ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 07-12-2021  ರಂದು  ಸಂಜೆ ಸದಾಶಿವ  ಶೆಟ್ಟಿ, ಪ್ರಾಯ: 64 ವರ್ಷ  ರವರು ತೆಕ್ಕಟ್ಟೆ  ಗ್ರಾಮದ ಅಪ್ಪು  ನಾಯಕ್‌  ರವರ  ಮಿಲ್  ಹತ್ತಿರ ರಾ.ಹೆ.66  ರ  ರಸ್ತೆ ವಿಭಾಜಕದ  ಪೂರ್ವ  ಬದಿ  ಅಂಚಿನಲ್ಲಿ  ನಿಂತುಕೊಂಡಿರುವಾಗ ಸಮಯ ಸುಮಾರು  ಸಂಜೆ  8-30 ಘಂಟೆಗೆ ತೆಕ್ಕಟ್ಟೆ  ಕಡೆಯಿಂದ  ಕೋಟ  ಕಡೆಗೆ  ಓರ್ವ   ಕಾರ  ಚಾಲಕನು  ಆತನ  ಬಾಬ್ತು  ಕಾರನ್ನು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು  ಬಂದು ತೀರ ಬಲಬದಿಗೆ ಚಲಾಯಿಸಿ  ಸದಾಶಿವ  ಶೆಟ್ಟಿ ರವರಿಗೆ  ಡಿಕ್ಕಿ  ಹೊಡೆದು ಕಾರನ್ನು  ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿರುತ್ತಾನೆ. ಪರಿಣಾಮ ಸದ್ರಿಯವರು ರಸ್ತೆಗೆ ಎಸೆಯಲ್ಪಟ್ಟು  ತಲೆಗೆ ತೀವ್ರ ಸ್ವರೂಪದ ರಕ್ತಗಾಯಗೊಂಡವರನ್ನು ಚಿಕಿತ್ಸೆಗೆ ಮಣಿಪಾಲ ಕೆ.ಎಮ್‌.ಸಿ. ಆಸ್ಪತ್ರೆಗೆ ಕರೆದಕೊಂಡು ಹೋದಲ್ಲಿ ವೈಧ್ಯರು ಪರೀಕ್ಷಿಸಿ  ಸದಾಶಿವ  ಶೆಟ್ಟಿ  ರವರು  ಅದಾಗಲೇ  ಮೃತಪಟ್ಟಿರುವುದಾಗಿ  ಮೃತಪಟ್ಟಿರುವುದಾಗಿದೆ. ಈ  ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 209/2021 ಕಲಂ: 279, 304(ಎ) ಐ.ಪಿ.ಸಿ. ಮತ್ತು  ಕಲಂ 134 (ಎ)(ಬಿ)  ಐ.ಎಮ್‌.ವಿ. ಆಕ್ಟ್‌ ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಪ್ರಸನ್ನ  ಕುಮಾರ  ಇವರು ದಿನಾಂಕ 06/12/2021 ರಂದು ತನ್ನ ಬಾಬ್ತು ಸ್ಕೂಟರ್ ನಂಬ್ರ KA 20 ES 0301  ರಲ್ಲಿ ಸವಾರಿ ಮಾಡಿಕೊಂಡು ಕೃಷ್ಣಮಠದಿಂದ ವೆಂಕಟರಮಣ ಜಂಕ್ಷನ್ ಕಡೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 07;20 ಗಂಟೆಗೆ ಬೀಡಿನಗುಡ್ಡಯಿಂದ  ವೆಂಕಟರಮಣ ಜಂಕ್ಷನ್ ಕಡೆಗೆ  KA 22 B 7518 ರ ಟೆಂಪೋ ಚಾಲಕ ತನ್ನ ಟೆಂಪೋವನ್ನು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿರಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡ ಕಾಲಿಗೆ ಗಾಯವಾಗಿರುತ್ತದೆ. ಈ  ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ  279, 337  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದಲ್ಲಿರುವ  ಪಿರ್ಯಾದಿ ಸರಸ್ವತಿ ಆಚಾರ್ತಿ ಇವರು ಹಾಗೂ ಅವರ ತಂಗಿಯಂದಿರಾದ ಮೀನಾಕ್ಷಿ ಮತ್ತು ಪ್ರಫುಲ್ಲ ರವರ ಜಂಟಿ ಹಿಸ್ಸೆಯಲ್ಲಿದ್ದ ಸ.ನಂಬ್ರ 87/4 ರಲ್ಲಿ ಇರುವ 24 ಸೆಂಟ್ಸ್ ಜಮೀನನ್ನು ಮಾರಾಟ  ಮಾಡುವ ಬಗ್ಗೆ   ಆರೋಪಿ ಗಣೇಶ್ ಆಚಾರ್ ಇವರು ದಿನಾಂಕ 21/05/2014 ರಂದು ಗೋಪಾಲ್ ಮತ್ತು ಸದಾನಂದ ಪ್ರಭು ಎಂಬವರಿಗೆ ರೂ. 30 ಲಕ್ಷಕ್ಕೆ ಕ್ರಯ ಪತ್ರ ಬರೆಸಿಕೊಂಡು ಅವರಿಂದ ಮುಂಗಡವಾಗಿ ರೂ. 9 ಲಕ್ಷ ಹಾಗೂ ದಿನಾಂಕ 01/10/2014 ರಂದು ರೂ. 15 ಲಕ್ಷ ಹಣವನ್ನು ತೆಗೆದುಕೊಂಡು ಆ ಹಣದಲ್ಲಿ ಪಿರ್ಯಾದಿದಾರರಿಗೆ ಹಾಗೂ ಅವರ ಇಬ್ಬರು ತಂಗಿಯರಿಗೆ ತಲಾ ರೂ. 5 ಲಕ್ಷ ನೀಡಿ ಉಳಿದ ರೂ. 9 ಲಕ್ಷ ವನ್ನು ಆರೋಪಿ ತಾನೇ ಇರಿಸಿಕೊಂಡು ಮುಂದೆ ಲೆಕ್ಕಾಚಾರ ಮಾಡುವ ಎಂದು ನಂಬಿಸಿ ಈ ತನಕ ಕೊಟ್ಟಿರುವುದಿಲ್ಲ, ಅಲ್ಲದೇ ಸದ್ರಿ ಜಮೀನಿನಲ್ಲಿ 3 ಸೆಂಟ್ಸ್ ಜಾಗ ಸರಕಾರಕ್ಕೆ ಹೋಗಿದೆ ಎಂದು ಪಿರ್ಯಾದಿದಾರನ್ನು ನಂಬಿಸಿ ಆ ಜಮೀನಿನ ಪ್ರತಿಫಲವನ್ನು ಆರೋಪಿಯೇ ಇರಿಸಿಕೊಂಡಿರುತ್ತಾರೆ. ಪಿರ್ಯಾದುದಾರರು ಆರೋಪಿಯ ಬಳಿ ಹಣದ ಬಗ್ಗೆ ಕೇಳಿದಾಗ ದಿನಾಂಕ 26/12/2014 ರಂದು ಆರೋಪಿಯು ಪಿರ್ಯಾದುದಾರರಿಗೆ ಹಾಗೂ ಅವರ ತಂಗಿಯರಿಗೆ  ಚೆಕ್‌ಗಳನ್ನು ನೀಡಿದ್ದು, ಸದ್ರಿ ಚೆಕ್‌ಗಳನ್ನು ನಗದೀಕರಿಸಲು ಹೋದಾಗ ಆರೋಪಿಯ ಖಾತೆಯಲ್ಲಿ ಹಣ ಇಲ್ಲವೆಂದು ಚೆಕ್‌ ವಾಪಾಸ್ಸು ನೀಡಿರುತ್ತಾರೆ. ಈ ಬಗ್ಗೆಆರೋಪಿಯ ಬಳಿ ಕೇಳಿದಾಗ ಜಮೀನಿನ ದಾಖಲೆ ಸರಿಪಡಿಸಿದ ನಂತರ ಎಲ್ಲಾ ಲೆಕ್ಕಚಾರ ಮಾಡುವುದಾಗಿ ನಂಬಿಸಿರುತ್ತಾರೆ. ದಿನಾಂಕ 15/03/2016 ರಂದು ಆರೋಪಿಯು ಬ್ರಹ್ಮಾವರ ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ಮೋಸದಿಂದ ಪಿರ್ಯಾದಿದಾರರಿಂದ ಸಹಿ ಪಡಕೊಂಡು ಕ್ರಯ ದಸ್ತಾವೇಜಿನ ಪ್ರತಿಫಲದ ಹಣವನ್ನು ನೀಡದೇ ಮೋಸ, ವಂಚನೆ ಮಾಡಿದ್ದು ಅಲ್ಲದೇ ಸದ್ರಿ ಫೋರ್ಜರಿ ಪತ್ರದ ಆಧಾರದಲ್ಲಿ ಸ.ನಂ 87 / 5 ರಲ್ಲಿ 4 ಸೆಂಟ್ಸ್ ಮತ್ತು 87/23 ರಲ್ಲಿ 11 ಸೆಂಟ್ಸ್ ಜಮೀನಿನನ್ನು ದಿನಾಂಕ 05/01/2017 ರಂದು ಪಿರ್ಯಾದುದಾರರ ಹೆಸರಿಗೆ ರೂ 8,90,000/- ಕ್ಕೆ ಕೊಟ್ಟಂತೆ ಆರೋಪಿಯು ಬರೆಸಿಕೊಂಡು ಸದ್ರಿ  11 ಸೆಂಟ್ಸ್ ಜಮೀನನ್ನು ಪುನಃ ಬೇರೆಯವರಿಗೆ ಸುಮಾರು ರೂ. 11 ಲಕ್ಷಕ್ಕೂ ಮಿಕ್ಕಿ ಮಾರಾಟ ಮಾಡಿರುತ್ತಾರೆ. ಅನಕ್ಷರಸ್ಥ ಹಾಗೂ ಹಿರಿಯ ನಾಗರೀಕರಾದ  ಪಿರ್ಯಾದುದಾರರಿಗೆ ಅವರ ಒಡೆತನದ ಜಮೀನಿನ ಕರಾರಿನಿಂದ ಮತ್ತು ಮಾರಾಟದಿಂದ ಪಡಕೊಂಡ ರೂ. 17,90,000/- ಹಣವನ್ನು  ಆರೋಪಿಯು ಮೋಸ, ವಂಚನೆಯಿಂದ ನಷ್ಟವುಂಟು ಮಾಡಿರುವುದಾಗಿದೆ. ಈ  ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 202/2021 ಕಲಂ 420, 463, 467, 468, 471 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 08/12/2021  ರಂದು 10:05 ಗಂಟೆಗೆ ಪವನ್ ನಾಯಕ್  ಪೊಲೀಸ್, ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ನಾಗೂರು ರಿಕ್ಷಾ ನಿಲ್ದಾಣದ  ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲು ಸದ್ರಿ ಮಾಹಿತಿ ಬಂದ ಸ್ಥಳಕ್ಕೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಇಲಾಖಾ ಜೀಪು ನಂಬ್ರ: ಕೆ.ಎ.20 ಜಿ.164 ನಲ್ಲಿ ಹೋಗಿ 10:40 ಗಂಟೆಗೆ ದಾಳಿ ನಡೆಸಿ ಆರೋಪಿತ ಸುಬ್ಬ ಪೂಜಾರಿ (68 ವರ್ಷ)  ತಂದೆ: ದಿ. ಪುಟ್ಟ ಪೂಜಾರಿ ವಾಸ: ಹೆರಂಜಾಲು ಮನೆ , ಉಪ್ರಳ್ಳಿ, 11 ನೇ ಉಳ್ಳೂರು ಗ್ರಾಮ, ಬೈಂದೂರು ತಾಲೂಕು ಈತನನ್ನು ವಶಕ್ಕೆ ಪಡೆದಿದ್ದು. ಆತನು ತನ್ನ ಸ್ವಂತ ಲಾಭಕೋಸ್ಕರ ಅಕ್ರಮವಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು ನಂತರ ಆತನ ಕೈಯಲ್ಲಿದ್ದ ಮಟ್ಕಾ ಜುಗಾರಿ ಆಟದಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂ 1180/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಪಂಚರುಗಳ ಸಮಕ್ಷಮ ಸ್ವಾಧೀನಪಡಿಸಿಕೊಂಡಿದ್ದು ಈ  ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 197/2021  ಕಲಂ 78 (I)  & (III) ಕೆ. ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಉಡುಪಿ  ತಾಲೂಕು  ಮೂಡನಿಡಂಬೂರು ಗ್ರಾಮದ  ಬ್ರಹ್ಮಗಿರಿಯ  ಸಾಯಿರಾಧ ಪ್ರೈಡ್‌'  ಅಪಾರ್ಟ್‌ಮೆಂಟಿನ ಜಿ ಬ್ಲಾಕಿನ  ಫ್ಲ್ಯಾಟ್‌  ನಂ: 401ರಲ್ಲಿ  ವಾಸವಿದ್ದ ಫಿರ್ಯಾದಿ ಈಶ್ವರ ನಾಯ್ಕ್  ಇವರ ಹೆಂಡತಿಯಾದ ಶ್ರೀಮತಿ  ಸುಮತಿ  ಈಶ್ವರ ನಾಯ್ಕ(56  ವರ್ಷ) ರವರು  ಅಲ್ಪಕಾಲೀನ  ಅಸೌಖ್ಯದಿಂದ ಬಳಲುತ್ತಿದ್ದವರು, ದಿನಾಂಕ:  07/12/2021 ರಂದು  ರಾತ್ರಿ  10:35  ಗಂಟೆಯ  ಸುಮಾರಿಗೆ  ಫ್ಲ್ಯಾಟ್‌ನಲ್ಲಿ  ತೀವ್ರ  ಅಸ್ವಸ್ಥರಾದವರನ್ನು  ಚಿಕಿತ್ಸೆಯ  ಬಗ್ಗೆ ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ ಕರೆತಂದಲ್ಲಿ ,  ರಾತ್ರಿ  11:45  ಗಂಟೆ ಸುಮಾರಿಗೆ  ಪರೀಕ್ಷಿಸಿದ   ವೈದ್ಯರು,  ಶ್ರೀಮತಿ  ಸುಮತಿ  ಈಶ್ವರ ನಾಯ್ಕರವರು ಅದಾಗಲೇ  ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 53/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬ್ರಹ್ಮಾವರ: ಬ್ರಹ್ಮಾವರ  ತಾಲೂಕು ಚಾಂತಾರು ಗ್ರಾಮದ, ರಥಬೀದಿ, ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಪಿರ್ಯಾದಿ ರಮಾನಂದ ಭಟ್ ಇವರ ವಾಸದ ಮನೆಯ ಪಕ್ಕದಲ್ಲಿ ಒಂದು ಶೆಡ್‌ನಲ್ಲಿ ಅವರ ಅಣ್ಣ ಮಧುಕರ ಭಟ್ ( ಪ್ರಾಯ: 60 ವರ್ಷ) ಎಂಬವರು  ಸುಮಾರು 8 ವರ್ಷಗಳಿಂದ ವಾಸವಾಗಿದ್ದು,  ಅವರಿಗೆ ಮದುವೆ ಆಗಿರುವುದಿಲ್ಲ. ಸುಮಾರು 3 ವರ್ಷಗಳ ಹಿಂದೆ ಅವರಿಗೆ ಹೊಟ್ಟೆಯಲ್ಲಿ ಕರುಳಿನ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಅವರ ಹೊಟ್ಟೆ ನೋವು ಕಡಿಮೆ ಆಗಿರುವುದಿಲ್ಲ. ದಿನಾಂಕ 08/12/2021 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರು ಮಧುಕರ ಭಟ್‌ ಅವರು ವಾಸವಾಗಿದ್ದ  ಶೆಡ್‌ನ ಬಾಗಿಲನ್ನು  ಸರಿಸಿ ನೋಡಿದಾಗ ಮಧುಕರ್‌ ಭಟ್‌ರವರು ನೇಣು ಬಿಗಿದುಕೊಂಡು ಮೃತದೇಹವು ನೇತಾಡಿಕೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 72/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬ್ರಹ್ಮಾವರ : ಬ್ರಹ್ಮಾವರ  ತಾಲೂಕು ಪೆಜಮಂಗೂರು ಗ್ರಾಮದ, ಕೊಕ್ಕರ್ಣೆ ಎಂಬಲ್ಲಿ ಪಿರ್ಯಾದಿ ಲಕ್ಷ್ಮೀ ಗಾಣಿಗ ಇವರ ಮನೆಯ ಮೇಲ್‌ ಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ, ಹೆಗ್ಗುಂಜೆ  ಮೆಸ್ಕಾಂ ಶಾಖೆಯಲ್ಲಿ ಕಿರಿಯ ಪವರ್‌ ಮ್ಯಾನ್‌ರಾಗಿ ಕೆಲಸ ನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಶ್ರೀನಿವಾಸ ನಾಗಮೋತಿ (25 ವರ್ಷ) ರವರು ವಾಸವಾಗಿದ್ದು, ಅವರು ವಿಪರೀತ ಮಧ್ಯಪಾನ ಮಾಡಿ ಮನೆಯ ಅಂಗಳ ಹಾಗೂ ಅಲ್ಲಿ ಇಲ್ಲಿ ಮಲಗುತ್ತಿದ್ದರು. ಇದರಿಂದ ಹುಷಾರ್ ಇಲ್ಲದೇ ಅವರ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಚಿಕಿತ್ಸೆ ಪಡೆದ ನಂತರವು ಅವರು ಮದ್ಯಪಾನ ಮಾಡುತ್ತಿದ್ದು ಇದೇ ಕಾರಣದಿಂದ ಮದ್ಯಪಾನವನ್ನು ಬಿಡಲು ಆಗದೇ ಮಾನಸಿಕವಾಗಿ ನೊಂದು ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 07/12/2021 ರಂದು ಬೆಳಿಗ್ಗೆ 09:30 ಗಂಟೆಯಿಂದ  ದಿನಾಂಕ 08/12/2021 ರಂದು ಬೆಳಿಗ್ಗೆ 09:30 ಗಂಟೆಯ ಮಧ್ಯಾವಧಿಯಲ್ಲಿ ಶ್ರೀನಿವಾಸ ನಾಗಮೋತಿರವರು ಪಿರ್ಯಾದಿದಾರರ ಮನೆಯ ಮೇಲಿನ ಬಾಡಿಗೆ ಮನೆಯ ರೂಮಿನಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 73/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 08-12-2021 05:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080