ಅಭಿಪ್ರಾಯ / ಸಲಹೆಗಳು


ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ವಿಜಯ್‌ಎಸ್‌. ಶೆಟ್ಟಿ (33 ), ತಂದೆ: ಸೀತಾರಾಮ ಶೆಟ್ಟಿ, ವಾಸ: ಹೆಬ್ಬಾಗಿಲು ಮನೆ, ಬಳ್ಳೂರು ಗ್ರಾಮ, ಕುಂದಾಪುರ ತಾಲೂಕು ಇವರು ಉಡುಪಿ  ಗ್ರಾಮ ಕರಣಿಕರಾಗಿದ್ದು ಹಾಗೂ ಗ್ರಾಮ ಸಹಾಯಕರಾದ ಶ್ರೀಧರ ಗಾಣಿಗ ರವರು ತಾಲೂಕು ಕಛೇರಿಯ ಕೆಲಸಕ್ಕೆಂದು KA-20-EB-7082 ನೇ ಸುಜುಕಿ ಆಕ್ಸೆಸ್‌125 ನೇ ಸ್ಕೂಟಿಯಲ್ಲಿ ದಿನಾಂಕ 05/11/.2022 ರಂದು ಪಾಂಡೇಶ್ವರ ಗ್ರಾಮ ಪಂಚಾಯತ್‌ಕಛೇರಿಯಿಂದ ಹೊರಟು ಪಿರ್ಯಾದಿದಾರರು ಸ್ಕೂಟಿಯನ್ನು ಚಲಾಯಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ .66 ಕುಂದಾಪುರ - ಉಡುಪಿ ಮುಖ್ಯರಸ್ತೆಗೆ ಬಂದು ಕ್ರಮದಂತೆ ರಸ್ತೆಯ ಎಡಭಾಗದಲ್ಲಿ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದು ಮಧ್ಯಾಹ್ನ  1:30 ಗಂಟೆಗೆ ಶಿವಕೃಪಾ ಕಲ್ಯಾಣ ಮಂಟಪದ ಎದುರು ಬಂದಾಗ ಪಿರ್ಯಾದಿದಾರರ  ಹಿಂದಿನಿಂದ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA-31-EE-0429 ನೇ ಯಮಹ ಬೈಕ್‌ ಸವಾರ ಜಗದೀಶ  ಸಹ ಸವಾರನಾಗಿ ರೋಷನ್‌ ಪೂಜಾರಿ ಎಂಬುವವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಪಿರ್ಯಾದಿದಾರರ ಸ್ಕೂಟಿಗೆ ರಭಸವಾಗಿ ಢಿಕ್ಕಿ ಹೊಡೆದ ಅಪಘಾತದಿಂದ ಎರಡೂ ಮೋಟಾರ್‌ಸೈಕಲ್‌ನಲ್ಲಿದ್ದ ನಾಲ್ಕು ಜನರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ  ಬಲಕೈ ಮೊಣಗಂಟಿಗೆ ಹಾಗೂ ಬಲಕಾಲಿನ ಮೊಣಗಂಟಿಗೆ ತರಚಿದ ಗಾಯ ಮತ್ತು ಹಿಂಬದಿ ಕುಳಿತಿದ್ದ ಶ್ರೀಧರ ಗಾಣಿಗ ರವರ ಬಲಕಾಲಿನ ಮಣಿಗಂಟಿಗೆ ತೀವ್ರತರದ ರಕ್ತಗಾಯ ಹಾಗೂ ಎಡ ಸೊಂಟಕ್ಕೆ ತೀವ್ರ ಒಳನೋವು ಆಗಿರುತ್ತದೆ. ಹಾಗೂ  ಅಪಘಾತಪಡಿಸಿದ KA-31-EE-0429 ನೇ ಬೈಕ್‌ಸವಾರ ಜಗದೀಶ ರವರ ಎಡಕಾಲಿಗೆ ತೀವ್ರ ತರದ ರಕ್ತಗಾಯ ಹಾಗೂ ಮೈಕೈಗಳಿಗೆ ತರಚಿದ ಗಾಯಗಳಾಗಿರುತ್ತದೆ ಹಾಗೂ ಆತನ ಹಿಂಬದಿ ಕುಳಿತಿದ್ದ ರೋಷನ್‌ ಪೂಜಾರಿ ರವರ ಕುತ್ತಿಗೆಗೆ ತೀವ್ರ ತರದ ಒಳನೋವು ಹಾಗೂ ಮೈಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತದೆ. ಅಪಘಾತದಲ್ಲಿ ಗಾಯದ ತೀವ್ರತೆ ಕಡಿಮೆ ಇದೆ ಎಂಬುದಾಗಿ ತಿಳಿದು ಯಾರೂ ಈ ಅಪಘಾತದ ಬಗ್ಗೆ ದೂರು ನೀಡಿರುವುದಿಲ್ಲ. ಪ್ರಸ್ತುತ ಅಪಘಾತದಿಂದ ಮೂರು ಜನರು ತೀವ್ರ ಗಾಯಗೊಂಡಿದ್ದರಿಂದ  ಠಾಣೆಗೆ ಬಂದು ವಿಳಂಬವಾಗಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 193/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶಶಾಂಕ ಶಿವತ್ತಾಯ (32), ತಂದೆ: ಎಸ್ ಹರಿಕೃಷ್ಣ ಶಿವತ್ತಾಯ, ವಾಸ:ಸತ್ಯಶ್ರೀ 3-19 ಬಿ, ಮೂಡುಪೆರಂಪಳ್ಳಿ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರ ದೊಡ್ಡಪ್ಪ ಶ್ರೀ ರಾಮದಾಸ ಶಿವತ್ತಾಯ (75) ರವರು ಪಿರ್ಯಾದಿದಾರರೊಂದಿಗೆ ವಾಸಮಾಡಿಕೊಂಡಿದ್ದು  ದಿನಾಂಕ 06/11/2022 ರಂದು ಮಧ್ಯಾಹ್ನ 12:00 ಗಂಟೆಯಿಂದ ಮಧ್ಯಾಹ್ನ 2:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯಲ್ಲಿಯಾರೂ ಇಲ್ಲದ ಸಮಯ ಮನೆಗೆ ಬೀಗ ಹಾಕಿ ಎಲ್ಲಿಗೋ ಹೋಗಿದ್ದು, ಎಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಪಿರ್ಯಾದಿದಾರರು ದಿನಾಂಕ 07/11/2022 ರಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಶ್ರೀ ರಾಮದಾಸ ಶಿವತ್ತಾಯ ರವರು ಕಾಣೆಯಾದ ಬಗ್ಗೆ ದೂರು ನೀಡಿ ಪ್ರಕರಣ ದಾಖಸಿರುತ್ತಾರೆ. ಶ್ರೀ ರಾಮದಾಸ ಶಿವತ್ತಾಯರವರು ತಂಗಿ ಮನೆ ಇನ್ನಂಜೆಯಲ್ಲಿದ್ದು ಅಲ್ಲಿಗೆ  ಬಂದಿರಬಹುದೆಂಬ ಅನುಮಾನದಲ್ಲಿ ಇನ್ನಂಜೆಗೆ ಬಂದು ಉಂಡಾರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಸಿಸಿ ಕ್ಯಾಮಾರವನ್ನು ಪರಿಶೀಲಿಸಿದಾಗ ಶ್ರೀ ರಾಮದಾಸ ಶಿವತ್ತಾಯರವರು ದೇವಸ್ಥಾನದ ಪ್ರಾಂಗಣದಲ್ಲಿ ತಿರುಗಾಡುತ್ತಿರುವ ದೃಶ್ಯ ಕಂಡು ಬಂದಿರುವುದರಿಂದ ಪಿರ್ಯಾದಿದಾರು ಪುನಃ  ಬೆಳಿಗ್ಗೆ ಇನ್ನಂಜೆಗೆ ಬಂದು  ಹುಡುಕಾಡಿದ್ದಲ್ಲಿ ಉಂಡಾರು ವಿಷ್ಣು ಮೂರ್ತಿ ದೇವಸ್ಥಾನದ ಉತ್ತರ ಪಶ್ಚಿಮ ಭಾಗದಲ್ಲಿರುವ ಸಣ್ಣದಾದ ತೋಡಿನಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಕಂಡುಬಂದಿರುತ್ತದೆ. ಪಿರ್ಯಾದಿದಾರರ ದೊಡ್ಡಪ್ಪನವರು ದಿನಾಂಕ 06/11/2022 ರಂದು ಮಧ್ಯಾಹ್ನ 1:45 ಗಂಟೆಯಿಂದ ದಿನಾಂಕ 08/11/2022 ರಂದು ಬೆಳಿಗ್ಗೆ 8:45 ಗಂಟೆಯ ನಡುವೆ ತಂಗಿಯ ಮನೆಗೆ ಬಂದವರು ದಾರಿ ತಪ್ಪಿ ತೋಡಿನ ಕಡೆಗೆ ಹೋಗಿ ಆಕಸ್ಮಿಕವಾಗಿ ತೋಡಿನ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 34/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ರೇಖಾ (40), ಗಂಡ: ರಮೇಶ್ ಪೂಜಾರಿ, ವಾಸ: ಮಾತೃಛಾಯಾ ನಿವಾಸ, ಹೊಸಕಾಡು, ಇನ್ನಾ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಇನ್ನಾ ಗ್ರಾಮ ಕುರ್ಕಿಲಬೆಟ್ಟುವಿನ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ  ದಿನಾಂಕ 08/11/2022 ರಂದು ಬೆಳಗ್ಗೆ 09:00 ಗಂಟೆಗೆ ಸ್ಕೂಟಿಯಲ್ಲಿ ಮನೆಯಿಂದ ಅಂಗನವಾಡಿಗೆ ಇನ್ನಾ ಹೊಸಕಾಡು ರಸ್ತೆಯಲ್ಲಿ ಹೋಗುತ್ತಾ  09:15 ಗಂಟೆಯ ವೆಳೆಗೆ ಎಲಿಜಾ ಕ್ರಾಸ್ತ ಎಂಬುವವರ ಹಾಡಿಯ ಜಾಗದ ಬಳಿ ತಲುಪಿದಾಗ, ಕಪ್ಪು ಬಣ್ಣದ ಮೋಟಾರ್‌‌ ಸೈಕಲ್ಲಿನಲ್ಲಿ ಬಂದಿದ್ದ ಇಬ್ಬರು ಯುವಕರಲ್ಲಿ ಸವಾರನು ಹೆಲ್ಮೆಟ್ ಧರಿಸಿ ಮೋಟಾರ್‌ ‌ಸೈಕಲ್ ಮೇಲೆ ಕುಳಿತಿದ್ದು, ಹಿಂಬದಿ ಸವಾರನು ಪಿರ್ಯಾದಿದಾರರನ್ನು ನಿಲ್ಲಿಸಿ, ಒಂದು ಚೀಟಿ ತೋರಿಸುತ್ತಾ, ವಿಳಾಸ ಕೇಳುವ ನೆಪದಲ್ಲಿ ಪಿರ್ಯಾದಿದಾರರ ಬಳಿ ಬಂದು ಅವರ ಕುತ್ತಿಗೆಗೆ ಕೈಹಾಕಿ  ಅವರ ಕುತ್ತಿಗೆಯಲ್ಲಿದ್ದ ಸುಮಾರು 32 ಗ್ರಾಮ್ (4 ಪವನ್) ತೂಕದ ಎರಡು ಎಳೆಯ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಮೋಟಾರ್ ಸೈಕಲ್ಲಿನಲ್ಲಿ ಪರಾರಿಯಾಗಿರುತ್ತಾರೆ. ಕಿತ್ತುಕೊಂಡು ಹೋದ ಚಿನ್ನದ ಕರಿಮಣಿ ಸರದ  ಬೆಲೆ 1,44,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 142/2022,  ಕಲಂ: 392  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 08-11-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080