ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕುಂದಾಪುರ: ದಿನಾಂಕ 09/02/2021 ರಂದು ಬೆಳಿಗ್ಗೆ 11:30 ಗಂಟೆಗೆ ಕುಂದಾಪುರ ತಾಲೂಕು, ಕಂದಾವರ ಗ್ರಾಮದ ಬಿ,ಹೆಚ್‌‌- ಜಪ್ತಿ ರಸ್ತೆಯ ಪ್ರಭಾಕರ ಶೆಟ್ಟಿಯವರ ಲೇ ಔಟ್‌ ನಲ್ಲಿ ರಸ್ತೆಯಲ್ಲಿ, ಆಪಾದಿತರಾದ ಸಂಗೀತಾ ಎಂಬವರು KA-20-EN-4005ನೇ Honda Active ಮೋಟಾರ್‌ ಸೈಕಲ್‌ ನಲ್ಲಿ ಅವರ ತಂದೆ ವಿಠಲ್‌ ಶೆಟ್ಟಿಯವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಮನೆಯಿರುವ ಕಂದಾವರದಿಂದ ಪ್ರಭಾಕರ ಶೆಟ್ಟಿಯವರ ಲೇ ಔಟ್‌ ಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿಮಾಡಿಕೊಂಡು ಹೋಗಿ, ಲೇ ಔಟ್‌ ನ ಡಾಮಾರು ರಸ್ತೆಯಲ್ಲಿ ಅಡ್ಡವಾಗಿ ಕಟ್ಟಿದ ಹಗ್ಗವನ್ನು ನೋಡಿ ಸಂಗೀತಾರವರು ಒಮ್ಮೆಲೆ ಬ್ರೇಕ್‌ ಹಾಕಿದ ಕಾರಣ ಮೋಟಾರ್‌ ಸೈಕಲ್‌ ಸ್ಕಿಡ್‌ ಆಗಿ ರಸ್ತೆಗೆ ಬೀಳುವಾಗ, ರಸ್ತೆಯಲ್ಲಿ ಅಡ್ಡವಾಗಿ ಕಟ್ಟಿದ ಹಗ್ಗವು ವಿಠಲ್‌ ಶೆಟ್ಟಿಯವರ ಕುತ್ತಿಗೆಗೆ ತಾಗಿ ವಾಹನ ಸಮೇತ ರಸ್ತೆಗೆ ಬಿದ್ದು, ವಿಠಲ್‌ ಶೆಟ್ಟಿಯವರ ಕುತ್ತಿಗೆಗೆ ಹಾಗೂ ತಲೆಗೆ ಒಳಜಖಂ ಉಂಟಾದ ಗಂಭೀರ ಗಾಯವಾಗಿ ನ್ಯೂ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕುಂದಾಪುರ: ದಿನಾಂಕ 09/02/2021 ರಂದು ಬೆಳಿಗ್ಗೆ11:00 ಗಂಟೆಗೆ ಓರ್ವ ವ್ಯಕ್ತಿಯು ಕುಂದಾಪುರ ತಾಲೂಕು ಕಸಬಾ ಗ್ರಾಮದ ಮಾಸ್ತಿಕಟ್ಟೆ ಬಳಿ ಭಗವಾನ್ ಕ್ರಾಸ್ ಬಿಲ್ಡಿಂಗ್ ರಸ್ತೆಯ ಉತ್ತರ ಬದಿಯ ಚರಂಡೆಯ ಕಟ್ಟೆಯ ಬಳಿ ಕುಳಿತುಕೊಂಡಿದ್ದು ಮದ್ಯಾಹ್ನ 02:00 ಗಂಟೆಯ ಸುಮಾರಿಗೆ ವ್ಯಕ್ತಿಯ ಕುಳಿತುಕೊಂಡಿದ್ದಲ್ಲಿಯೇ ಓರಗಿ ಮೃತಪಟ್ಟಿದ್ದು ಆತನ ಜೊತೆಗಿದ್ದ ಪ್ಲಾಸ್ಟಿಕ್ ತೊಟ್ಟೆಯಲ್ಲಿ ದಿನಾಂಕ 08/02/2021ರ ಶಿವಮೊಗ್ಗ ಜಿಲ್ಲೆಯ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡ ಬಗ್ಗೆ ಚೀಟಿ ಇದ್ದು ಅದರಲ್ಲಿ ಜಟ್ಟಯ್ಯ 48 ವರ್ಷ ಎಂಬುದಾಗಿ ಇರುತ್ತದೆ. ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಅಸ್ವಸ್ಥಗೊಂಡು ದಿನಾಂಕ 09/02/2021 ರಂದು ಬೆಳಿಗ್ಗೆ 11:00 ಗಂಟೆಯಿಂದ 14:00 ಗಂಟೆಯ ಮದ್ಯಾವದಿಯಲ್ಲಿ ಆತನು ಕುಳಿತಿದ್ದಲ್ಲಿಯೆ ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 09-02-2021 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ