ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ನರಸಿಂಹ ಆಚಾರ್ಯ (71), ತಂದೆ: ದಿ.ಮಂಜುನಾಥ ಆಚಾರ್ಯ, ವಾಸ:ಸಿದ್ದೇಶ್ವರ ದೇವಸ್ಥಾನದ ಬಳಿ ಬನ್ನಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 07/03/2021 ರಂದು ವಡ್ಡರ್ಸೆ ಮಹಾಲಿಂಗೇಶ್ವರ  ದೇವಸ್ಥಾನದ ರಥೋತ್ಸವ  ಕಾರ್ಯಕ್ರಮಕ್ಕೆ ಹೋಗಿದ್ದು ಅಲ್ಲಿನ  ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸು ಮನೆಗೆ ಹೊರಟು ಸೈಬ್ರಕಟ್ಟೆ ಕೋಟ ಮುಖ್ಯ ರಸ್ತೆಯ ದಕ್ಷಿಣ ಬದಿಯ ರಸ್ತೆಯ ತೀರಾ ಬದಿಯಲ್ಲಿ ಬನ್ನಾಡಿ ಮಂಜುನಾಥ ಆಚಾರಿ ಯವರ ಮನೆಯ ಬಳಿಯಲ್ಲಿ ಕ್ರಮದಂತೆ ನಡೆದುಕೊಂಡು ಬರುತ್ತಿರುವಾಗ ಸಂಜೆ 7:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಹಿಂದಿನಿಂದ ಸೈಬ್ರಕಟ್ಟೆ ಕಡೆಯಿಂದ ಕೋಟ ಹೈಸ್ಕೂಲ್  ಕಡೆಗೆ ಒಂದು ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮುಖ ಕೆಳಗಾಗಿ ಬಿದ್ದಿದರಿಂದ ಎರಡೂ ಕೈಗೆ, ಮುಖಕ್ಕೆ  ಮತ್ತು ಕಾಲಿಗೆ ರಕ್ತ ಗಾಯವಾಗಿದ್ದು, ಈ ಅಪಘಾತವನ್ನುಂಟು ಮಾಡಿದ ಮೋಟಾರ್ ಸೈಕಲ್ ಸವಾರ ದೀಕ್ಷಿತ್ ಎಂಬುವವರಿಗೆ ತಲೆಗೆ ತೀವೃ ಗಾಯ ಹಾಗೂ ಕೈಗೆ ಕಾಲಿಗೆ ತರಚಿದ  ಗಾಯ ಉಂಟಾಗಿರುತ್ತದೆ.ಈ ಅಪಘಾತವನ್ನುಂಟು ಮಾಡಿದ ಮೋಟಾರ್ ಸೈಕಲ್ ನಂಬ್ರ KA-20-EF-5749 ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 08/03/2021 ರಂದು 09:00 ಗಂಟೆಗೆ ಮೂಳೂರು ಗ್ರಾಮದ ಸ್ಟಾರ್ ಗ್ರೆನೈಟ್‌ ಹತ್ತಿರ ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಕಬೀರ್ (22), ತಂದೆ: ಎಸ್ ಎ ಅಬ್ದುಲ್ ರೆಹಮಾನ್, ವಾಸ: ಮಸೀದಿ ಕಾಂಪೌಂಡು  ಮೂಳೂರು ಗ್ರಾಮ ಕಾಪು ಇವರ ಪರಿಚಯದ ಎಮ್ ಎ ಖಾದರ್‌ ರವರು ತನ್ನ  ಮೋಟಾರು ಸೈಕಲ್  ನಂಬ್ರ KA-20-V-5503  ನೇದರಲ್ಲಿ ಮಗಳು ಪರ್ವಿನ್ ರವರನ್ನು ಕುಳ್ಳಿರಿಸಿಕೊಂಡು  ಮಂಗಳೂರು ಕಡೆಗೆ  ಹೋಗುತ್ತಿದ್ದಾಗ ಅವರ ಹಿಂದಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ  ಅಶೋಕ ಲೈಲ್ಯಾಂಡ್ ಕಂಪೆನಿಯ ದೋಸ್ತ್‌ ವಾಹನದ ಚಾಲಕ ತನ್ನ ವಾಹನವನ್ನುಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ KA-20-V-5503  ನೇ  ಮೋಟಾರು ಸೈಕಲ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಎಂ ಎ ಖಾದರ್  ಮತ್ತು  ಪರ್ವಿನ್  ರವರು ರಸ್ತೆಗೆ ಬಿದ್ದು, ಖಾದರ್ ರವರಿಗೆ ಕೈ ಮತ್ತು ಕಾಲುಗಳಿಗೆ ತರಚಿದ ಗಾಯ ಮತ್ತು ಪರ್ವಿನ್ ರವರಿಗೆ ಮುಖಕ್ಕೆ, ಎರಡೂ ಕಾಲು ಮತ್ತು ಹೊಟ್ಟೆ ಭಾಗಕ್ಕೆ ರಕ್ತಗಾಯ ಮತ್ತು ಒಳ ಜಖಂ ಆಗಿದ್ದು ಗಾಯಗೊಂಡವರನ್ನು ಪಿರ್ಯಾದಿದಾರರು ಹಾಗೂ ಇತರರು ಸೇರಿ ಚಿಕಿತ್ಸೆಯ ಬಗ್ಗೆ ಉಡುಪಿ  ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರ್ವಿನ್ ರವರನ್ನು ಒಳರೋಗಿಯಾಗಿ ಮತ್ತು ಖಾದರ್‌ರವರನ್ನು ಹೊರ ರೋಗಿಯಾಗಿ ದಾಖಲಿಸಿರುತ್ತಾರೆ. ಡಿಕ್ಕಿ  ಹೊಡೆದ ವಾಹನದ ನಂಬ್ರ KA-18-C-0361 ಅದರ ಚಾಲಕನ ಹೆಸರು ಮಹಮ್ಮದ್ ಜಂಶರುದ್ದೀನ್ ಆಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021  ಕಲಂ: 279,337 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸವಿತಾ ಶೆಟ್ಟಿ (25), ತಂದೆ: ದಿ. ಭಾಸ್ಕರ ಶೆಟ್ಟಿ, ವಾಸ: ಕುಂಡ್ಲುಮನೆ ಯಡಮೊಗೆ ಗ್ರಾಮ  ಕುಂದಾಪುರ  ತಾಲೂಕು ಇವರ ತಾಯಿ ಜಲಜ (52) ಇವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  08/03/2021  ರಂದು  08:30 ಗಂಟೆಯಿಂದ  09:30 ಗಂಟೆಯ ಮಧ್ಯದ ಅವಧಿಯಲ್ಲಿ  ಕುಂದಾಪುರ ತಾಲೂಕಿನ  ಯಡಮೊಗೆ  ಗ್ರಾಮದ  ಕುಂಡ್ಲುಮನೆ ಎಂಬಲ್ಲಿನ ವಾಸದ ಮನೆಯ ಸಮೀಪದಲ್ಲಿರುವ ಹಾಡಿಯಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಯತೀಶ್ ಅಮೀನ್ (21), ತಂದೆ: ಉಮೇಶ್, ವಾಸ: ಕುಮಾರ ಕೃಪಾ, 5 ನೇ ಕ್ರಾಸ್, ನಯಂಪಳ್ಳಿ, ಸಂತೆಕಟ್ಟೆ, ಪುತ್ತೂರು ಗ್ರಾಮ ಇವರು ದಿನಾಂಕ 07/03/2021 ರಂದು ರಾತ್ರಿ ಕಾರು ನಂಬ್ರ  KA-20-Z-6218  ನೇದರಲ್ಲಿ  ತನ್ನ ದೊಡ್ಡಪ್ಪನ ಮಗ ಚೇತನ್‌ ನೊಂದಿಗೆ  ಮಣಿಪಾಲದಿಂದ ಮನೆಗೆ ಬರುವಾಗ  ರಾತ್ರಿ 10:30 ಗಂಟೆಗೆ  ಉಡುಪಿ ತಾಲೂಕು ಪುತ್ತೂರು ಗ್ರಾಮದ  ಸಂತೆಕಟ್ಟೆ ನಯಂಪಳ್ಳಿ 5 ನೇ ಕ್ರಾಸ್ ತಲುಪುವಾಗ ಆರೋಪಿತರುಗಳಾದ ಅನೀಲ್ ಪೂಜಾರಿ, ಕಿಶನ್ ಶೆಟ್ಟಿ ಹಾಗೂ ಇತರೆ 3 ಜನ ಗುಂಪು ಸೇರಿ ರಸ್ತೆ ಮಧ್ಯದಲ್ಲಿ  ಪಿರ್ಯಾದಿದಾರರ ಕಾರಿಗೆ ದಾರಿ ಬಿಡದೇ ನಿಂತಿದ್ದು, ಆ ಬಗ್ಗೆ ಪಿರ್ಯಾದಿದಾರರು ಅಕ್ಷೇಪಿಸಿದ್ದಕ್ಕೆ ಅವರುಗಳ ಪೈಕಿ ಒಬ್ಬ ಕಾರಿನ ಕೀಯನ್ನು ತೆಗೆದಿರುವುದಲ್ಲದೆ ಮತ್ತೊಬ್ಬ ಕಾರಿನ ಬಾಗಿಲು  ತೆಗೆದು ಪಿರ್ಯಾದಿದಾರರ ಷರ್ಟಿಗೆ ಕೈ ಹಾಕಿ ಹೊರಕ್ಕೆ ಎಳೆದಿದ್ದಲ್ಲದೆ  ಪಿರ್ಯಾದಿದಾರರಿಗೆ ಹಾಗೂ ಚೇತನ್ ರವರಿಗೆ ಕೈಯಿಂದ ಹೊಡೆದು ಬಳಿಕ ಅವರಲ್ಲಿದ್ದ ಮತ್ತೊಬ್ಬ ಮುಷ್ಠಿ ಗಾತ್ರದ ಕಲ್ಲಿನಿಂದ ಪಿರ್ಯಾದಿದಾರರ ಬಾಯಿಯ ಎಡಭಾಗಕ್ಕೆ  ಹೊಡೆದ ಪರಿಣಾಮ ಅವರ ತುಟಿ ಒಡೆದು ರಕ್ತಗಾಯವಾಗಿದ್ದಲ್ಲದೆ, 2 ಹಲ್ಲುಗಳು ಅರ್ಧ ತುಂಡಾಗಿರುದಲ್ಲದೇ  ಆಸ್ಪತ್ರೆಗೆ  ಹೋಗಿ ನೋಡಿದಲ್ಲಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಗಲಾಟೆ ಸಮಯ ಎಲ್ಲಿಯೋ ಬಿದ್ದು ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021ಕಲಂ: 143,147, 341, 323, 504, 326 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 09-03-2021 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080