ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕುಂದಾಪುರ: ದಿನಾಂಕ 07/12/2021 ರಂದು ಬೆಳಿಗ್ಗೆ  09:30 ಗಂಟೆಗೆ, ಕುಂದಾಪುರ  ತಾಲೂಕಿನ, ಜಪ್ತಿ ಗ್ರಾಮದ  ಚಂದ್ರಶೇಖರ ಹೆಗ್ಡೆ ಯವರ ಗುರುಕೃಷ್ಣ ಶಾಮಿಯಾನದ ಗೋಡಾನಿನ ಹತ್ತಿರ ಆಪಾದಿತ ರಾಘವೇಂದ್ರ ಕುಲಾಲ KA-20-AA-3828 ನೇ ಮಹೇಂದ್ರ ಪಿಕಪ್ ನ್ನು ಶಾಮಿಯಾನವನ್ನು ಲೋಡ ಮಾಡಲು ಚಂದ್ರಶೇಖರ ಹೆಗ್ಡೆ ಯವರ ಗುರುಕೃಷ್ಣ ಶಾಮಿಯಾನದ ಗೋಡಾನಿನ ಕಡೆಗೆ ವೇಗ ಹಾಗೂ ಅಜಾಗರೂಕತೆಯಿಂದ ಹಿಂದಕ್ಕೆ  ಚಾಲನೆ ಮಾಡಿಕೊಂಡು ಬಂದು ಗೋಡಾನಿನ ಬಾಗಿಲಿನ ಎದುರುಗಡೆ ನಿಂತಿದ್ದ ಸುದೀಪ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸುದೀಪ ರವರ ಎಡ ಕಾಲಿನ ಮಣಿಗಂಟಿನ ಮೇಲ್ಭಾಗಕ್ಕೆ ಮೂಳೆ ಮೂರಿತದ  ರಕ್ತಗಾಯವಾಗಿದ್ದು  ಕೋಟೇಶ್ವರ ಎನ್ ಆರ್ ಆಚಾರ್ಯ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಮೊಹಮ್ಮದ್ ಕಲಂದರ್ ಶಾಫಿ (29), ತಂದೆ: ಅಹಮ್ಮದ್ ಬಾವ, ವಾಸ: ಬೆಳ್ಮ, ಕಲ್ಪಾಡಿ ಮನೆ, ದೇರಳಕಟ್ಟೆ ಅಂಚೆ, ಬೆಳ್ಮ ಗ್ರಾಮ ದ.ಕ ಜಿಲ್ಲೆ, ಮಂಗಳೂರು ತಾಲೂಕು ಇವರು ದಿನಾಂಕ  05/12/2021 ರಂದು ತನ್ನ ಗೆಳೆಯ ಮಹಮ್ಮದ್ ಅನ್ವರ್ ರವರ  ಮೋಟಾರು ಸೈಕಲ್  ನಂಬ್ರ KA-70-H-6762 ರಲ್ಲಿ ಹಿಂಬದಿ ಸಹಸವರನಾಗಿ ಕುಳಿತುಕೊಂಡು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಮದ್ಯಾಹ್ನ 2:20 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಅಲ್ಲಿಯೇ ರಸ್ತೆ ಬದಿಯಲ್ಲಿ ಒಂದು ಲಾರಿಯನ್ನು ನಿಲ್ಲಿಸಿರುವುದನ್ನು ನೋಡಿ ಆ ಸಮಯ ಮೋಟಾರು ಸೈಕಲಿನಿಂದ ನಿಯಂತ್ರಣ ತಪ್ಪಿ ಒಮ್ಮೆಲೆ ಮೋಟಾರು ಸೈಕಲಿಗೆ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿದಾರರು ಹಾಗೂ ಮಹಮ್ಮದ್ ಅನ್ವರ್ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ, ಎಡ ಕೈ ಬೆರಳು, ಎಡ ಕಾಲುಗಳಿಗೆ ಗಾಯವಾಗಿದ್ದು, ಎಡ ಭುಜಕ್ಕೆ ಮೂಳೆ ಮುರಿತ ಉಂಟಾಗಿರುತ್ತದೆ. ಹಾಗೂ ಮೋಟಾರು ಸೈಕಲ್ ಮಹಮ್ಮದ್ ಅನ್ವರ್ ರವರಿಗೆ ಎಡ ಭುಜಕ್ಕೆ, ಮುಖಕ್ಕೆ, ತಲೆಗೆ ಎಡಕಾಲಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
 • ಮಲ್ಪೆ: ಪಿರ್ಯಾದಿದಾರರಾದ ಎಂ ತಿರುಮಲ ಕುಮಾರ್ (21), ತಂದೆ: ಎಂ ಮುರುಗನ್, ವಾಸ: 16/21 ಪೂಕಡಿ ವಿನಾಯಗರ್  ಕೋವಿಲ್ ಸ್ಟೀಟ್  ತೆಂಕಾಸಿ  ಜಿಲ್ಲೆ ತಮಿಳುನಾಡು, ಹಾಲಿ ವಾಸ: ಕಕಲ್ಮಾಡಿ ಚರ್ಚ್ ಬಳಿ ಬಾಡಿಗೆ ಮನೆ ಇವರು ಮಲ್ಪೆ  ಬಂದರಿನಲ್ಲಿ  ಬೋಟಿನ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು.  ದಿನಾಂಕ 04/12/2021 ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಕಲ್ಮಾಡಿಯ ಬಾಡಿಗೆ ಮನೆಗೆ ಹೋಗಿದ್ದು ಪುನ: ರಾತ್ರಿ ಊಟಕ್ಕೆ ಪ್ರೈಡ್ ರೈಸ್ ತರಲು  ನಡೆದುಕೊಂಡು ಕಲ್ಮಾಡಿ ಜಂಕ್ಷನ್ ಬಳಿ ಇರುವ ಹೋಟೆಲ್ ನಲ್ಲಿ ಪ್ರೈಡ್ ರೈಸ್ ತೆಗೆದುಕೊಂಡು ವಾಪಸ್ಸು ಕಲ್ಮಾಡಿ ರೂಮಿಗೆ ನಡೆದುಕೊಂಡು ಹೋಗುತ್ತಿರುವಾಗ ರಾತ್ರಿ 9:00 ಗಂಟೆಕ್ಕೆ ಕಲ್ಮಾಡಿ ಚರ್ಚ್ ಬಳಿ ಉಡುಪಿ ಕಡೆಯಿಂದ ಮಲ್ಪೆ ಕಡೆಗೆ ಓರ್ವ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಬಂದು ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿನ ಕೆಳಗೆ  ಮೂಳೆ ಮುರಿತ ಜಖಂ  ಆಗಿದ್ದು  ಅಘಘಾತ ಸಮಯ  ರಸ್ತೆಯಲ್ಲಿ ಬರುತ್ತಿದ್ದ  ಅನೀಸ್  ಎಂಬುವವರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ,ಅಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಅಫಘಾತ ನಡೆಸಿದ ಮೋಟಾರು ಸೈಕಲ್ ನಂಬ್ರ KA-20-W-6701 ನೇ ಮೋಟಾರು ಸೈಕಲ್ ಆಗಿದ್ದು ಅದರ  ಸವಾರ ಸುಹಾಸ್ ಶೆಟ್ಟಿ ಎಂದು ತಿಳಿದಿರುತ್ತದೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕಾರ್ಕಳ : ದಿನಾಂಕ 05/12/2021 ರಂದು ಪಿರ್ಯಾದಿದಾರರಾದ ಸುಕೇಶ (29), ತಂದೆ: ಸದಾನಂದ ಪೂಜಾರಿ, ವಾಸ: ಸುನೀಲ್ ನಿವಾಸ, ಶಾಂತಿಗಿರಿ, ಕಾಂತರಗೋಳಿ, ಎರ್ಲಪ್ಪಾಡಿ ಅಂಚೆ ಮತ್ತು ಗ್ರಾಮ, ಕಾರ್ಕಳ ಇವರ ಸ್ನೇಹಿತ ಕಿರಣ್ ಕುಮಾರ್ ರವರು ರಾತ್ರಿ  ಎರ್ಲಪ್ಪಾಡಿಯಿಂದ ಬೈಲೂರು ಕಡೆಗೆ ತನ್ನ KA-20-EV-3345 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ರಾತ್ರಿ 12:00 ಗಂಟೆಗೆ ಎರ್ಲಪ್ಪಾಡಿ ಗ್ರಾಮದ ಕಾಂತರಗೋಳಿ ಮೋರಿ ಬಳಿ ತಲುಪುವಾಗ ಬೈಲೂರು ಕಡೆಯಿಂದ ಎರ್ಲಪ್ಪಾಡಿ ಕಡೆಗೆ KA-20-EH-5373 ನೇ ನೊಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಬಂದು ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಎರಡೂ ಮೋಟಾರ್ ಸೈಕಲ್ ಗಳು ಜಖಂಗೊಂಡಿದ್ದು ಕಿರಣ್ ಕುಮಾರ್ ರವರಿಗೆ ಮುಖದಲ್ಲಿ ರಕ್ತವು ಸುರಿದು ಮುಖ ಜಖಂಗೊಂಡಿದಲ್ಲದೇ ಎಡಕಾಲಿನ ಗಂಟಿನ ಬಳಿ ಹಾಗೂ ಪಾದದ ಬಳಿ ಮತ್ತು  ಎಡಕೈಗೆ ತರಚಿದ ಗಾಯವಾಗಿದ್ದು,  ಬಲಗೈಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 158/2021 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ವೀಣಾ ಆರ್ ಆಚಾರ್ಯ(53) ರವರು ಉಡುಪಿ ತಾಲೂಕು ಗುಂಡಿಬೈಲು ಸುರಭಿ ಆರ್ಕೇಡ್ ಎಂಬಲ್ಲಿ ಒಬ್ಬರೇ ವಾಸವಾಗಿದ್ದು, ಪಿರ್ಯಾದಿದಾರರಾದ ಶ್ರೀಮತಿ ಶರಧಿ (27), ಗಂಡ: ಕವನ ಹೆಬ್ಬಾರ್, ವಾಸ:5-6/26, ಕವನ, ಬಜಾಲ್ ಟೆಲಿಪೋನ್ ಆಫೀಸ್ ಹತ್ತಿರ, ಯಕ್ಕೂರು, ಮಂಗಳೂರು ಇವರು ಅವರ ಮಗಳಾಗಿದ್ದು, ಮಂಗಳೂರಿನಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು, ಆಗಾಗ ಮನೆಗೆ ಬಂದು ಹೋಗುವುದು ಹಾಗೂ ಪೋನ್ ಮುಖಾಂತರ ಮಾತನಾಡುವುದು ಮಾಡುತ್ತಿದ್ದು, ದಿನಾಂಕ 07/12/2021 ರಂದು ಬೆಳಿಗ್ಗೆ 09:30 ಗಂಟೆಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಪಿರ್ಯಾದಿದಾರರು ಹಾವೇರಿಗೆ ಮದುವೆ ನಿಮಿತ್ಯ ಹೋಗುವಾಗ ಪುನ: 11:25 ಗಂಟೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿರುವುದಿಲ್ಲ. ಆಗ ಪಿರ್ಯಾದಿದಾರರು ಮಣಿಪಾಲದಲ್ಲಿರುವ ಅವರ ಮಾವ ಬಿ. ಗಣೇಶ ಆಚಾರ್ಯ ರವರಿಗೆ ಕರೆ ಮಾಡಿ ವಿಷಯ ತಿಳಿಸಿ ಮನೆಗೆ ಹೋಗಿ ಬರುವಂತೆ ತಿಳಿಸಿದ್ದು, ಅವರು ಮನೆಗೆ ಹೋದಾಗ ಪಿರ್ಯಾದಿದಾರರ ತಾಯಿ ಮನೆಯ ಬಾಗಿಲು ತೆರೆಯದ ಕಾರಣ ಮನೆಯ ಬೇರೆ ಕೀ ಉಪಯೋಗಿಸಿ ಬಾಗಿಲು ತೆರೆದು ನೋಡಲಾಗಿ ಮನೆಯ ಹಾಲ್ ನಲ್ಲಿ ಪಿರ್ಯಾದಿದಾರರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿಕೊಂಡು  ಇದ್ದವರನ್ನು ಚಿಕಿತ್ಸೆಯ ಬಗ್ಗೆ  ಅಜ್ಜರಕಾಡು ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಪಿರ್ಯಾದಿದಾರರ ತಾಯಿ ದಿನಾಂಕ 07/12/2021 ರಂದು ಬೆಳಿಗ್ಗೆ 11:25 ಗಂಟೆಯಿಂದ ಸಾಯಂಕಾಲ 05:00 ಗಂಟೆ ಮಧ್ಯಾವಧಿಯಲ್ಲಿ ತನಗಿದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಆಥವಾ ಇತರ ಯಾವುದೋ ಕಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 52/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಮಣಿಪಾಲ: ದಿನಾಂಕ 07/12/2021 ರಂದು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 04:45 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀಶೈಲಪ್ಪ (42), ತಂದೆ: ಹುಚ್ಚಪ್ಪ ವಾಸ:  ಕಂದಗಲ್ಲು ಸರಕಾರಿ ಶಾಲೆಯ ಬಳಿ ಕಂದಗಲ್ಲು ಗ್ರಾಮ, ಹೂವಿನ ಹಡಗಲಿ ತಾಲೂಕು, ವಿಜಯನಗರ ಜಿಲ್ಲೆ ಇವರು ವಾಸವಿರುವ ಶಿವಳ್ಳಿ ಗ್ರಾಮದ, ಇಂದ್ರಾಳಿಯ ಗೋಡನ್ ರಸ್ತೆಯಲ್ಲಿರುವ ರತಿ ಶೆಟ್ಟಿ ಎಂಬುವವರ ಬಾಡಿಗೆ  ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯ ಕೋಣೆಯಲ್ಲಿದ್ದ ಕಬ್ಬಿಣ ಟ್ರಂಕ್ ನ ಬೀಗ ಮುರಿದು ಟ್ರಂಕ ನಲ್ಲಿಟ್ಟಿದ್ದ  1) 2 ½  ಗ್ರಾಂ ತೂಕದ ಚಿನ್ನದ ಉಗುಂರ , 2) 4 ಗ್ರಾಂ ತೂಕದ ಚಿನ್ನದ ಚೈನ್,  3) 6 ಗ್ರಾಂ ತೂಕದ ಚಿನ್ನದ ಎರಡು ಜೊತೆ ಮಕ್ಕಳ ಬೆಂಡೊಲೆ ಮತ್ತು ಜುಮ್ಕಿ, 4) 3 ಗ್ರಾಂ  ತೂಕದ 1 ಜೊತೆ ಚಿನ್ನದ  ಜುಮ್ಕಿ, 5) ಹಾಗೂ ಇನ್ನೊಂದು ಪರ್ಸ್ ನಲ್ಲಿ ಇಟ್ಟಿದ್ದ 25000/- ರೂಪಾಯಿ ನಗದುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 71,500/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 161/2021 ಕಲಂ : 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಅಮಿತ್‌ ಶೆಟ್ಟಿ (28), ತಂದೆ: ದಿ. ಭಾಸ್ಕರ ಶೆಟ್ಟಿ, ವಾಸ: ಗಣೇಶ್ ನಿಲಯ, ನೂಜಿನ ಬೈಲ್‌, ಕನ್ನಾರ್ ಅಂಚೆ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಕೃಷಿ ಮತ್ತು ಹೈನುಗಾರಿಕೆ, ಕೋಳಿ ಸಾಕಣಿಕೆ ಉದ್ಯೋಗ ಮಾಡಿಕೊಂಡಿರುತ್ತಾರೆ. ದಿನಾಂಕ 01/10/2019 ರಂದು ಆರೋಪಿಗಳಾದ 1) ಆಕಾಶ್ ಹಜಗೋಲ್ಕರ್, ಮೆನೇಜಿಂಗ್ ಡೈರೆಕ್ಟರ್, 2) ರೋಬಿನ್‌ ಸಾಮ್ಯುಲ್‌, ಡೈರೆಕ್ಟರ್, ಇಬ್ಬರ ವಾಸ: ಎರೆಟ್ಸ್ ಆಗ್ರೋ ಪ್ರೈ. ಲಿಮಿಟೆಡ್, 39135/1ಬಿ, ತಕ್ಕಡ್ ಬಿಲ್ಡಿಂಗ್, 3ನೇ ಮಹಡಿ, ಕ್ಲಬ್‌ ರೋಡ್, ಬೆಳಗಾವಿ  ಇವರು ಪಿರ್ಯಾದಿದಾರರ ಮನೆಗೆ ಬಂದು ನಾವು ಬೆಳಗಾವಿಯಲ್ಲಿ ಕೋಳಿ ವ್ಯವಹಾರದ ಸಂಸ್ಥೆಯನ್ನು ಹೊಂದಿದ್ದು, ಬೇಕಾದವರಿಗೆ ಕೋಳಿ ಪೂರೈಕೆ ಮಾಡಿ, ಕೋಳಿ ಪಡಕೊಂಡವರು ಅದನ್ನು ಸಾಕಿ ಅದರ ಮೊಟ್ಟೆಗಳನ್ನು ತಮಗೆ ಪೂರೈಕೆ ಮಾಡಿದರೆ, ಯೋಗ್ಯ ಬೆಲೆ ಕೊಡುವುದಾಗಿಯೂ, ಮೊಟ್ಟೆಯ ಅವಧಿ ಮುಗಿದ ನಂತರ ಕೋಳಿಗಳನ್ನು ವಾಪಾಸ್ಸು ಪಡೆಯುವುದಾಗಿ ಪಿರ್ಯಾದಿದಾರನ್ನು ನಂಬಿಸಿದ್ದು, ಅದರಂತೆ ದಿನಾಂಕ 05/10/2019 ರಂದು 1ನೇ ಆರೋಪಿ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಜೋತೆ 1 ಸ್ಟ್ಯಾಂಪ್ ಪೇಪರ್ ಮೇಲೆ ಕರಾರು ಮಾಡಿಕೊಂಡಿದ್ದು  ಕರಾರಿನಂತೆ ಆರೋಪಿಯು ಪಿರ್ಯಾದಿದಾರರಿಗೆ 360 ಕಡಕ್‌ನಾತ್‌ ಕೋಳಿಗಳನ್ನು ಪೂರೈಕೆ ಮಾಡುವುದೆಂದೂ, ಒಂದು ಕೋಳಿಗೆ ರೂಪಾಯಿ 555/- ರಂತೆ ಒಟ್ಟು ರೂಪಾಯಿ 2,00,000/- ಹಣವನ್ನು ಪಾವತಿಸಬೇಕೆಂದೂ ನಿರ್ಧಾರವಾಗಿರುತ್ತದೆ. ಕರಾರಿನಂತೆ ಪಿರ್ಯಾದಿದಾರರು ಆರೋಪಿಗೆ ಸ್ಥಳದಲ್ಲಿಯೇ ರೂಪಾಯಿ 2,00,000 /- ಹಣವನ್ನು ನಗದಾಗಿ ಪಾವತಿಸಿದ್ದು ಅದಕ್ಕೆ ಆರೋಪಿಯು ಕೋಳಿಗಳನ್ನು ಪೂರೈಸಿರುತ್ತಾರೆ. ಆದರೆ ಮೊಟ್ಟೆಗಳ ಉತ್ಪಾದನೆ ಆರೋಪಿಗಳು ತಿಳಿಸಿದ ರೀತಿಯಲ್ಲಿ ಆಗದ ಕಾರಣ ಕರಾರನ್ನು ರದ್ದು ಮಾಡಿ ಕೋಳಿಗಳನ್ನು ವಾಪಾಸ್ಸು ಪಡೆದುಕೊಂಡು ಪಾವತಿಸಿದ ಹಣವನ್ನು ಹಿಂತಿರುಗಿಸುವಂತೆ ಪಿರ್ಯಾದಿದಾರರು ಕೋರಿಕೊಂಡಿದ್ದು ಅದರಂತೆ ದಿನಾಂಕ 13/03/2020 ರಂದು 360 ಕಡಕ್‌ನಾತ್‌ ಕೋಳಿಗಳನ್ನು ವಾಪಾಸ್ಸು ಮಾಡಿರುತ್ತಾರೆ. ಕೋಳಿಗಳ ರೂಪಾಯಿ 2,04,060/- ಹಣವನ್ನು ಆರೋಪಿಗಳು ಪಾವತಿಸದೇ ದಿನೇ ದಿನೇ ಮುಂದೆ ಹಾಕುತ್ತಿದ್ದು, ನಂತರ ದಿನಾಂಕ 25/04/2021 ರಂದು ರೂಪಾಯಿ 2,04,060/- ಮೊಬಲಿಗೆ ಒಂದು ಚೆಕ್ಕನ್ನು ನೀಡಿರುತ್ತಾರೆ.  ಚೆಕ್ಕನ್ನು ನಗದೀಕರಿಸಲು ಬ್ಯಾಂಕಿಗೆ ಹಾಕಿದಾಗ ಚೆಕ್‌ ಬೌನ್ಸ್ ಆಗಿರುತ್ತದೆ. ಈ ಬಗ್ಗೆ ಆರೋಪಿಗಳನ್ನು ವಿಚಾರಿಸಲು ಬೆಳಗಾವಿಗೆ ಹೋದಾಗ ಅವರು ನೀಡಿದ್ದ ವಿಳಾಸದಿಂದ ಆರೋಪಿಗಳು ತಲೆ ಮರೆಸಿಕೊಂಡಿರುತ್ತಾರೆ. ಆರೋಪಿಗಳು ಪಿರ್ಯಾದಿದಾರರಿಂದ ಹಣ ಲಪಟಾಯಿಸುವ ಸಲುವಾಗಿ ಸುಳ್ಳು ವ್ಯವಹಾರ ನಡೆಸಿ, ಹಣ ಪಾವತಿಸದೆ ಮೋಸ, ವಂಚನೆ ಎಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 201/2021 ಕಲಂ: 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 07/12/2021ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಕರಿಯಮ್ಮ (75), ವಾಸ; ಬಿಸಾರ್ ಮನೆ ಬಾಳೆ ಹಿತ್ಲು ಬಸ್ರೂರ ಗ್ರಾಮ ಕುಂದಾಪುರ ಇವರು ಮೀನು ತರಲೆಂದು ಬಸ್ರೂರು ಗ್ರಾಮದ ನಿವೇದಿತ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಅವರ ಪರಿಚಯದ ಆರೋಪಿ ಮಧುಕರ ಮೊಗವೀರ, ತಂದೆ: ಮುತ್ತಯ್ಯ ಮೊಗವೀರ, ವಾಸ: ಬಸ್ರೂರು  ಎಂಬಾತ ಪಿರ್ಯಾದಿದಾರರ ಹಿಂದಿನಿಂದ ಬಂದು ಹಿಂದಿನಿಂದ ನೆಲಕ್ಕೆ ದೂಡಿ ಮುಖಕ್ಕೆ ಗುದ್ದಿ  ಪಿರ್ಯಾದಿದಾರರ ಎಡ ಕಿವಿಯಲ್ಲಿ ಧರಿಸಿದ ಚಿನ್ನದ ಬೆಂಡೋಲೆಯನ್ನು ಕಿವಿಯಿಂದ ಹರಿದು ತೆಗೆದು ಕೊಂಡಾಗ ಕಿವಿಗೆ ರಕ್ತಗಾಯ ವಾಗಿರುತ್ತದೆ.  ಆ ಸಮಯದಲ್ಲಿ ಕಿರುಚಿಕೊಂಡಾಗ   ಆರೋಪಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಆತನು ಎಳೆದುಕೊಂಡು ಹೋದ ಚಿನ್ನದ ಬೆಂಡೋಲೆ ಮೌಲ್ಯ 12000/- ರೂಪಾಯಿಯಾಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ: 397, 354, 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಕೆ. ಶ್ರೀಶ ಉಪಾಧ್ಯ (75), ತಂದೆ: ರಾಮಚಂದ್ರ ಉಪಾಧ್ಯ, ವಾಸ: ಶಕ್ತಿ ಸದನ, ಲಕ್ಷ್ಮೀಂದ್ರ ಸದನ, ಉಡುಪಿ ಇವರಿಗೆ ಆರೋಪಿತರಾದ 1. ಗಣೇಶ್ ರಾವ್, ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ಮಹಿಷಮರ್ಧಿನಿ ದೇವಸ್ಥಾನ ಕುಂಜಿಬೆಟ್ಟು ಉಡುಪಿ, 2.ಶ್ರೀ ಗಂಗಾಧರ ಹೆಗ್ಡೆ, ಗುಮಾಸ್ತ , ಮಹಿಷಮರ್ಧಿನಿ ದೇವಸ್ಥಾನ ಕಡಿಯಾಳಿ ಕುಂಜಿಬೆಟ್ಟು, 3. ಮುರಳಿಕೃಷ್ಣ ಉಪಾಧ್ಯ (65), ತಂದೆ: ಅನಂತರಾಮ್ ಉಪಾದ್ಯ, ವಾಸ: ಮನೆ ನಂ 106, ಅನಂತ ನಗರ ಮೊದಲನೇ ಹಂತ ಮಣಿಪಾಲ, 4. ಕೆ. ಹರಿ ಉಪಾಧ್ಯ (72), ತಂದೆ: ರಾಮಚಂದ್ರ ಉಪಾಧ್ಯ, ವಾಸ:11-99, ಬಿ.ಎಡ್.ಕಾಲೇಕ್ ವೃತ್ತ, ಕುಂಜಿಬೆಟ್ಟು ಉಡುಪಿ ಇವರು ಶ್ರೀ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಉಡುಪಿಯಲ್ಲಿ ಅಪರಾಧಿಕ ಒಳಸಂಚು ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಿರ್ಯಾದಿದಾರರ ಸಹಿಯನ್ನು ಪೋರ್ಜರಿ ಮಾಡಿ ಮಾನ್ಯ ಮಾಹಿತಿ ಆಯೋಗದಲ್ಲಿ ವಿಚಾರಣಾ ಹಂತದಲ್ಲಿದ್ದ ಪ್ರಕರಣವನ್ನು ಮುಕ್ತಾಯ ಮಾಡಿ ಪಿರ್ಯಾದಿದಾರರಿಗೆ ಅನ್ಯಾಯ, ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 181/2021 ಕಲಂ: 197, 167, 409, 417, 420, 468, 471, 120B ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 08-12-2021 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080