ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಷಣ್ಮುಗ ಪೋತರಾಜ್ (48) ತಂದೆ :ದ್ಯಾಮಪ್ಪ ವಾಸ: ಶಾಲಿನಿ ನಿಲಯ ಬನ್ನಂಜೆ, ಮೂಡನಿಡಂಬೂರು ಗ್ರಾಮ ಉಡುಪಿ ಇವರು ಮೂಡನಿಡಂಬೂರು ಗ್ರಾಮದ ಗರಡಿ ರಸ್ತೆಯಲ್ಲಿರುವ ಶಾಲಿನಿ ರವರ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇರುವುದಾಗಿದ್ದು, ಇವರು KA-20 S-6393 ನೇ ಹಿರೋ ಹೊಂಡಾ ಗ್ಲಾಮರ್ ಬೈಕ್ ನ ಆರ್ ಸಿ ಮಾಲೀಕರಾಗಿದ್ದು ದಿನಾಂಕ 01/10/2021 ರಂದು ಕೆಲಸಕ್ಕೆ ಬೈಕ್ ತೆಗೆದುಕೊಂಡು ಹೋಗಿದ್ದು ರಾತ್ರಿ 9:00 ಗಂಟೆಗೆ ಬೈಕ್‌ನ್ನು ತಾನು ವಾಸವಿರುವ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ 02/10/2021 ರಂದು ಬೆಳಿಗ್ಗೆ 4:00 ಗಂಟೆಗೆ ಎದ್ದು ನೋಡಲಾಗಿ ಬೈಕ್ ನಿಲ್ಲಿಸಿದ ಸ್ದಳದಲ್ಲಿ ಇಲ್ಲದೇ ಇದ್ದು ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದು, ಷಣ್ಮುಗ ಪೋತರಾಜ್ ರವರು ಬೈಕ್ ನ್ನು ಎಲ್ಲಾ ಕಡೆಗಳಲ್ಲಿ ಹುಡುಕಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 144/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಜಯಂತಿ (43), ತಂದೆ: ನಾರಾಯಣ ವಾಸ: ಲಕ್ಷ್ಮಿ ಬಾರ ಹಿಂಭಾಗ, ಕುದ್ರುಬೆಟ್ಟು, ಉಪ್ಪೂರು ಗ್ರಾಮ, ಬ್ರಹ್ಮಾವರ ಇವರ ಗಂಡ ನಾರಾಯಣ (60) ಇವರು ಕೂಲಿ ಕೆಲಸ ಮಾಡಿಕೊಂಡಿದ್ದು ಮನೆಯಲ್ಲಿ ಒಬ್ಬರೇ ವಾಸಮಾಡಿಕೊಂಡಿರುತ್ತಾರೆ. ಜಯಂತಿ ರವರು ಅವರ ತವರು ಮನೆಯಲ್ಲಿ ಮಕ್ಕಳೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ನಾರಾಯಣ ಇವರ ಅಕ್ಕ ಗೋಪಿಯವರು ದಿನಾಲೂ ಊಟ ತಿಂಡಿ ಕೊಡುತ್ತಿದ್ದು ಅದರಂತೆ ದಿನಾಂಕ 07/10/2021 ರಂದು ಸಂಜೆ ಸುಮಾರು 6:00 ಗಂಟೆಗೆ ಗೋಪಿಯವರು ಊಟ ತಂದು ಕೊಟ್ಟಿದ್ದು ದಿನಾಂಕ 8/10/2021 ರಂದು ಬೆಳಿಗ್ಗೆ 6:30 ಗಂಟೆಗೆ ಜಯಂತಿ ಇವರ ಗಂಡನ ಅಕ್ಕನ ಸೊಸೆ ಮೈನಾರವರು ಪೋನ್‌‌ ಮಾಡಿ ಜಯಂತಿ ರವರ ಗಂಡ ನಾರಾಯಣ ವಾಸ ಮಾಡಿಕೊಂಡಿರುವ ಮನೆಯ ಪಶ್ಚಿಮದ ಕೋಣೆಯ ಮರದ ಅಡ್ಡೆಗೆ ಲುಂಗಿಯನ್ನು ಕಟ್ಟಿ ಒಂದು ತುದಿಯಿಂದ  ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಕೂಡಲೇ ಜಯಂತಿ ರವರು ಬಂದು ನೋಡಿದಾಗ ನೇಣು ಬಿಗಿದ ಸ್ಧಿತಿಯಲ್ಲಿದ್ದ ನಾರಾಯಣರವರ ಮೃತ ದೇಹವನ್ನು  ನೋಡಿರುವುದಾಗಿದೆ, ನಾರಾಯಣ ಇವರು ವಿಪರೀತಿ ಮಧ್ಯಪಾನ ಮಾಡುವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/10/2021 ರಂದು ಸಂಜೆ 6:00 ಗಂಟೆಯಿಂದ ದಿನಾಂಕ 08/10/2021 ರ ಬೆಳಿಗ್ಗೆ 6:30 ಗಂಟೆಯ ಮಧ್ಯಾವಧಿಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ  ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 59/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 08-10-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ