ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ರಾಜೇಶ (26) , ತಂದೆ:  ರಾಜು ಪೂಜಾರಿ, ವಾಸ: ಮನೆಕಲ್ ಗೋಳಿಗುಡ್ಡೆ ಬೀಸಿನಪಾರೆ  ಜಡ್ಕಲ್ ಗ್ರಾಮ  ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 08/02/2023 ರಂದು  ಕೆಲಸದ ನಿಮಿತ್ತ ತನ್ನ ಸ್ನೇಹಿತ ಸಮಾಪ P.J ಎಂಬುವವರ KA-20-EV-2322 ನೇ ಮೋಟಾರ್ ಸೈಕಲ್ ನ್ನು  ತನ್ನ ಮನೆಯಾದ ಬೀಸಿನಪಾರೆಯಿಂದ ಜಡ್ಕಲ್ ಗೆ ತೆಗೆದುಕೊಂಡು ಬಂದಿದ್ದು ಕೆಲಸ ಮುಗಿಸಿ  ವಾಪಸ್ಸು ಮನೆಗೆ ಮೋಟಾರ್ ಸೈಕಲ್ ನ್ನು   ಚಲಾಯಿಸಿಕೊಂಡು ಹೋಗುತ್ತಿದಾಗ ಬೈಂದೂರು ತಾಲೂಕು ಜಡ್ಕಲ್ ಗ್ರಾಮದ  ಪಂಚಾಯತ್ ಕಛೇರಿ ಸಮೀಪ  ಅವಿನಾಶ್ ವೆಲ್ಡಿಂಗ್  ಶಾಫ್ ಬಳಿ  ತಲುಪಿದಾಗ 16:00 ಗಂಟೆಗೆ ಪಿರ್ಯಾದಿದಾರರ  ಎದುರಿನಿಂದ  ಮುದೂರು ಕಡೆಯಿಂದ   ಜಡ್ಕಲ್ ಕಡೆಗೆ KA-20-AB-2915  ನೇ ಟಿಪ್ಪರ್  ನ್ನು ಅದರ ಚಾಲಕ ಆರೋಪಿ  ಗೋವಿಂದ ಅತೀವೇಗ ಹಾಗೂ  ಅಜಾಗರೂಕತೆಯಿಂದ ತೀರ ಬಲಬದಿಗೆ  ಚಲಾಯಿಸಿ ಪಿರ್ಯಾದಿದಾರಾರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಪಾದಕ್ಕೆ  ಹಾಗೂ  ತಲೆಗೆ , ಎಡ ಭುಜಕ್ಕೆ ರಕ್ತ ಗಾಯ ಉಂಟಾಗಿ  ಬಲಭುಜಕ್ಕೆ ಒಳ ನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ  ಆಸ್ಪತ್ರೆ ಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ 08/02/2023 ರಂದು ಪಿರ್ಯಾದಿದಾರರಾದ  ಸುದರ್ಶನ್‌ ಶೆಟ್ಟಿ (38), ತಂದೆ: ರಾಜೀವ್‌ ಶೆಟ್ಟಿ, ವಾಸ; ಸ್ವಾಮಿ ನಿಲಯ. ಬಾಳೆಬೇರು. ಸಿದ್ದಾಪುರ ಹೈಸ್ಕೂಲ್‌ ಹಿಂಬದಿ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಇವರು ತನ್ನ KA-20-MB-8841 ನೇ ಮಾರುತಿ ಡಿಝರ್ ಕಾರನ್ನು ತನ್ನ ಮನೆಯಾದ ಸಿದ್ದಾಪುರ ಕಡೆಯಿಂದ ಚಲಾಯಿಸಿಕೊಂಡು ಕುಚ್ಚೂರು ರಸ್ತೆಯಲ್ಲಿ ಬಂದು ಮುಂಜಾನೆ 05:25 ಗಂಟೆಗೆ ಹೆಬ್ರಿ ಜಂಕ್ಷನ್ ತಲುಪಿ ಮೂಡುಬಿದ್ರೆಗೆ ಕಡೆಗೆ ಹೋಗುತ್ತಿರುವಾಗ ಸೊಮೇಶ್ವರ ಕಡೆಯಿಂದ ಉಡುಪಿ ಕಡೆಗೆ KA-20-D-4009 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಸುನೀಲ್ ಕುಮಾರ್ ಇವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಸುದರ್ಶನ್ ಶೆಟ್ಟಿ ಇವರು ಚಲಾಯಿಸುತ್ತಿದ್ದ ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡು ಸುದರ್ಶನ್ ಶೆಟ್ಟಿ ಇವರಿಗೆ ಸೊಂಟದ ಬಳಿ ಮೂಳೆ ಮುರಿತದ ನೋವಾಗಿರುತ್ತದೆ. ಈ ಬಗ್ಗೆ  ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ 07/02/2023 ರಂದು ಪಿರ್ಯಾದಿದಾರರಾದ ಆಶಾ  ಯು. ಶೆಟ್ಟಿ (39), ಗಂಡ : ಉದಯ ಕುಮಾರ್ ಶೆಟ್ಟಿ, ವಾಸ: ಹಳಗೇರಿ, ಹೇರಿಕುದ್ರ ಮನೆ, ಕಂಬದಕೋಣೆ ಅಂಚೆ ಮತ್ತು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು KA-20-EW-9141ನೇ ನಂಬ್ರದ ಮೋಟಾರ್‌ಸೈಕಲ್‌ನ್ನು ಸವಾರಿ ಮಾಡಿಕೊಂಡು ಕುಂದಾಪುರ ಕಡೆಯಿಂದ ನಾಗೂರಿಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಹೋಗುತ್ತಿರುವಾಗ 18:45 ಗಂಟೆಗೆ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಡಿವೈಡರ್‌ ಬಳಿ ತಲುಪುವಾಗ KA-20-L-2144 ನೇ ನಂಬ್ರದ ಮೋಟಾರ್‌ಸೈಕಲ್‌ನ್ನು ಅದರ ಸವಾರ ತಿಮ್ಮಪ್ಪ ಖಾರ್ವಿ ಎಂಬುವವರು ಆಲೂರು ಕಡೆಯಿಂದ ನಾಯಕ್‌ ವಾಡಿ ಕಡೆಗೆ ಯಾವುದೇ ಸೂಚನೆಗಳನ್ನು ನೀಡದೇ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಪಿರ್ಯಾದಿದಾರರ ಮೋಟಾರ್‌ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಅವರ ಬಲ ಕಾಲಿನ ಮೂಳೆಗೆ, ತೀವೃ ಗಾಯವಾಗಿದ್ದು, ಮುಖಕ್ಕೆ ಹಾಗೂ ಕಾಲುಗಳಿಗೆ ಸಣ್ಣಪುಟ್ಟ ತರಚಿದ ಗಾಯ ಆಗಿರುತ್ತದೆ. ಅಲ್ಲದೇ ಢಿಕ್ಕಿ ಹೊಡೆದ ಮೋಟಾರ್‌ಸೈಕಲ್ ಸವಾರ ತಿಮ್ಮಪ್ಪ ರವರು ಸಹ ಗಾಯಗೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರಶಾಂತ ಕೆ (47), ತಂದೆ: ಶಂಕರ್‌, ವಾಸ: ಪರಿಶ್ರಮ, ಕಾವಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಮೋಟಾರ್‌ ಸೈಕಲ್‌ ನಲ್ಲಿ ಹೆಬ್ರಿ ಕಡೆಯಿಂದ ಹೆಬ್ರಿ–ಕೊಕ್ಕರ್ಣೆ ಮುಖ್ಯ ರಸ್ತೆಯಲ್ಲಿ ಬರುತ್ತಾ ಮಧ್ಯಾಹ್ನ 2:30 ಗಂಟೆಗೆ ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ, ಕೊಕ್ಕರ್ಣೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಸಮೀಪ ತಲುಪುವಾಗ ಕೊಕ್ಕರ್ಣೆ ಕಡೆಯಿಂದ ಹೆಬ್ರಿ ಕಡೆಗೆ ಆರೋಪಿ ಕೃಷ್ಣ ನಾಯಕ್ ರವರು ಅವರ KA-20-‌C-.3187 ನೇ ಮಾರುತಿ ಸುಜುಕಿ ರಿಟ್ಜ್‌ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಭಾಗಕ್ಕೆ ಬಂದು  ಫಿರ್ಯಾದಿದಾರರ ಮುಂಭಾಗದಲ್ಲಿ ಕೊಕ್ಕರ್ಣೆ ಕಡೆಗೆ ವಿಖ್ಯಾತ್‌ ರವರು ಸವಾರಿ ಮಾಡುತ್ತಿದ್ದ KA-20-ET-4113  ನೇ ಟಿವಿಸ್‌ ಅಪಾಚಿ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದು, ಕಾರು ನಿಯಂತ್ರಣ ತಪ್ಪಿ ಮುಂದಕ್ಕೆ ಹೋಗಿ ರಸ್ತೆಯ ಎಡ ಭಾಗದ ಚರಂಡಿಗೆ ಪಲ್ಟಿಯಾಗಿ ಅಡಿ ಮೇಲಾಗಿ ಬಿದ್ದಿರುತ್ತದೆ. ಈ ಅಪಘಾತದ ಪರಿಣಾಮ ವಿಖ್ಯಾತ್‌ ರವರು ಅವರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಅವರ  ಬಲಕಾಲಿನ ಮಂಡಿ ಹಾಗೂ ಅದರ ಕೆಳ ಭಾಗದ ಕೋಲು ಕಾಲಿಗೆ ತೀವ್ರ ರಕ್ತ ಗಾಯ, ಬಲಕಾಲಿನ ಪಾದಕ್ಕೆ ರಕ್ತಗಾಯ, ಎಡ ಕೈ ಮಣಿ ಗಂಟು, ತುಟಿ, ಹಲ್ಲಿಗೆ ಗುದ್ದಿದ ಗಾಯ ಆಗಿರುತ್ತದೆ.  ಆರೋಪಿ ಅವರ  ತಲೆಯ ಹಿಂಭಾಗಕ್ಕೆ ಸಣ್ಣ ರಕ್ತ ಗಾಯ ಆಗಿರುತ್ತದೆ. ಎರಡೂ ವಾಹನಗಳು ಜಖಂಗೊಂಡಿರುತ್ತದೆ . ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023 : ಕಲಂ 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದುದಾರರಾದ ಫಕೀರಪ್ಪ(29), ತಂದೆ: ಹನುಮಂತಪ್ಪ, ವಾಸ: ಸಿರ್ನೆಯ, ಕೊಪ್ಪದ ತಾಂಡ, ಕುಬ್ಬಗಡಿ ಹೋಬಳಿ, ತತೂರು ಗ್ರಾಮ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ ಇವರು ದಿನಾಂಕ 07/02/2023 ರಂದು 19:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ನವಮಿ ಬೇಕರಿಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಆಪಾದಿತ ಶಂಕರ, ಸಂತೆಕಟ್ಟೆ, ಉಡುಪಿ ತಾಲೂಕು ಎಂಬಾತ ಬಂದಿದ್ದು, ಆತನ ಭುಜಕ್ಕೆ ಪಿರ್ಯಾದಿದಾರರ ಭುಜ ತಾಗಿದ ಕಾರಣಕ್ಕೆ ಆತನು ಕೋಪಗೊಂಡು, ಪಿರ್ಯಾದಿದಾರರ ಹಿಂದಿನಿಂದ ಕಲ್ಲಿನಲ್ಲಿ ತಲೆಗೆ ಹೊಡೆದ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದಾಗ ಆಪಾದಿತನು ಒಂದು ಕೋಲಿನಿಂದ ಮುಖಕ್ಕೆ ಹಾಗೂ ತಲೆಗೆ ಹಲ್ಲೆ ಮಾಡಿ ರಕ್ತಗಾಯಗೊಳಿಸಿರುವುದಾಗಿದೆ. ಈ  ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2023 ಕಲಂ:  324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 08/02/2023 ರಂದು ಸಂಜೆ 18:30 ಗಂಟೆಗೆ ಆಪಾದಿತರಾದ 1) ಸುರೇಶ ಶೆಟ್ಟಿ, 2) ಸಂಪತ್‌ ಶೆಟ್ಟಿ, 3) ಸುರೇಂದ್ರ ಶೆಟ್ಟಿ, 4) ಚಂದ್ರ ಶೆಟ್ಟಿ. 5) ಸಂದೇಶ ಶೆಟ್ಟಿ. 6) ಮೋಹಿನಿ ಶೆಡ್ತಿ, 7) ರೇಖಾ ಶೆಡ್ತಿ 8) ರವೀಂದ್ರ ಶೆಟ್ಟಿ, 9) ಅಣ್ಣಪ್ಪಯ್ಯ ಸೇರೆಗಾರ, 10) ಸುಖಾರಾಮ ಶೆಟ್ಟಿ , 11) ಶರತ್‌ ಶೆಟ್ಟಿ ಮತ್ತು ಇತರರು  ಅಕ್ರಮ ಕೂಟ ಸೇರಿಕೊಂಡು  ಪಿರ್ಯಾದಿದಾರರಾದ ವಿಶ್ವನಾಥ ಶೆಟ್ಟಿ (57), ತಂದೆ: ಮಂಜಯ್ಯ ಶೆಟ್ಟಿ, ವಾಸ: ದುರ್ಗಜ್ಜಿ ಮನೆ ಸೌಕೂರು ಕುಂದಾಪುರ ತಾಲೂಕು ಇವರ ಜಾಗದ ಸರ್ವೇ ನಂಬ್ರ 44/32 ರಲ್ಲಿ 0.42 ಎಕ್ರೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರ ಹೆಂಡತಿ ಮಕ್ಕಳಿಗೆ ಬೆದರಿಸಿ ಪಿರ್ಯಾದಿದಾರರು ಹಾಕಿರುವ ಕಲ್ಲು ಕಂಬ ಕಿತ್ತು ಹಾಕಿ ಸಿಸಿ ಕ್ಯಾಮರಾ ಪುಡಿ ಮಾಡಿ ತೆಂಗಿನ ಗಿಡ ಮತ್ತು ಸಸಿಗಳನ್ನು ಹಾಳು ಮಾಡಿ ರಸ್ತೆ ಇಲ್ಲದ ಜಾಗದಲ್ಲಿ  ಮಣ್ಣು ಹಾಕಿ ನಡೆಕಂಟ ಅಗಲ ಮಾಡಿದ್ದು ಈ ಬಗ್ಗೆ ಕೇಳಲು ಹೋದ ಪಿರ್ಯಾದಿದಾರರ ಹೆಂಡತಿ ಮಕ್ಕಳಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 09/2023 ಕಲಂ: 143, 147. 447. 427, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 09-02-2023 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080