ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಂಕರನಾರಾಯಣ: ದಿನಾಂಕ 08/03/2022 ರಂದು 16:45 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ  ಗುಲಾಬಿ ಭಾಯಿ(45),     ಗಂಡ: ದೇವಣ್ಣ ನಾಯ್ಕ, ವಾಸ:  9 ನೇ ಮೈಲ್ಲುಕಲ್ಲು  5 ಸೆಂಟ್ಸು  ಅಲ್ಬಾಡಿ ಗ್ರಾಮ ಹೆಬ್ರಿ ತಾಲೂಕು ಇವರು   ಕುಂದಾಪುರ  ತಾಲೂಕಿನ ಹೆಂಗವಳ್ಳಿ ಗ್ರಾಮದ  ಹಣೆಜೆಡ್ಡು  ಎಂಬಲ್ಲಿ ಆನಂದ   ನಾಯ್ಕ ಎಂಬುವವರ   ಮನೆಯ ಬಳಿ KA-20-Z-2686 ನೇ ನಂಬ್ರದ ಕಾರಿನಲ್ಲಿ  ಗೋಳಿಯಂಗಡಿ  ಕಡಗೆ ಹೋಗುತ್ತಿರುವಾಗ  ಆರೋಪಿ ಕಾರು  ಚಾಲಕ ಎಸ್. ಸುಭಾಶ್ಚಂದ್ರ  ಶೆಟ್ಟಿ ಇವರು ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ  ಪರಿಣಾಮ  ಕಾರು ಅವರ  ನಿಯಂತ್ರಣ  ತಪ್ಪಿ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದು  ರಸ್ತೆಯ ಬದಿಯ  ಚರಂಡಿಗೆ  ಬಿದ್ದಿರುತ್ತದೆ, ಇದರ  ಪರಿಣಾಮ ಕಾರು  ಚಾಲಕ   ಎಸ್. ಸುಭಾಶ್ಚಂದ್ರ   ಶೆಟ್ಟಿ  ಹಾಗೂ  ಪಿರ್ಯಾದಿದಾರರಿಗೆ   ಗಾಯವಾಗಿದ್ದು ಪಿರ್ಯಾದಿದಾರರು  ಚಿಕಿತ್ಸೆಯ  ಬಗ್ಗೆ ಗೋಳಿಯಂಗಡಿ ಡಾ, ಉಡುಪ  ರವರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು  ಕಾರು ಚಾಲಕ   ಎಸ್. ಸುಭಾಶ್ಚಂದ್ರ ಶೆಟ್ಟಿ ಇವರನ್ನು ಚಿಕಿತ್ಸೆಯ ಬಗ್ಗೆ ಹಾಲಾಡಿ ದುರ್ಗಾ  ಆಸ್ಪತ್ರೆಗೆ  ಕರೆದುಕೊಂಡು ಬಂದಾಗ ಅಲ್ಲಿ ಚಿಕಿತ್ಸೆ  ಫಲಕಾರಿಯಾಗದೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2022  ಕಲಂ: 279, 337, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಶರತ್ ಕಾಂಚನ್ (30), ತಂದೆ: ಲಕ್ಷ್ಮಣ ಕಾಂಚನ್, ವಾಸ: ಸರಿತಾ ನಿಲಯ ಆನಗಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 07/03/2022 ರಂದು ಸಂಜೆ ತನ್ನ ಸ್ನೇಹಿತರಾದ ದಿನಕರ ಪೂಜಾರಿ ಮತ್ತು ಸಂತೋಷ್‌ ರವರೊಂದಿಗೆ ಕಾರ್ಯಕ್ರಮದ ನಿಮಿತ್ತ ಕೆದೂರಿನಿಂದ ಬೇಳೂರಿಗೆ ಹೋಗುವ ಸಲುವಾಗಿ, ಪಿರ್ಯಾದಿದಾರರು ಅವರ ಬೈಕಿನಲ್ಲಿಯೂ ಮತ್ತು ಅವರ ಸ್ನೇಹಿತರಾದ ದಿನಕರ ಪೂಜಾರಿ ರವರು ಅವರ ನೀಲಿ ಬಣ್ಣದ ನಂಬ್ರದ KA-20-EA-6066 ನೇ ಹೀರೋ ಹೋಂಡಾ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ಸವಾರನಾಗಿಯೂ ಅವರ ಹಿಂಬದಿ ಸಂತೋಷ್ ರವರು ಸಹಸವಾರನಾಗಿ ಕುಳಿತುಕೊಂಡು ನೂಜಿ-ಬೇಳೂರು ರಸ್ತೆಯಲ್ಲಿ ಬೇಳೂರಿನಿಂದ ನೂಜಿ ಕಡೆಗೆ ಹೋಗುತ್ತಿರುವಾಗ ಸಂಜೆ 7:15 ಗಂಟೆಗೆ ಮೊಗೆಬೆಟ್ಟು ಎಂಬಲ್ಲಿ ತಲುಪಿದಾಗ ಆರೋಪಿ ದಿನಕರ ಪೂಜಾರಿ ರಸ್ತೆಯನ್ನು ದಾಟುತ್ತಿದ್ದ ಬೀಡಾಡಿ ದನವನ್ನು ಕಂಡು ಅತೀವೇಗದಿಂದ ಚಲಾಯಿಸುತ್ತಿದ್ದ ಬೈಕಿಗೆ ಅಜಾಗರೂಕತೆಯಿಂದ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬೈಕು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ವಾಲಿದ್ದು ಆಗ ಬೈಕಿನ ಹಿಂಬದಿ ಕುಳಿತಿದ್ದ ಸಂತೋಷ್ ರವರು ಆಯತಪ್ಪಿ ರಸ್ತೆಗೆ ಬಿದ್ದು ಅವರ ಬಲಬದಿ ಸೊಂಟಕ್ಕೆ ಹಾಗೂ ಬಲಕಾಲಿಗೆ ತೀವ್ರ ಸ್ವರೂಪದ ಒಳನೋವು ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 07/03/2022 ರಂದು ಬೆಳಿಗ್ಗೆ 9:00 ಗಂಟೆಗೆ ಕುಂದಾಪುರ ತಾಲೂಕು, ಕಂದಾವರ ಗ್ರಾಮದ ಮೂಡ್ಳಕಟ್ಟೆ ರೈಲ್ವೆ ಬ್ರೀಡ್ಜ ಸಮೀಪದ ಸಿದ್ದಾಪುರ ಬಸ್ರೂರು  ಮೂರುಕೈ ರಾಜ್ಯ  ಹೆದ್ದಾರಿ 52 ರ ರಸ್ತೆಯಲ್ಲಿ ಆಪಾದಿತ ರಾಘವೇಂದ್ರ  ಎಂಬುವವರು KA-20-D-9597 ನೇ ಬಸ್ಸನ್ನು ಸಿದ್ದಾಪುರ ಕಡೆಯಿಂದ ಬಸ್ರೂರು ಮೂರಕೈ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು ರಸ್ತೆಯಲ್ಲಿನ ವೇಗ ನಿಯಂತ್ರಕ ಹಾರಿಸಿದ ಪರಿಣಾಮ ಬಸ್ಸಿನ ಒಳಗೆ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರು ಆಯತಪ್ಪಿ ಬಸ್ಸಿನ ಪುಟ್‌ಬೋರ್ಡ ಮೇಲೆ  ಬಿದ್ದು ಎಡಕಾಲಿನ ಹೆಬ್ಬೆರಳಿಗೆ ಜಜ್ಜಿದ ರಕ್ತ ಗಾಯವಾಗಿದ್ದು ಚಿಕಿತ್ಸೆ  ಬಗ್ಗೆ ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ  ಹಾಗೂ  ಬಳಿಕ  ಚಿಕಿತ್ಸೆ  ಬಗ್ಗೆ ಮಣಿಪಾಲ ಕೆ.ಎಂ .ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದು  ಹೆಚ್ಚಿನ  ಉಡುಪಿ  ಜಿಲ್ಲಾ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಶರಣ್  (34), ತಂದೆ: ಈಶ್ವರ, ವಾಸ: ಲಕ್ಷ್ಮೀ ನಗರ ಕೊಳಲಗಿರಿ ಉಪ್ಪೂರು ಗ್ರಾಮ ಬ್ರಹ್ಮಾವರ  ತಾಲೂಕು ಉಡುಪಿ  ಜಿಲ್ಲೆ  ಇವರ ಅಣ್ಣ ಕುಮಾರ(40) ಎಂಬುವವರು ಅವರ ಹೆಂಡತಿಯು  ಕೆಲಸಕ್ಕೆ  ಮನೆಯಿಂದ ಹೊರಗಡೆ ಹೋಗಿದ್ದ ಸಮಯ ದಿನಾಂಕ 08/03/2022 ರಂದು ಬೆಳಿಗ್ಗೆ 07:30 ಗಂಟೆಯಿಂದ ಸಂಜೆ 05:30 ಗಂಟೆಯ ಮಧ್ಯಾವಧಿಯಲ್ಲಿ ಹೆಂಡತಿ ಮನೆಯ ಒಳಗಡೆ  ಹಾಲ್‌ ನಲ್ಲಿ ಮಹಡಿಯ  ಮರದ ಪಕ್ಕಾಸಿಗೆ  ನೈಲಾನ್ ರೋಡ್‌ ಕಟ್ಟಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯನ್ನು ಕಂಡು ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಂಜೆ 6:45 ಗಂಟೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಕುಮಾರ ರವರು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ  08/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಹೆಂಗಸು ಕಾಣೆ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಝೀನತ್ (34), ಗಂಡ:ಅಬ್ದುಲ್ ಹಮೀದ್, ವಾಸ: ಬುಖಾರಿ ಕೊಲನಿ, ಕೆಳಪೇಟೆ ಶಿರೂರು ಗ್ರಾಮ ಇವರ ತಾಯಿ ಅಮೀನಾ ಸಿ (67) ಇವರು ಪಿರ್ಯಾದಿದಾರರ ಜೊತೆಯಲ್ಲಿ ಶಿರೂರು ಗ್ರಾಮದ ಕೆಳಪೇಟೆ ಬುಕಾರಿ ಕೊಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 06/032022 ರಂದು ಬೆಳಿಗ್ಗೆ 11:00 ಗಂಟೆಗೆ ಶಿರೂರಿನ ಮನೆಯಿಂದ ಕುಂದಾಪುರದ ಕೋಡಿಯಲ್ಲಿರುವ ತನ್ನ ಮಗನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮಗನ ಮನೆಗೆ ಹೋಗದೇ ಸಂಬಂದಿಕರ ಮನೆಗೆ ಹೋಗದೆ ಇದ್ದು, ಪಿರ್ಯಾದಿದಾರರು ಆಸುಪಾಸುಗಳಲ್ಲಿ ಮತ್ತು  ಸಂಬಂಧಿಕರಿಗೆ ಪೋನ್ ಮಾಡಿ  ವಿಚಾರಿಸಿ,  ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸೈನಲ್‌ ಡಿಸೋಜಾ (37), ತಂದೆ: ಲಿಯೋ ಡಿಸೋಜಾ, ವಿಳಾಸ: ಸೋಜಲ್‌ ವಿಲ್ಲಾ, ಮಣೋಳಿಗುಜ್ಜಿ, ದೊಡ್ಡಣಗುಡ್ಡೆ, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ, ಉಡುಪಿ  ತಾಲೂಕು ಇವರು ELECTRONIC PAYMENT SERVICES Ltd  ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಉಡುಪಿ ಮತ್ತು ಮಂಗಳೂರಿನ ಕೆನರಾ ಬ್ಯಾಂಕ್‌ ಎಟಿಎಂ ಶಾಖೆಗಳಿಗೆ ಹಣವನ್ನು ತುಂಬಿಸುವ ಕೆಲಸ ಮಾಡುತ್ತಿದ್ದು, ದಿನಾಂಕ 07/03/2022 ಹಾಗೂ 08/03/2022 ರ ಮಧ್ಯದ ರಾತ್ರಿಯಲ್ಲಿ ಯಾರೋ ಕಳ್ಳರು ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್‌ ಎಟಿಎಂ ನಲ್ಲಿರುವ ಹಣವನ್ನು ಕಳವು ಮಾಡುವ ಉದ್ದೇಶದಿಂದ  ಎಟಿಎಂ ಲಾಕರ್‌ ಡೋರ್‌ನ್ನು ಮುರಿದು ಕಳವು ಮಾಡಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2022, ಕಲಂ: 454, 457, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಭಾಸ್ಕರ (59), ತಂದೆ: ದಿ. ಕೆ. ದೋಗು ಮಾಸ್ಟರ್‌, ಸುವಿವಾರ, ಮಲ್ಲಾರು ಕೋಟೆ ರೋಡ್ ಮಲ್ಲಾರು ಗ್ರಾಮ ಕಾಫು ತಾಲೂಕು  ಹಾಗೂ ಅವರ ತಮ್ಮ ಶಂಕರ ಎಂಬುವವರಿಗೆ ಜಾಗದ ಗಡಿ ಗುರುತು ವಿಚಾರದಲ್ಲಿ ತಕರಾರು ಇದ್ದು ಸರ್ವೆ ನಡೆಸಿ ಗಡಿಗುರುತು ಮಾಡಿದ್ದು ಅಲ್ಲದೇ ಈ ಬಗ್ಗೆ ಪುನಃ ಸರ್ವೆ ಇಲಾಖೆಯವರು ದಿನಾಂಕ 10/03/2022 ರಂದು ಸರ್ವೆ ನಡೆಸುವುದಾಗಿ ಪತ್ರ ನೀಡಿರುತ್ತಾರೆ. ದಿನಾಂಕ 06/03/2022 ರಂದು  ಬೆಳಿಗ್ಗೆ ಪಿರ್ಯಾದಿದಾರರು  ಅವರ ಹೆಂಡತಿ ಮಕ್ಕಳೊಂದಿಗೆ ಅಂಬಲ್ಪಾಡಿಗೆ ಹೋಗಿದ್ದು, ಪಿರ್ಯಾದಿದಾರರ ಮನೆಯಲ್ಲಿ ಯಾರೂ ಇಲ್ಲದ ಸಮಯ ಬೆಳಿಗ್ಗೆ 10:00 ಗಂಟೆಯಿಂದ 11:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ತಮ್ಮ ಶಂಕರ ರವರು  ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕಲ್ಲು ಕಂಬವನ್ನು ಕಿತ್ತು ಬಿಸಾಡಿ ನಷ್ಟ ಉಂಟುಮಾಡಿದ್ದು, ಕೇಳಲು ಹೋದ ಪಿರ್ಯಾದಿದಾರರ ಮಗ ಸುಹಾನ್‌ಗೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2022 ಕಲಂ:  447, 427, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ನಾರಾಯಣ್‌ ನಾಯಕ್‌(58), ತಂದೆ: ಉಪೇಂದ್ರ ನಾಯಕ್‌, ವಾಸ: ಪ್ರಣವ್‌ ಆಸ್ಪತ್ರೆ ರಸ್ತೆ, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 08/03/2022 ರಂದು ರಾತ್ರಿ ಮನೆಯಲ್ಲಿ ಮಲಗಿಕೊಂಡಿರುವಾಗ ಬೆಳಗ್ಗಿನ 02:30 ಗಂಟೆಯ ಸಮಯಕ್ಕೆ ಮನೆಯ ಹೊರಗಡೆ ನಾಯಿ ಬೊಗಳುವ ಶಬ್ದಕೇಳಿ ಪಿರ್ಯಾದಿದಾರರು ಮನೆಯ ಒಳಗಿನಿಂದ ಕಿಟಕಿ ಬಾಗಿಲು  ತೆಗೆದು ನೋಡಿದ್ದು, ಆ ಸಮಯ ಯಾರೋ ಮೂರು ಜನ ವ್ಯಕ್ತಿಗಳು ಅಂಗಳದಲ್ಲಿ ತಲ್ವಾರು ಮತ್ತು ಇನ್ಯಾವುದೋ ಆಯುಧವನ್ನು ಹಿಡಿದುಕೊಂಡು ಅಂಗಳದಲ್ಲಿ ಆಚೀಚೆ ತಿರುಗಾಡುತ್ತಿದ್ದು, ನಂತರ ಅವರು ಅಂಗಳದಲ್ಲಿ ಕಟ್ಟಿ ಹಾಕಿದ್ದ ಒಂದು ದನವನ್ನು ಹಗ್ಗ ಸಮೇತ ಬಿಚ್ಚಿ ಎಳೆದುಕೊಂಡು ಹೋಗುವಾಗ ಆ ದನವು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತದೆ, ಆಗ  ಆರೋಪಿಗಳು ಅದೇ ಹಗ್ಗದಿಂದ  ಅಲ್ಲೆ ಇದ್ದ ಇನ್ನೊಂದು ದನವನ್ನು ಹಿಡಿದು ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಕಟ್ಟಿ ಎಳೆದುಕೊಂಡು ಅಲ್ಲೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಒಂದು ಬಿಳಿ  ಬಣ್ಣದ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಹೋಗಿರುತ್ತಾರೆ.    ಕಳವಾದ ದನವು ಕಪ್ಪು ಬಣ್ಣದ ಹೆಣ್ಣು ದನ ವಾಗಿದ್ದು ಮೌಲ್ಯ ರೂಪಾಯಿ 2000/- ಆಗಿರುತ್ತದೆ. ಆರೋಪಿಗಳು ದನವನ್ನು ಗೋಹತ್ಯೆ ಮಾಡಿ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ: 4, 5, 7 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 & ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ದುರ್ಗಾದಾಸ್ (19), ತಂದೆ:ಸಂತೋಷ ಕಾಕೈಲ್ , ವಾಸ: ಕಾಕೈಲ್ ಹೌಸ್ ಪರಪ್ಪ ಪೋಸ್ಟ್ ವೆಲ್ಲರಿಕುಂಡ ತಾಲೂಕು ಕಾಸರಗೋಡು  ಜಿಲ್ಲೆ  ಇವರು  ಕೋಟ ಮದುವನದಲ್ಲಿರುವ ಇಸಿಆರ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವ್ಯಾಸಂಗ ಮಾಡಿಕೊಂಡಿದ್ದು ಶಾಲೆಗೆ ಸಂಬಂಧಪಟ್ಟ ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ಗುರುಕುಲ ರಸ್ತೆಯಲ್ಲಿರುವ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಇರುವುದಾಗಿದೆ.  ದಿನಾಂಕ 07/03/2022 ರಂದು ರಾತ್ರಿ ಪಿರ್ಯಾದಿದಾರರು ಜೋಯೆಲ್ ಮತ್ತು ನಿಕಿಲ್ ರವರೊಂದಿಗೆ ಊಟ ಮಾಡಿ ರೂಮಿನ ಪ್ಯಾಸೆಜ್ ಬಳಿ ನಿಂತು ಮಾತನಾಡುತ್ತಿರುವಾಗ ದಿನಾಂಕ 08/03/2022 ರಂದು 00:30 ಗಂಟೆಗೆ ಆಪಾದಿತಾರದ ದಿಲ್‌ಶಾದ್‌ ಮತ್ತು ಶಿಂಟೋ ಶಿಬು ಎಂಬುವವರು ಪಿರ್ಯಾದಿದಾರರ ಬಳಿ ಬಂದು ದಿಲ್‌ಶಾದ್‌ನು ಪಿರ್ಯಾದಿದಾರರಲ್ಲಿ ನನಗೆ ನೀನು ಯಾಕೆ ಏಕವಚನದಲ್ಲಿ ಮಾತನಾಡಿದೆ ಎಂದು ಜೋರು ಮಾಡಿದ್ದು , ಅದಕ್ಕೆ ಪಿರ್ಯಾದಿದಾರರು ತಾನು ಆ ರೀತಿ ಹೇಳಿಲ್ಲ ಅಣ್ಣ ಎಂದು ಹೇಳಿ ರೂಮಿನ  ಕಡೆಗೆ ಹೋಗುವಾಗ ಆಪಾದಿತರಿಬ್ಬರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ  ಬೈದು  ಕೈಯಿಂದ  ದೂಡಿದ್ದು ಇದರಿಂದ ಪಿರ್ಯಾದಿದಾರರು ಬಿದ್ದು ಮೆಟ್ಟಿಲಿನ ಮೂಲೆ ಪಿರ್ಯಾದಿದಾರರ ಎಡಕಣ್ಣಿನ ಮೇಲ್ಭಾಗಕ್ಕೆ ತಾಗಿ ರಕ್ತ ಬಂದಿರುವುದಾಗಿದೆ. ನಂತರ ಆಪಾದಿತರಿಬ್ಬರು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುವುದಾಗಿದೆ. ಗಾಯಗೊಂಡ ಪಿರ್ಯಾದಿದಾರರನ್ನು ಅವರ ಸಹಪಾಠಿಗಳು ಚಿಕಿತ್ಸೆ ಬಗ್ಗೆ ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2022  ಕಲಂ: 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-03-2022 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080