ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ದಯಾನಂದ ಕೆ. (48) ತಂದೆ: ಸುಬ್ರಹ್ಮಣ್ಯ ತುಂಗ, ವಾಸ: ಅರಮ ದೇವಸ್ಥಾನ ಬಳಿ , ಕೋಟತಟ್ಟು ಪಡುಕೆರೆ, ಕೋಟತಟ್ಟು ಗ್ರಾಮ, ಬ್ರಹ್ಮಾವರ ಇವರು ತನ್ನ TVS ಜುಪಿಟರ್ ಸ್ಕೂಟಿ ನಂಬ್ರ KA-15 EE-7862 ನೇದರಲ್ಲಿ  ತನ್ನ ಮಗ ಅನ್ವಿತ್ ನೊಂದಿಗೆ ದಿನಾಂಕ 04/11/2021  ರಂದು ಕುಂದಾಪುರಕ್ಕೆ  ಬಂದಿದ್ದು ವಾಪಾಸ್ಸು ಕುಂದಾಪುರದಿಂದ  ಎನ್ ಹೆಚ್ 66 ರಲ್ಲಿ  ಹೊರಟು ಸಂಜೆ 4:00 ಗಂಟೆಯ ಸಮಯಕ್ಕೆ ಕೋಟ ಅಮೃತೇಶ್ವರಿ ಜಂಕ್ಷನ್ ನಲ್ಲಿನ  ಡಿವೈಡರ್ ಬಳಿಯಲ್ಲಿ ರಸ್ತೆಯನ್ನು ದಾಟುವರೇ ನಿಂತುಕೊಂಡಿದ್ದಾಗ ಹಿಂದಿನಿಂದ KA-19 EJ-7396 ಮೋಟಾರ್ ಸೈಕಲ್ ಸವಾರ ಸುಭಾಷ್ ರವರು ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ದಯಾನಂದ ಕೆ ರವರು ಹಾಗೂ ಅವರ ಮಗ ರಸ್ತೆಗೆ ಬಿದ್ದು, ದಯಾನಂದ ಕೆ ಇವರ ಬಲ ಭುಜಕ್ಕೆ, ಎರಡೂ ಕಾಲಿನ ಗಂಟಿಗೆ ರಕ್ತ ಗಾಯ ಹಾಗೂ ಕೈಗೆ ಕಾಲಿಗೆ ತರಚಿದ ರಕ್ತ ಗಾಯವಾಗಿದ್ದು ಮಗನ ಕೈಗೆ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದು,  ಈ ದಿನ ನೋವು ಹೆಚ್ಚಾಗಿದ್ದರಿಂದ ಇವರು  ಕುಂದಾಪುರ  ಚಿನ್ಮಯಿ ಆಸ್ಪತ್ರೆಗೆ  ಚಿಕಿತ್ಸೆಗೆ ಬಂದಲ್ಲಿ  ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಆರೋಪಿ ಸುಭಾಷ್ ರವರು  ಯಾವುದೇ ಮಾಹಿತಿ ನೀಡದೇ ಮೋಟಾರ್ ಸೈಕಲ್ ನಿಲ್ಲಿಸದೇ  ಹೋಗಿರುತ್ತಾರೆ, ಆರೋಪಿಯ  ವಾಹನ ನಂಬ್ರ ಮತ್ತು ಹೆಸರು ತಿಳಿದು ದೂರು ನೀಡಲು ತಡವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 188/2021  ಕಲಂ: 279,337  IPC R/W 134(A)&(B) IMV  ACT ರಂತೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಹರೀಶ್‌ಖಾರ್ವಿ (34) ತಂದೆ: ಹೂವಯ್ಯ ಖಾರ್ವಿ ವಾಸ: ಸಿಪಾಯಿ ಮನೆ ವಿನಾಯಕ ಸೋಮಿಲ್‌ಬಳಿ ಗಂಗೊಳ್ಳಿ ಗ್ರಾಮ ಕುಂದಾಪುರ ರವರು ದಿನಾಂಕ 06/11/2021 ರಂದು ಮೇಲ್‌ ಗಂಗೊಳ್ಳಿಯ ಸಿದ್ರಾ ಮೆಡಿಕಲ್‌ ಎದುರುಗಡೆ ನಿಂತುಕೊಂಡಿರುವಾಗ ಸಮಯ ಸುಮಾರು 11:00 ಗಂಟೆಗೆ ಹರೀಶ್‌ಖಾರ್ವಿ ರವರ ಪರಿಚಯದ ಅಲೋಕ್‌ ಎಂಬವರು ತನ್ನ KA-20 EM-9795 ನೇ ಮೋಟಾರ್‌ ಸೈಕಲ್‌ನಲ್ಲಿ ಅವರ ಅಕ್ಕ ಅನಿತಾ ಮೇಸ್ತ ರವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಗಂಗೊಳ್ಳಿ ಪೇಟೆ ಕಡೆಯಿಂದ ತ್ರಾಸಿಯ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಗಂಗೊಳ್ಳಿ ಗ್ರಾಮದ ಮೆಲ್‌ ಗಂಗೊಳ್ಳಿ ವಾಟರ್‌ ಟ್ಯಾಂಕ್‌ ಬಳಿ ತಲುಪುವಾಗ ಒಮ್ಮೆಲೆ ಬ್ರೇಕ್‌ಹಾಕಿದ ಪರಿಣಾಮ ಸಹಸವಾರೆ ಅನಿತಾ ಮೇಸ್ತ ರವರು ರಸ್ತೆಗೆ ಬಿದ್ದ ಪರಿಣಾಮ ಅವರ ತಲೆಗೆ ಒಳಜಖಂ ಹಾಗೂ ಬಲ ಕೈಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಉಡುಪಿ: ವಿಜಯ.ಸಿ, ಎಎಸ್‌ಐ, ಉಡುಪಿ ನಗರ ಪೊಲೀಸ್‌ ಠಾಣೆ ಇವರು ದಿನಾಂಕ 07/11/2021 ರಂದು ಸಂಜೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್‌ ನಿಲ್ದಾಣದ ಹತ್ತಿರ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ 18:20 ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು 18:25 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ನಡೆಸುತ್ತಿದ್ದ ಸೋಮನ ಗೌಡ ಪಾಟೀಲ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 2 ನೇ ಆಪಾದಿತ ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿರುತ್ತಾನೆ. ಆಪಾದಿತನಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 2,660/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1,  ಬಾಲ್‌ ಪೆನ್‌, ಬಜಾಜ್‌ ಡಿಸ್ಕವರಿ ಮೋಟಾರು ಸೈಕಲ್ ನಂಬ್ರ ಕೆಎ-20 ಇಪಿ-8032 ಮತ್ತು 1 ಒಪ್ಪೊ ಮೊಬೈಲ್ ನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 161/2021 ಕಲಂ: 78 (i) (iii) Karnataka Police (Amendment)  ACT-2021 ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾಧ ಮಿಥುನ್ (29) ತಂದೆ:ಸೀತಾರಾಮ್ ಶೆಟ್ಟಿ, ವಾಸ:ಅರೆಕಲ್ಲುಮನೆ,ಕೆದೂರು ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರ ತಂದೆ  ಸೀತಾರಾಮ್ ಶೆಟ್ಟಿ ಯವರು ಒಬ್ಬರೇ ವಾಸವಾಗಿದ್ದು, ಅವರ ಅಕ್ಕ ಸುಶೀಲ ಶೆಡ್ತಿಯವರ ನಡುವೆ ಜಾಗದ ವಿಚಾರದಲ್ಲಿ  ತಕರಾರು ಇದ್ದು ಸಿವಿಲ್ ನ್ಯಾಯಾಲಯದಲ್ಲಿ  ವಿಚಾರಣೆಯಲ್ಲಿದ್ದು. ಇದೇ ವಿಷಯದಲ್ಲಿ ಸೀತಾರಾಮ್ ಶೆಟ್ಟಿಯವರು ಮನೆಯ ಒಳಗೆ ಬಂದು ಎರಡೂ ಬಾಗಿಲ ಚೀಲಕ ಹಾಕಿಕೊಂಡು ಯಾವುದೋ ವಿಷ ಪದಾರ್ಥ / ಕೀಟನಾಶಕ ಸೇವಿಸಿದ್ದರಿಂದ  ಅಸ್ವಸ್ಥರಾದವರನ್ನು ನೆರೆಮನೆಯ ಅನಿಲ್ ಶೆಟ್ಟಿ ಮತ್ತು ಪ್ರಕಾಶ್ ಶೆಟ್ಟಿಯವರು ನೋಡಿ ಕೂಡಲೇ  ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿ  12:15 ಗಂಟೆ ಸಮಯಕ್ಕೆ ಸೀತಾರಾಮ್ ಶೆಟ್ಟಿಯವರನ್ನು ಪರೀಕ್ಷಿಸಿದ ವೈದ್ಯರು ಕರೆದುಕೊಂಡು ಬರುವಾಗಲೇ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಮೃತ ಸೀತಾರಾಮ್ ಶೆಟ್ಟಿಯವರು  ಜಾಗದ ವಿಚಾರದಲ್ಲಿ ಗಲಾಟೆಯಾಗಿರುವುದರಿಂದ ಮನನೊಂದು  ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 (ಸಿ) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ಸಬೀನಾ ಬಾನು (31) ತಂದೆ: ಎನ್ ಸಿರಿಯಾನ್  ವಾಸ: ಮುಬಾರಕ್ ಮಂಜಿಲ್, ಚಾತನಕೆರೆ, ನಾವುಂದ ಗ್ರಾಮ ಬೈಂದೂರು ಇವರ ಗಂಡನ ಅಕ್ಕ ಸಲೀಕಾ ರವರ ಮಗನಾದ 1ನೇ ಆರೋಪಿತ ಸಿಯಾಬ್ ತನ್ನ ಸ್ನೇಹಿತರ ಜೊತೆ ಸೇರಿ ಮದ್ಯಪಾನ, ಮಾದಕ ವಸ್ತುಗಳನ್ನು ಸೇವನೆ ಮಾಡಿಕೊಂಡು ಮನೆಗೆ ಬಂದು ಮನೆಯಲ್ಲಿ ಸಿಗರೇಟ್ ಸೇದಿಕೊಂಡು ಗಲಾಟೆ ಮಾಡುತ್ತಿದ್ದು, ಸಬೀನಾ ಬಾನು ರವರು ಮತ್ತು ಅವರ ಗಂಡ ಹಲವಾರು ಬಾರಿ ಬುದ್ದಿವಾದ ಹೇಳಿದರೂ ಕೇಳದೇ ಇದ್ದು, ಸಬೀನಾ ಬಾನು ರವರ ಅತ್ತೆ ಖತೀಜಾರವರು 1ನೇ ಆರೋಪಿತನನ್ನು ಬೆಂಬಲಿಸಿಕೊಂಡು ಮಾತನಾಡುತ್ತಿದ್ದರು. ದಿನಾಂಕ 07/11/2021 ರಂದು ಬೆಳಿಗ್ಗೆ ಸಮಯ ಸುಮಾರು 9:00 ಗಂಟೆಗೆ ಸಬೀನಾ ಬಾನು ರವರು ಮನೆಯಲ್ಲಿರುವಾಗ ಆರೋಪಿತರು ಬಿಳಿ ಬಣ್ಣದ ಇಟಿಯೋಸ್ ಕಾರಿನಲ್ಲಿ ಬಂದು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ, 1ನೇ ಆರೋಪಿತನು ಬರುವಾಗ ಒಂದು ತಲವಾರನ್ನು ಹಿಡಿದುಕೊಂಡು ಬಂದಿದ್ದು, ಸಬೀನಾ ಬಾನು ರವರನ್ನು ಉದ್ದೇಶೀಸಿ ಕೆಟ್ಟದಾಗಿ ಬೈದು, ಅಲ್ಲದೆ ನಮಗೆ ಮನೆಯಲ್ಲಿ ಬಯ್ಯುತ್ತಿಯಾ ನಾನು ಸಿಗರೇಟು ಸೇದುತ್ತೇನೆ ಏನು ಬೇಕಾದರೂ ಮಾಡುತ್ತೇನೆ ಅದನ್ನು ಕೇಳಲು ನೀನು ಯಾರು ಎಂಬುದಾಗಿ ಹೇಳಿ 1ನೇ ಆಪಾದಿತನು  ಉಳಿದ ಆರೋಪಿತ ಇಸಾಕ್  ಇತರ ಮೂರು ಜನರು ಬಂದು ಗಲಾಟೆ ಮಾಡಿ ಹೊಡೆಯಲು ಬಂದಾಗ ಅವರಿಂದ ತಪ್ಪಿಸಿಕೊಂಡು ಸಬೀನಾ ಬಾನು ರವರ ಗಂಡನಿಗೆ ಮೊಬೈಲ್ ಕರೆ ಮಾಡಿ ಕರೆದಿದ್ದು  ಸ್ವಲ್ಪ ಸಮಯದಲ್ಲಿ ಮನೆಗೆ ಬಂದಿದ್ದು, ಮನೆಗೆ ಬಂದ ಸಬೀನಾ ಬಾನು ಇವರ ಗಂಡನಿಗೆ ಆರೋಪಿತರು ಬೋಸುಡಿ ಮಗನೆ ಬಂದೆಯಾ ಬಾ ಮನೆಯಲ್ಲಿ ಭಾರಿ ಮಾತನಾಡುತ್ತಿಯಾ ನಿನ್ನನ್ನು ಕೊಂದೆ ಬಿಡುತ್ತೇನೆ ಎಂದು 1ನೇ ಆರೋಪಿತನು ತಾನು ತಂದಿದ್ದ ತಲವಾರಿನಿಂದ ಬೀಸಿದ್ದು, ಸಬೀನಾ ಬಾನು ರವರ ಗಂಡ ಬಗ್ಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ನೆಲಕ್ಕೆ ಬಿದ್ದಿದ್ದು ಬಿದ್ದವರನ್ನು ಉಳಿದವರು ಕಾಲಿನಿಂದ ತುಳಿದು ಹಲ್ಲೆ ಮಾಡಿರುತ್ತಾರೆ, 1ನೇ ಆರೋಪಿತನು ಸಬೀನಾ ಬಾನು ಇವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳವ ಉದ್ದೇಶದಿಂದ ಕುತ್ತಿಗೆಗೆ ಕೈಹಾಕಿದ್ದು ಸಬೀನಾ ಬಾನು ರವರು ತಡೆದಾಗ 1ನೇ ಆರೋಪಿತನು ಕೈಯಿಂದ ಕೆನ್ನಗೆ ತಲೆಗೆ ಹೊಡೆಯುತ್ತಿದ್ದು ಸಬೀನಾ ಬಾನು ರವರ ಗಂಡ 1ನೇ ಆರೋಪಿತನ ಕೈಯನ್ನು ಹಿಡಿದುಕೊಂಡಿದ್ದು, 1ನೇ ಆರೋಪಿತನು ತಪ್ಪಿಸಿಕೊಳ್ಳಲು ಕೈಯನ್ನು ಹಿಂದಕ್ಕೆ ಎಳೆದುಕೊಂಡಾಗ ಆತನ ಕೈ ಕಿಟಕಿಯ ಗಾಜಿಗೆ ತಾಗಿ ಗಾಜು ಒಡೆದು 1ನೇ ಆರೋಪಿತನಿಗೆ ಕೈಗೆ ರಕ್ತಗಾಯ ಆಗಿರುತ್ತದೆ. ಈ ಘಟನೆ ನಡೆಯುವಾಗ ಸಬೀನಾ ಬಾನು ರವರ ಅತ್ತೆ ಖತೀಜಾ ರವರು ಸ್ಥಳದಲ್ಲಿ ಇದ್ದು ಆರೋಪಿತರಿಗೆ ಹೊಡೆದು ಕೊಲ್ಲುವಂತೆ ಜೀವ ಬೆದರಿಕೆ ಹಾಕಿರುತ್ತಾರೆ. ಸಬೀನಾ ಬಾನು ರವರ ಗಂಡ ಹಾಗೂ ಮಕ್ಕಳು ಆರೋಪಿತರು ಕೊಂದುಹಾಕುವ ಭಯದಿಂದ ಕೂಗಿಕೊಂಡಾಗ ನೆರೆಕರೆಯವರು ಬರುವುದನ್ನು ನೋಡಿ ಅಲ್ಲಿಂದ ಆರೋಪತರು ಬಂದಿದ್ದ ಕಾರಿನಲ್ಲಿ ಪರಾರಿ ಆಗಿರುತ್ತಾರೆ. ಆ ಸಮಯ ಫಿರ್ಯಾದಿದಾರರು ಆರೋಪಿತರು ಬಂದ ಕಾರಿನ ನಂಬ್ರ ನೋಡಿದ್ದು ಅದರ ನಂಬ್ರ ಕೆಎ-20 ಝಡ್-7138 ಆಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2021 ಕಲಂ: 447, 354, 327, 323, 504, 506  ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-11-2021 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080