ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಸುಹೇಲ್ (24), ತಂದೆ: ಇಕ್ಬಾಲ್, ವಾಸ: ಸಿಟಿ ಶಾಮಿಯಾನ ಎದುರು, ಹಂಗಳೂರು ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 07/10/2021 ರಂದು ತ್ರಾಸಿ ಬಸ್ ನಿಲ್ದಾಣದ ಬಳಿ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವಾಗ ಮದ್ಯಾಹ್ನ ಅವರ ಪರಿಚಯವಿರುವ ಮಾವಿನಕಟ್ಟೆಯ  ಮಯ್ಯದಿರವರು ಪಿರ್ಯಾದಿದಾರರ ಬಳಿ ಮಾತನಾಡಿಕೊಂಡು ನಂತರ ಮನೆಗೆ ಹೋಗುವ ಬಗ್ಗೆ ಹೊರಟು ಮದ್ಯಾಹ್ನ 12:20 ಗಂಟೆಗೆ ರಸ್ತೆ ಕ್ರಾಸ್ ಮಾಡಲು ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಬಸ್ ನಿಲ್ದಾಣದ ಬಳಿ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ ರಾಘವೇಂದ್ರ ರಾವ್ ಎಂಬುವವರು ತನ್ನ KA-20-B-3545 ನೇ ಕಾರನ್ನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ತೀರಾ ಎಡಬದಿಗೆ ಬಂದು ಮಣ್ಣು ರಸ್ತೆಯಲ್ಲಿ  ನಿಂತುಕೊಂಡಿದ್ದ ಮಯ್ಯದಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ಬಿದ್ದಿದ್ದು ಮಯ್ಯದಿಯವರ ತಲೆಗೆ ರಕ್ತಗಾಯ ಹಾಗೂ ಕೈಕಾಲುಗಳಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದ್ದು ಮಯ್ಯದಿರವರನ್ನು  ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

 • ಬ್ರಹ್ಮಾವರ: ಬೈಕಾಡಿ ಗ್ರಾಮದ ಗಾಂಧಿ ನಗರದ ನಾಗದೇವರು ಮತ್ತು  ನಾಗ ಕನ್ನಿಕಾ ಅಮ್ಮನವರ ದೇವಸ್ದಾನದಲ್ಲಿ ದಿನಂಪ್ರತಿ ಪೂಜೆ  ಆದ ಬಳಿಕ  ರಾತ್ರಿ 8:30 ಗಂಟೆಗೆ  ದೇವಸ್ದಾನದ ಬಾಗಿಲು ಹಾಕುವಂತೆ ದಿನಾಂಕ 04/10/2021 ರಂದು ಪೂಜೆಯ ನಂತರ ದೇವಸ್ದಾನದ ಬಾಗಿಲಿಗೆ ಪಿರ್ಯಾದಿದಾರರಾದ ಕೃಷ್ಣ ರಾವ್‌‌‌‌ (49), ತಂದೆ: ಶ್ರೀನಿವಾಸ ರಾವ್‌‌‌, ವಾಸ: ಗುಲಾಬಿ ನಿಲಯ‌‌, ಗಾಂಧಿನಗರ ಬೈಕಾಡಿ ಗ್ರಾಮ ಹಾರಾಡಿ ಅಂಚೆ ಬ್ರಹ್ಮಾವರ ತಾಲೂಕು ಇವರು ಬೀಗ ಹಾಕಿ ಹೋಗಿದ್ದು ದಿನಾಂಕ 05/10/2021 ರಂದು ಬೆಳಿಗ್ಗೆ 7:30 ಗಂಟೆಗೆ ದೇವಸ್ದಾನದ ಬಾಗಿಲು ತೆರೆಯಲು ಪಿರ್ಯಾದಿದಾರರು ಹೋಗಿ ನೋಡುವಾಗ ದೇವಸ್ದಾನದ ಮುಖ್ಯ ದ್ವಾರದ ಸ್ಟೀಲಿನ ಗೇಟಿಗೆ ಹಾಕಿದ ಬೀಗ ಇಲ್ಲದೇ ಇದ್ದು ದೇವಸ್ದಾನದ ಗರ್ಭ ಗುಡಿಗೆ ಹೋಗಿ ನೋಡಿದಾಗ ದೇವಸ್ದಾನದ  ಕಾಣಿಕೆಯ  ಸ್ಟೀಲ್‌ನ ಹುಂಡಿ ಇಲ್ಲದೇ ಇದ್ದು ಯಾರೋ ಕಳ್ಳರು ದೇವಸ್ದಾನದ ಮುಖ್ಯ ದ್ವಾರದ ಸ್ಟೀಲ್‌‌ ಗೇಟ್‌ಗೆ  ಹಾಕಿದ ಬೀಗವನ್ನು ಒಡೆದು  ಒಳ ಪ್ರವೇಶಿಸಿ ದೇವಸ್ದಾನದಲ್ಲಿದ್ದ  ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಘಟನೆ ದಿನಾಂಕ 04/10/2021 ರಂದು ರಾತ್ರಿ 8:30 ಗಂಟೆಯಿಂದ ದಿನಾಂಕ 05/10/2021 ರ ಬೆಳಗಿನ ಜಾವ 6:00 ಗಂಟೆಯ ಒಳಗೆ ಸಂಭವಿಸಿರುತ್ತದೆ. ಕಾಣಿಕೆ ಹುಂಡಿಯಲ್ಲಿ ಅಂದಾಜು 1,000/-ರೂಪಾಯಿ ಹಣ ಇದ್ದಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 177/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾದ ಸುರೇಶ್ ಸುವರ್ಣ(67), ತಂದೆ: ದಿ: ದೇವರಾಜ್ ಸುವರ್ಣ, ವಾಸ: ಸುವರ್ಣ ಕಾಂಪ್ಲೆಕ್ಸ್, ಶಿರ್ವ ಬಸ್ ನಿಲ್ದಾಣ ಬಳಿ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 07/10/2021 ರಂದು ಬೆಳಿಗ್ಗೆ 11:30 ಗಂಟೆಗೆ ಶಿರ್ವಾ ಗ್ರಾಮದ ಶಿರ್ವಾ ವಿಮಲ್ ಕಾಂಪ್ಲೆಕ್ಸ್‌ ನ ಹಿಂದುಗಡೆ ಇರುವ ತನ್ನ ತಮ್ಮ ಪ್ರತೀಶ್ ಸುವರ್ಣ ಮತ್ತು ಜ್ಯೋತಿಲತಾ ಸುವರ್ಣರವರಿಗೆ ಸೇರಿದ ಜಾಗ ಮತ್ತು ಶೆಡ್‌ನ್ನು ನೋಡಲು ಪಿರ್ಯಾದಿದಾರರಿಗೆ ಜಿಪಿಎ ನೀಡಿದ್ದು, ಜಾಗವನ್ನು ನೋಡಲು ತನ್ನ ತಮ್ಮ ಜಯಪ್ರಕಾಶ್ ಸುವರ್ಣರವರೊಂದಿಗೆ ಬಂದಾಗ ಶೆಡ್‌ನಲ್ಲಿ ಆರೋಪಿ ದಿನೇಶ್ ಸುವರ್ಣ ಬೇರೆಯವರಿಗೆ ಬಾಡಿಗೆ ನೀಡಿದ್ದು, ಪಿರ್ಯಾದಿದಾರರು ಬಾಡಿಗೆದಾರರಲ್ಲಿ  ಶೆಡ್‌ನ್ನು ನೆಲಸಮ ಮಾಡುತ್ತಿದ್ದು, ನೀವುಗಳು ಒಂದು ವಾರದಲ್ಲಿ ಖಾಲಿ ಮಾಡುವುದು ಎಂಬುದಾಗಿ ಹೇಳಿದಾಗ ಆರೋಪಿತನು ಅಲ್ಲಿಗೇ ಬಂದು  ಜಾಗವು ನನ್ನ ಸ್ವಾಧೀನದಲ್ಲಿದೆ ಎಂಬುದಾಗಿ ಹೇಳಿ ಪಿರ್ಯಾದಿದಾರರಿಗೆ ಮತ್ತು ಜಯಪ್ರಕಾಶ್ ಸುವರ್ಣರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಒಂದು ಮರದ ಸೊಂಟೆಯಿಂದ ಜಯಪ್ರಕಾಶ್ ರವರ ಎಡ ಕೈಗೆ, ಹೊಟ್ಟೆಗೆ, ಕಾಲಿಗೆ ಹೊಡೆದಿದ್ದು, ಆ ಸಮಯ ಕುಬೇರಾ ಎಂಟರ್ ಪ್ರೈಸಸ್‌ನ ಮಾಲಕರಾದ ಹರಿಪ್ರಸಾದ್‌ ರವರು ಅಲ್ಲಿಗೆ ಬಂದಿದ್ದು ಅವರಿಗೂ ಅವಾಚ್ಯ ಶಬ್ದಗಳಿಂದ ಬೈದು ನಂತರ ಆರೋಪಿಯು ತನ್ನ ಕಛೇರಿಯಲ್ಲಿದ್ದ ಮಾರಕಾಸ್ತ್ರವನ್ನು ತೆಗೆದುಕೊಂಡು ಬಂದು ಪಿರ್ಯಾದಿದಾರರನ್ನು, ಜಯಪ್ರಕಾಶ್ ಮತ್ತು ಹರಿಪ್ರಸಾದ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರವನ್ನು ಬೀಸಿದ್ದು, ಆ ಸಮಯ ಹರಿಪ್ರಸಾದ್‌ರವರ ಎಡ ಕೈಯ ಕಿರು ಬೆರಳಿಗೆ ತಾಗಿ ರಕ್ತಗಾಯವಾಗಿರುತ್ತದೆ ನಂತರ ನಿಮ್ಮನ್ನೆಲ್ಲಾ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಮಾರಕಾಸ್ತ್ರವನ್ನು ಅಲ್ಲಿಯೇ ಬೀಸಾಡಿ ಅಲ್ಲಿಂದ ಪರಾರಿಯಾಗಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 504, 324, 307, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಸದಾಶಿವ (56), ತಂದೆ :ಬೋಳ ಮೇಸ್ತ್ರಿ, ವಾಸ: 12-2-20 ರಾಮ ನಿಲಯ ವಿನೋಬ ನಗರ ಕಾಡಬೆಟ್ಟು, ಮೂಡನಿಡಂಬೂರು ಗ್ರಾಮ ಉಡುಪಿ ತಾಲೂಕು ಇವರು ಆಟೋ ಚಾಲಕ ವೃತ್ತಿ ಮಾಡಿಕೊಂಡಿದ್ದು, ರನ್ನಿಂಗ್ ನಲ್ಲಿ ಬಾಡಿಗೆ ಸಿಕ್ಕಿದಲ್ಲಿ ಬಾಡಿಗೆ ಮಾಡುವುದಾಗಿದೆ. ದಿನಾಂಕ 07/10/2021 ರಂದು ಬೆಳಿಗ್ಗೆ 07:15 ಗಂಟೆಗೆ ಬಾಡಿಗೆಯೊಂದನ್ನು ಬಿಟ್ಟು ಬ್ರಹ್ಮಗಿರಿ ಜಂಕ್ಷನ್ ಬಳಿ ಬರುವಾಗ ಅಂಬಲಪಾಡಿ ಜಂಕ್ಷನ ನಲ್ಲಿ ಬಸ್ ನಿಲ್ಲುವ ಸ್ಧಳದಲ್ಲಿ ಮಹಿಳೆಯೊಬ್ಬರು ಪಿರ್ಯಾದಿದಾರರ ಆಟೋಗೆ ಕೈ ತೋರಿಸಿದ್ದು ಆಟೋದಲ್ಲಿ ಮಹಿಳೆ ಕುಳಿತುಕೊಂಡಿರುತ್ತಾರೆ.  ಅದೇ ಸಮಯ 07:30 ರಿಂದ 07:45 ಗಂಟೆಗೆ ಅಂಬಲಪಾಡಿ ಆಟೋ ಸ್ಟ್ಯಾಂಡ್ ಚಾಲಕರೊಬ್ಬರು ಪಿರ್ಯಾದಿದಾರರ ಆಟೋ ರಿಕ್ಷಾಕ್ಕೆ ಅವರ ಆಟೋವನ್ನು ಅಡ್ಡವಾಗಿ ನಿಲ್ಲಸಿ ಮಹಿಳೆಯನ್ನು ಆಟೋದಿಂದ ಇಳಿಸುವಂತೆ ಬೆದರಿಸಿದ್ದು, ಮಹಿಳೆಯು ಆಟೋದಿಂದ ಇಳಿಯದೇ ಇದ್ದು ಆಟೋ ಚಾಲಕನು ಮಹಿಳೆಯನ್ನು ಇಳಿಸುತ್ತಿಯ ಇಲ್ಲವ ಎಂದು ಗದರಿಸಿ ಪಕ್ಕದ ಬಾರಿನ ಹೊರಭಾಗದಲ್ಲಿ ಇಡಲಾದ ಗಾಜಿನ ಬಾಟಲಿಯನ್ನು ತಂದು ಪಿರ್ಯಾದಿದಾರರ ಕೊರಳ ಪಟ್ಟಿಗೆ ಕೈ ಹಾಕಿ ಹೊರಗೆ ಎಳೆದು ಬಾಟಲಿಯಿಂದ ತಲೆಗೆ ಜೋರಾಗಿ ಹೊಡೆದಿದ್ದು ತಲೆಗೆ ರಕ್ತಗಾಯವಾಗಿದ್ದು ಈ ಬಗ್ಗೆ ಚಿಕಿತ್ಸೆಯ ಸಲುವಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 143/2021 ಕಲಂ: 341, 323, 324, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 08-10-2021 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080