ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಬ್ರಹ್ಮಾವರ : ದಿನಾಂಕ 07/01/2022 ರಂದು ಪಿರ್ಯಾದಿದಾರರಾದ ಸುರೇಶ್ ಶೆಟ್ಟಿ (46), ತಂದೆ: ಭೋಜ ಶೆಟ್ಟಿ, ವಾಸ: ಹಾರಾಡಿ ಮರ್ಬಿನ ಮನೆ, ಹಾರಾಡಿ ಗ್ರಾಮ, ಅಂಚೆ ಸಾಲಿಕೇರಿ, ಬ್ರಹ್ಮಾವರ ತಾಲೂಕು ರವರು ಮಗಳು ನವ್ಯಳನ್ನು ಬ್ರಹ್ಮಾವರ ಬೋರ್ಡ್‌ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ತನ್ನ KA-20-EG-2441 ನೇ TVS JUPITER ಸ್ಕೂಟರ್‌ನಲ್ಲಿ ಸಹಸವಾರಿಣಿ ಯನ್ನಾಗಿ ಕುರಿಸಿಕೊಂಡು ಬ್ರಹ್ಮಾವರ ಮಾರ್ಕೆಟ್ ರಸ್ತೆ ಮಾರ್ಗವಾಗಿ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಆಕಾಶವಾಣಿ ಸರ್ಕಲ್ ಬಳಿ ರಾಹೆ 66 ನ್ನು ದಾಟಲು ಮಧ್ಯಾಹ್ನ 4:15 ಗಂಟೆಗೆ ಸ್ಕೂಟರ್‌ನ್ನು ನಿಲ್ಲಿಸಿಕೊಂಡಿದ್ದಾಗ, ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ರಾ.ಹೆ 66 ರಲ್ಲಿ ಅಪರಿಚಿತ ಮೋಟಾರ್ ಸೈಕಲ್‌ ಸವಾರ ತನ್ನ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರ ಎಡ ಭಾಗಕ್ಕೆ ಬಂದು ರಸ್ತೆ ದಾಟಲು ನಿಲ್ಲಿಸಿದ್ದ ಪಿರ್ಯಾದಿದಾರರ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್‌ನ್ನುನಿಲ್ಲಿಸದೇ ಹೋಗಿರುತ್ತಾನೆ. ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗಳು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲು ಸ್ಕೂಟರ್‌ನ ಅಡಿಗೆ ಸಿಲುಕಿ ಮೊಣಗಂಟು ಸಂಪೂರ್ಣ ಜಖಂ ಗೊಂಡು ಮೂಳೆ ಮುರಿತವುಂಟಾಗಿ ರಕ್ತ ಗಾಯವಾಗಿದ್ದು, ಎದೆಗೆ ಒಳನೋವು ಉಂಟಾಗಿರುತ್ತದೆ. ಅವರ ಮಗಳು ನವ್ಯಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಲ್ಲದೇ ಸ್ಕೂಟರ್‌ನ ಬಲಗಡೆಯ ಎಂಜಿನ್‌ ಬಳಿ ಹಾಗೂ ಸೈಲೆನ್ಸರ್ ಜಖಂಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ: 279, 338 ಐಪಿಸಿ ಮತ್ತು ಸೆಕ್ಷನ್‌134(ಎ)(ಬಿ) ಜೊತೆಗೆ 187 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕುಂದಾಪುರ: ಪಿರ್ಯಾದಿದಾರರಾದ ಕೆ ಎಂ ಅಬ್ದುಲ್ ರೆಹಮಾನ್ (66), ತಂದೆ: ಹಾಜಿ ಕೆ ಮೊಯಿದ್ದೀನ್ ಬ್ಯಾರಿ , ವಾಸ:ಹಾಜಿ ಕೆ ಮೊಯಿದ್ದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್, ಕೋಡಿ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಬ್ಯಾರಿ ಎಜುಕೇಶನ್ ಟ್ರಸ್ಟ್‌ ಕೋಡಿ ಕುಂದಾಪುರ ಇದರ ಅಧ್ಯಕ್ಷರಾಗಿರುವುದಾಗಿದೆ. ದಿನಾಂಕ: 04/01/2022 ರಂದು ರಾತ್ರಿ 10:30 ಗಂಟೆಗೆ ಆಪಾದಿತರಾದ 1) ಅಶ್ಪಾಕ್ ,ತಂದೆ: ಕೋಟೆ ಮಹಮ್ಮದ್ ಸಾಹೇಬ್ ,2) ರವೂಫ್ ತಂದೆ: ಕೋಟೆ ಮಹಮ್ಮದ್ ಮೋನು ,3) ಲತೀಫ್ ,ತಂದೆ: ಕೋಟೆ ಮಹಮ್ಮದ್ ಮೋನು ಹಾಗೂ ಇತರರು ಸುಮಾರು 100 ಜನ ಯುವಕರೊಂದಿಗೆ ಸೇರಿಕೊಂಡು ಕೋಡಿ ಬ್ಯಾರೀಸ್ ವಿದ್ಯಾ ಸಂಸ್ಥೆಯ ಪ್ರವೇಶ ದ್ವಾರದ ಬಳಿ ಬಂದು ದಂಗೆ ನಡೆಸಿದ್ದು ಅನುಚಿತವಾಗಿ ವರ್ತಿಸುತ್ತಿದ್ದು ವಿದ್ಯಾಸಂಸ್ಥೆಯ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಬ್ಯಾರಿಯವರು ಬಂದು ಆಪಾದಿತರೊಂದಿಗೆ ಮಾತನಾಡಿದಾಗ ಆಪಾದಿತರು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಸಂಸ್ಥೆಯ ಕಂಪೌಂಡ್ ಗೋಡೆಯನ್ನು ಕೆಡವಿ ಸಂಸ್ಥೆಗೆ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2022 ಕಲಂ: 143,147,427,504,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ಫಿರ್ಯಾದಿದಾರರಾದ ಗುರುಪ್ರಸಾದ್, ಪರಿಸರ ಅಭಿಯಂತರರು, ಕುಂದಾಪುರ ಪುರಸಭೆ ಇವರು ಕುಂದಾಪುರ ಪುರಸಭೆಯಲ್ಲಿ ಪರಿಸರ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು , ದಿನಾಂಕ: 08/01/2022 ರಂದು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ವೀಕ್ಷಣೆಯ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 10:30 ಗಂಟೆಗೆ ಕುಂದಾಪುರ ಪೇಟೆಯ ಪುರಸಭೆ ಮುಖ್ಯ ರಸ್ತೆಯ ಹಳೆ ಬಸ್ ನಿಲ್ದಾಣದ ಬಳಿ ಇರುವ AS Trade Centre ಕಟ್ಟಡದ ಕೆಳ ಅಂತಸ್ತಿನಲ್ಲಿರುವ MY OWN GARMENTS ಎಂಬ ಬಟ್ಟೆ ಅಂಗಡಿಯನ್ನು ತೆರೆದು ಮಾರಾಟ ವಹಿವಾಟು ನಡೆಸುತ್ತಿರುವುದು ಕಂಡುಬಂದಿರುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ : 05/01/2022 ರಿಂದ 19/01/2022ರ ತನಕ ಕೆಲವೊಂದು ಸಾರ್ವಜನಿಕ ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿರುವ, ಆದೇಶದನ್ವಯ ಈ ಅವಧಿಯಲ್ಲಿ ಬಟ್ಟೆ ಮಾರಾಟದ ಅಂಗಡಿಯನ್ನು ತೆರೆಯುವುದನ್ನು ನಿರ್ಬಂಧಿಸಲಾಗಿದೆ. ಆದರೂ ಅಂಗಡಿಯ ಮಾಲಕರಾದ ಅಬ್ದುಲ್ ಫತಾ ಹಸನ್ ಪ್ರಾಯ: 38 ವರ್ಷ, ತಂದೆ: ತಾಹಿರ್ ಹಸನ್ ವಾಸ: ಗಂಗೊಳ್ಳಿ ಕುಂದಾಪುರ ತಾಲೂಕು ಇವರು ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ MY OWN GARMENTS ಎಂಬ ಬಟ್ಟೆ ಅಂಗಡಿಯನ್ನು ತೆರೆದು ಬಟ್ಟೆ ಮಾರಾಟ ವಹಿವಾಟು ನಡೆಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ 269 IPC ಮತ್ತು ಕಲಂ: 5(1)(4) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆಕ್ಟ್ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ರಾಕೇಶ್ ( 39) ,ತಂದೆ: ವಿಠಲ ಶೆಟ್ಟಿ, ವಾಸ; ಲಕ್ಷ್ಮಿ ಶೆಟ್ಟಿ, ದರ್ಖಾಸು ಮನೆ, ಎಣ್ಣೆ ಹೊಳೆ ಅಂಚೆ, ಕಾರ್ಕಳ ತಾಲೂಕು ಇವರು ಸಂತೋಷ್ ಆಚಾರಿ, ಸಂತೋಷ್ ಶೆಟ್ಟಿ, ನಾಗೇಶ್ ಪೂಜಾರಿ, ರವಿ ಪೂಜಾರಿ ,ರಾಘುವ ಪೂಜಾರಿ ಇವರೊಂದಿಗೆ ಎಣ್ಣೆ ಹೊಳೆಯ ನಿವಾಸಿ ಮಹೇಶ್ ಪೂಜಾರಿ ರವರೊಂದಿಗೆ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು. ನಾಡ್ಪಾಲು ಗ್ರಾಮದ ಸೊಮೇಶ್ವರ ಎಂಬಲ್ಲಿ ದೈವದ ಗುಡಿಯ ಸೆಂಟ್ರಿಂಗ್ ಕೆಲಸವನ್ನು ಮಹೇಶ್ ಪೂಜಾರಿ ಇವರು ವಹಿಸಿಕೊಂಡಿದ್ದು ದೈವದ ಗುಡಿಯನ್ನು ಸ್ಥಳೀಯರಾದ ವಿ.ಆರ್.ಪೈ ಇವರು ತನ್ನ ಕುಟುಂಬ ವತಿಯಿಂದ ಮಾಡಿಸುವುದಾಗಿದೆ. ದಿನಾಂಕ: 08/01/2022 ರಂದು ಮಹೇಶ್ ಪೂಜಾರಿ ರವರು ತಿಳಿಸಿದಂತೆ ನಾವು ನಾಡ್ಪಾಲು ಗ್ರಾಮದ ಸೋಮೇಶ್ವರಕ್ಕೆ ಬಂದು ಅಲ್ಲಿ ಸ್ಲಾಪ್ ಗೆ ಹಾಕಿರುವ ಸೆಂಟ್ರಿಂಗ್ ನ ಕಬ್ಬಿಣದ ಗುಜಿಯನ್ನು ತೆಗೆಯುತ್ತಿದ್ದು. ಬೆಳಿಗ್ಗೆ 11:30 ಗಂಟೆಗೆ ರವಿ ಪೂಜಾರಿ ಇವರು ದೈವದ ಗುಡಿಯ ಎಡಬದಿಯ ಹಿಂದಿನ ಕಬ್ಬಿಣದ ಗುಜಿಯನ್ನು ತೆಗೆಯಲು ಕಳಗೆ ನಿಂತು ಕೈಯಿಂದ ಹಿಡಿದು ರಭಸವಾಗಿ ಎಳೆದಾಗ ಕಬ್ಬಿಣದ ಗುಜಿಯು ಅವರ ನಿಯಂತ್ರಣ ತಪ್ಪಿ ಒಮ್ಮೆಲೇ ವಾಲಿಕೊಂಡು ದೈವದ ಗುಡಿಯ ಬದಿಯಲ್ಲಿರುವ 11 ಕೆ.ವಿ ಟ್ರಾನ್ಸ್ ಪಾರಂ ಗೆ ತಾಗಿದ ಪರಿಣಾಮ ಅದರಲ್ಲಿದ್ದ ವಿದ್ಯುತ್ ಕಬ್ಬಿಣದ ಗುಜಿಯ ಮೂಲಕ ರವಿ ಪೂಜಾರಿ ರವರ ಮೈ ಮೇಲೆ ಹರಿದು ಅವರು ಸ್ಥಳದಲ್ಲಿಯೇ ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಮದ್ಯಾಹ್ನ 12-15 ಗಂಟೆಗೆ ಹೆಬ್ರಿ ರಾಘುವೇಂದ್ರ ಅಸ್ಪತ್ರೆಗೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ರವಿ ಪೂಜಾರಿ ( 38) ರವರು ದಾರಿ ಮದ್ಯೆ ಮೃತ ಪಟ್ಟಿರುವ ವಿಚಾರ ವನ್ನು ತಿಳಿಸಿರುತ್ತಾರೆ. ಈ ಘಟನೆಯು ದೈವದ ಗುಡಿಯ ಕೆಲಸ ಮಾಡಿಸುವ ವಿ.ಆರ್.ಪೈ ಮತ್ತು ಸೆಂಟ್ರಿಂಗ್ ಕೆಲಸ ಮಾಡಿಸುವ ಮಹೇಶ್ ಪೂಜಾರಿ ಇವರುಗಳು ಕೆಲಸಗಾರರ ಸುರಕ್ಷತೆಯ ಬಗ್ಗೆ ಯಾವುದೇ ಮುಂಜಾಗತ್ರಾ ಕ್ರಮವನ್ನು ತೆಗೆದು ಕೊಳ್ಳದೇ ಕೆಲಸಗಾರರ ಮೇಲೆ ತೀರಾ ನಿರ್ಲಕ್ಷತನ ತೋರಿರುವುದರಿಂದ ಈ ಘಟನೆ ನಡೆದಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ: 304(A) ಐಪಿಸಿ ಮತ್ತು ಕಲಂ 19(1),19(2) ಕೆಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ ನಿಯಮಾವಳಿ 2010 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ದಿನಾಂಕ 25/12/2021 ರಂದು ಸದಾಶಿವ ಆರ್‌ ಗವರೋಜಿ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ ಬಸ್ರೂರು ಮೂರು ಕೈ ಬಳಿ ಇರುವ ಬಸ್ಸು ತಂಗುದಾಣದ ಸಮೀಪ ಇಬ್ಬರು ವ್ಯಕ್ತಿಗಳು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಹೋದಾಗ ಅಲ್ಲಿ ಇಬ್ಬರು ವ್ಯಕ್ತಿಗಳು ಬಸ್ರೂರು ಕಡೆಗೆ ಹೋಗುವ ರಸ್ತೆಯ ಉತ್ತರ ಬದಿಯ ಲ್ಲಿರುವ ಬಸ್ಸು ತಂಗುದಾಣದ ಸಮೀಪ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಅವರನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ 1) ಕಾರ್ತಿಕ್ ವಿ, ಪ್ರಾಯ: 24 ವರ್ಷ, ತಂದೆ: ವೆಂಕಟೇಶ ಶೆಟ್ಟಿಗಾರ್, ವಾಸ: 100/1, ವೇಣುಗೋಪಾಲಕೃಷ್ಣ ದೇವಸ್ಥಾನದ ಬಳಿ, ಬಡಾಕೆರೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ,2) ಆದಿತ್ಯ, (21) ವರ್ಷ, ತಂದೆ: ಚಂದ್ರ, ವಾಸ: ಮಾಣಿಸಿದ್ದಲಿಂಗೇಶ್ವರ ದೇವಸ್ಥಾನ ಹತ್ತಿರ, ಮೊವಾಡಿ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದುಕೊಂಡು ಗಾಂಜಾ ದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು, ಅವರಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಪ್ರೊಫೆಸರ್ & ಹೆಡ್, ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಂ.ಸಿ. ಮಣಿಪಾಲರವರ ಮುಂದೆ ಹಾಜರುಪಡಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಗಾಂಜಾ ಸೇವಿಸಿರುವ ಬಗ್ಗೆ ದೃಢಪಟ್ಟಿರುವುದಾಗಿ ವರದಿಯನ್ನು ನೀಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ : ಪಿರ್ಯಾದಿದಾರರಾದ ಕ್ಲೊಟಿಲ್ಡಾ ಡಿ’ಕೊಸ್ತಾ (68), ಗಂಡ: ದಿ. ರೈಮಂಡ್‌ಡಿ’ಕೊಸ್ತಾ, ವಾಸ: ಮನೆ ನಂಬ್ರ: 2-1-62, ಅವೆ ಮರಿಯಾ, ಕಲ್ಸಂಕ ಗುಂಡಿಬೈಲು, ಉಡುಪಿ ತಾಲೂಕು ಇವರು ತಮ್ಮ ಮಕ್ಕಳೊಂದಿಗೆ ದುಬೈನಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 13/12/2021 ರಂದು ಊರಿಗೆ ಬಂದಿರುತ್ತಾರೆ. ದಿನಾಂಕ 02/12/2021 ರಂದು ಮೇಸೆಂಜರ್‌ ಆ್ಯಪ್‌ಮುಖೇನ ಫಿಲಿಪ್‌ಜೇಮ್ಸ್‌ ಎಂಬಾತನ ಪರಿಚಯವಾಗಿದ್ದು, ಆತನು ಮೆಸೇಜ್‌ಮತ್ತು ವಾಟ್ಸಪ್ ಕರೆ ಮಾಡಿ ಮಾತನಾಡುತ್ತಿದ್ದು, ತಾನು ರೊಮಾನಿಯ ದೇಶದವನಾಗಿದ್ದು, ಯು.ಕೆ ದೇಶದಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾನೆ. ದಿನಾಂಕ 20/12/2021 ರಂದು ಆಪಾದಿತ ಫಿಲಿಪ್‌ನು ತಾನು ದೆಹಲಿ ಏರ್‌ಪೋರ್ಟ್‌ನಲ್ಲಿದ್ದು, ತನ್ನನ್ನು ಕಸ್ಟಮ್‌ನವರು ಹಿಡಿದಿಟ್ಟಿದ್ದು, ಡಾಲರ್‌ನ್ನು ಇಂಡಿಯನ್‌ಕರೆನ್ಸಿಗೆ ಬದಲಾಯಿಸಲು ಆಗುವುದಿಲ್ಲ ಎಂದು ಪಿರ್ಯಾದಿದಾರರನ್ನು ನಂಬಿಸಿ, ಮೋಸದಿಂದ ಹಂತಹಂತವಾಗಿ ಒಟ್ಟು ರೂಪಾಯಿ. 13,70,042/- ಹಣವನ್ನು Lemring Hungyo ರವರ ಕೆನರಾ ಬ್ಯಾಂಕ್‌ ಖಾತೆಗೆ ಮತ್ತು Hijam Thaja Manbi Devi ರವರ ಯುಕೊ ಬ್ಯಾಂಕ್‌ ಖಾತೆ ಗೆ  ಹಾಕಿಸಿಕೊಂಡು ಯಾವುದೇ ಕರೆಗಳನ್ನು ಸ್ವೀಕರಿಸದೇ ಪಿರ್ಯಾದಿದಾರರಿಗೆ ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2022, ಕಲಂ: 406, 417, 420 ತೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 09-01-2022 09:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080