ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮೋಹನದಾಸ ಖಾರ್ವಿ (46), ಗಂಡ: ಪುಟ್ಟಯ್ಯ ಖಾರ್ವಿ, ವಾಸ: ದುರ್ಗಯ್ಯನ ಮನೆ , ಶ್ರೀ ಅಂಬಾ ನಿಲಯ ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 07/02/2022 ರಂದು  ಬೆಳಿಗ್ಗೆ  ನಾಗೂರು ಶ್ರೀ  ಆಂಜನೇಯ ದೇವಸ್ಥಾನಕ್ಕೆ  ಹೋಗಿ ಪೂಜೆ ಮುಗಿಸಿ ವಾಪಾಸು ಮನೆಗೆ ಬರಲು ನಾಗೂರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಪಿರ್ಯಾದಿದಾರರ ಬಾವ  ಶ್ರೀಧರ್  ರವರು ಅವರ KA-53-V-3089 ನೇ ಮೋಟಾರು ಸೈಕಲ್ ನಲ್ಲಿ  ಅವರ ಮಗಳು ಶ್ರಮಿತಾಳನ್ನು  ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಪ್ಪುಂದದಿಂದ ಕಿರಿಮಂಜೇಶ್ವರ  ಕಡೆಗೆ ಬೈಕನ್ನು ಚಲಾಯಿಸಿಕೊಂಡು ಕಿರಿಮಂಜೇಶ್ವರ ಗ್ರಾಮದ ನಾಗೂರು ಬಸ್ ನಿಲ್ದಾಣದ ಬಳಿ ಬರುತ್ತಿರುವಾಗ ಸಮಯ  ಬೆಳಿಗ್ಗೆ 8:30 ಗಂಟೆಗೆ ಆರೋಪಿ KA-20-Y-5405 ನೇ ಮೋಟಾರು ಸೈಕಲ್ ಸವಾರನು ಆತನ ಮೋಟಾರು ಸೈಕಲ್ ನ್ನು ಉಪ್ಪುಂದ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾವ ಶ್ರೀಧರ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನ್ನು ಬಲ ಬದಿಯಿಂದ ಓವರ್ ಟೇಕ್ ಮಾಡಿ  ಮುಂದೆ ಹೋಗಿ ಬೈಕ್ ನ್ನು  ಒಮ್ಮೆಲೇ ಎಡಕ್ಕೆ ತಿರುಗಿಸಿದ ಪರಿಣಾಮ ಆರೋಪಿತನ ಬೈಕ್ ಶ್ರೀದರ್ ರವರ  ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀದರ್ ರವರು  ಮೊಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ  ಎಡ ಕೈ ಮೂಳೆ ಮುರಿತ ಉಂಟಾಗಿದ್ದು , ಬೈಕಿನ ಹಿಂದೆ ಕುಳಿತಿದ್ದ ಶ್ರೀಧರ್ ರವರ ಮಗಳು ಶ್ರಮಿತಾಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಪಿರ್ಯಾದಿದಾರರು ಗಾಯಾಳು ಶ್ರೀಧರ್ ರವರನ್ನು ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ  ಕುಂದಾಪುರ ಶ್ರೀ ದೇವಿ ನರ್ಸಿಂಗ್ ಹೊಂ ಗೆ  ಕರೆದು ಕೊಂಡುಹೋಗಿ ಒಳರೊಗಿಯಾಗಿ ದಾಖಲಿಸಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 07/02/2022 ರಂದು ರಾತ್ರಿ 11:00 ಗಂಟೆಗೆ ಮಣಿಪಾಲ ವಿಧ್ಯಾರತ್ನ ನಗರದ Hot & Spicy Hotel ಬಳಿಯಲ್ಲಿ ಹಾದು ಹೋಗಿರುವ ಡಿ ಸಿ ಕಛೇರಿ ರಸ್ತೆಯಲ್ಲಿ ಸಿಂಡಿಕೇಟ್ ಸರ್ಕಲ್ ಕಡೆಯಿಂದ ಡಿಸಿ ಕಛೇರಿ ಕಡೆಗೆ MH-09-CH-0563 ನೇ ಮೋಟಾರ್ ಸೈಕಲನ್ನು  ಪ್ರಜ್ವಲ್ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮೋಟಾರ್ ಸೈಕಲ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪ್ರಜ್ವಲ್ ಮೋಟಾರ್ ಸೈಕಲ್ ಸಮೇತ್ ನೆಲಕ್ಕೆ ಬಿದ್ದು  ಪ್ರಜ್ವಲ್ ರವರ ಮುಖಕ್ಕೆ, ತೆಲೆಗೆ, ಭುಜಕ್ಕೆ ತೀವ್ರ ಸ್ವರೂಪದ ಗಾಯ ಹಾಗೂ ಕಾಲಿಗೆ ತರಚಿದ ಗಾಯ ಉಂಟಾಗಿರುತ್ತದೆ ಹಾಗೂ ಮೋಟಾರ್ ಸೈಕಲ್ ಜಖಂ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಚೇತನ್ (43), ತಂದೆ: ಕೃಷ್ಣ  ಕರ್ಕೆರಾ, ವಾಸ: ದರ್ಶಿಕಾ ನಿಲಯ ,ಕೋಡಿಕಲ್ಲು  ಜೋಕಟ್ಟೆ  ಅಶೋಕ ನಗರಮಂಗಳೂರು ಇವರು ದಿನಾಂಕ 07/02/2022 ರಂದು ಕೆಲಸದ ನಿಮಿತ್ತ ಅವರ KA-19-ME-7223ನೇ  ಕಾರನ್ನು ಚಲಾಯಿಸಿಕೊಂಡು ಮಂಗಳೂರಿನಿಂದ ಅಂಕೋಲ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಕಿರಿಮಂಜೇಶ್ವರ ಗ್ರಾಮದ ನಾಗೂರು ಪೆಟ್ರೋಲ್ ಬಳಿ ರಾತ್ರಿ 10:30 ಗಂಟೆಗೆ ಪಿರ್ಯಾದಿದಾರರ ಮುಂದಿನಿಂದ ಕುಂದಾಪುರ ಕಡೆಯಿಂದ ಬೈಂದೂರು  ಕಡೆಗೆ  KA-19-AC-8686ನೇ  ಟ್ಯಾಂಕರ್ ಚಾಲಕ ಶಿವ ಕುಮಾರ್ ನು ಟ್ಯಾಂಕರ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ದನವೊಂದು ಟ್ಯಾಂಕರ್ ನ ಎದುರು ರಸ್ತೆಗೆ  ಓಡಿ ಬಂದ ಕಾರಣ ಟ್ಯಾಂಕರ್ ಚಾಲಕನು ದನವನ್ನು ತಪ್ಪಿಸುವ ಭರದಲ್ಲಿ ಟ್ಯಾಂಕರ್ ನ್ನು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ಟ್ಯಾಂಕರ್ ಚಾಲಕನ ಹತೋಟಿ ತಪ್ಪಿ ರಸ್ತೆಗೆ ಬದಿಯಲ್ಲಿರುವ ಹೊಂಡಕ್ಕೆ ಮುಗುಚಿ ಬಿದ್ದಿದ್ದು ಟ್ಯಾಂಕರ್ ಸಂಪೂರ್ಣ ಜಖಂ ಗೊಂಡಿರುತ್ತದೆ. ಟ್ಯಾಂಕರ್ ನಲ್ಲಿದ್ದ ಡಾಂಬಾರು ಸಂಪೂರ್ಣ ಹೊರಗೆ ಚೆಲ್ಲಿರುತ್ತದೆ. ಅಪಘಾತದಿಂದ ಟ್ಯಾಂಕರ್ ಚಾಲಕ ಶಿವಕುಮಾರ್ ರವರ ಕಾಲಿಗೆ ಚಿಕ್ಕಪುಟ್ಟ  ಗಾಯವಾಗಿದ್ದು  ನಿರ್ವಾಹಕ  ಪೈರೋಜ್ ರವರಿಗೆ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ಪಿರ್ಯಾದಿದಾರರಾದ ಸಿದ್ದಿಕ್ (38), ತಂದೆ: ದಿ. ಬಿ ಎಂ. ಅಬ್ದುಲ್ಲಾ, ವಾಸ: ನೂರ್‌ ಮಂಜಿಲ್, ಶಿರ್ವ ಮಸೀದ ಹತ್ತಿರ, ಶಿರ್ವ ಗ್ರಾಮ ಕಾಪು ತಾಲೂಕು ಇವರು MH-46-J-0748 ನೇ ಬಸ್ಸಿನ ಚಾಲಕನಾಗಿದ್ದು , ದಿನಾಂಕ 08/02/2022 ರಂದು ಮಧ್ಯಾಹ್ನ ಉಡುಪಿಯಿಂದ ಶಿರ್ವ ಕಡೆಗೆ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಉದ್ಯಾವರ ಬೊಳ್ಜೆ ಕ್ರಾಸ್ ಬಳಿ ಮಧ್ಯಾಹ್ನ 13:57 ಗಂಟೆಗೆ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಹೋಗುತ್ತಿರುವಾಗ ಬಸ್ಸಿನ ಹಿಂದಿನಿಂದ ಉಡುಪಿ ಕಡೆಯಿಂದ KA-20-N-4231 ಕಾರು ಚಾಲಕ ಅನಂತ ರಾಮ್  ರವರು  ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿ ಕಾರಿನ ಎದುರಿನಿಂದ ಬಸ್ಸಿನ ಹಿಂದಿನಿಂದ ಬರುತ್ತಿದ್ದ  KA-20-AA-6200 ನೇ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಆಟೋ ರಿಕ್ಷಾ ಸಂಪುರ್ಣ ಜಖಂಗೊಂಡಿರುತ್ತದೆ. ರಿಕ್ಷಾ ಚಾಲಕ ಪ್ರಶಾಂತ್ ಹಾಗೂ ಕಾರು ಚಾಲಕ ಗಾಯಗೊಂಡಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಕಡೆಯ ಆಸ್ಪತ್ರೆಗೆ ಹೋಗಿರುತ್ತಾರೆ. ಹಾಗೂ ಕಾರಿನಲ್ಲಿದ್ದ ಮಹಿಳೆಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ. ಹಾಗೂ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್ಸಿನ ಹಿಂಭಾಗ ಬಲಬದಿ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸುಕೇಶ (19), ತಂದೆ: ಕೃಷ್ಣ ನಾಯ್ಕ, ವಾಸ: 5 ಸೆಂಟ್ಸ ಸಪ್ತಗಿರಿ  ನಂಚಾರು ಗ್ರಾಮ ಬ್ರಹ್ಮಾವರ ತಾಲೂಕು ಇವರ  ತಂದೆ ಕೃಷ್ಣ ನಾಯ್ಕ (49) ರವರು ದಿನಾಂಕ 08/02/2022 ರಂದು  ಬೆಳಿಗ್ಗೆ 8:00  ಗಂಟೆಯಿಂದ 08/02/2022  ರ ಮಧ್ಯಾಹ್ನ 02:00 ಗಂಟೆಯ ಮಧ್ಯಾವಧಿಯಲ್ಲಿ ಅವರ ಅಸೌಖ್ಯದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಅವರ ಮನೆಯ ಅಡುಗೆ ಕೋಣೆಯ ಶೀಟಿಗೆ ಹಾಕಿದ ಕಬ್ಬಿಣದ  ಪಟ್ಟಿಗೆ ನೈಲಾನ್ ಹಗ್ಗದಿಂದ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 06/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಕುಷ್ಠ ಪೂಜಾರಿ (67), ತಂದೆ: ದಿ. ರಾಮ ಪೂಜಾರಿ, ವಾಸ: ಉಡುಪರಡಿ ದೀಟಿ, ಬಿಜೂರು ಕೊಡೇರಿ ಮನೆ, ಬಿಜೂರು ಗ್ರಾಮ, ಬೈಂದೂರು ತಾಲೂಕು ಇವರ ಮಗ ಸುಬ್ರಹ್ಮಣ್ಯ(25) ರವರು ದಿನಾಂಕ 07/02/2022 ರಂದು ಕುಂದಾಪುರದ ಶಶಿಧರ ವೆಜ್ ಹೋಟೇಲಿನಲ್ಲಿ ಕೆಲಸಕ್ಕೆ ಸೇರಿದ್ದು  ದಿನಾಂಕ 08/02/2022 ರಂದು 11:00 ಗಂಟೆಗೆ  ಶಶಿಧರ ಹೋಟೇಲಿನವರು ಪಿರ್ಯಾದಿದಾರರಿಗೆ ಕರೆ ಮಾಡಿ ಸುಬ್ರಹ್ಮಣ್ಯ ರವರು ಕುಸಿದು ಬಿದ್ದು ರಕ್ತವಾಂತಿ ಮಾಡಿದ್ದು   ಈ ಬಗ್ಗೆ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ  ತಿಳಿಸಿದ್ದು ಪಿರ್ಯಾದಿದಾರರು ಆಸ್ಪತ್ರೆಗೆ ಬಂದು ನೋಡಲಾಗಿ ಸುಬ್ರಹ್ಮಣ್ಯ ರವರು ಅದಾಗಲೇ ಮೃತಪಟ್ಟಿರುವುದಾಗಿದೆ. ಸುಬ್ರಹ್ಮಣ್ಯ ರವರು 1ವರ್ಷ ಗಳಿಂದ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು ಆ ಕಾರಣದಿಂದ  ಅಥವಾ ಇನ್ಯಾವುದೋ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪ್ರಥಮ್ ಆರ್ ಆಚಾರ್ಯ  (19), ತಂದೆ: ರಮೇಶ ಆಚಾರ್ಯ, ವಾಸ: ರುಕ್ಮಿಣಿ ನಿಲಯ ದುಗ್ಗಣ್ಣ ಬೆಟ್ಟು ಮಾರ್ಗ ನಿಟ್ಟೂರು ಉಡುಪಿ ಇವರ ತಂದೆ  ರಮೇಶ್‌ ಆಚಾರ್ಯ ರವರ ಮಾಲಕತ್ವದ ಹೀರೋ ಹೋಂಡಾ ಫ್ಯಾಷನ್ ಫ್ಲಸ್ ಮೋಟರ್ ಸೈಕಲ್ ನಂಬ್ರ KA- 20-U-5110 (Chassis No:07L05c59308 & Engine No: 07L05M61850) ನೇದನ್ನು ದಿನಾಂಕ 06/02/2022 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್‌ ನಿಲ್ದಾಣದ ಕಿದಿಯೂರು ಹೋಟೆಲ್ ಕಡೆ ಹೋಗುವ ರಸ್ತೆಯ ಎಡ ಬದಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಬಂಟ್ವಾಳಕ್ಕೆ ತೆರಳಿದ್ದು, 20:00  ಗಂಟೆಗೆ  ವಾಪಾಸು ಬಂದು  ನೋಡಿದಾಗ ಮೋಟಾರ್‌ ಸೈಕಲ್‌ ಪಾರ್ಕ್‌ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟರ್ ಸೈಕಲ್ ಮೌಲ್ಯ ರೂಪಾಯಿ 12,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022, ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀ ಮಲ್ಲಿಕಾರ್ಜುನ (52), ತಂದೆ: ಚಿಂಗ ಹರಿಜನ,  ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧ್ಯಕ್ಷರು ಸಾಮಾಜಿಕ ನ್ಯಾಯ ಸಮಿತಿ ಮುಡಾರು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ಮುಡಾರು ಗ್ರಾಮ ಪಂಚಾಯತ್ ನ ಸದಸ್ಯ ಹಾಗೂ ಮುಡಾರು ಗ್ರಾಮ ಪಂಚಾಯತ್ ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿದ್ದು,  ದಿನಾಂಕ 19/01/2022 ರಂದು ಮುಡಾರು ಗ್ರಾಮದ ಗಣೇಶ್ ಶೆಟ್ಟಿ ಎಂಬುವವರು ತನ್ನ ಕೃಷಿ ಜಾಗಕ್ಕೆ ನೀರು ಹೋಗುವ ಪೈಪ್ ನ್ನು ವಿಲ್ಸನ್ ಪಿ.ಎಂ ಎಂಬುವವರು ಕಡಿದು ಹಾಕಿರುವ ಬಗ್ಗೆ ಮುಡಾರು ಗ್ರಾಮ ಪಂಚಾಯತಿಯ ಸಾಮಾಜಿನ ನ್ಯಾಯ ಸಮಿತಿಗೆ ದೂರು ನೀಡಿದ್ದು  ದೂರಿನ ವಿಚಾರಣೆ ಬಗ್ಗೆ ದಿನಾಂಕ 07/02/2022 ರಂದು ದೂರುದಾರ ಗಣೇಶ್ ಹಾಗೂ  ವಿಲ್ಸನ್ ಪಿ.ಎಂ ರವರನ್ನು ಮುಡಾರು ಗ್ರಾಮ ಪಂಚಾಯತ್ ನ ಸಾಮಾಜಿಕ ನ್ಯಾಯ ಸಮಿತಿಗೆ ಕರೆದಿದ್ದು ದಿನಾಂಕ 07/02/2022 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮುಡಾರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ರಮೇಶ್, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಯವರು ಮತ್ತು ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಇರುವಾಗ ಗಣೇಶ್ ಶೆಟ್ಟಿರವರು ಓರ್ವ ವ್ಯಕ್ತಿಯನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದು ಆ ವ್ಯಕ್ತಿಯು ಪಿರ್ಯಾದಿದಾರರಲ್ಲಿ ಹಾಗೂ ಪಿಡಿಓ ರವರಲ್ಲಿ ನಾನು ಉಮೇಶ್ ಕಲ್ಲೊಟ್ಟೆ ಗಣೇಶ್ ಶೆಟ್ಟಿರವರ ಪರವಾಗಿ ಬಂದಿರುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಹೊರಟು ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022  ಕಲಂ: 504,506 ಜೊತೆಗೆ 34 ಐಪಿಸಿ ಹಾಗೂ ಕಲಂ: 3(1)(r)(s), 3(2)(v-a) SCST Act 1989 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-02-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080