ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಪ್ರಸನ್ನ (35), ತಂದೆ:ತಿಮ್ಮ ಮರಕಲ, ವಾಸ:ಕಮಲಮ್ಮ ಕಲ್ಯಾಣ ಮಂಟಪಪದ ಬಳಿ ಕೋಟೇಶ್ವರ ಕುಂದಾಪುರ ತಾಲೂಕು ಇವರು  ದಿನಾಂಕ 08/01/2023 ರಂದು  ತನ್ನ ಸ್ಕೂಟಿಯಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಹೋಗಿ ವಾಪಸ್ಸು ಮನೆಗೆ  ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಜೆ  4:00 ಗಂಟೆಗೆ ವಾಪಾಸ್ಸು ಹೋಗುತ್ತಿರುವಾಗ ಮಣೂರು ಗ್ರಾಮದ ಬಾಳೆಬೆಟ್ಟು ಎಂಬಲ್ಲಿ ಒಂದು ಮೋಟಾರ್ ಸೈಕಲ್ ಅತಿ ವೇಗ ಹಾಗೂ ಅಜಾಗೂರಕತೆಯಿಂದ ಸವಾರಿ ಮಾಡಿಕೊಂಡು ಪಿರ್ಯಾದಿದಾರರನ್ನು ಓವರಟೇಕ್ ಮಾಡಿ ಮುಂದೆ ಹೋಗಿ ಬಾಳೆಬೆಟ್ಟು ಗೃಹ ಶಿಲ್ಪ ವೆಲ್ಡಿಂಗ್ ವರ್ಕ ಹತ್ತಿರ ಹತೋಟಿ ತಪ್ಪಿ ಸ್ಕಿಡ್ ಆಗಿ ತಡೆಗೋಡೆಗೆ ತಾಗಿ ಸರ್ವಿಸ್ ರೋಡಿಗೆ ಬಿದ್ದಿರುತ್ತಾನೆ. ಮೋಟಾರ್ ಸೈಕಲ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಿದ್ದಿರುತ್ತದೆ.  ಮೋಟಾರ್ ಸೈಕಲ್ ನಂಬ್ರ KA-23-EV-9619 ಆಗಿದ್ದು ಅದರ ಸವಾರ ಬಾಲಚಂದ್ರ ಎಂಬುದಾಗಿರುತ್ತದೆ. ಅಪಘಾತದಿಂದ ಸವಾರನ ಹೊಟ್ಟೆಗೆ  ರಕ್ತ ಗಾಯವಾಗಿದ್ದು ಹಾಗೂ  ಎಡ  ಕೈ ಮೂಳೆ ಮುರಿತದ ಗಾಯವಾಗಿರುತ್ತದೆ  ನಂತರ ಚಿಕಿತ್ತೆಯ ಬಗ್ಗೆಒಂದು ಅಂಬುಲೆನ್ಸನಲ್ಲಿ  ಕುಂದಾಪು ರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣೆಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.   ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ನವೀನ.ಎಸ್.ಎಮ್‌ (30), ತಂದೆ: ಮಂಜುನಾಥ .ಎಸ್.ಎಮ್‌, ವಾಸ: ಭದ್ರಾ ಕಾಲೋನಿ ಹಗಡಿ ರಸ್ತೆ ದಾವಣಗೆರೆ, ದಾವಣಗೆರೆ ಜಿಲ್ಲೆ ಮತ್ತು ಪವನ್‌.ಎಸ್‌.ಎಮ್‌, ಕಾರ್ತಿಕ್‌, ಹಾಲಸ್ವಾಮಿ, ಕೌಶಿಕ್‌  ,ಹಾಲಸ್ವಾಮಿ.ಎಸ್.ಬಿ, ಕಿರಣ್‌ ಕುಮಾರ, ಮಲ್ಲಿಕಾರ್ಜುನ, ಶಿವಕುಮಾರ, ವಿನಯ.ಎಸ್.ಜೆ, ಸಿದ್ದು.ಬಿ, ಅರುಣ್‌, ಪ್ರವೀಣ ಇವರು ದಿನಾಂಕ 08/01/2023 ರಂದು ಸಂಜೆ 05:00 ಗಂಟೆಗೆ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಸೀತಾನದಿ ಹೊಳೆಯಲ್ಲಿ ಸ್ನಾನ ಮಾಡುವ ಉದ್ದೇಶದಿಂದ ಹೊಳೆಯ ದಡದಲ್ಲಿ ಬಟ್ಟೆಯನ್ನು ತೆಗೆದು ಇಟ್ಟು ಹೊಳೆಯ ನೀರಿನಲ್ಲಿ ಸ್ನಾನ ಮಾಡುತ್ತಿರುವಾಗ  ಪವನ್.ಎಸ್.ಎಮ್‌ (34) ರವರು ಹೊಳೆಯ ನೀರಿನಲ್ಲಿ ಸ್ನಾನ ಮಾಡುತ್ತಾ ಸ್ವಲ್ಪ ಮುಂದೆ ಹೋದಾಗ ಹೊಳೆಯ ನೀರಿನಲ್ಲಿ ಅವರು ಕಾಲು ಜಾರಿ ಬಿದ್ದು ನೀರಿಗೆ ಬಿದ್ದಿರುತ್ತಾರೆ ಅವರನ್ನು  ಹೊಳೆಯಿಂದ ದಡಕ್ಕೆ ಕರೆದುಕೊಂಡು ಬಂದು ಅವರನ್ನು ಉಚರಿಸಿ ಮಾತಾಡಿಸಿ ನೋಡಿದಾಗ ಅವರು ಮಾತಾಡುತ್ತಿರಲಿಲ್ಲ  ಅವರನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸಂಜೆ 06:50 ಗಂಟೆಗೆ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪವನ್.ಎಸ್.ಎಮ್‌ ರವರನ್ನು ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 02/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .

 

ಇತ್ತೀಚಿನ ನವೀಕರಣ​ : 09-01-2023 12:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080