ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ: ಚಂದ್ರ ಪೂಜಾರಿ (46), ತಂದೆ: ಕುಶಲ ಪೂಜಾರಿ, ವಾಸ: ಚಿತ್ತಾರಿ ಮಹಾಬಲೇಶ್ವರ ನಿಲಯ, ಕೇದಗೆ ಜೆಡ್ಡು, ಉಪ್ಪೂರು ಗ್ರಾಮ, ಇವರು :  ದಿನಾಂಕ 08.12.2022 ರಂದು ಉಪ್ಪೂರು ಗ್ರಾಮದ  ಪ್ರದೀಪ ಮಧ್ಯಸ್ಥರ ಜನರಲ್  ಸ್ಟೋರ್ಸ್‌ ನಿಂದ ಸಾಮಾನುಗಳನ್ನು ಖರೀದಿ ಮಾಡಿ ಹೊರಡುವಾಗ ಮಧ್ಯಾಹ್ನ 12:55 ಗಂಟೆ ಸುಮಾರಿಗೆ ಅವರ ಪರಿಚಯದ ನಾರಾಯಣ ಪೂಜಾರಿ ( 65 ವರ್ಷ) ಎಂಬವರು ಸದ್ರಿ ಅಂಗಡಿಯ ಕಡೆಯಿಂದ ಜಾತಬೆಟ್ಟು ಕಡೆಗೆ ಹೋಗಲು ಉಡುಪಿ – ಕುಂದಾಪುರ ರಾಹೆ 66 ರನ್ನು ದಾಟಿ ಡಿವೈಡರ್‌ ಹತ್ತಿ ಅಲ್ಲಿಂದ ಕುಂದಾಪುರ – ಉಡುಪಿ ರಾಹೆ 66 ರ ತಾರು ರಸ್ತೆಯನ್ನು ದಾಟುವಾಗ, ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಆರೋಪಿ ಸುಬ್ರಮಣಿ ಎನ್‌ ರವರು ಅವರ  KA.11.B.0018 ನೇ ನಂಬ್ರದ ಶ್ರೀ ಧರ್ಮಸ್ಥಳ ಶಾಲಾ ಮಕ್ಕಳ ಟೂರಿಸ್ಟ್‌ ಬಸ್ಸ್‌ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಾರಾಯಣ ಪೂಜಾರಿ ಯವರಿಗೆ ಡಿಕ್ಕಿ ಹೊಡೆದಿರುವುದಾಗಿದೆ.  ಈ ಅಪಘಾತದ ಪರಿಣಾಮ ನಾರಾಯಣ ಪೂಜಾರಿಯವರು ರಸ್ತೆಯ ಮೇಲೆ ಬಿದ್ದಿದ್ದು, ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದರಿಂದ ತೀವ್ರ  ರಕ್ತಸ್ರಾವವಾಗಿ ಸ್ಥಳದಲ್ಲೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  209/2022 ಕಲಂ : 279, 304(A) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಉಡುಪಿ ನಗರ: ಪಿರ್ಯಾದಿ ಗುರುಪ್ರಸಾದ್‌ ಪ್ರಾಯ: 27 ವರ್ಷ ತಂದೆ: ಬೊಗ್ಗು ವಿಳಾಸ: ಶಿವಾನುಗ್ರಹ, ಬೊಮ್ಮರಬೆಟ್ಟು ಗ್ರಾಮ, ಇವರು ಮೆಸ್ಕಾಂ ಇಲಾಖೆಯಲ್ಲಿ ಶಿಫ್ಟ್‌ ಹೆಲ್ಪರ್‌ ಆಗಿ ತಾತ್ಕಾಲಿಕ ನೌಕರರಾಗಿ ಕೆಲಸ ಮಾಡಿಕೊಂಡಿದ್ದು, ತಂಗಿಯ ಮದುವೆ ನಿಮಿತ್ತ ಹಣಕಾಸಿನ ಅವಶ್ಯಕತೆಯಿಂದಾಗಿ ಪಿಪಿಸಿ ಬಳಿ ಕಛೇರಿಯನ್ನು ಹೊಂದಿರುವ ಆಪಾದಿತೆ ತಬಸಂ ಎಂಬಾಕೆಯು ಸಾಲ ಕೊಡಿಸುವುದಾಗಿ ನಂಬಿಸಿ, ದಿನಾಂಕ 13/10/2022 ರಂದು ಪಿರ್ಯಾದುದಾರರಿಂದ ರೂ. 7,000/- ಹಣವನ್ನು ಹಾಗೂ ದಾಖಲೆಗಳನ್ನು ಪಡೆದು, ಸಾಲ ಮಾಡಿಸಿಕೊಡದೇ, ಪಡೆದ ಹಣವನ್ನೂ ವಾಪಾಸು ನೀಡದೇ ಮೋಸ ಮಾಡಿರುತ್ತಾರೆ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 178/2022 ಕಲಂ:  406, 420 IPC ಯಂತೆ ಪ್ರಕರಣ ದಾಖಲಿಸಲಾಗಿದೆ

ಇತ್ತೀಚಿನ ನವೀಕರಣ​ : 08-12-2022 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080