ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು


  • ಬೈಂದೂರು: ದಿನಾಂಕ 09/03/2023 ರಂದು  ಕೆ.ಎಸ್. ಆರ್. ಟಿ. ಸಿ ಬಸ್ ನಂಬ್ರ KA 09 F 5030 ನೇಯದರಲ್ಲಿ  ಚಾಲಕನಾಗಿ ರಾಮಕೃಷ್ಣ  ಪೂಜಾರಿ ಎಂಬವರಿದ್ದು ನಿರ್ವಾಹಕನಾಗಿ ಫಿರ್ಯಾದಿ ಲೋಕಯ್ಯಆರ್ ಕೂಡಲ ಮಠ ಪ್ರಾಯ: 36 ತಂದೆ: ರುದ್ರಯ್ಯ ಕೂಡಲ ಮಠ ವಾಸ: ದಶರಥ ಕೊಪ್ಪ ಪೋಸ್ಟ್  ಕೊಪ್ಪರಸಿ  ಕೊಪ್ಪ  ತಾಲೂಕು, ಇವರು ಇದ್ದು  ಬೆಳಿಗ್ಗೆ  ಕುಂದಾಪುರ ದಿಂದ ಭಟ್ಕಳಕ್ಕೆ  ಹೊರಟಿರುತ್ತಾರೆ. ರಾ.ಹೆ  66 ರಲ್ಲಿ ಕಂಬದಕೋಣೆ ಗ್ರಾಮದ ಹೊಳೆಬಾಗಿಲು ಎಂಬಲ್ಲಿ ತಲುಪುವಾಗ  ಎದುರಿನಲ್ಲಿ ಒಂದು  ಮೋಟಾರು ಸೈಕಲ್ ನಲ್ಲಿ ಆಪಾದಿತ ಮಜೀದ್ ಎಂಬವನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದು  ಬಸ್ಸಿನ  ಚಾಲಕ ರಾಮಕೃಷ್ಣ  ಪೂಜಾರಿ ರವರು ಮಜೀದ್  ನಲ್ಲಿ ಬೈಕ್  ನ್ನು ಅಡ್ಡಾದಿಡ್ಡಿಯಾಗಿ  ಚಲಾಯಿಸದಂತೆ ಸರಿಯಾಗಿ ಹೋಗುವಂತೆ  ತಿಳಿಸಿ  ಮುಂದಕ್ಕೆ ಬಂದು ಬೆಳಿಗ್ಗೆ  09:47 ಗಂಟೆಗೆ ಕಂಬದಕೋಣೆ ಬಸ್ಸು ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಆಪಾದಿತನು ಮೊಟಾರು ಸೈಕಲ್ ನಲ್ಲಿ ಬಂದು ಮೋಟಾರು ಸೈಕಲ್ ನಿಲ್ಲಿಸಿ  ರಸ್ತೆ ಬದಿಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿ  ಬಸ್ಸಿನ ಚಾಲಕನಿಗೆ ಎಸೆದಿದ್ದು  ಕಲ್ಲು  ರಾಮ ಕೃಷ್ಣ ಪೂಜಾರಿಯವರ ಬಲ ಕೆನ್ನೆಗೆ ತಾಗಿ ಗಾಯ ಉಂಟಾಗಿರುತ್ತದೆ. ಹಾಗೂ  ಇನ್ನೊಂದು ಕಲ್ಲು ತೆಗೆದು ಎಸೆದಿದ್ದು ಕಲ್ಲು  ಬಸ್ಸಿನ ಎಡಭಾಗದ ಕಿಟಕಿ ಗಾಜಿಗೆ ತಾಗಿ  ಗಾಜು ಒಡೆದಿರುತ್ತದೆ. ಆಪಾದಿತನು ಬಳಿಕ ಕೆ.ಎಸ್.ಆರ್.ಟಿ.ಸಿ ಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಉಪ್ಪುಂದ ಕಡೆಗೆ ಹೋಗಿರುತ್ತಾನೆ. ಆಪಾದಿತನು  ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ  ರಾಮಕೃಷ್ಣ ಪೂಜಾರಿಯವರಿಗೆ  ಹಲ್ಲೆ ನಡೆಸಿ  ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ  ಸರಕಾರಿ ಬಸ್ಸಿಗೆ ಕಲ್ಲು ಎಸೆದು ಬಸ್ಸಿನ ಕಿಟಕಿ ಗಾಜನ್ನು ಒಡೆದು ಜಖಂಗೊಳಿಸಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ  39/2023 ಕಲಂ353, 332,324,504  ಭಾದಂಸಂ & U/S 2(b) PDLP ACT ರಂತೆ ಪ್ರಕರಣ ದಾಖಲಿಸಲಾಗಿದೆ.   
  • ಉಡುಪಿ: ಪಿರ್ಯಾದಿ ಪ್ರಕಾಶ್ ಪೂಜಾರಿ (52) ತಂದೆ: ರಾಮ ಪೂಜಾರಿ ವಾಸ: ಗವಾಸ್ಕರ್ ಕಂಪೌಂಡ್ ಶಿವಳ್ಳಿ ಗ್ರಾಮ ಸಂತೆಕಟ್ಟೆ ಪೋಸ್ಟ್ಇವರು ದಿನಾಂಕ 08/03/2023 ರಂದು ಸಮಯ ಸುಮಾರು ಸಂಜೆ 4:00 ಗಂಟೆಗೆ ಒಂದು ವ್ಯಾನಿನಲ್ಲಿ ಕೊರಿಯರ್ ಡೆಲಿವರಿ ಬಗ್ಗೆ ಅಂಬಲಪಾಡಿಗೆ ಬಂದಿದ್ದು, ವ್ಯಾನನ್ನು ಅಂಬಲಪಾಡಿ ರಾಧಾ ಮೆಡಿಕಲ್ಸ್ ಬಳಿ ನಿಲ್ಲಿಸಿ ಗಣೇಶ್ ಆಟೋ ಮೊಬೈಲ್ಸ್ ಗೆ ಕೊರಿಯರ್ ಡೆಲಿವರಿ ಮಾಡಿ ವಾಪಾಸ್ಸು ವ್ಯಾನಿನ ಬಳಿ ಬರಲು ನಡೆದುಕೊಂಡು ಬರುತ್ತಿರುವಾಗ ಕಿನ್ನಿಮುಲ್ಕಿ ಸ್ವಾಗದ ಗೋಪುರ ಕಡೆಯಿಂದ ಅಂಬಲಪಾಡಿ ಕಡೆಗೆ KA29V2552 ನೇ ಮೋಟಾರು ಸೈಕಲ್ ಸವಾರ ಸಿದ್ದಲಿಂಗೇಶ್ವರ ಕೆಶಪ್ಪ ಎಂಬಾತನು ಮದ್ಯಪಾನ ಸೇವಿಸಿ ತನ್ನ ಮೋಟಾರು ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರಾ ಎಡಬದಿಗೆ ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ತಲೆಗೆ ಮತ್ತು ಎಡಭುಜಕ್ಕೆ ಗುದ್ದಿದ ನೋವುಂಟಾಗಿದ್ದು ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ   ಅಪರಾಧ ಕ್ರಮಾಂಕ : 27/2023 ಕಲಂ 279 337 ಐ.ಪಿ.ಸಿ ಮತ್ತು ಕಲಂ 185 ಐಎಮ್‌ವಿ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.    


ಇತರ ಪ್ರಕರಣ

  • ಶಂಕರನಾರಾಯಣ : ದಿನಾಂಕ 09.03.2023 ರಂದು ಬೆಳಿಗ್ಗೆ ಸುಮಾರು  9;00 ಘಂಟೆಗೆ   ಪಿರ್ಯಾದಿ: ಸುಬ್ರಹ್ಮಣ್ಯ  ಪ್ರಾಯ 26 ವರ್ಷ ತಂದೆ, ನರಸಿಂಹ ಮೊಗವೀರ  ವಾಸ, ಕಳ್ಳಿನಜೆಡ್ಡು  ಉಳ್ಳೂರು  74 ಗ್ರಾಮ ಇವರು ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ ಬಸ್ಸು ನಿಲ್ದಾಣದ ಬಳಿ ಇರುವಾಗ ಆರೋಪಿಗಳು   ಸದ್ರಿ ಬಸ್ಸು ನಿಲ್ದಾಣದ ಬಳಿ  ಕೆಎ. 20 ಇಝಡ್, 3451 ನೇ  ನಂಬ್ರದ ಮೋಟಾರ್  ಸೈಕಲ್  ನಿಲ್ಲಿಸಿಕೊಂಡು  ವಿಪರೀತವಾಗಿ ಹಾರ್ನ  ಹಾಕಿ ಹಾಗೂ   ಸಾರ್ವಜನಿಕರಿಗೆ ತೊಂದರೆ  ನೀಡುತ್ತಿದ್ದು,  ಈ ಬಗ್ಗೆ ಫಿರ್ಯಾಧುದಾರರು ವಿಚಾರಿಸಿದಾಗ ಆರೋಪಿಗಳು  ಸಮಾನ ಉದ್ದೇಶದಿಂದ  ಮೋಟಾರ್  ಸೈಕಲ್‌‌ನ್ನು ಫಿರ್ಯದುದಾರರಿಗೆ ಅಕ್ರಮವಾಗಿ  ಅಡ್ಡನಿಲ್ಲಿಸಿ   ಕೆಟ್ಟ ಶಬ್ದಗಳಿಂದ ಬೈದು   ನಮ್ಮನ್ನು  ಕೇಳಲು ನೀನು ಯಾರೂ ಎಂದು  ಹೇಳಿ  ಬೆದರಿಕೆ  ಹಾಕಿ   ಕೈಯಿಂದ ಹೊಡೆಯಲು ಬಂದಿರುತ್ತಾರೆ. ಈ  ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 20/2023  ಕಲಂ:,  341,504,506  ಜೊತೆಗೆ 34  ಐ.ಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.    
  • ಕೋಟ: ಪಿರ್ಯಾದಿ: ಶ್ರೀಮತಿ ಚೈತ್ರ ಶೆಟ್ಟಿ, ಪ್ರಾಯ: 34 ವರ್ಷ, ಗಂಡ: ಪ್ರವೀಣ್ ಕುಮಾರ್ ಶೆಟ್ಟಿ  ವಾಸ: ಪ್ರಫ್ರಲ್ಲಾ ನಿಲಯ, ಹಾಲು ಡೈರಿ ಹತ್ತಿರ, ಗುಳ್ಳಾಡಿ  ಬೇಳೂರು ಗ್ರಾಮ ರವರು ಬ್ರಹ್ಮಾವರದಲ್ಲಿರುವ ಧರ್ಮಾವರಂನ ಮಾಲಕಿಯಾಗಿದ್ದು, ಬೇಳೂರು ಗ್ರಾಮದ ಸರ್ವೇ ನಂಬ್ರ. 26/3 ರಲ್ಲಿ 0.74 ಸೆಂಟ್ಸ್ ಜಾಗವು ಪಿರ್ಯಾದಿದಾರರ ಗಂಡನ ಹೆಸರಿನಲ್ಲಿದ್ದು, ಅದರ ಜಿ.ಪಿ.ಎ. ಯನ್ನು ಹಕ್ಕನ್ನು ಪಿರ್ಯಾದಿದಾರರು ಹೊಂದಿದ್ದು, ದಿನಾಂಕ: 04/03/2023 ರಂದು ಬೇಳೂರಿನಲ್ಲಿರುವ ಮನೆಯನ್ನು ಸ್ವಚ್ಚಗೊಳಿಸಿ ಮನೆಗೆ ಬೀಗ ಹಾಕಿ ವಾಪಾಸು ಮಧ್ಯಾಹ್ನ 2:00 ಗಂಟೆಗೆ ಬ್ರಹ್ಮಾವರಕ್ಕೆ ಹೋಗಿರುತ್ತಾರೆ.  ದಿನಾಂಕ: 09/03/2023 ರಂದು ಬೆಳಿಗ್ಗೆ 10:00 ಗಂಟೆಗೆ ಬೇಳೂರಿನ ಮನೆಗೆ ಹೋದಾಗ ಮನೆಗೆ ಬೇರೆ ಬೀಗ ಹಾಕಿರುವುದು ಕಂಡು ಬಂದಿದ್ದು, ಪಿರ್ಯಾದಿದಾರರು ಈ  ಹಿಂದೆ ಮನೆ ಹಾಗೂ ಜಾಗದ ವಿಚಾರದಲ್ಲಿ ಪ್ರತಾಪ್ ಶೆಟ್ಟಿ ರವರ ಮೇಲೆ ದೂರು ನೀಡಿದ್ದು, ಮಾನ್ಯ ನ್ಯಾಯಾಲಯದಲ್ಲಿ ಪ್ರತಿಬಂಧಕ ಆಜ್ಞೆ ಇದಾಗ್ಯ ಸಹ ಮಾನ್ಯ ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿ ದಿನಾಂಕ: 04/03/2023 ರಂದು ಮಧ್ಯಾಹ್ನ 2:00 ಗಂಟೆಗಯಿಂದ ದಿನಾಂಕ: 09/03/2023 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಪ್ರತಾಪ್ ಶೆಟ್ಟಿ ಎಂಬವರು ಪಿರ್ಯಾದಿದಾರರ ಮನೆಗೆ ಬಂದು ಅಕ್ರಮ ಪ್ರವೇಶ ಮಾಡಿ ಮನೆಯ ಬೀಗವನ್ನು ಒಡೆದು ಹಾನಿ ಮಾಡಿ ಹೊಸ ಬೀಗವನ್ನು ಹಾಕಿ  ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  38/2023  ಕಲಂ: 447, 448, 427 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿ: ಕುನ್ನಿ ಮೊಹಾಮದ್‌, ಕುರುವ ಗ್ರಾಮ, ಪಾಂಗ ಚೆಡ್ಡಿ , ಮಲಪುರಮ್‌ ಕೇರಳ: ಇವರ ಅಣ್ಣ ಅಬ್ದುಲ್ ಅಜೀಜ್ ಪ್ರಾಯ: 74 ವರ್ಷ ಇವರು ದಿನಾಂಕ: 08.03.2023 ರಂದು ಮಧ್ಯಾಹ್ನ 03:00 ಗಂಟೆಗೆ ಕೇರಳದಿಂದ ಕಾಶ್ಮೀರದ ಜೈಚೋಲಿಗೆ ಕೆಲಸಕ್ಕೆಂದು ರೈಲು ಗಾಡಿ ನಂಬ್ರ: 12483 ಬೋಗಿ ನಂಬ್ರ S4 ಸೀಟ್ ನಂಬ್ರ 44 ರಲ್ಲಿ ಪ್ರಯಾಣಿಸುತ್ತಿದ್ದರು, ರೈಲು ಗಾಡಿಯು ಉಡುಪಿ ರೈಲ್ವೇ ಸ್ಟೇಷನ್ ತಲುಪಿದಾಗ ಅವರು ತಾವು ಕೂತಿದ್ದ ಸೀಟಿನಲ್ಲಿ ಅಸ್ವಸ್ಥಗೊಂಡು ಬಿದ್ದುಕೊಂಡಿದ್ದರು, ಇದನ್ನು ಕಂಡಂತಹ ಸಹ ಪ್ರಯಾಣಿಕರು ರೈಲ್ವೇ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದ್ದು, ರೈಲ್ವೇ ಇಲಾಖೆಯ ವೈದ್ಯರು ಬಂದು ಪರೀಕ್ಷಿಸಿ ಮೃತ  ಪಟ್ಟಿರುವುದಾಗಿ ತಿಳಿಸಿರುತ್ತಾರೆ, ಆಗ ಸಮಯ ರಾತ್ರಿ 10:06 ಗಂಟೆ ಆಗಿರುತ್ತದೆ ಪಿರ್ಯಾದಿದಾರರ  ಅಣ್ಣನಾದ ಅಬ್ದುಲ್ ಅಜೀಜ್ ರವರು ದಿನಾಂಕ: 08.03.2023 ರಮದು ಮಧ್ಯಾಹ್ನ 03:00 ಗಂಟೆಯಿಂದ  ರಾತ್ರಿ 22:06 ಗಂಟೆಯ ಮಧ್ಯಾವಧಿಯಲ್ಲಿ ಹೃದಯಾಘಾತದಿಂದಲೋ ಅಥವಾ ಇತರೇ ಇನ್ನಾವುದೋ ದೈಹಿಕ ಆರೋಗ್ಯ ಸಮಸ್ಯೆಯಿಂದಲೊ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 11/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-03-2023 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080