎಂದು ಹೇಳಿದಾಗ ಇರ್ಷಾದ್‌ನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಂದ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆಯಲು ಪ್ರಾರಂಭಿಸಿದಾಗ ಉಳಿದವರು ಕೂಡ ಕೈಯಿಂದ ಹಾಗೂ ಕಾಲಿನಿಂದ ಪಿರ್ಯಾದಿದಾರರಿಗೆ ಹಲ್ಲೆ ಮಾಡಿರುತ್ತಾರೆ. ಘಟನೆಯ ಸಮಯ ಇರ್ಪಾನ್‌ನು  ಪಿರ್ಯಾದಾರರಿಗೆ ಬಾಟಲಿಯಿಂದ ತಲೆಗೆ ಹಾಗೂ ಇರ್ಷಾದ್‌ನು ರಾಡಿನಿಂದ ಕಾಲಿಗೆ ಹಲ್ಲೆ ಮಾಡಿರುತ್ತಾನೆ.ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರನ್ನು ಕೈಯಿಂದ  ಹಿಡಿದು ಕೊಂಡಿರುತ್ತಾರೆ. ಆರೋಪಿಗಳು ಪಿರ್ಯಾದಿದಾರಿಗೆ ಹಲ್ಲೆ ಮಾಡುವಾಗ ಪೊಲೀಸರಿಗೆ ಮಾಹಿತಿ ನೀಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂಬುದಾಗಿ  ಹಾಗೂ ಆರೋಪಿಗಳ ಪೈಕಿ ಅರ್ಫಾನ್‌ನು ಚೂರಿ ತೋರಿಸಿ ಬೆದರಿಸಿರುತ್ತಾನೆ.  ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  22/ 2023, ಕಲಂ: 143, 147, 148, 341,323,504,506 ಜೊತೆಗೆ 149 ಐ.ಪಿ.ಸಿ.  ಯಂತೆ ಪ್ರಕರಣ ದಾಖಲಿಸಲಾಗಿದೆ.  ಇತ್ತೀಚಿನ ನವೀಕರಣ​ : 09-04-2023 11:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080