ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣ

  • ಕೋಟ: ದಿನಾಂಕ 08/04/2023 ರಂದು ಪಿರ್ಯಾದಿ: ದಿವಾಕರ  ಪಿ.ಎಂ.  ಪೊಲೀಸ್‌‌‌‌‌‌‌‌ವೃತ್ತ  ನಿರೀಕ್ಷಕರು,  ಬ್ರಹ್ಮಾವರ  ವೃತ್ತ,  ಬ್ರಹ್ಮಾವರ. ಇವರು ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಕೋಟ  ಕಡೆಗೆ  ಬರುತ್ತಿರುವಾಗ  ಸಾಲಿಗ್ರಾಮದ  ಪಶ್ಚಿಮ  ಬದಿಯ  ಸರ್ವಿಸ್‌‌‌‌‌‌‌‌‌‌‌ರಸ್ತೆಯಲ್ಲಿ  ಎರಡು  ಕಾರು  ನಿಂತಿದ್ದು,  ಎರಡೂ  ಕಾರಿನ ಸುತ್ತಲೂ 4  -5  ಜನರು ಸುತ್ತುವರಿದು  ನಿಂತಿದ್ದು.  ಕಾರಿನಲ್ಲಿದ್ದವರು   ಮೊಬೈಲ್‌‌‌‌‌‌ನ್ನು  ಹಿಡಿದುಕೊಂಡು  ಲೋಟಸ್,  ಪಾರ್ಕರ್ ಇನ್ನೂ  ಮುಂತಾದ  ವೆಬ್ ಸೈಟ್ ನ ಮೂಲಕ ಕ್ರಿಕೆಟ್‌‌‌ ಬೆಟ್ಟಿಂಗ್‌‌‌ನಲ್ಲಿ  ಹಣ ಹಾಕಿದರೆ ಹೆಚ್ಚು  ಹಣ ಕೊಡುವುದಾಗಿ ಸಾರ್ವಜನಿಕರಿಗೆ  ಹೇಳಿ ಅವರ ಮೊಬೈಲ್ ಗಳಲ್ಲಿ ಐಡಿ ಕ್ರಿಯೇಟ್ ಮಾಡಿ ಕ್ರಿಕೆಟ್ ಬೆಟ್ಟಿಂಗ್  ಜೂಜಾಟ  ನಡೆಸುತ್ತಿರುವುದು ಕಂಡು ಬಂದಿದ್ದು, ಪಂಚರ ಸಮಕ್ಷಮ 19.30 ಗಂಟೆಗೆ ಧಾಳಿ ನಡೆಸಿ ಮೊಬೈಲ್ ಜೂಜಾಟದಲ್ಲಿ ನಿರತರಾಗಿದ್ದ 5 ಜನ ಆರೋಪಿಗಳಳಾದ 1) ತೇಜಸ್ @ ತೇಜ ಶೆಟ್ಟಿ ಪ್ರಾಯ 25 ವರ್ಷ ತಂದೆ: ಮೋಹನ ದಾಸ ಶೆಟ್ಟಿ ವಾಸ: 2-387 ಧರ್ಮ ದೇವ ಕಂಪೌಂಡ್ ವಾರಾಹಿ ರಸ್ತೆ ಜಾನಕಿ ರಾಮ್ ನರ್ಸಿಂಗ್ ಹೋಮ್  ಸಿದ್ದಾಪುರ ತಾ ಕುಂದಾಪುರ 2) ಕರ್ತವ್ಯ ಶೆಟ್ಟಿ ಪ್ರಾಯ 24 ವರ್ಷ ತಂದೆ: ಸದಾನಂದ ಶೆಟ್ಟಿ ವಾಸ: ಸಾದನಾ ನಿಲಯ ಮರವಂತೆ ಅರೆಹೊಳೆ ಕ್ರಾಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಮರವಂತೆ ಕುಂದಾಪುರ ತಾಲೂಕು 3) ಸುದರ್ಶನಶೆಟ್ಟಿ ಪ್ರಾಯ 26 ವರ್ಷ ತಂದೆ: ರಾಜೀವ ಶೆಟ್ಟಿ ವಾಸ: ಶ್ರೀ ಗುರು ರಾಘವೇಂದ್ರ ನಿಲಯ ಗುಡ್ಡೆಯಂಗಡಿ ಮೀನು ಮಾರುಕಟ್ಟೆಯ ಬಳಿ ನಾಡ ಕುಂದಾಪುರ ತಾಲೂಕು 4) ಪವನ್ ಶೆಟ್ಟಿ  ಪ್ರಾಯ 25 ವರ್ಷ ತಂದೆ: ಕರುಣಾಕರ ಶೆಟ್ಟಿ ಪೂರ್ಣಶ್ರೀ ನಿಲಯ ಗುಡ್ಡೆಯಂಗಡಿ ಚಂದ್ರಿಕಾ ಬಾರ್ ಬಳಿ ನಾಡ ಕುಂದಾಪುರ ತಾಲೂಕು  5) ಪವನ್ ಕುಮಾರ್ ಶೆಟ್ಟಿ ಪ್ರಾಯ  26 ಷರ್ವ ತಂದೆ: ಬಾಲ ಕೃಷ್ಣ ಶೆಟ್ಟಿ ವಾಸ: ಶ್ರೀ ಮೂಕಾಂಬಿಕಾ ನಿಲಯ ನಾಡ ಗುಡ್ಡೆಯಂಗಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ನಾಡ ಕುಂದಾಪುರ ತಾಲೂಕು     ಹಾಗೂ 2 ಕಾರು ಹಾಗೂ 10 ಮೊಬೈಲ್ ಹಾಗೂ ಮೊಬೈಲ್  ಜೂಜಾಟಕ್ಕೆ ಬಳಸಿದ 26000/- ಹಣವನ್ನು  ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾಧಿನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  58/2023  ಕಲಂ: 78(1)(3) KP ACT ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹಿರಿಯಡ್ಕ: ಪಿರ್ಯಾದಿ : ವಿಜಯಶ್ರೀ (37) ಗಂಡ: ರಾಜೀವ ಶೆಟ್ಟಿ ವಾಸ: ದೇವರ ಬೆಟ್ಟು, ಕುಕ್ಕೆಹಳ್ಳೀ ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು  ಇವರ ತಂದೆ ಸುಮಾರು 72  ವರ್ಷ ಪ್ರಾಯದ ವಿಶ್ವನಾಥ ಶೆಟ್ಟಿರವರು ಕೃಷಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಇತ್ತೀಚೆಗೆ ಕುಡಿತದ ಅಭ್ಯಾಸವನ್ನು ಬಿಡಲಾಗದೇ ಮಾನಸಿಕವಾಗಿ ನೊಂದುಕೊಂಡಿದ್ದು, ದಿನಾಂಕ:31-03-2023 ರ ಮಧ್ಯಾಹ್ನ 14:00 ಗಂಟೆಗೆ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ಅವರನ್ನು ಹುಡುಕಾಡಿದಾಗ ರಾತ್ರಿ ಸುಮಾರು 20:00 ಗಂಟೆಗೆ ಮನೆಯ ಬಳಿಯ ಹಾಡಿಯಲ್ಲಿ ಬಿದ್ದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು, ಬಾಯಿಯಲ್ಲಿನೊರೆ ಬಂದಿದ್ದು, ಮಾತನಾಡುತ್ತಿರಲಿಲ್ಲ. ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೆ ಈ ದಿನ ದಿನಾಂಕ:09-04-2023 ರಂದು ಬೆಳಿಗ್ಗೆ 06:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ  ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 13/2023 ಕಲಂ: 174  ಸಿ ಆರ್ ಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-04-2023 07:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080