ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ 

  • ಹಿರಿಯಡ್ಕ: ಪಿರ್ಯಾದಿದಾರರಾದ ಸಚಿನ್ ಶೆಟ್ಟಿ (28) ತಂದೆ: ಉಮೇಶ್ ಶೆಟ್ಟಿ ,ವಾಸ: ‘’ಶ್ರಿನಿಧಿ’’ ಮದಗ, ಚೆನ್ನಿಬೆಟ್ಟು , ಆತ್ರಾಡಿ ಗ್ರಾಮ ಮತ್ತು ಅಂಚೆ ಉಡುಪಿ ಇವರ ಅಜ್ಜಿ 70 ವರ್ಷ ಪ್ರಾಯದ ವನಜ ಶೆಡ್ತಿ ಎಂಬುವವರುರ ದಿನಾಂಕ 08/04/2022 ರಂದು ಸಂಜೆ 6:20 ಗಂಟೆಗೆ ತನ್ನ ಮನೆಯ ಸಮೀಪದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುವ ಮನೆಯ ಚಾವಾಡಿಗೆ ಹೋದಾಗ ಚಾವಾಡಿಗೆ ಅಳವಡಿಸಿದ ಟೈಲ್ಸ್‌‌‌ ನ ಮೇಲೆ ನೀರು ಇದ್ದುದರಿಂದ ಅವರ ಕಾಲು ಜಾರಿ ಬಿದ್ದ ಪರಿಣಾಮ ಎಡಬದಿ ತಲೆಗೆ ಗಂಭೀರ ಜಖಂಗೊಂಡ ಅವರನ್ನು ಚಿಕಿತ್ಸೆ ಬಗ್ಗೆ ಕೆಎಂಸಿ ಆಸ್ಪತ್ರೆಗೆ ತಂದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ವನಜ ಶೆಡ್ತಿಯವರು 6:50 ಗಂಟೆಗೆ ಮೃತಪಟ್ಟಿರುವುದಾಗಿ ಘೋಷಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 18/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 09/04/2022 ರಂದು ಮಧ್ಯಾಹ್ನ ಕೋಟ ತಟ್ಟವಿನ ಪಿರ್ಯಾದಿದಾರರಾದ ಧೀರಜ್ ಕರ್ಕೆರ (43),ತಂದೆ: ಭಾಸ್ಕರ ಕರ್ಕೆರ ಕೋಟ ತಟ್ಟು ಬ್ರಹ್ಮಾವರ ತಾಲೂಕು ಇವರ ಮನೆಯ ಎದುರಿನ ಬಾವಿಯಲ್ಲಿ ಕೋಟ ತಟ್ಟು ವಾಸಿಯಾದ ಬಸವ ಪೂಜಾರಿ ಮೃತ ಶರೀರ ಕಂಡು ಬಂದಿರುತ್ತದೆ. ಮೃತ ಬಸವ ಪೂಜಾರಿ (50 ) ಇವರು ವಿಪರೀತ ಕುಡಿತದ ಚಟ ಹೊಂದಿದ್ದು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದು ದಿನಾಂಕ 07/04/2022 ರಿಂದ ದಿನಾಂಕ 09/04/2022 ರ ಮಧ್ಯಾವಧಿಯಲ್ಲಿ ಬಾವಿಗೆ ಹಾರಿ ಅಥವಾ ಇನ್ನಾವುದೋ ಕಾರಣದಿಂದ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ 

  • ಶಿರ್ವಾ: ಪಿರ್ಯಾದಿದಾರರಾದ ಡೆಸ್ಮಂಡ್ ರಾಬಿನ್ ಸನ್ ಅಮನ್ನಾ, ಪ್ರಾಯ 44ವರ್ಷ, ತಂದೆ;ದಿ ವಿಲಿಯಂ ಅಮನ್ನಾ, ವಾಸ: ಸ್ತುತಿ ನಿಲಯ, ಸುಭಾಶ್ ನಗರ ಪೊಸ್ಟ್, ಕುರ್ಕಾಲು ಗ್ರಾಮ ಇವರು ಊರಿನ ಕೋಳಿ ಮತ್ತು ಲವ್ ಬರ್ಡ್ಸ ಹಕ್ಕಿಗಳನ್ನು ಸಾಕುವುದು ಮತ್ತು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಅಲ್ಲದೇ ಸುಮಾರು 20 ವರ್ಷಗಳ ಹಿಂದೆ ಅಫಘಾತಕ್ಕೀಡಾಗಿ ಎಡಕೈಗೆ ಜಖಂ ಆಗಿ ಬಲಹೀನವಾಗಿರುತ್ತದೆ. ದಿನಾಂಕ 08/04/2022 ರಂದು ಸಾಯಂಕಾಲ 06.20 ಗಂಟೆಗೆ ಪಿರ್ಯಾದಿದಾರರು ತನ್ನ ಮನೆಯಾದ ಕುರ್ಕಾಲು ಗ್ರಾಮದ ಸುಭಾಸ್ ನಗರ ಎಂಬಲ್ಲಿರುವ ಸ್ತುತಿ ನಿಲಯ ಎಂಬ ಹೆಸರಿನ ಮನೆಯಲ್ಲಿರುವಾಗ ಆಪಾದಿತರಾದ ರೇವುನಾಥ ಮತ್ತು ಆತನ ಸ್ನೇಹಿತ (ಹೆಸರು ತಿಳಿದಿರುವುದಿಲ್ಲ) ರವರು ಪಿರ್ಯಾದಿದಾರರ ಮನೆ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೆಂಪು ಇಟ್ಟಿಗೆಯ ತುಂಡಿನಿಂದ ಪಿರ್ಯಾದಿದಾರರ ಎಡಕೆನ್ನೆಗೆ ಹೊಡೆದು ಗಾಯ ಮಾಡಿ, ಕೈಯಿಂದ ಬೆನ್ನಿಗೆ,ಕೆನ್ನೆಗೆ ಹೊಡೆದಿದ್ದು ಆ ಸಮಯ ಪಿರ್ಯಾದಿದಾರರು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದ ಪರಿಣಾಮ ಎಡಕೈ ಮತ್ತು ಎಡಕಾಲಿನ ಮೊಣಗಂಟಿನ ಬಳಿ ತರಚಿದ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಆಪಾದಿತರ ಪೈಕಿ ಒಬ್ಬಾತನು ಅಲ್ಲಿಯೇ ಇದ್ದ ಒಂದು ಪಾದೆಕಲ್ಲಿನಿಂದ ಹೊಡೆಯಲು ಬಂದಿರುವುದಾಗಿದೆ.ಈ ಘಟನೆಗೆ ಪಿರ್ಯಾದಿದಾರರು ಸಂಜೆ 06.00 ಗಂಟೆ ಬಳಿಕ ಯಾವುದೇ ಕೋಳಿಗಳನ್ನು ಹಾಗೂ ಲವ್ ಬರ್ಡ್ಸ್ ಹಕ್ಕಿಗಳನ್ನು ಮಾರಾಟ ಮಾಡುವುದಿಲ್ಲವಾಗಿ ಆಪಾದಿತರಲ್ಲಿ ಹೇಳಿರುವುದೇ ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ19 /2022 ಕಲಂ 447, 341,504,324,323,r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 09-04-2022 07:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080