ಅಭಿಪ್ರಾಯ / ಸಲಹೆಗಳು

ಗಂಡಸು ಕಾಣೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಫುಲ್‌‌‌ದೇವ್ ಓರಾನ್, ಪ್ರಾಯ: 45 ವರ್ಷ, ತಂದೆ: ಲೆತಂಗಾ ಓರಾನ್, ವಾಸ: ಕುಮ್ಹಾರಿಯಾ, ಆಕಾಶಿ ಭಾಂದ್ರಾ, ಲೋಹಾರ್‌‌ದಾಗ್‌ಜಿಲ್ಲೆ, ಜಾರ್ಖಂಡ್ ರಾಜ್ಯ. 835325. ಹಾಲಿ ವಾಸ: ಸೋನ್ಸ್‌ನರ್ಸರಿ, ಎನ್.ಹೆಚ್-66, ಉಚ್ಚಿಲ, ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ.ಇವರು ಜಾಖಂಡ್ ರಾಜ್ಯ ಮೂಲದವರಾಗಿದ್ದು, ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ-66 ರ ಬಳಿ ಇರುವ ಸೋನ್ಸ್ ನರ್ಸರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ನರ್ಸರಿಯಲ್ಲಿನ  ಕೆಲಸಕ್ಕೆಂದು ಜಾಖಂಡ್ ರಾಜ್ಯದ ಅವರ ಪರಿಚಯದ ನೀರಜ್ ಕುಮಾರ್ ರಜಕ್(37) ಎಂಬುವರನ್ನು ದಿನಾಂಕ: 05.12.2022 ರಂದು ಉಚ್ಚಿಲಕ್ಕೆ ಕರೆದುಕೊಂಡು ಬಂದು ಅಲ್ಲಿನ ರೂಮಿನಲ್ಲಿ ಉಳಕೊಂಡಿದ್ದು, ನೀರಜ್ ಕುಮಾರ್ ರಜಕ್‌‌ನು ದಿನಾಂಕ: 06.12.2022 ರಂದು ಬೆಳಿಗ್ಗೆ 11:00 ಗಂಟೆಗೆ ರೂಮಿನಿಂದ ಹೊರಗಡೆ ಹೋದವನು, 12:30 ಗಂಟೆಗೆ ವಾಪಾಸ್ಸು ಬಂದವನು ಮಾನಸಿಕನಂತೆ ವರ್ತಿಸುತ್ತಿದ್ದು, ನಂತರ 15:30 ಗಂಟೆಯ ವೇಳೆಗೆ ರೂಮಿನಲ್ಲಿ ಪಿರ್ಯಾದಿದಾರರನ್ನು ದೂಡಿ ಹಾಡಿ ಕಡೆಗೆ ಹೋಗಿ ಅಲ್ಲಯೇ ಮೊಬೈಲನ್ನು ಬಿಸಾಡಿ ಓಡಿ ಹೋದವನು ವಾಪಾಸ್ಸು ರೂಮಿಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ 155/2022, ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 07/12/2022  ರಂದು  ಮಧ್ಯಾಹ್ನ ಸುಮಾರು 12:30  ಗಂಟೆಗೆ, ಕುಂದಾಪುರ ತಾಲೂಕಿನ, ಕೊಟೇಶ್ವರ   ಗ್ರಾಮದ ಕ್ರೌನ್‌‌ಟೌನ್‌‌ಮಾಲ್‌‌ಬಳಿ,  NH 66   ರಸ್ತೆಯಲ್ಲಿ, ಆಪಾದಿತ  ಅಬಿಲಾಷ್‌ ಎಂಬವರು, KA04-JT-3878ನೇ ಬೈಕನ್ನು ಕುಂದಾಪುರ  ಕಡೆಯಿಂದ  ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು,  ರಸ್ತೆ ದಾಟುತ್ತಿದ್ದ ಪಿರ್ಯಾದಿ ಶ್ರೀಮತಿ ಯಶೋಧ ಪ್ರಾಯ 60 ವರ್ಷ ಗಂಡ: ಸಾದು ಕುರುವನ್‌ವಾಸ: ಮೂಡು ಗೋಪಾಡಿ, ಗೋಪಾಡಿ ಗ್ರಾಮ ,ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಣ್ಣಿನ ಹತ್ತಿರ, ಎಡಕಾಲಿನ ಮುಂಗಾಲು ಗಂಟಿಗೆ,  ಎಡ ಹಾಗೂ ಬಲ ಕೈಗೆ  ಒಳನೋವಾದ ಗಾಯವಾಗಿದ್ದು, ಮೈ ಕೈಗೆ ತರಚಿದ ಗಾಯವಾಗಿ  ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 132/2022   ಕಲಂ 279, 337  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ: ಪಿರ್ಯಾದಿ ರೋಷನ್ ಆಚಾರ್ಯ, ಪ್ರಾಯ: 33 ವರ್ಷ, ತಂದೆ: ಸತೀಶ್ ಆಚಾರ್ಯ, ವಾಸ: ಶ್ರೀ ಶ್ರೀನಿವಾಸ ನಿವಾಸ, ಹಿರೇಬೆಟ್ಟು, ಪಡುಬಿದ್ರಿ, ಕಾಪು ತಾಲೂಕು, ಇವರ ಅಣ್ಣ ರಂಜಿತ್ ಆಚಾರ್ಯ(34) ಎಂಬುವರು ಪಿರ್ಯಾದಿದಾರರ  KA-20-EV-7275 ನೇ ನಂಬ್ರದ ಸ್ಕೂಟಿಯಲ್ಲಿ ಅವರ ಪತ್ನಿ ವಿನುತಾ(31) ರವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಕೆಲಸದ ನಿಮಿತ್ತ ಮಂಗಳೂರು ಬೈಕಂಪಾಡಿಯಲ್ಲಿನ ESI ಆಫೀಸಿಗೆ ಹೋಗಿ, ವಾಪಾಸ್ಸು ನಂದಿಕೂರಿನಲ್ಲಿರುವ ಬಾಡಿಗೆಯ ಮನೆಗೆಂದು ಪಡುಬಿದ್ರಿಯಿಂದ ಕಾರ್ಕಳ ಕಡೆಗೆ ಸಾಗುವ ರಾಜ್ಯ ಹೆದ್ದಾರಿ-01 ರಲ್ಲಿ ಹೋಗುತ್ತಾ, ಸಮಯ, ಸುಮಾರು 12:00 ಗಂಟೆಗೆ ಕಾಪು ತಾಲೂಕು ಪಾದೆಬೆಟ್ಟು ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ತಲುಪುತ್ತಿದ್ದಂತೆ, ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಅಣ್ಣ ಚಲಾಯಿಸುತ್ತಿದ್ದ ಸ್ಕೂಟಿಯ ಎದುರು ಹೋಗುತ್ತಿದ್ದ, KA-20-MC-6863 ನೇ ನಂಬ್ರದ ಕಾರು ಚಾಲಕಿ ಅರ್ಚನ ಎಂಬುವರು ಅವರ ಬಾಬ್ತು ಕಾರನ್ನು ಯಾವುದೇ ಸೂಚನೆ ನೀಡದೇ ಒಮ್ಮೆಲೇ ನಿರ್ಲಕ್ಷತನದಿಂದ ಬಲಕ್ಕೆ ತಿರುಗಿಸಿದ್ದರಿಂದ  ಕಾರಿನ ಬಲಬದಿಯ ಡೋರ್ ಸ್ಕೂಟರಿಗೆ ಡಿಕ್ಕಿ ಹೊಡೆದು, ಸ್ಕೂಟಿಯ ಸವಾರ ಹಾಗೂ ಸಹ ಸವಾರರಿಬ್ಬರೂ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಸದ್ರಿ ಅಪಘಾತದಿಂದ ಸ್ಕೂಟಿ ಸವಾರ ರಂಜಿತ್ ಆಚಾರ್ಯ ರವರ ಎಡಕೈ ಭುಜದ ಮೂಳೆ ಮುರಿತ ಹಾಗೂ ಸಹ ಸವಾರೆ ವಿನುತಾ ರವರ ಬಾಯಿ ಹಾಗೂ ಮೂಗಿಗೆ ಸಾಧಾರಣ ಸ್ವರೂಪದ ಗಾಯಗಳಾಗಿರುತ್ತವೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 156/2022 ಕಲಂ 279,  337, 338  ಐಪಿಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಪಿರ್ಯಾದಿ : ಜಗದೀಶ ತೆಂಡುಲ್ಕ ರ್ (50) ತಂದೆ; ಕೃಷ್ಣ ತೆಂಡುಲ್ಕರ್. ವಸುಧ, ರಂಗನಪಲ್ಕೆ, ಕೌಡೂರುಗ್ರಾಮ ಇವರು ದಿನಾಂಕ: 7.12.2022 ರಂದು ಪಳ್ಳಿ ಕಡೆಯಿಂದ ಬೈಲೂರು ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಮದ್ಯಾಹ್ನ ಸಮಯ ಸುಮಾರು 2.45 ಗಂಟೆಗೆ ಕೌಡೂರು ಗ್ರಾಮದ ಹೇರಟ್ಟ ಎಂಬಲ್ಲಿ ತಲುಪುವಾಗ ತನ್ನ ಎದುರುಗಡೆಯಿಂದ  TVS ಕಂಪೆನಿಯ XL 100 ಮಾದರಿ KA 20 ES 8525 ನೇ ನಂಬ್ರದ ದ್ವಿಚಕ್ರ ವಾಹನವನ್ನು ಅದರ ಸವಾರ ದತ್ತ ಸಾಲಿನ್ಸ್‌ಎಂಬವರು ಹೆಲ್ಮೆಟ್ ಧರಿಸದೇ ಪಳ್ಳಿ ಕಡೆಯಿಂದ ಬೈಲೂರು ಕಡೆಗೆ ಅತೀವೇಗವಾಗಿ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಬಂದು, ಬೈಲೂರು ಕಡೆಯಿಂದ ಪಳ್ಳಿ ಕಡೆಗೆ ಸಹ ಸವಾರಳಾದ ಶಾಲಿನಿ ಎಂಬವರನ್ನು ಕುಳ್ಳಿರಿಸಿಕೊಂಡು ಉದಯ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20 EY 0007 ನೇ ನಂಬ್ರದ  ದ್ವಿಚಕ್ರ ವಾಹನಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ದತ್ತಸಾಲಿನ್ಸ್‌ರವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ, ಉದಯ ರವರಿಗೆ ಬಲ ಮೊಣಕೈಗೆ ತರಚಿದ ರಕ್ತಗಾಯವಾಗಿದ್ದು, ಪಿರ್ಯದಿದಾರರು ಗಾಯಗೊಂಡ ಇಬ್ಬರನ್ನು ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಅಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 146/2022 ಕಲಂ  279, 337, 338 ಐಪಿಸಿ.  ಯಂತೆ ಪ್ರಕರಣ ದಾಖಲಿಸಲಾಗಿದೆ.

ಹೆಂಗಸು ಕಾಣೆ ಪ್ರಕರಣ

  • ಹಿರಿಯಡ್ಕ:  ಅಂಜಾರು ಗ್ರಾಮ, ಕಾಜರಗುತ್ತು, 5 ಸೆಂಟ್ಸ್  ಎಂಬಲ್ಲಿನ ನಿವಾಸಿಯಾದ  ಸಂತೋಷ ಪೂಜಾರಿರವರ  ಪತ್ನಿ ಸ್ವಾತಿ   ಪೂಜಾರಿ, ಪ್ರಾಯ :32 ವರ್ಷರವರು ಓಂತಿಬೆಟ್ಟು ಬಾಲಾಜಿ ತೆಂಗಿನೆಣ್ಣೆ  ಪ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 06-12-2022 ರಂದು ಬೆಳಗ್ಗೆ 09:00 ಗಂಟೆಗೆ ಸಮಯಕ್ಕೆ ಕೆಲಸಕ್ಕೆ  ಹೋಗುವುದಾಗಿ ತನ್ನ ತಾಯಿಯ ಬಳಿ ಹೇಳಿ ಹೋದವರು ಕೆಲಸಕ್ಕೆ ಹೋಗದೇ / ಮನೆಗೂ  ಬಾರದೇ   ಕಾಣೆಯಾಗಿರುತ್ತಾರೆ. ಈ ಬಗ್ಗೆ  ಸಂತೋಷ ಪೂಜಾರಿ, ಪ್ರಾಯ :42 ವರ್ಷ, ತಂದೆ: ಮುದ್ದು ಪೂಜಾರಿ  ವಿಳಾಸ : ಅಂಜಾರು ಗ್ರಾಮ ಇವರು ಠಾಣೆಗೆ ದರು ನೀಡಿದ್ದು ಹಿರಿಯಡ್ಕ ಪೊಲೀಸ್‌ಠಾಣೆ. ಅಪರಾಧ ಕ್ರಮಾಂಕ 83/22    ಕಲಂ: ಹೆಂಗಸು  ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿ ಅಶೋಕ, (30) ತಂದೆ: ಚುಕುಡ, ವಾಸ: ಮೇಲ್ಜಡ್ಡು, ದರ್ಖಾಸು, ಕುಕ್ಕುಂದೂರು ಅಂಚೆ ಮತ್ತು ಗ್ರಾಮ ಇವರ ತಂದೆ ಚುಕುಡ, ಪ್ರಾಯ:65 ವರ್ಷ ರವರು ದಿನಂಪ್ರತಿ ಸಾಯಂಕಾಲ ಸುಮಾರು 4:30 ಗಂಟೆಗೆ ತೋಟಕ್ಕೆ ಬಾವಿಯಿಂದ ನೀರು ತೆಗೆದು ಹಾಕುವರೇ ಅದೇ ರೀತಿ  ದಿನಾಂಕ: 06.12.2022 ರಂದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಮೇಲ್ಜಡ್ಡು ದರ್ಖಾಸು ಎಂಬಲ್ಲಿ ಪಿರ್ಯಾದಿದಾರರ ಮನೆಯ ತೋಟದ ಬಳಿ ಸಮಯ ಸಾಯಂಕಾಲ ಸುಮಾರು 4:30 ಗಂಟೆಯಿಂದ 5:10 ಗಂಟೆಯ ಮದ್ಯಾವಧಿಯಲ್ಲಿ ಚುಕುಡರವರು ಮನೆಯಿಂದ ಹೊರಟು ತೋಟದಲ್ಲಿರುವ ಬಾವಿಗೆ ಇರುವ ಮೆಟ್ಟಿಲಿನಿಂದ ಇಳಿದು ಕೊಡಪಾನದಲ್ಲಿ ತೋಟದಲ್ಲಿರುವ ಗಿಡಗಳಿಗೆ ನೀರು ಹಾಕುವರೇ, ನೀರು ತರುವಾಗ ಆಕಸ್ಮಿಕವಾಗಿ ಮೆಟ್ಟಲಿನಿಂದ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 52/2022 ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 08-12-2022 10:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080