ಅಭಿಪ್ರಾಯ / ಸಲಹೆಗಳು

 ಇತರ ಪ್ರಕರಣ

 

 • ಉಡುಪಿ :ಪಿರ್ಯಾದಿ ಶ್ರೀಮತಿ ಅನಿತಾ ಪಿಂಟೋ ಪ್ರಾಯ: 50 ವರ್ಷ ಗಂಡ: ಜೋನ್‌ ಪಿಂಟೋ  ವಿಳಾಸ: ಭಟ್ರಕೋಡಿ ಹೌಸ್‌, ಕಿನ್ನಿಗೋಳಿ ಅಂಚೆ, ಮಂಗಳೂರು ತಾಲೂಕು ಇರುವ ತನ್ನ ತಾಯಿಯ ಆರೋಗ್ಯ ವಿಚಾರಿಸಲು ದಿನಾಂಕ 08/03/2022 ರಂದು ಬೆಳಿಗ್ಗೆ 11:20 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಎಂಬಲ್ಲಿರುವ ಅವರ ತಾಯಿಯ ಮನೆಗೆ ಬಂದಾಗ, ಆಪಾದಿತ ಪಿರ್ಯಾದುದಾರರ ತಮ್ಮ ರೋಶನ್‌ ಕರ್ನಲಿಯೋ ರವರು ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಿಡಿಸೂಡಿಯಿಂದ ಹಲ್ಲೆ ಮಾಡಿ, ಚೂರಿಯಿಂದ ಇರಿಯಲು ಬಂದು ‘ಮನೆಯಿಂದ ಹೊರಡು, ಇದು ನನ್ನ ಮನೆ, ನಿನಗೆ ಇಲ್ಲಿ ಯಾವ ಹಕ್ಕು ಇಲ್ಲ’ ಎಂದು ಗದರಿಸಿ ಕೈಯಿಂದ ಹಲ್ಲೆ ಮಾಡಿರುತ್ತಾರೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  45/2022, ಕಲಂ: 323, 324,  504  IPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ: ಪಿರ್ಯಾಧಿ ಮಹಮ್ಮದ್ ಇಸಾಕ್ ಪ್ರಾಯ: 49 ವರ್ಷ ತಂದೆ: ಮಹಮ್ಮದ್ ಸಾಲಿಹಾ ವಾಸ: ಆವಿನಹಳ್ಳಿ ಸಿಗಂದೂರು ಸಾಗರ ಇವರು  KA 2O C 2439 ನೇ ಲಾರಿಯ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 04/03/2022 ರಂದು  ನ್ಯಾಯ ಬೆಲೆಯ ಅಂಗಡಿಗೆ ಅಕ್ಕಿ ಸಾಗಾಟದ ಬಗ್ಗೆ ತಲ್ಲೂರು ಗೋದಾಮು ನಿಂದ ಅಕ್ಕಿಯನ್ನು ಲೋಡ್ ಮಾಡಿ  ತೆಗೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು 11:30 ಗಂಟೆಗೆ  ಅಸೋಡು ನಂದಿಕೇಶ್ವರ ಕಮಾನು  ಬಳಿ ಲಾರಿಯನ್ನು ಚಲಾಯಿಸಿಕೊಂಡು  ಬರುತ್ತಿರುವಾಗ  ಲಾರಿಯ ಹಿಂದುಗಡೆಯಿಂದ ಚಲಾಯಿಸಿಕೊಂಡು ಬಂದಿರುವ RITZ  ಕಾರಿನ ಚಾಲಕ  ಕಾರಿನಿಂದ ಇಳಿದು  ಮುಂದಕ್ಕೆ ಬಂದು ಲಾರಿಯನ್ನು ತಡೆದು ನಿಲ್ಲಿಸಿ ಲಾರಿಯನ್ನು ಹತ್ತಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ ಬೈದು  ಬಲಬಾಗಕ್ಕೆ ಮತ್ತು ಕೈಗೆ ಹೊಡೆದು   ತಲೆಗೆ  ಕಲ್ಲಿನಿಂದ ಹೊಡೆದಿರುತ್ತಾನೆ  ತಮಗಾದ ಹಲ್ಲೆಯ ಬಗ್ಗೆ ಚಿಕಿತ್ಸೆ ಪಡೆದುಕೊಂಡಿರುತ್ತಾರೆ  ತಮ್ಮ ಮೇಲೆ ಹಲ್ಲೆ ಮಾಡಿದ RITZ  ಕಾರಿನ ಚಾಲಕ    ವಿರುದ್ದ ಕ್ರಮ ಕೈಗೊಳ್ಳುವರೇ  ಎಂಬಿತ್ಯಾದಿ(ಪಿರ್ಯಾದಿದಾರರು ಅದೇ ಮಾರ್ಗವಾಗಿ ಹೋಗುವಾಗ  ಕಾರಿನ ಚಾಲಕನು ತಡೆದು ತೊಂದರೆ ನೀಡಬಹುದೆಂದು  ಹೆದರಿಕೆಯಾಗಿ ದೂರು ನೀಡಲು ವಿಳಂಬವಾಗಿರುತ್ತದೆ).ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾಅಪರಾಧ ಕ್ರಮಾಂಕ  11/2022 ಕಲಂ: 341,323,324.504 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

 ಅಪಘಾತ ಪ್ರಕರಣ:

 • ಕಾಪು: ಪಿರ್ಯಾದಿ ಉಮೇಶ್ ಪ್ರಭು (47) ತಂದೆ: ವಿಟ್ಟಪ್ಪ ಪ್ರಭು ವಾಸ: ನಲ್ಲೆಬೆಟ್ಟು ಮನೆ 92 ಹೇರೂರು ಇವರು ದಿನಾಂಕ 08.03.2022 ರಂದು ತನ್ನ ಭಾವ ಮಾಧವ ಪಾಟ್ಕರ್ ರವರೊಂದಿಗೆ ಕಾಪು ತಾಲೂಕು ಕಛೇರಿಗೆ ಹೋಗುವರೇ  ಕಾಪು ಪೊಲಿಪು ಜಂಕ್ಷನ್ ಬಳಿ ಉಡುಪಿ ಮಂಗಳೂರು ರಾಹೆ 66 ರಸ್ತೆ ದಾಟಿ ಕಾಫು ತಾಲೂಕು ಕಛೇರಿಯ ಎದುರು ಗಡೆ ಮಂಗಳೂರು-ಉಡುಪಿ ರಾಹೆ 66ರ ರಸ್ತೆ ದಾಟಿ ರಸ್ತೆಯ ಪಶ್ಚಿಮ ಬದಿಯಲ್ಲಿ ಇರುವಾಗ ಮಂಗಳೂರು ಕಡೆಯಿಂದ ಓರ್ವ ದ್ವಿಚಕ್ರ ವಾಹನ ಸವರ ತನ್ನ ಬಾಬ್ತು ವಾಹನವನ್ನುಅತೀ ವೇಗ ಹಾಗೂ ಅಜಾಗರೂ ಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಬಾವ ಮಾಧವ ಪಾಟ್ಕ ರ್ ರವರಿಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು, ಮಾಧವ ಪಾಟ್ಕರ್ ರವರು ರಸ್ತೆಗೆ ಬಿದ್ದು ಅವರ ತಲೆಗೆ ಮತ್ತು ಎಡಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಅಪಘಾತಕ್ಕೆ ಯಾವುದೋ ದ್ವಿ ಚಕ್ರ ವಾಹನದ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ. ಪಿರ್ಯಾದಿದಾರರು ಆಸ್ಪತ್ರೆಯಲ್ಲಿ ಗಾಯಾಳುವಿನ ಆರೈಕೆಯಲ್ಲಿದ್ದು ದೂರು ನೀಡಲು ವಿಳಂಭವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  . 25/2022 ಕಲಂ 279 338 ಐ.ಪಿ.ಸಿ. ಮತ್ತು 134 ಎ & ಬಿ ಐಎಂ ವಿ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.

 ಕಳವು ಪ್ರಕರಣ

 •  ಬ್ರಹ್ಮಾವರ: ದಿನಾಂಕ 09/03/2022 ರಂದು ಬೆಳಿಗ್ಗೆ ಜಾವ 04:00 ಗಂಟೆಯ ಸಮಯದಲ್ಲಿ ಪಿರ್ಯಾದಿ ಗುರುನಾಥ ಬಿ. ಹಾದಿಮನಿ, ಪೊಲೀಸ್‌ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್‌ ಠಾಣೆ  ಇವರು ಠಾಣಾ ಸಿಬ್ಬಂದಿಯವರ ಜೋತೆ ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಚೇರ್ಕಾಡಿ ಗ್ರಾಮದ  ಚೇರ್ಕಾಡಿ ಕೊಕ್ಕರ್ಣೆ ರಸ್ತೆಯಲ್ಲಿ ಹೋಗುತ್ತಾ  ಚೇರ್ಕಾಡಿ ಅಮೃತಗಿಡ  ಎಂಬಲ್ಲಿ ತಲುಪುವಾಗ ಚೇರ್ಕಾಡಿ  ಕಡೆಯಿಂದ  ಆರೋಪಿಯು ಕೈಯಲ್ಲಿ ಪಾಲಿಥೀನ್‌ ಚೀಲದೊಂದಿಗೆ ಯಾವುದೋ ವಸ್ತುವನ್ನು ತಲೆಯ ಮೇಲೆ ಹೊತ್ತುಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಪಿರ್ಯಾದಿದಾರರ ಇಲಾಖಾ ಜೀಪನ್ನು ನೋಡಿ ತಲೆಯ ಮೇಲಿದ್ದ ಪಾಲಿಥೀನ್‌ ಚೀಲವನ್ನು ಅಲ್ಲೇ ಬಿಸಾಡಿ ಅಲ್ಲೇ ರಸ್ತೆ ಬದಿಯ ಹಾಡಿಯಲ್ಲಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದು, ಕೂಡಲೇ ಪಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಆತನನ್ನು  ಬೆನ್ನಟ್ಟಿ ಹಿಡಿದು ಆತನು  ರಸ್ತೆ ಬದಿಯಲ್ಲಿ ಬಿಸಾಡಿರುವ ಪಾಲಿಥಿನ್‌ ಚೀಲವನ್ನು ಪರಿಶೀಲಿಸಲಾಗಿ ಅದರ ಒಳಗೆ   ಒಂದು ಹಳೆಯ ಪಂಪ್‌‌‌ ತುಂಬಿಸಿರುವುದು ಕಂಡು ಬಂದಿದ್ದು, ಅದರ ಅಂದಾಜ ಮೌಲ್ಯ: 2000 ರೂ ಆಗಿರುತ್ತದೆ. ನಂತರ ಈತನನ್ನು ತಪಾಸಣೆ ನಡೆಸಿ, ಪಂಪ್‌ನ  ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರ ನೀಡದೇ ಇದ್ದುದರಿಂದ ಸದ್ರಿ ಪಂಪ್‌‌ನ್ನು ಎಲ್ಲಿಯೋ ಕಳವು ಮಾಡಿಕೊಂಡು ಬಂದಿರುವ ಬಗ್ಗೆ ಸಂಶಯ ಬಂದಿರುವುದರಿಂದ ಪಂಚರ ಸಮಕ್ಷಮ ಮಹಜರು ಮುಖೇನ ಸದ್ರಿ ಪಂಪ್‌ನ್ನು ಸ್ವಾಧೀನಪಡಿಸಿಕೊಂಡು, ಆರೋಪಿ ವಿಠಲ ಪರವ ಪ್ರಾಯ : 32 ವರ್ಷ ತಂದೆ :ದಿವಂಗತ ಬಾಬು ಪರವ ವಾಸ : ಅಮೃತಗಿಡ, ಚೇರ್ಕಾಡಿ, ಇವನನ್ನು ದಸ್ತಗಿರಿ ಮಾಡಿ, ಪಂಪನ್ನು ಮಹಜರು ಮುಖೇನಾ  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  36/2022 US 41 (d), 102 CRPC &  379 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-03-2022 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080