ಅಭಿಪ್ರಾಯ / ಸಲಹೆಗಳು

ಅಪಘಾತ  ಪ್ರಕರಣಗಳು

  • ಉಡುಪಿ: ಪಿರ್ಯಾದಿ: ಜಯಲಕ್ಷ್ಮೀ ಆರ್ ಭಂಡಾರಿ (51) ಗಂಡ: ರಮೇಶ ಭಂಡಾರಿ ವಾಸ: ಸಂತೋಷ ನಿಲಯ ಗೋಪಾಲಪುರ ಮಠದ ಹತ್ತಿರ ಸಂತೆಕಟ್ಟೆ ಇವರು ದಿನಾಂಕ 08/10/2022 ರಂದು ಬೆಳಿಗ್ಗೆ ಉಡುಪಿ ಕೃಷ್ಣ ಮಠಕ್ಕೆ ತನ್ನ  ಸ್ಕೂಟರ್ ನಂಬ್ರ KA20EX7346 ನೇದರಲ್ಲಿ ಮನೆಯಾದ ಸಂತೆಕಟ್ಟೆಯಿಂದ ಉಡುಪಿ ಕಡೆಗೆ ರಾಹೆ-66 ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 08:45 ಗಂಟೆಗೆ ಪುತ್ತೂರು ಗ್ರಾಮದ ಬಾಳಿಗಾ ಜಂಕ್ಷನ್‌ಗಿಂತ ಸ್ವಲ್ಪ ಮುಂದೆ ತಲುಪುವಾಗ ಹಿಂದುಗಡೆಯಿಂದ ಅಂದರೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA20C6566  ನೇ ಬಸ್ಸನ್ನು ಅದರ ಚಾಲಕ ಮಂಜುನಾಥ್ ಎಂಬಾತನು  ತಾನು ಚಲಾಯಿಸುತ್ತಿದ್ದ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾಬದಿಗೆ ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲಭಾಗದ ಸೈಡ್ ಮಿರರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಬಳಿ ಗಂಬೀರ ಸ್ವರೂಪದ ಮೂಳೆ ಮುರಿತದ ಜಖಂ, ಬಲಕಾಲಿಗೆ ಗುದ್ದಿದ ಒಳ ಜಖಂ , ಬಲಕಾಲಿನ ಪಾದದ ಬಳಿ ತರಚಿದ ರಕ್ತಗಾಯ ಆಗಿದ್ದು, ಅಲ್ಲದೇ ಎಡಕೈಯ ಮೊಣಗಂಟಿನ ಬಳಿ ತರಚಿದ ರಕ್ತಗಾಯ ಆಗಿರುತ್ತದೆ. ಗಾಯಾಳು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 79/2022 ಕಲಂ: 279, 338, ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಉಡುಪಿ : ದಿನಾಂಕ 04.09.2022 ರಂದು ಇನ್ಟಾಗ್ರಾಮ್ ನಲ್ಲಿ Jovan-871 ಎಂಬ ವ್ಯಕ್ತಿ ತಾನು ಕೆನಡಾದಲ್ಲಿ ಡಾಕ್ಟರ್ ಎಂಬುದಾಗಿ ಪಿರ್ಯಾದಿ ಲವೀನಾ ಜೆನಿಫರ್ ಮೊರಾಸ್‌  ಪ್ರಾಯ:48ವರ್ಷ, ಗಂಡ: ವಿನ್ಸೆಂಟ್ ಸಿರಿಲ್ ಮಾರಾಸ್, ವಾಸ: ದೇವುಬೈಲ್, 4 ನೇ ಕ್ರಾಸ್, ಚಾಂತಾರು ಇವರನ್ನು ಪರಿಚಯಿಸಿಕೊಂಡು, ನಂತರ ವಾಟ್ಸ್ಅಪ್ ಮುಖೇನ ಚಾಟಿಂಗ್ ನಡೆಸಿ, ಸ್ನೇಹಿತರಾಗಿದ್ದು, ದಿನಾಂಕ 02.10.2022 ರಂದು ಆತನು Iphone, Gold, US Doller ಕಳುಹಿಸುವುದಾಗಿ ಪಿರ್ಯಾದಿದಾರರನ್ನು ನಂಬಿಸಿದ್ದು, ಅದಾದ ಬಳಿಕ ಕಸ್ಟಮ್ ಅಧಿಕಾರಿ ಎಂದು ಮೊ. 9233013312 ನೇ ನಂಬ್ರದ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆನಡಾದಿಂದ ಬಂದಿರುವ ಪಾರ್ಸೆಲ್ ಗೆ ಪಾರ್ಸೆಲ್ ಚಾರ್ಜ್‌, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್ ಪಡೆಯುವರೆ ಹಣ ಪಾವತಿಸಬೇಕು ಎಂದು ತಿಳಿಸಿದ್ದು, ಪಿರ್ಯಾದಿದಾರರು ಅದನ್ನು ನಂಬಿ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 16,89,862/- ಹಣವನ್ನು ಪಾವತಿಸಿರುತ್ತಾರೆ ಆರೋಪಿಗಳು ಡಾಕ್ಟರ್ ಎಂದು, ಗಿಫ್ಟ್ ಪಾರ್ಸೆಲ್  ಕಳಿಸುವುದಾಗಿ ನಂಬಿಸಿ, ಕಸ್ಟಮ್ ಅಧಿಕಾರಿಗಳಂತೆ ಬಿಂಬಿಸಿ, ಪಿರ್ಯಾದಿದಾರರಿಂದ  ಒಟ್ಟು ರೂ. 16,89,862/- ಹಣವನ್ನು ಪಡೆದು, ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  82/2022  ಕಲಂ 66(ಡಿ), ಐ.ಟಿ. ಆಕ್ಟ್ ಮತ್ತು ಕಲಂ 420 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ

  • ಮಲ್ಪೆ: ಪಿರ್ಯಾದಿ ರಕ್ಷಿತ್ ಕುಂದರ (26) ತಂದೆ: ಶಂಕರ ಸುವರ್ಣವಾಸ: ಸುವರ್ಣ ಮಾತಾ ,ಕದಿಕೆ, ಬಡನಿಡಿಯೂರು ಇವರು  ದಿನಾಂಕ: 07-10-2022 ರಂದು ಅವರ ಸ್ನೇಹಿತರಾದ ಶಿವರಾಜ್ (32 ವರ್ಷ) ರೊಂದಿಗೆ ಸಂಜೆ 5:00 ಗಂಟೆ ಸಮಯಕ್ಕೆ ಕಲ್ಯಾಣಪುರದ  ಸ್ವರ್ಣ ನದಿಯಲ್ಲಿ  ದೋಣಿಯಲ್ಲಿ  ಬಲೆ  ಹಾಕಿ ಮೀನು ಹಿಡಿಯಲು ಹೋಗಿದ್ದು,ಇಬ್ಬರು  ಬೇರೆ ಬೇರೆ ಎರಡು ಸಣ್ಣ ದೋಣಿಗಳಲ್ಲಿ ಕಲ್ಯಾಣಪುರ ಕಡವಿನ ಬಾಗಿಲಿನ ಬಳಿ  ಹೊಳೆಯಲ್ಲಿ ಬಲೆ ಬೀಸಿ ಮೀನು ಹಿಡಿಯುತ್ತಿದ್ದು , ಸಮಯ  ಸುಮಾರು 6:00 ಗಂಟೆಯ ಸಮಯಕ್ಕೆ ಶಿವರಾಜ್  ಮೀನುಗಾರಿಕೆ ನಡೆಸುತ್ತಿರುವ ದೋಣಿಯಲ್ಲಿ ಕಾಣಿಸದೆ ಇದ್ದಾಗ ಪಿರ್ಯಾದಿದಾರರು  ಆತನ ದೋಣಿಯ ಬಳಿ ಬಂದು  ನೋಡಿದಾಗ  ಆತನು ಹೊಳೆಯ  ನೀರಿನಲ್ಲಿ ಈಜುತ್ತ ದಡದ ಬದಿಗೆ ಹೋಗುತ್ತಿದ್ದು , ದಡದಿಂದ  ಸುಮಾರು 50 ಮೀಟರ್  ದೂರುದಲ್ಲಿ ಶಿವರಾಜ್ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು ಆತನ ನನ್ನು ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಶಿವರಾಜನು ಕಲ್ಯಾಣಪುರ ಸ್ವರ್ಣ ನದಿಯಲ್ಲಿ ದೋಣಿಯಲ್ಲಿ  ಬಲೆ  ಬೀಸಿ ಮೀನುಗಾರಿಕೆ ಮಾಡುತ್ತಿರುವ ಸಮಯ ಆಕಸ್ಮಿಕವಾಗಿಯೂ ಅಥವಾ ಇನ್ಯಾವುದೋ ಕಾರಣದಿಂದ ಹೊಳೆಯ ನೀರಿಗೆ ಬಿದ್ದು ಆತನು ಈಜುತ್ತ ದಡ ಸೇರಲು ಪ್ರಯತ್ನಿಸುತ್ತಾ ಸಾಧ್ಯವಾಗದೇ ಹೊಳೆಯ ನೀರಿನಲ್ಲಿ ಮುಳುಗಿ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 83/2022 . ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 08-10-2022 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080