ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 08/04/2021 ರಂದು KA-20-AA-8569 ನೇ ನೋಂದಣಿ ನಂಬರ್‌ನ ಇಚರ್     ಗೂಡ್ಸ್ ವಾಹನವನ್ನು ಅದರ ಚಾಲಕನಾದ ದೇವರಾಜ್ ಎಂಬಾತನು ಹೆಬ್ರಿ – ಮಣಿಪಾಲದ 169 (ಎ) ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಬ್ರಿ ಕಡೆಯಿಂದ ಮಣಿಪಾಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 05:00 ಗಂಟೆ ಸಮಯಕ್ಕೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಸದರಿ ವಾಹನವನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ರಸ್ತೆಯ ಎಡಭಾಗಕ್ಕೆ ಚಲಾಯಿಸಿದ ಪರಿಣಾಮ ಇಚರ್ ವಾಹನವು ಟೈಗರ್ ಸರ್ಕಲ್ ಬಳಿ ಇರುವ ಅಪೂರ್ವ ಟ್ರೆಂಡ್ಸ್ ಅಂಗಡಿಯ ಮೆಟ್ಟಿಲಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಮುಂಭಾಗ ಜಖಂ ಗೊಂಡು ವಾಹನದ ಮಧ್ಯದಲ್ಲಿ ಕುಳಿತಿದ್ದ  ಫಿರ್ಯಾದುದಾರರಾದ ಸಾದಿಕ್ (22) ತಂದೆ: ಅಬ್ದುಲ್ಲಾ ವಿಳಾಸ: ಸೀಬಿನ ಕರೆ ಅಂಚೆ , ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಇವರ ಎರಡು ಕಾಲುಗಳಿಗೆ ರಕ್ತ ಗಾಯ ಹಾಗೂ ಹೊಟ್ಟೆಗೆ ಒಳ ಗಾಯ, ಬಾಗಿಲಿನ ಬಳಿ ಕುಳಿತಿದ್ದ ಪ್ರಕಾಶನ ಸೊಂಟಕ್ಕೆ ತೀವ್ರ ಗಾಯವಾಗಿದ್ದು, ಅಲ್ಲಿ ಸೇರಿದ ಜನರು ಉಪಚರಿಸಿ KMC ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ 07/04/2021 ರಂದು ಬೆಳಗ್ಗೆ 7:30 ಗಂಟೆಯಿಂದ ದಿನಾಂಕ 08/04/2021 ರಂದು ಬೆಳಗ್ಗೆ 11:30 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶೀರಿನ್ ಬಾನು (51) ಗಂಡ:ಸೈಯದ್‌ ಅಹಮ್ಮದ್  ವಾಸ:ಪೆರ್ಕಾಡಿ ಮನೆ ಬೈಲೂರು ಅಂಚೆ ಕಾರ್ಕಳ ಇವರ ವಾಸ್ತವ್ಯದ ಮನೆಯ ಮುಂದಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮೀಟಿ ತೆಗೆದು ಒಳಪ್ರವೇಶಿಸಿ ಮನೆಯೊಳಗಿನ ಬೆಡ್ ರೂಮಿನಲ್ಲಿರುವ ಕಪಾಟನ್ನು ತೆರೆದು ಕಪಾಟಿನಲ್ಲಿರಿಸಿದ್ದ ಸುಮಾರು 35,000/- ರೂಪಾಯಿ ಮೌಲ್ಯದ ಸುಮಾರು 10 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದು 20,000/- ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಮಾಂತಪ್ಪ ರಾಮಣ್ಣ ಗೋಡಿ(41), ತಂದೆ: ರಾಮಣ್ಣ ಗೋಡಿ, ವಾಸ: ಚಂದ್ರಕಟ್ಟ, ಮೂಡುಬೆಟ್ಟು, ಕೊಡವೂರು ಉಡುಪಿ ಇವರ ತಮ್ಮ ನೀಲಪ್ಪ ರಾಮಣ್ಣ ಗೋಡಿ (30) ರವರು  ಇವರ ಮನೆಯ  ಪಕ್ಕದ ಕೊಠಡಿಯಲ್ಲಿ ವಾಸ ಮಾಡಿಕೊಂಡಿದ್ದು ಸುಮಾರು 1 ವರ್ಷದಿಂದ ಉಡುಪಿಯಲ್ಲಿ ಪಾಸ್ಟ್ ಪುಡ್ ಅಂಗಡಿ ನಡೆಸಿಕೊಂಡಿರುತ್ತಾರೆ. ದಿನಾಂಕ 06/04/2021 ರಂದು ಬೆಳಿಗ್ಗೆ 8:30 ಗಂಟೆಗೆ ಮಾಂತಪ್ಪ ರಾಮಣ್ಣ ಗೋಡಿ ರವರು ತನ್ನ ತಮ್ಮನನ್ನು ಬೈಕಿನಲ್ಲಿ ಉಡುಪಿ ಬಸ್ ನಿಲ್ದಾಣಕ್ಕೆ ಬಿಟ್ಟು ಬಂದಿರುತ್ತಾರೆ. ಬಳಿಕ ನೀಲಪ್ಪ   ಮನೆಗೆ ಬಂದಿರುವುದಿಲ್ಲ. ಮಾಂತಪ್ಪ ರಾಮಣ್ಣ ಗೋಡಿ ರವರು ಮನೆಯಲ್ಲಿ ಇಲ್ಲದ ಸಮಯ ನೀಲಪ್ಪ ಮನೆಗೆ  ಬಂದು ಹೋಗಿರುವುದಾಗಿ ಮಾಂತಪ್ಪ ರಾಮಣ್ಣ ಗೋಡಿ ಇವರ ತಾಯಿ ತಿಳಿಸಿರುತ್ತಾರೆ. ದಿನಾಂಕ 08/04/2021 ರಂದು  ಗಂಡಸಿನ  ಮೃತ ಶರೀರವು  ಕೊಡವೂರು  ಗ್ರಾಮದ  ಮಲ್ಪೆ  ಪಡುಕೆರೆ ಬೀಚ್ . ಬಳಿ  ನೇಣು ಬಿಗಿದು ಮೃತ ಪಟ್ಟ ಮೃತ ದೇಹ ಇರುವ ಬಗ್ಗೆ ಮಾಂತಪ್ಪ ರಾಮಣ್ಣ ಗೋಡಿ ರವರಿಗೆ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ಸಂಜೆ 5:40 ಗಂಟೆಗೆ ಹೋಗಿ ನೋಡಿದಾಗ ಮಾಂತಪ್ಪ ರಾಮಣ್ಣ ಗೋಡಿ ರವರ ತಮ್ಮ ಶಾಂತಿನಗರದ ಬೀಚ್ ಬಳಿ ತೆಂಗಿನ ತೋಟದ ಮದ್ಯದಲ್ಲಿ ಕಾಟು ಮರದ ಕೊಂಬೆಗೆ ಸಪೂರ ಹಗ್ಗಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮಾಂತಪ್ಪ ರಾಮಣ್ಣ ಗೋಡಿ ರವರ ತಮ್ಮ ಅವನಿಗಿದ್ದ ಸಾಲದ ವಿಚಾರಕ್ಕೊ ಅಥವಾ ಬೇರೆ ಯಾವುದೋ ಕಾರಣಕ್ಕೋ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06/04/2021 ರಂದು ಬೆಳಿಗ್ಗೆ 08:30 ಗಂಟೆಯಿಂದ ದಿನಾಂಕ 08/04/2021 ರಂದು ಸಂಜೆ 5:40 ಗಂಟೆಯ ಮಧ್ಯಾವದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಮಟ್ಕಾ ಜುಗಾರಿ ಪ್ರಕರಣ

  • ಹೆಬ್ರಿ: ದಿನಾಂಕ 08/04/2021 ರಂದು ಬೇಳಂಜೆ ಗ್ರಾಮದ ಬೇಳಂಜೆ ಬಸ್ ನಿಲ್ದಾಣದ ಬಳಿ ಮಟ್ಕಾ ಜುಗಾರಿ ಎಂಬ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಲಕ್ಷ್ಮಣ್ –ಎಎಸ್ಐ ಹೆಬ್ರಿ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಿಬ್ಬಂದಿಗಳೊಂದಿಗೆ ಮೇಲಿನ ಸ್ಥಳಕ್ಕೆ ಮದ್ಯಾಹ್ನ 15:30 ಗಂಟೆಗೆ ಬಂದು ನೋಡಿದಾಗ ಆರೋಪಿತ ಸತೀಶ ಪೂಜಾರಿ ಈತನು ಸಾರ್ವಜನಿಕ ಸ್ಥಳವಾದ ಬಸ್ಸು ನಿಲ್ದಾಣ ಬದಿಯಲ್ಲಿ  ನಿಂತುಕೊಂಡು ಒಂದು ರೂಪಾಯಿಗೆ 70 ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕಿಗಳನ್ನು ಬರೆಯುತಿರುವುದನ್ನು ಖಚಿತ ಪಡಿಸಿಕೊಂಡು ಸದ್ರಿ ಸ್ಥಳಕ್ಕೆ ಮಧ್ಯಾಹ್ನ 15:40  ಗಂಟೆಗೆ ಧಾಳಿ ಮಾಡಿ ಅತನನ್ನು ದಸ್ತಗಿರಿ ಮಾಡಿ ಅತನ ಬಳಿವಿದ್ದ 1200 /- ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ನನ್ನು ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ:,78(I)(III) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-04-2021 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080