ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ಪಿರ್ಯಾದಿ ಶಂಕರ ನಾಯ್ಕ್‌(60) ತಂದೆ: ದಿ: ಕುಂಡು ನಾಯ್ಕ್‌ವಾಸ: ಕೆಂಪುಗುಡ್ಡೆ ಕುಂಟಾಡಿ ಅಂಚೆ,ಕಲ್ಯಾ ಗ್ರಾಮ, ಇವರ ಮಗ ಹರೀಶ್‌ ನಾಯ್ಕ್‌(36) ರವರು ಉಡುಪಿ ಸಂತೆಕಟ್ಟೆ ಎಂಬಲ್ಲಿ BELL O SEAL VALVES PRIVATE LIMITED ಕಂಪೆನಿಯಲ್ಲಿ ಫಿಟ್ಟರ್‌ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಎಂದಿನಂತೆ ದಿನಾಂಕ 08.02.2023 ರಂದು ರಾತ್ರಿ ಕರ್ತವ್ಯದ ಬಗ್ಗೆ ಮನೆಯಿಂದ ಕಂಪೆನಿಗೆ ಕೆಲಸಕ್ಕೆ ಹೋಗಿದ್ದರು. ರಾತ್ರಿ ಕರ್ತವ್ಯ ನಿರ್ವಹಿಸಿ ದಿನಾಂಕ 09.02.2023 ರಂದು ಬೆಳಿಗ್ಗೆ ಸಮಯ 7:00 ಗಂಟೆಗೆ ಸುಮಾರಿಗೆ ಹೊಸದಾಗಿ ಖರೀದಿಸಿದ ಮೋಟಾರ್‌ಸೈಕಲ್‌ನ್ನು ಮನೆ ಕಡೆಗೆ ಸವಾರಿ ಮಾಡಿಕೊಂಡು ಮೂಡುಬೆಳ್ಳೆ – ಕಟ್ಟಿಂಗೇರಿ ಕಡೆಗೆ ಸಾಗಿರುವ ಸಾರ್ವಜನಿಕ ಡಾಮಾರು ರಸ್ತೆಯ ಗಣಪನಕಟ್ಟೆ ಬಳಿ ತಲುಪುವಾಗ ಕಟ್ಟಿಂಗೇರಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ KA20D0457 ನೇ ನೊಂದಣಿ ಸಂಖ್ಯೆಯ ಪಿಕಪ್‌ವಾಹನವನ್ನು ಅದರ ಚಾಲಕ ಅಶೋಕ್‌ ವಿ. ಕುಂದರ್‌ಎಂಬಾತನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಗ ಸವಾರಿ ಮಾಡುತ್ತಿದ್ದ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಆತನಿಗೆ ತಲೆಗೆ ಮತ್ತು ಕಾಲಿಗೆ ತೀವ್ರತರದ ಗಾಯವಾಗಿ ಆತನನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಹೋಗಿದ್ದು ,ಆಸ್ಪತ್ರೆಯ ವೈದ್ಯರು ಹರೀಶ್‌ನಾಯ್ಕ್‌ ಇವರನ್ನು ಬೆಳಿಗ್ಗೆ 8:30 ಗಂಟೆಗೆ ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/23 ಕಲಂ 279, 304(A), ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ: ಮೋಹನ್‌ಲಾಲ್ ಕೆ.ಬಿ. ಪ್ರಾಯ : 36 ವರ್ಷ ತಂದೆ : ದಿ. ಬಾಲಚಂದ್ರ ವಾಸ : ಮಧ್ವ ಕಾಲೋನಿ, ಪಡುಬೆಳ್ಳೆ, ಬೆಳ್ಳೆ ಗ್ರಾಮ ಕಾಪು ಇವರು ದಿನಾಂಕ: 08-02-2023 ರಂದು ಸಮಯ ಸುಮಾರು ಮಧ್ಯಾಹ್ನ 1.30 ಗಂಟೆಗೆ ಮೂಡಬೆಟ್ಟು ಗ್ರಾಮದ ನವರಂಗ ಬಾರ್‌ ಎದುರು ಮಂಗಳೂರು ಉಡುಪಿ ರಾ ಹೆ 66 ರ ಸರ್ವಿಸ್‌ರಸ್ತೆಯ ಪಶ್ಚಿಮ ಬದಿಯಲ್ಲಿ ನಿಲ್ಲಿಸಿದ ತನ್ನಕೆ.ಎ.20 ಡಿ. 2339 ನೇ ಸ್ಕೂಟರ್‌ಬಳಿ ಬಂದು ಸ್ಕೂಟರ್‌ಮೇಲೆ ಕುಳಿತು ಸ್ಟಾರ್ಟ್ ಮಾಡುವಾಗ ಅದೇ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸುಧೀರ ರವರು ತನ್ನ ಬಾಬ್ತು ಕೆ.ಎ.20 ಡಿ. 8288 ನೇದ ಎಸ್.ವಿ.ಟಿ. ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ಬಲಗೈ ತೀವೃವಾಗಿ ಜಖಂ ಗೊಂಡಿದ್ದು, ಸ್ಥಳಕ್ಕೆ ಬಂದ ಸಾರ್ವಜನಿಕರು ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ರಿಕ್ಷಾದಲ್ಲಿ ಉಡುಪಿ ಹೈಟೆಕ್ ಆಸ್ಪ್ರತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಬಲಗೈ ಮೂಳೆ ಮುರಿತವಾಗಿರುವುದಾಗಿ ಹೇಳಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 20/2023 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಕುಂದಾಪುರ: ದಿನಾಂಕ: 08-02-203 ರಂದು ಸಂಜೆ 18:30 ಗಂಟೆಗೆ ಆಪಾದಿತರುಗಳು ಅಕ್ರಮ ಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ಪಿರ್ಯಾದಿ ವಿಶ್ವನಾಥ ಶೆಟ್ಟಿ ಪ್ರಾಯ:57 ವರ್ಷ ತಂದೆ: ಮಂಜಯ್ಯ ಶೆಟ್ಟಿ ವಾಸ: ದುರ್ಗಜ್ಜಿ ಮನೆ ಸೌಕೂರು ಕುಂದಾಪುರ ಇವರ ಜಾಗದ ಸರ್ವೇ ನಂಬ್ರ 44/32 ರಲ್ಲಿ 0.42 ಎಕ್ರೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರ ಹೆಂಡತಿ ಮಕ್ಕಳಿಗೆ ಬೆದರಿಸಿ ಪಿರ್ಯಾದಿದಾರರು ಹಾಕಿರುವ ಕಲ್ಲು ಕಂಬ ಕಿತ್ತು ಹಾಕಿ ಸಿಸಿ ಕ್ಯಾಮರಾ ಪುಡಿ ಮಾಡಿ ತೆಂಗಿನ ಗಿಡ ಮತ್ತು ಸಸಿಗಳನ್ನು ಹಾಳು ಮಾಡಿ ರಸ್ತೆ ಇಲ್ಲದ ಜಾಗದಲ್ಲಿ ಮಣ್ಣು ಹಾಕಿ ನಡೆಕಂಟ ಅಗಲ ಮಾಡಿದ್ದು ಈ ಬಗ್ಗೆ ಕೇಳಲು ಹೋದ ಪಿರ್ಯಾದಿದಾರರ ಹೆಂಡತಿ ಮಕ್ಕಳಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ :09/2023 ಕಲಂ: 143, 147. 447. 427, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿ: ಶ್ರೀಮತಿ ವಸಂತಿ (50) ಗಂಡ : ರಾಜು ಮೇರ ವಾಸ : ದರ್ಖಾಸು ಮನೆ ದೆಪ್ಪುತ್ತೆ ಮರ್ಣೆ ಗ್ರಾಮ ಇವರ ಗಂಡ ರಾಜು ಮೇರ (53) ರವರು ದರ್ಖಾಸು ಮನೆ ದೆಪ್ಪುತ್ತೆ ಮರ್ಣೆ ಗ್ರಾಮ ಎಂಬವರಿಗೆ ಸುಮಾರು ಹತ್ತು ವರ್ಷದ ಹಿಂದೆ ಬಾಯಿ ಕ್ಯಾನ್ಸರ್‌ ಆಗಿ ಚಿಕಿತ್ಸೆ ಪಡೆದಿದ್ದು, ಬಳಿಕ ಅವರಿಗೆ ವಿಪರೀತ ತಲೆ ನೋವು ಇದ್ದು ಈ ಬಗ್ಗೆ ಚಿಕಿತ್ಸೆ ಪಡೆದುಕೊಂಡಿದ್ದು,ಅಲ್ಲದೇ ಸುಮಾರು ಮೂರು ತಿಂಗಳ ಹಿಂದೆ ಕೆಲಸ ಮಾಡುವ ಸ್ಥಳದಲ್ಲಿ ಎಡ ಕಣ್ಣಿಗೆ ಗಾಯವಾಗಿ ಎಡ ಕಣ್ಣು ಕಾಣುತ್ತಿರಲಿಲ್ಲ. ಬಳಿಕ ಅವರಿಗೆ ವಿಪರೀತ ತಲೆ ನೋವು ಎಂದು ಪಿರ್ಯಾದಿದಾರರಲ್ಲಿ ಹೇಳುತ್ತಿದ್ದು ದಿನಾಂಕ: 08/02/2023 ರಂದು ರಾತ್ರಿ ಊಟ ಮಾಡಿ ಮಲಗಿದ್ದು, ತಲೆ ನೋವು ಎಂದು ಹೇಳಿ ದಿನಾಂಕ: 09/02/2023 ರ ಬೆಳಿಗ್ಗೆ 4 ಗಂಟೆಯ ವರೆಗೆ ನಿದ್ರೆ ಮಾಡಿದೇ ಇದ್ದು ,ನಂತರ ಪಿರ್ಯಾದಿದಾರರು ನಿದ್ರೆ ಮಾಡಿ ಬೆಳಿಗ್ಗೆ 7:30 ಗಂಟೆಗೆ ಎದ್ದು ನೋಡುವಾಗ ರಾಜು ಮೇರ ರವರು ಕಾಣದೆ ಇದ್ದು ಹುಡುಕಿದಾಗ ಮನೆಯ ಮುಂದೆ ಸೇರಿದ ಹಾಡಿಯಲ್ಲಿ ಗೇರು ಮರದ ಕೊಂಬೆಗೆ ಲುಂಗಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಠಾಣಾ UDR ನಂ: 06/2023 U/s 174 ಸಿಆರ್‌ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ: ಪಿರ್ಯಾದಿ: ರವೀಂದ್ರ (42) ತಂದೆ: ಸುಧಾಕರ ಶೆಟ್ಟಿ ವಾಸ: ಕುಕ್ಕೆಹಳ್ಳಿ ಕಟ್ಟೆ ಮನೆ, ಶಾಂತಿ ನಿಲಯ ಕುಕ್ಕೆಹಳ್ಳಿ ಗ್ರಾಮ ಇವರ ಸುಧಾಕರ ಶೆಟ್ಟಿ (68) ರವರು ದಿನಾಂಕ: 08/02/2023 ರಂದು ರಾತ್ರಿ 9:00 ಗಂಟೆಗೆ ಉಡುಪರ ಬೆಟ್ಟು ಎಂಬಲ್ಲಿಗೆ ದೇವರ ನೇಮೋತ್ಸವ ಕಾರ್ಯಕ್ರಮಕ್ಕೆ ಮನೆಯಿಂದ ಹೋಗಿರುತ್ತಾರೆ. ಅವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಈ ಚಟವನ್ನು ಮನೆಯಿಂದ ಬಿಡಲು ಅಗದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 08/02/2023 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ: 09/02/2023 ರ ಬೆಳಿಗ್ಗೆ 7:00 ಗಂಟೆಯ ಮಧ್ಯಧಿಯಲ್ಲಿ ನಾರಾಯಣ ನಯ್ಕ್ ರವರ ಹಾಡಿಯಲ್ಲಿ ಯಾವುದೋ ವಿಷಾ ಪಾದಾರ್ಥವನ್ನು ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದು ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 07/2023 ಕಲಂ: 174 ಸಿಆರ್‌ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಬ್ರಹ್ಮಾವರ: ದಿನಾಂಕ:08.02.2023ರಂದು ರಾತ್ರಿ 09:30 ಗಂಟೆಯಿಂದ ದಿನಾಂಕ:09.02.2023ರಂದು ಬೆಳಿಗ್ಗೆ 06:00ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ ಅರ್ಜುನ್‌ಶೆಟ್ಟಿ(32 ವರ್ಷ), ತಂದೆ:ಸುಧಾಕರ ಶೆಟ್ಟಿ, ವಾಸ:ಪದ್ಮಶ್ರೀ ಎಮ್‌.ಪಿ ರಸ್ತೆ ಕುಂದಾಪುರ ಇವರಿಗೆ ಸಂಬಂಧಿಸಿದ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಚೆಟ್ಟಿಅರಿಕಲ್‌ ಶ್ರೀ ದುರ್ಗಾ ಪೆಟ್ರೋಲ್‌ ಬಂಕ್‌ನ ಕಚೇರಿಯ ಶೇಟರ್‌ನ ಬಾಗಿಲಿಗೆ ಹಾಕಿದ ಬೀಗ ಮುರಿದು ಒಳಪ್ರವೇಶಿಸಿ ಕಚೇರಿಯ ಒಳಗೆ ಡ್ರಾವರ್‌ನ್ನಲ್ಲಿಟ್ಟಿದ್ದ ವ್ಯವಹಾರದ ಬಾಬ್ತು 46000/-ರೂ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ
    ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 19/2023: ಕಲಂ 457,380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 09-02-2023 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080