ಅಭಿಪ್ರಾಯ / ಸಲಹೆಗಳು

ಅಪಘಾತ  ಪ್ರಕರಣಗಳು

  • ಕುಂದಾಪುರ:  ದಿನಾಂಕ 07/10/2022 ರಂದು ಬೆಳಿಗ್ಗೆ  ಸುಮಾರು 11:30 ಗಂಟೆಗೆ,  ಕುಂದಾಪುರ  ತಾಲೂಕಿನ, ಬೀಜಾಡಿ  ಗ್ರಾಮದ  ಬೀಜಾಡಿ ವೈ ಜಂಕ್ಷನ್ ಬಳಿ ಎನ್ ಹೆಚ್ 66   ರಸ್ತೆಯಲ್ಲಿ, ಆಪಾದಿತ ಸುರೇಶ  ಎಂಬವರು KA41 MA 9386 ನೇ ಕಾರನ್ನು  ಕುಂಭಾಶಿ    ಕಡೆಯಿಂದ ಕುಂದಾಪುರ   ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಬರುತ್ತಾ  ಪಿರ್ಯಾದಿ ಕೆ ಶ್ರೀನಿವಾಸ ಪ್ರಾಯ: 48 ವರ್ಷ ತಂದೆ : ಕೆ ಪಣಿಯಪ್ಪಯ್ಯ ವಾಸ :ಶ್ರೀ ವಿಘ್ನೇಶ್ವರ ಕೃಪಾ ಟಿ ಟಿ ರಸ್ತೆ , ವಡೇರಹೋಬಳಿ ಇವರು  ಕುಂಭಾಶಿ ಕಡೆಯಿಂದಕುಂದಾಪುರ ಕಡೆಗೆಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20 EB 4496 ನೇ ಮೋಟಾರ್ ಸೈಕಲ್ ನ್ನು  ಓವರ್ ಟೇಕ್ ಮಾಡುವಾಗ ಕಾರಿನ ಎಡ ಭಾಗ ಮೋಟಾರ್  ಸೈಕಲಿನ ಬಲಬದಿಗೆ ತಾಗಿದ ಪರಿಣಾಮ ದೂರುದಾರರು ಮತ್ತು ಮೋಟಾರ್ ಸೈಕಲ್ ರಸ್ತೆಗೆ ಬಿದ್ದು ದೂರುದಾರರ  ಬಲಭುಜಕ್ಕೆ ಒಳಜಖಂ ಮತ್ತು  ಬಲಕೈ ಮತ್ತು ಬಲಕಾಲಿಗೆ ತರಚಿದ ರಕ್ತಗಾಯ ಉಂಟಾಗಿದ್ದು ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ  104/2022  ಕಲಂ 279, 337    ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕುಂದಾಪುರ: ದಿನಾಂಕ 08/09/2022  ರಂದು  ರಾತ್ರಿ  ಸುಮಾರು 20:30  ಗಂಟೆಗೆ, ಕುಂದಾಪುರ  ತಾಲೂಕಿನ ಕೋಟೇಶ್ವರ ಗ್ರಾಮದ ಕಾಗೇರಿ ಜಂಕ್ಷನ್ ಬಳಿ ರಸ್ತೆಯಲ್ಲಿ, ಆಪಾದಿತ ಸಂದೇಶ ಎಂಬವರು  KA20EQ-5518 ನೇ ಸ್ಕೂಟಿಯನ್ನು ಹಾಲಾಡಿ ಕಡೆಯಿಂದ ಕೋಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಎಡಭಾಗಕ್ಕೆ ಸವಾರಿ ಮಾಡಿಕೊಂಡು ಬಂದು, ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿ ಗಣಪಯ್ಯ ಶೇರಿಗಾರ ಪ್ರಾಯ  73   ವರ್ಷ  ತಂದೆ ದಿ. ಮಂಜುನಾಥ ಶೇರೆಗಾರ್ ವಾಸ:ಸಂತೃಪ್ತಿ ನಿಲಯ ಕಾಗೇರಿ ಕೋಟೇಶ್ವರ ಇವರರ ಹೆಂಡತಿ ಲಲಿತ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಆಕೆಯ ಸೊಂಟಕ್ಕೆ ಕಾಲಿಗೆ ತಲೆಯ ಬಳಿ ನೋವು ಉಂಟಾಗಿ ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ ಕುಂಧಾಪುರ ತಾಲೂಕು ಆಸ್ಪತ್ರೆಗೆ ಹೋಗಿ ದಾಖಲಿಸಿರು ವುದಾಗಿದೆ.ದಿನಾಂಕ:06-10-2022 ರಂದು ಗಾಯಾಳು ಲಲಿತಾ ರವರಿಗೆ  ತಲೆ ನೋವು ಕಾಣಿಸಿಕೊಂಡಿದ್ದು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ತೀವ್ರ ಸ್ವರೂಪದ ಗಾಯವಾಗಿ ಕೂಡಲೆ ಶಸ್ತ್ರಚಿಕಿತ್ಸೆ ಆಗಬೇಕೆಂದು ತಿಳಿಸಿದ್ದು ,ಶಸ್ತ್ರ ಚಿಕಿತ್ಸೆ ಮಾಡಿ ಆಸ್ಪತ್ರೆಯ ತುರ್ತು ಘಟಕದಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ,ಅಪಘಾತವಾದ ಸಮಯ ಗಾಯಾಳುವಿಗೆ ಸಣ್ಣಪುಟ್ಟ ಗಾಯವಾಗಿರಬಹುದು ಎಂದು ತಿಳಿದು ಗಾಯಾಳು ಆ ದಿನ  ಯಾವುದೇ ಕಾನೂನು ಕ್ರಮ ಅವಶ್ಯಕತೆ ಇಲ್ಲವೆಂದು ಮಗನಾದ ಕೃಷ್ಣ ಶೇರೆಗಾರ ಮುಖೇನ ಮನವಿ ಪತ್ರವನ್ನು ನೀಡಿದ್ದು,ಆದರೆ ಪ್ರಸ್ತುತ ಗಾಯಾಳುವಿಗೆ ಈ ಘಟನೆಯಿಂದ ವಿಪರೀತ ತಲೆನೋವು ಕಾಣಿಸಿ ಕೊಂಡಿದ್ದರಿಂದ ದಿನಾಂಕ:06-10-2022 ರಂದು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಹಾಗಾಗಿ ದೂರು ನೀಡುವರೇ ವಿಳಂಬವಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 105/2022  ಕಲಂ 279 338   ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿ ಉದಯ ಕುಮಾರ್ ಶೆಟ್ಟಿ ಪ್ರಾಯ 56 ವರ್ಷ ತಂದೆ: ಶೇಶಪ್ಪಶೆಟ್ಟಿ ವಾಸ:  ಯಡಾಳ ಬೆಟ್ಟು ಮೊಳಹಳ್ಳಿ ಇವರ ತಂಗಿಯ ಮಗ ನವೀನ ಶೆಟ್ಟಿ( (32  ವರ್ಷ ರವರು ನ್ಯಾಯಾಲಯದಲ್ಲಿ ಸುಮಾರು 6-7 ವರ್ಷಗಳಿಂದ  ಅಟೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದು  ಸುಮಾರು ಒಂದೂವರೆ ವರ್ಷಗಳಿಂದ ಅಮಾನತಿನಲ್ಲಿ ಇರಿಸಿದ್ದು  ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು. ಈ ದಿನ ದಿನಾಂಕ  07/10/2022 ರಂದು 12.30 ಗಂಟೆಯಿಂದ 16.00 ಗಂಟೆಯ   ಮಧ್ಯಾವಧಿಯಲ್ಲಿ   ಮನೆಯ ತೋಟಕ್ಕೆ ನೀರಿನ ಉದ್ದೇಶಕ್ಕೆ ಮಾಡಿದ ಕೆರೆಯ ಬಳಿಗೆ ಹೋಗಿ  ಆಕಸ್ಮಿಕವಾಗಿಯೋ ಅಥವಾ ಆತ್ಮಹತ್ಯೆ  ಮಾಡಿಕೊಳ್ಳುವ ಉದ್ದೇಶದಿಂದಲೋ  ಕೆರೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾನೆ. ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ನಂಬ್ರ 44/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ: ಪಿರ್ಯಾದಿ ರಾಘವೇಂದ್ರ ಶೇರಿಗಾರ್ (49) ತಂದೆ: ದಿ|| ಗೋಪಲಾಲ್ ಶೆರಿಗಾರ್ ವಾಸ: ಶ್ರೀ ದೈವಾನುಗ್ರಹ, ಪರ್ಕಳ ಇವರ ಕಿರಿಯ ತಮ್ಮನಾದ ಗಣೇಶ ಶೇರಿಗಾರ (43)  ಎಂಬಾತನು ಶ್ರೀನಿವಾಸ ನಗರ  ಕಾಜರಗುತ್ತು, ಅಂಜಾರು ಗ್ರಾಮದಲ್ಲಿ ತನ್ನ  ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಪಿಗ್ಮಿ ಕಲೇಕ್ಷನ್ ಕೆಲಸ ಮಾಡಿಕೊಂಡಿದ್ದನು.   ಗಣೇಶನು ಅತನಿಗಿರುವ ಸಾಲದ ಭಾದೆಯಿಂದ ಮಾನಸಿಕವಾಗಿ ನೊಂದು  ಅಥಾವ  ಇನ್ನಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ: 07/10/2022 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯ ಮಧ್ಯಾವದಿಯಲ್ಲಿ ತನ್ನ ವಾಸ್ತವ್ಯದ ಮನೆಯಲ್ಲಿ ಯಾರೂ ಇಲ್ಲದ ಸಮಯ ಚೂಡಿದಾರದ ಶಾಲಿನಿಂದ ಮನೆಯ ಹಾಲಿನ ತಗಡು ಶೀಟಿನ  ಜಂತಿಗೆ ನೇಣು ಬಿಗಿದು  ಅತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಗಿದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 38/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 08-10-2022 11:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080