ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿ ಮಂಜುನಾಥ ಪ್ರಾಯ 26 ವರ್ಷ ತಂದೆ; ಬಾಲ ಕೃಷ್ಣ ಶೆಟ್ಟಿ ವಾಸ: ದೊಡ್ಡ ಹಾಡಿಮನೆ ಕುಮ್ರಗೋಡು ಇವರು ದಿನಾಂಕ 07/04/2022 ರಂದು ತನ್ನ ಸ್ನೇಹಿತ ನಾದ ದೀಕ್ಷಿತ ಎನ್ನುವವರ ಮನೆಯ ಗೃಹ ಪ್ರವೇಶದ ಬಗ್ಗೆ ಸ್ನೇಹಿತನಾದ ಸತೀಶ ಎಂಬವರ ಮೋಟಾರ್ ಸೈಕಲಿನಲ್ಲಿ ಉಡುಪಿಯಿಂದ ಹೊರಟು ಗೃಹ ಪ್ರವೇಶ ಮುಗಿಸಿಕೊಂಡು ಸಾಲಿಗ್ರಾಮದ ಅಂಗಡಿಗೆ ಬರುವರೆ  ಸಾಸ್ತಾನದ ಪಾಂಡೇಶ್ವರ ಕ್ರಾಸ್ ಬಳಿಯ  ಐರೋಡಿ ಗ್ರಾಮದ ಮೆಸ್ಕಾ ಕಚೇರಿ ಬಳಿ  ರಾ ಹೆ 66 ರಲ್ಲಿ ಸ್ನೇಹಿತ ಸತೀಶ ನು ಆತನ ಬಾಬ್ತು KA20ER2793 ನೇದರಲ್ಲಿ ಹಿಂಬದಿ ಸಹಸವಾರನಾಗಿ ಬರುತ್ತಿರುವಾಗ ಸುಮಾರು 15.00 ಗಂಟೆಯ ಸಮಯಕ್ಕೆ  ಉಡುಪಿಯಿಂದ ಕುಂದಾಪುರದ ಕಡೆಗೆ KA43M2104 ನೇ ಮಾರುತಿ ಓಮಿನಿ ಕಾರು ಚಾಲಕ ಅತಿವೇಗದಿಂದ ಬಂದು ಮೊಟಾರ್ ಸೈಕಲನ್ನು ಓವರ್ ಟೇಕ್ ಮಾಡಿಕೊಂಡು ಬಂದು ಯಾವುದೇ ಸೂಚನೆ ನೀಡದೇ ರಾಷ್ಷ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ ಪರಿಣಾಮ ಪಿರ್ಯಾದಿದಾರರ  ಬಾಬ್ತು ಮೋಟಾರ್ ಸೈಕಲ್ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೊಟಾರ್ ಸೈಕಲ್ ಸಮೇತ ರಸ್ತೆಯ ಬಲ ಭಾಗದಲ್ಲಿ ಬಿದ್ದಿರುತ್ತಾರೆ. ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೈಗೆ  ಹಾಗೂ ಎಡ ಕಾಲಿನ ಹೆಬ್ಬೆರಳಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಸ್ನೇಹಿತ ಸತೀಶನಿಗೆ ತಲೆಗೆ ಹಾಗೂ ತುಟಿಗೆ ರಕ್ತಗಾಯವಾರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  45/2022  ಕಲಂ: 279,338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಗಂಗೊಳ್ಳಿ: ಫಿರ್ಯಾದಿ ಸುನಿಲ್ ಮೇಸ್ತ ಪ್ರಾಐ: 38 ವರ್ಷ, ತಂದೆ: ಹರಿಶ್ಚಂದ್ರ ಮೇಸ್ತ, ವಾಸ: ರತ್ನಾವತಿ ಕೃಪಾ, ಗುಜ್ಜಾಡಿ  ರವರು ದಿನಾಂಕ: 08-04-2022 ರಂದು ಸಂತೋಷ ಮೇಸ್ತ, ಪ್ರಭಾಕರ ಮೇಸ್ತ, ಮತ್ತು ಸಂದೀಪ್ ಮೇಸ್ತರವರೊಂದಿಗೆ ಕುಂದಾಪುರ  ತಾಲೂಕು ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರೋಡ್ ನ ಧಕ್ಕೆಯ ರಸ್ತೆಯ ಬದಿಯಲ್ಲಿ ಕೆಲಸ ಮಾಡಿಕೊಂಡಿರುವಾಗ ಮದ್ಯಾಹ್ನ ಸಮಯ ಸುಮಾರು 12:45 ಗಂಟೆಗೆ ದೇವಿದಾಸ್ ಜಿ ಮೊಗೇರ ಎಂಬವರು KA-47 - 8549 ನೇ ಅಶೋಕ್ ಲೈಲ್ಯಾಂಡ್ ದೋಸ್ತ್ ಗೂಡ್ಸ್ ವಾಹನವನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮ್ಯಾಂಗನೀಸ್  ರೋಡ್ ಧಕ್ಕೆಯ ರಸ್ತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಮೇಸ್ತರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂತೋಷ ಮೇಸ್ತರವರು  ಕಾಂಕ್ರೀಟ್ ರಸ್ತೆಗೆ ಬಿದ್ದಿರುತ್ತಾರೆ. ಈ ಅಪಘಾತದಿಂದ ಸಂತೋಷ ಮೇಸ್ತರವರ  ಎರಡೂ  ಮೊಣಕಾಲಿಗೆ, ಎದೆಗೆ, ತಲೆಗೆ ತೀವ್ರತರದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 30 /2022 ಕಲಂ:279,338  ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ದಿನಾಂಕ 07/04/20202 ರಂದು ರಾತ್ರಿ 9:00 ಗಂಟೆಗೆ ಫಿರ್ಯಾದಿ ನಾಗಪ್ಪ ಪೂಜಾರಿ ಪ್ರಾಯ:58 ವರ್ಷ  ತಂದೆ: ವೆಂಕಟಯ್ಯ ಪೂಜಾರಿ ವಾಸ: ಗುಡೇ ಮಹಾಲಿಂಗ ದೇವಸ್ಥಾನದ ಹತ್ತಿರ , ಹೆರಂಜಾಲು ಇವರು,  ಪಾರಿಶನಾಥ  ಎಂಬವರೊಂದಿಗೆ ಮೋಟಾರು ಸೈಕಲ್ ನಂಬ್ರ: ಕೆಎ.20 ಇಎಚ್.5779 ನೇದರಲ್ಲಿ ಸಹಸವಾರರಾಗಿ ಹಿಂಬದಿಯಲ್ಲಿ ಕುಳಿತುಕೊಂಡು ಹೊರಟು ಉಪ್ಪುಂದ ಮಾತಾಶ್ರೀ ಸಭಾಭವನದಲ್ಲಿ ಸಂಬಂದಿಕರ ಸಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾನ ಊಟವನ್ನು ಮುಗಿಸಿ ಮೋಟಾರು ಸೈಕಲಿಗೆ ಪೆಟ್ರೋಲ್ ಹಾಕುವರೇ ಮಾತಾಶ್ರೀ ಸಭಾವನದಿಂದ ಬಿಜೂರು ಹೋಗಿ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿ ವಾಪಾಸು ಬಿಜೂರಿನಿಂದ ಉಪ್ಪುಂದಕ್ಕೆ ರಾ,ಹೆ 66  ರಸ್ತೆಯ ವಿರುದ್ದ ದಿಕ್ಕಿನಲ್ಲಿ ಪಾರಿಶನಾಥನು ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಕೆಎ18.ಪಿ 0328 ನೇ ಕಾರಿಗೆ  ಎದುರಿನಿಂದ ಡಿಕ್ಕಿಹೊಡೆದಿದ್ದು, ಪರಿಣಾಮ  ಫಿರ್ಯಾದಿದಾರರು ಹಾಗೂ ಸವಾರ ಪಾರಿಶನಾಥ ಮೋಟಾರು ಸೈಕಲಿನೊಂದಿಗೆ  ರಸ್ತೆ ಬಿದ್ದು, ಸಹಸವಾರ ಫಿರ್ಯಾಧಿದಾರರಿಗೆ  ಎಡಕಾಲು ಮೊಣಗಂಟಿಗೆ, ಬಲಕಾಲಿಗೆ ತರಚಿದ ಗಾಯ ಮತ್ತು ಮೋಟಾರು ಸೈಕಲ್ ಸವಾರ ಪಾರಿಶನಾಥನಿಗೆ ಎಡಕಾಲು ಪಾದ ಮತ್ತು ಎಡ ಕಿವಿಗೆ ಪೆಟ್ಟಾದವರನ್ನು 108 ವಾಹನದಲ್ಲಿ ಚಿಕಿತ್ಸೆಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 73/2022 ಕಲಂ. 279,338 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ಫಿರ್ಯಾದಿ ಸುರೇಶ್ ಪ್ರಾಯ: 48 ವರ್ಷ ತಂದೆ: ದುರ್ಗಾ ದೇವಾಡಿಗ ವಾಸ:ಸೋಮಯ್ಯನ ಮನೆ ಪಡುವರಿ ಇವರು ದಿನಾಂಕ: 06/04/2022 ರಂದು ಸಂಜೆ ಸಮಯ ಸುಮಾರು 4:00 ಗಂಟೆ ಹೊತ್ತಿಗೆ ಹೇನ್ ಬೇರಿನ ಕೃಷ್ಣ ರವರು ದೂರವಾಣೆ ಕರೆ ಮಾಡಿದಂತೆ ಆಟೋ ಬಾಡಿಗೆಗೆ ಬಗ್ಗೆ  ಅವರ ಆಟೊ ರಿಕ್ಷಾ ನಂಬ್ರ ಕೆಎ 20 ಸಿ 7122ನೇದರಲ್ಲಿ ಹೇನ್ ಬೇರಿಗೆ ಹೋಗಿ ಕೃಷ್ಣ ಮತ್ತು ಅವರ ಹೆಂಡತಿಯನ್ನು ಕರೆದುಕೊಂಡು ಬಿಜೂರಿನ ನಂಬಿಯಾರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ಅವರನ್ನು ಪುನಃ ಕರೆದುಕೊಂಡು ಅವರ ಮನೆಯಾದ ಹೇನ್ ಬೇರಿಗೆ ಬಿಟ್ಟು ವಾಪಾಸ್ಸು ರಾ ಹೆ 66 ರಲ್ಲಿ ಬೈಂದೂರು ಕಡೆಗೆ ಬರುತ್ತಿರುವಾಗ ಸಮಯ ಸುಮಾರು 5:00 ಗಂಟೆಗೆ ಬೈಂದೂರು ನ್ಯೂ ಬಸ್ ನಿಲ್ದಾಣ ತಲುಪುತ್ತಿದ್ದಂತೆ ಶಿರೂರು ಕಡೆಯಿಂದ ಕುಂದಾಪುರ ಕಡೆಗೆ ಒಂದು ಬಿಳಿ ಬಣ್ಣದ ಕಾರು ಚಾಲಕನು ಆತನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯು ಟರ್ನ್ ನಿಂದ ಸ್ವಲ್ಪ ಹಿಂದಕ್ಕೆ ಕಾರನ್ನು ಒಮ್ಮಲೇ ಎಡಕ್ಕೆ ತಿರುಗಿಸಿದಾಗ ಫಿರ್ಯಾದಿದಾರರು ಚಲಾಯಿಸಿಕೊಂಡಿದ್ದ ರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಡಿವೈಡರ್ ನ ಮೇಲೆ ಹತ್ತಿ ಎಡಮಗ್ಗುಲಾಗಿ ಮಗುಚಿ ಬಿದ್ದಾಗ, ಫಿರ್ಯಾದಿದಾರರು ಕೂಡಾ ರಿಕ್ಷಾ ಸಮೇತ ಬಿದ್ದಿದ್ದು, ಸ್ಥಳೀಯರು ರಿಕ್ಷಾವನ್ನು ಎತ್ತಿ, ಫಿರ್ಯಾದಿದಾರರನ್ನು ಹೊರಗೆ ತೆಗೆದು ಉಪಚರಿಸಿದ್ದು,ಅಪಘಾತದ ಪರಿಣಾಮ  ಫಿರ್ಯಾದಿದಾರರ ಎಡಕಾಲಿಗೆ ತೀವ್ರ ಸ್ವರೂಪದ ಜಖಂ, ಎಡಬದಿಯ ಭುಜಕ್ಕೆ ಒಳನೋವು ಉಂಟಾಗಿರುತ್ತದೆ. ಅಪಘಾತ ಪಡಿಸಿದ ಕಾರು ಚಾಲಕನು ಸ್ಥಳದಲ್ಲಿ ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿರುತ್ತಾನೆ. ಫಿರ್ಯಾದಿದಾರರನ್ನು ಅಲ್ಲಿನ ಸ್ಥಳೀಯರು ಚಿಕಿತ್ಸೆ ಬಗ್ಗೆ ಒಂದು ಅಂಬುಲೆನ್ಸ್ ನಲ್ಲಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 74/2022 ಕಲಂ. 279,  338 ಐ ಪಿಸಿ & Sec 134 (A) & (B)  IMV Act ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

 • ಪಿರ್ಯಾದಿ ಲಕ್ಷ್ಮ ಣ ಆಚಾರಿ  (50) ತಂದೆ: ದಿ. ಶ್ಯಾಮ ರಾಯ ಆಚಾರಿ ವಾಸ:  , ದರ್ಖಾಸು ಮನೆ, ಕಣಜಾರು ಇವರ ಅಣ್ಣನಾದ ಸದಾಶಿವ ಆಚಾರಿ(52) ಯವರು  ವಿಪರೀತ ಕುಡಿತದ ಚಟ ಹೊಂದಿದ್ದು ಅಲ್ಲದೇ ಸುಮಾರು 2-3 ವರ್ಷಗಳಿಂದ ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿರುತ್ತಾರೆ. ದಿನಾಂಕ 07/04/2022 ರಂದು ಬೆಳಿಗ್ಗೆ ಮರದ ಕೆಲಸಕ್ಕೆಂದು ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ. ಈ ದಿನ ದಿನಾಂಕ 08/04/2022 ರಂದು ಪೆಲತ್ತೂರು ಕಾಲಿಯಾರ್  ಸಾಗು ಆಸುಪಾಸು ಮನೆಯ ಮಕ್ಕೆಳು ಬಂದು ಪಿರ್ಯಾದಿದಾರರ  ಹೆಂಡತಿ ಬಳಿ ಸದಾಶಿವ ಆಚಾರಿಯವರ ಮೃತ ದೇಹ ಹಾಡಿಯಲ್ಲಿ ಇರುವುದರ ಬಗ್ಗೆ ತಿಳಿಸಿದ್ದು ನಂತರ ಪಿರ್ಯಾದಿದಾರರು ಮತ್ತು ಅವರ ಹೆಂಡತಿ  ಹಾಗೂ ಪಿರ್ಯಾದಿದಾರರ ಅಣ್ಣನ ಮಗನಾದ ಸಾಕ್ಷಾತ್ ಅಲ್ಲಿಗೆ ಹೋಗಿ ನೋಡಿದಾಗ ಮೃತ ದೇಹವು ಪಿರ್ಯಾದಿದಾರರ ಅಣ್ಣನಾದ ಸದಾಶಿವ ಆಚಾರಿ ರವರದ್ದಾಗಿರುತ್ತದೆ. ಪಿರ್ಯಾದಿದಾರರ ಅಣ್ಣನಾದ ಸದಾಶಿವ ಆಚಾರಿಯವರು ವಿಪರೀತ ಕುಡಿತದ ಚಟ ಹೊಂದಿದ್ದು,,ವಿಪರೀತ ಕುಡಿತದ ಕಾರಣದಿಂದ ಅಥವಾ ಇನ್ಯಾವುದೋ ಖಾಯಿಲೆಯಿಂದ  ದಿನಾಂಕ 07/04/2022 ರ ಬೆಳಿಗ್ಗೆ 07:30 ಗಂಟೆಯಿಂದ ದಿನಾಂಕ 08/04/2022 ರಂದು 15:30 ಗಂಟೆಯ ಮದ್ಯಾವಧಿಯಲ್ಲಿ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 17/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹೆಂಗಸು ಕಾಣೆ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹಲುವಳ್ಳಿ  ಗ್ರಾಮದ, ಮೂಡೂರು 5 ಸೆಂಟ್ಸ್‌ಎಂಬಲ್ಲಿ ಪಿರ್ಯಾದಿ ಲಕ್ಷ್ಮಣ (33), ತಂದೆ: ಸಂಜೀವ ಭಂಡಾರಿ, ವಾಸ: ಮೂಡೂರು 5  ಸೆಂಟ್ಸ್‌, ಹಲುವಳ್ಳಿ ಗ್ರಾಮ ಇವರು, ಅವರ ಹೆಂಡತಿ ಪೂರ್ಣಿಮ (33 ವರ್ಷ) ಹಾಗೂ ಮಗ ಸದ್ವಿನ್‌(5 ವರ್ಷ) ರವರೊಂದಿಗೆ ವಾಸವಾಗಿದ್ದುಕೊಂಡು ಮುಂಡ್ಕಿನ್‌ಜೆಡ್ಡು ಎಂಬಲ್ಲಿ ಸಲೂನ್‌ನಡೆಸಿಕೊಂಡಿರುತ್ತಾರೆ. ಪ್ರತಿ ದಿನದಂತೆ ಈ ದಿನ ದಿನಾಂಕ 08.04.2022 ರಂದು  ಬೆಳಿಗ್ಗೆ ಪಿರ್ಯಾದಿದಾರರು ಸಲೂನ್‌ಗೆ ಹೋಗಿದ್ದಾಗ ಅವರ ಹೆಂಡತಿ ಪೂರ್ಣಿಮ ಬೆಳಿಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ. ಮನೆಯಲ್ಲಿ  ನಾಲ್ಕು ಹಾಳೆಗಳಲ್ಲಿ “ ಅಮ್ಮ ನನ್ನನ್ನು ಕ್ಷಮಿಸಿ ಬಿಡು,  ನಾನು ಬೆಂಗಳೂರಿಗೆ ಹೋಗುತ್ತಿದ್ದೆ. ನಾಲ್ಕನೇ ಪುಟದ ಕೋನೆಯಲ್ಲಿ ಆದಷ್ಟು ಬೇಗ ಮಗನನ್ನು ಕರೆದುಕೊಂಡು ಹೋಗ್ತೆ. ಬಾಬುಗೆ ಸಮಾಧಾನ ಮಾಡು ಅಮ್ಮ.” ಎಂಬುದಾಗಿ ಪೂರ್ಣಿಮ ಬರೆದಿಟ್ಟ ಪತ್ರ ಸಿಕ್ಕಿರುತ್ತದೆ. ಮನೆಯಿಂದ ಕಾಣೆಯಾದ ಪೂರ್ಣಿಮಳನ್ನು ಪತ್ತೆ ಮಾಡಿ ಕೊಡಬೇಕಾಗಿ ನೀಡಿರುವ ಪಿರ್ಯಾದು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  59/2022 ಕಲಂ ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ:

 • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಅಮ್ಮ ಶಾಮಿಯಾನ ಹತ್ತಿರ ಫಿರ್ಯಾದಿ ಜಯರಾಮ ಶೆಟ್ಟಿ, (49) ತಂದೆ: ಮಹಾಬಲ ಶೆಟ್ಟಿ ವಾಸ: ಅಮ್ಮ ಶಾಮಿಯಾನ ಬಳಿ, ಹಂದಾಡಿ ಇವರು ಅವರ ಹೆಂಡತಿ ಪೂರ್ಣಿಮಾ ಶೆಟ್ಟಿ ಹಾಗೂ ಮಗನಾದ ಆರೋಪಿ ರಜತ್‌ ಶೆಟ್ಟಿ ಯೊಂದಿಗೆ ವಾಸ ಮಾಡಿಕೊಂಡಿದ್ದು ಫಿರ್ಯಾದುದಾರರು ಹಾಗೂ ಅವರ ಹೆಂಡತಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸಮಾಡಿಕೊಂಡಿರುತ್ತಾರೆ. ಆರೋಪಿಯು ಕೆಲಸ ಮಾಡದೇ ಮನೆಯಲ್ಲಿ ಇರುವುದಾಗಿದೆ. ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಆತನಿಗೆ ಬುದ್ದಿ ಹೇಳಿ ಎಲ್ಲಿಯಾದರೂ ಕೆಲಸ ಹುಡುಕಿಕೊಳ್ಳುವರೇ ತಿಳಿಸುತ್ತಿದ್ದರು. ಈ ದಿನ ದಿನಾಂಕ 08/04/2022 ರಂದು ಸಂಜೆ 6:30 ಗಂಟೆ ಸುಮಾರಿಗೆ ಫಿರ್ಯಾದುದಾರರು ಮತ್ತು ಪೂರ್ಣಿಮರವರು ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಒಳಗೆ ಪ್ರವೇಶಿಸಿದಾಗ ಮನೆಯ ಹಾಲ್‌ನಲ್ಲಿ ಇದ್ದ ಆರೋಪಿಯು ಏಕಾಏಕಿ ಇಬ್ಬರನ್ನೂ ಉದ್ದೇಶಿಸಿ ಅವಾಚ್ಯವಾಗಿ  ಬೈದು ಏಕಾಏಕಿ ಪೂರ್ಣಿಮರವರ ಸೀರೆಯನ್ನು ಹಿಡಿದು ಏಳೆದು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ತಾಳಿಯನ್ನು ಹಿಡಿದೆಳೆದು ತುಂಡು ಮಾಡಿ ಕೈಯಿಂದ ಅವರಿಗೆ ಹೊಡೆದಿರುತ್ತಾನೆ. ಆಗ ಫಿರ್ಯಾದಿದಾರರು ತಡೆಯಲು ಹೋದಾಗ ಆರೋಪಿಯು ಮನೆಯಲ್ಲಿದ್ದ ಕಬ್ಬಿಣದ ಕತ್ತಿಯನ್ನು ಹಿಡಿದುಕೊಂಡು ನಿಮ್ಮನ್ನು ಈ ದಿನ ಕೊಂದು ಮುಗಿಸುತ್ತೇನೆ. ಎಂದು ಹೇಳಿ ಇಬ್ಬರನ್ನೂ ಓಡಿಸಿಕೊಂಡು ಬಂದಿರುತ್ತಾನೆ. ಆರೋಪಿಯು ಈ ಹಿಂದೆಯೂ ಕೂಡ ಇದೇ ರೀತಿ ಮಾಡಿದ್ದು ಮಗ ಎಂಬ ಅನುಕಂಪದಿಂದ ಇರುವರೆಗೂ ದೂರು ನೀಡಿರುವುದಿಲ್ಲ. ಈ ಹಲ್ಲೆಯಿಂದ ಪೂರ್ಣಿಮಾ ರವರು ಅವರಿಗಾದ ನೋವಿನ ಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಸದ್ರಿ ಹಲ್ಲೆ ಮಾಡಿದ ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನೀಡಿರುವ ಪಿರ್ಯಾದು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರ. 60/2022 ಕಲಂ 323, 354, 504, 506(2) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-04-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080