ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ದಿನಾಂಕ 07/02/2021 ರಂದು ಮಧ್ಯಾಹ್ನ 2:45 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಆನೆಕೆರೆ ಜಂಕ್ಷನ್ ಸಮೀಪ  ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಸಾಧು ಗೌಡ ಎಂಬುವವರು KA-20-EJ-6587 ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಆನೆಕೆರೆ ಕಡೆಯಿಂದ ಕಾರ್ಕಳ ಕಡೆಗೆ ಹೋಗುವಾಗ ಅದೇ ದಿಕ್ಕಿನಿಂದ KA-19-AB-5605 ನೇ ನಂಬ್ರದ ಬಸ್ಸನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನ ತಲೆಯ ಎಡಬದಿಗೆ ರಕ್ತಗಾಯವಾಗಿರುತ್ತದೆ. .ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ 08/02/2021 ರಂದು ಪಿರ್ಯಾದಿದಾರರಾದ ವೆಂಟೇಶ ಪೂಜಾರಿ (37), ತಂದೆ; ರಾಮ ಪೂಜಾರಿ, ವಾಸ: ಕೋಣ್ಕಿ, ನಾಡ ಗ್ರಾಮ, ಬೈಂದೂರು ತಾಲೂಕು ಇವರು KA-05-KE-7111 Honda Activa 4G ಸ್ಕೂಟರ್‌ನಲ್ಲಿ ಪ್ರಶಾಂತ ಪೂಜಾರಿ ಯವರೊಂದಿಗೆ ಸಹಸವಾರನಾಗಿ ಕುಳಿತುಕೊಂಡು ಕೂಡ್ಗಿಹಿತ್ಲು ಹಿರಿಯ ಮೊಗವೀರ ಎಂಬುವವರ ಮನೆಗೆ ಹೋಗುತ್ತಿರುವಾಗ ಬೆಳಿಗ್ಗೆ 8:30 ಗಂಟೆಗೆ ನಾಡ ಗ್ರಾಮದ ಕೋಣ್ಕಿ ಹೊಳೆ ದಂಡೆ ಸಮೀಪ ತಲುಪುವಾಗ ಸ್ಕೂಟರ್ ಸವಾರ ಪ್ರಶಾಂತ ಪೂಜಾರಿ ಯವರು ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಆ ಸಮಯ ಒಮ್ಮೆಲೇ ನಾಯಿ ಅಡ್ಡ ಬಂದಾಗ ಬ್ರೇಕ್ ಹಾಕಿದ್ದರಿಂದ ಸ್ಕೂಟರ್‌ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರು ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ : 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕೋಟ: ಪಿರ್ಯಾದಿದಾರರಾದ ಹರೀಶ (30), ತಂದೆ: ಬಾಬು, ವಾಸ: ಪುಟ್ಟು ಮಣೂರು ಪಡುಕೆರೆ ಕೋಟತಟ್ಟು ಅಂಚೆ ಮಣೂರು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 06/02/2021 ರಂದು ಕೊಟೇಶ್ವರ ಬೀಜಾಡಿಯಲ್ಲಿ ನಡೆಯುವ ಕ್ರಿಕೇಟ್ ಪಂದ್ಯಾಟ ವೀಕ್ಷಿಸಲು ಸ್ನೇಹಿತ ಮಿಥುನ್ ನ ಜೊತೆಯಲ್ಲಿ ಆತನ KA-20-EK-7739 ನೇ ನಂಬ್ರದ ಮೋಟಾರ್ ಸೈಕಲಿನಲ್ಲಿ ಸಹ ಸವಾರನಾಗಿ ಕುಳಿತು ಹೋಗಿದ್ದು, ಪಂದ್ಯಾಟ ವೀಕ್ಷಿಸಿ ವಾಪಾಸ್ಸು ದಿನಾಂಕ 07/02/2021 ರಂದು ಬೆಳಗ್ಗಿನ ಜಾವ 1:00 ಗಂಟೆಗೆ ಬೀಜಾಡಿಯಿಂದ ಮನೆಯಾದ ಪಡುಕೆರೆಗೆ  ಕೊರವಡಿ ಕಡೆಯಿಂದ ಪಡುಕೆರೆಗೆ  ಹೋಗುವ ರಸ್ತೆಯಲ್ಲಿ ಬರುವಾಗ ಮಣೂರು ಶೈಲಜಾ ಎಂಬ ಹೆಸರಿನ  ಮನೆಯ ಬಳಿ ಬಂದು ರಸ್ತೆಯ ಪೂರ್ವದ ಅಂಚಿನಲ್ಲಿ ಮೊಟರ್ ಸೈಕಲ್ ನಿಲ್ಲಿಸಿ ಮಾತನಾಡುತ್ತಿರುವಾಗ ಬೆಳಗ್ಗಿನ ಜಾವ 1:30 ಗಂಟೆಯ ಸಮಯಕ್ಕೆ ಕೊರವಡಿ ಕಡೆಯಿಂದ ಪಡುಕೆರೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಕೊರವಡಿ ಕಡೆಯಿಂದ  KA-20-EQ-6608 ನೆ ಮೋಟಾರ್ ಸೈಕಲ್ ಸವಾರನು ಹಿಂಬದಿ ಸಹ ಸವಾರನನ್ನು ಕುಳ್ಳಿರಿಸಿ ಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೊಟಾರ್ ಸೈಕಲಿಗೆ ಢಿಕ್ಕಿ ಹೊಡೆದಿರುವುದಾಗಿದೆ. ಇದರಿಂದ ಪಿರ್ಯಾದಿದಾರರು ಮೊಟಾರ್ ಸೈಕಲ್ ಸಮೇತ ರಸ್ತೆಯ ಪಕ್ಕದಲ್ಲಿದ್ದ  ಕಲ್ಲಿನ ಕಂಪೌಂಡ್ ಗೆ ಹೋಗಿ ಬಿದ್ದಿರುತ್ತಾರೆ. ಢಿಕ್ಕಿ ಹೊಡೆದ ಮೋಟಾರ್ ಸೈಕಲ್ ನಲ್ಲಿದ್ದವರು ಮೋಟಾರ್ ಸೈಕಲ್ ಸಮೇತ ಕಲ್ಲಿನ ಪಾಗಾರಕ್ಕೆ ಬಂದು ಗುದ್ದಿರುತ್ತಾರೆ.  ಇದರಿಂದಾಗಿ ಪಿರ್ಯಾದಿದಾರರ ಕುತ್ತಿಗೆಯ ಬಳಿ ಒಳ ಜಖಂ ಆಗಿರುತ್ತದೆ. ಸಹ ಸವಾರ ಮಿಥುನ ನ ಕೈ ಮತ್ತು ಕಾಲುಗಳಿಗೆ ತೀವೃ ಸ್ವರೂಪದ ಗಾಯವಾಗಿರುತ್ತದೆ. ಢಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರನ ಹೆಸರು ಸುಭಾಶ ಎಂಬುವುದಾಗಿಯೂ ಹಿಂಬದಿ ಸವಾರನ ಹೆಸರು ರಾಕೇಶ ಎಂಬುದಾಗಿಯು ತಿಳಿಯಿತು. ಈ ಅಪಘಾತದಿಂದ  ಸುಭಾಶನ  ಕಾಲುಗಳಿಗೆ ತೀವೃ ಸ್ವರೂಪದ ಗಾಯವಾಗಿರುತ್ತದೆ. ಹಿಂಬದಿ ಸವಾರ ರಾಕೇಶನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ಆತನ ಬೆನ್ನು, ಕಾಲಿಗೆ ತೀವೃ ಸ್ವರೂಪದ ಗಾಯಾಗಿರುತ್ತದೆ.ಕೂಡಲೇ  ಚಿಕಿತ್ಸೆಯ ಬಗ್ಗೆ  ಮಣೆಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ:  279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ :ದಿನಾಂಕ 08/02/2021 ರಂದು ರಾತ್ರಿ 10:30 ಗಂಟೆಗೆ, ಕುಂದಾಪುರ ತಾಲೂಕು ಕಸಬಾ ಗ್ರಾಮದ ಚರ್ಚ್‌‌ ರಸ್ತೆಯ ಚರ್ಚ್‌‌ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ಆಪಾದಿತೆ  ಶ್ಯಾಮಲಾ ಎಂಬುವವರು KA-19-MC-4623 ನೇ  ಮಾರುತಿ ಅಲ್ಟೋ ಕಾರನ್ನು ಮದ್ದುಗುಡ್ಡೆ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು  ಬಂದು, ಕುಂದಾಪುರ ಕಡೆಯಿಂದ ಮದ್ದುಗುಡ್ಡೆ  ಕಡೆಗೆ ಕಿರಣ್‌ ಮೇಸ್ತಾ ಎಂಬುವವರು KA-20-EV-1360 ನೇ ಬುಲೆಟ್‌‌ನಲ್ಲಿ ರವೀಂದ್ರ ಕುಮಾರ್‌ ಎಂಬುವವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ  ಬುಲೆಟ್‌‌ ಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಕಿರಣ್‌ ಮೇಸ್ತಾ ಹಾಗೂ ರವೀಂದ್ರ ಕುಮಾರ್‌ ರವರು ತಲೆಗೆ ಗಂಭೀರ  ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿದ್ದಲ್ಲಿ ಇಬ್ಬರು  ಮೃತಪಟ್ಟಿದ್ದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಗಣೇಶ ನಾಯ್ಕ (29), ತಂದೆ: ಪುರುಷ ನಾಯ್ಕ , ವಾಸ: ಸ್ಪಂದನಾ, ಬಿಯಾಳಿ ಹೊಳೆ ಜೆಡ್ಡು , 34ನೇ ಕುದಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ಪುರುಷ ನಾಯ್ಕ (61) ರವರು ದಿನಾಂಕ 05/02/2021 ರಂದು ಕಾಣೆಯಾಗಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿರುವುದಾಗಿದೆ. ಕಾಣೆಯಾದ ಪುರುಷ ನಾಯ್ಕ ರವರನ್ನು ಹುಡುಕಾಡುತ್ತಿರುವಾಗ ದಿನಾಂಕ 08/02/2021 ರಂದು ಮಧ್ಯಾಹ್ನ 4:00 ಗಂಟೆಗೆ ಪಿರ್ಯಾದಿದಾರರ ಮನೆಯ ಎದುರು ತೋಡಿನ ಮೇಲ್ಬಾಗದ ದಂಡೆಯ ಮೇಲೆ ಅವರ ಮೃತ ಶರೀರ ದೊರೆತಿರುವುದಾಗಿದೆ. ಮೃತ ಪುರುಷ ನಾಯ್ಕ ರವರು ವಿಪರೀತ ಮದ್ಯಸೇವಿಸುವ ಚಟದವರಾಗಿದ್ದು,  ಅವರು ರಾತ್ರಿ ಊಟ ಮಾಡದೇ  ವಿಪರೀತ ಮದ್ಯ ಕುಡಿದು ತೋಡು ದಾಟಿ ಬರಲು ಅಸಾಧ್ಯವಾಗಿರುವುದರಿಂದ ತೋಡಿನ ದಂಡೆಯ ಮೇಲೆ ಅವರು ಉಟ್ಟುಕೊಂಡ ಲುಂಗಿಯ ಮೇಲೆ ಮಲಗಿದವರು,  ನಿತ್ರಾಣಗೊಂಡು, ಏಳಲಾಗದೇ ಮಲಗಿದಲ್ಲಿಯೇ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕೋಟ: ಕಾವಡಿ ಗ್ರಾಮದ ಸರ್ವೆ ನಂ 48/22ಪಿ1 ,0.25 ಎಕ್ರೆ ವಿಸ್ತೀರ್ಣ ದ ಭೂಮಿಯು ಪಿರ್ಯಾದಿದಾರರಾದ ಅಮೃತಾ ಶೆಟ್ಟಿ (30), ಗಂಡ: ಅಶೋಕ ಶೆಟ್ಟಿ, ವಾಸ:: ಮಾನಂಬಳ್ಳಿ ಹಾಡಿಮನೆ  ಕಾವಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ಚಂದ್ರ ಶೇಖರ ಶೆಟ್ಟಿಯವರ ಹಕ್ಕಿನ ಸ್ಥಿರಾಸ್ತಿಯಾಗಿದ್ದು,  1ನೇ ಆರೋಪಿ ಇಂದಿರಾ ಶೆಟ್ಟಿಯವರಿಗೂ ಮತ್ತು ಪಿರ್ಯಾದಿದಾರರ ತಂದೆ ಯವರಿಗೂ ಆಸ್ತಿಯ ವಿಚಾರದಲ್ಲಿ ತಕರಾರು ಇರುತ್ತದೆ. ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಹೀಗಿರುತ್ತಾ ದಿನಾಂಕ 26/12/2020 ರಂದು ಬೆಳಿಗ್ಗೆ 11:00 ಗಂಟೆಗೆ ಆರೋಪಿಗಳಾದ ಪ್ರದೀಪ, ಭಾಸ್ಕರ ,ತಿಪ್ಪೇಶ್ ರವರು ಪಿರ್ಯದಿದಾರರ ತಂದೆಯ ಹಕ್ಕಿನ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಾಗದಲ್ಲಿರುವ ತೆಂಗಿನ ಕಾಯಿಗಳನ್ನು ಕೊಯ್ಯಲು ಪ್ರಾರಂಭಿಸಿದ್ದು, ಅದಕ್ಕೆ ಪಿರ್ಯಾದಿದಾರರು ಆಕ್ಷೇಪಿಸಿದ್ದಕ್ಕೆ ಆರೋಪಿತರೆಲ್ಲರೂ ಸೇರಿ  ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಇದ್ದ ತೆಂಗಿನ ಮರದ ಮಡಲಿನ ಕೋಲಿನಿಂದ ಹಲ್ಲೆಗೊಳಿಸಲು ಮುಂದಾಗಿರುತ್ತಾರೆ. ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ಹೋದಾಗ ಆರೋಪಿ ಪ್ರದೀಪ ಶೆಟ್ಟಿ ಮತ್ತು ಉಳಿದವರೆಲ್ಲರೂ ಸೇರಿ  ಬೆದರಿಕೆಯನ್ನು ಹಾಕಿರುತ್ತಾರೆ. ಸ್ಥಳದಲ್ಲಿದ್ದ  2000 ತೆಂಗಿನ ಕಾಯಿಗಳನ್ನು ವಾಹನ ನಂಬ್ರ KA-20-D-5734 ರಲ್ಲಿ ಕಳವು ಗೈದು ಸಾಗಿಸಿರುವುದಾಗಿ ನೀಡಿದ ಮಾನ್ಯ ನ್ಯಾಯಾಯಲದ ಖಾಸಗಿ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021  ಕಲಂ: 143,147,148, 447, 504, 506, 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 09-02-2021 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080