ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ವಿನಯ್  ಶೆಟ್ಟಿ (39), ತಂದೆ: ಶ್ಯಾಮರಾಯ ಶೆಟ್ಟಿ ,ವಾಸ: ಮನೆ ನಂ: 1-37 ಕಲೀಲ್ ಹೌಸ್ ,ಚಾರಾ ಗ್ರಾಮ ಮತ್ತು ಅಂಚೆ, ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಇವರ ತಾಯಿ  ವಸಂತಿ ಶೆಟ್ಟಿ(65) ರವರು ದಿನಾಂಕ 07/09/2022 ರಂದು ಮದುವೆಯ ನಿಮಿತ್ತ ಪುತ್ತೂರು ಗ್ರಾಮದ ಅಂಬಾಗಿಲು ಅಮೃತ ಗಾರ್ಡನ್ ಹಾಲ್ ಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ನೇ ಸಾರ್ವಜನಿಕ ರಸ್ತೆಯನ್ನು ದಾಟುತ್ತಿರುವಾಗ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಬಳಿ ತಲುಪುವಾಗ ಮಧ್ಯಾಹ್ನ 12:30 ಗಂಟೆಗೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA-20-D-5562ನೇ ಶ್ರೀ ದುರ್ಗಾಂಬ ಎಕ್ಸ್ ಪ್ರೇಸ್ ಬಸ್‌ನ ಚಾಲಕ ಮೊಹಮ್ಮದ್ ಸಾಹೇಬ್ ತಾನು ಚಲಾಯಿಸುತ್ತಿದ್ದ ಬಸ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಾಯಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ, ಎಡಕಾಲಿಗೆ ಮತ್ತು ಎಡ ಕೈಗೆ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆತಂದಿದ್ದು, 12:45 ಗಂಟೆಗೆ ಆಸ್ಪತ್ರೆಯ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಗುಲರಾಮ್ (50), ತಂದೆ:ದಿ.ಕೇಶನಾ ಕೋಡ್, ವಾಸ:ಜರಿಠಂಡಿ, ಬಿತರಮ್ದ್ ಗ್ರಾಮ, ಒರಿಸ್ಸಾ ರಾಜ್ಯ ಇವರು ಕಾಪು ತಾಲೂಕು ಬಡಾ ಎರ್ಮಾಳ್  ಬುದಗಿ ಹೆಚ್.ಪಿ ಪೆಟ್ರೋಲ್ ಪಂಪ್‌ನಲ್ಲಿ ಕ್ಲೀನಿಂಗ್‌ ಕೆಲಸ ಮಾಡಿಕೊಂಡಿದ್ದು, ದಿನಾಂಕ 06/09/2022 ರಂದು ಕೆಲಸ ಮುಗಿಸಿಕೊಂಡು ಎದರುಗಡೆ ಹೊಟೇಲ್‌ನಲ್ಲಿ ಟೀ ಕುಡಿದು ಸಂಜೆ 6:30 ಗಂಟೆಗೆ ವಾಪಾಸ್ಸು ಪೆಟ್ರೋಲ್ ಪಂಪ್‌ಗೆ ಹೋಗಲು ಹೆಚ್.ಪಿ. ಪೆಟ್ರೋಲ್ ಪಂಪ್‌ನ ಎದುರಿನ ರಾಷ್ಟ್ರೀಯ ಹೆದ್ದಾರಿ- 66ರ ಉಡುಪಿ-ಮಂಗಳೂರು ಏಕಮುಖ ಸಂಚಾರಿ ರಸ್ತೆಯ ಎಡಬದಿಯಲ್ಲಿ ನಿಂತುಕೊಂಡಿರುವ ಸಮಯ ಉಡುಪಿ-ಮಂಗಳೂರು ಕಡೆಗೆ KA-20-EQ-3856  ನೇ ನಂಬ್ರದ  ಮೋಟಾರ್ ಸೈಕರ್ ಸವಾರ ಅಭಿಷೇಕ್‌ ಎಂಬಾತನು ತನ್ನ ಮೋಟಾರ್ ಸೈಕಲ್‌ನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕಾಲಿಗೆ ಮೂಳೆ ಮುರಿತವಾಗಿ ತೀವೃಗಾಯವಾಗಿರುತ್ತದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಮಹಮದ್‌ ಇರ್ಷಾದ್‌(48), ತಂದೆ: ಅಬ್ದುಲ್‌ ರೆಹಮಾನ್‌, ವಾಸ: ಬಬ್ಬುಸ್ವಾಂಇ ದೇವಸ್ಥಾನ ಹತ್ತಿರ ಭದ್ರಗಿರಿ ಬೈಕಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಮ್ಮ ಮಹಮದ್‌ ಹನೀಫ್‌ (38) ಇವರು ಸರಿಯಾಗಿ ಮನೆಗೆ ಬಾರದೇ ಬೈಕಾಡಿ ವಠಾರದ ಬಸ್ಸು ನಿಲ್ದಾಣ ಹಾಗೂ ಇತರ ಕಡೆಗಳಲ್ಲಿ ಮಲಗುತ್ತಿದ್ದು ಅಪರೂಪಕ್ಕೆ ಮನೆಗೆ ಬರುತ್ತಿರುವುದಾಗಿದೆ. ಅವರು 10 ವರ್ಷಗಳಿಂದ ವಿಪರೀತ ಕುಡಿತದ ಚಟವನ್ನು ಹೊಂದಿದ್ದು ವಿಪರೀತ ಕುಡಿದುಕೊಂಡು ಸರಿಯಾಗಿ ನೀರು ಅನ್ನ ಆಹಾರ ಸೇವಿಸದೇ ಅಲ್ಲಲ್ಲಿ ಮಲಗುತಿದ್ದರು. ಅವರ ವಿಪರೀತ ಕುಡಿತದ ಸ್ವಭಾವದಿಂದಲೋ ಅನ್ನ ಆಹಾರ ಸೇವಿದೇ ಅಥವಾ ಇತರ ಯಾವುದೋ ಕಾರಣದಿಂದಲೋ  ದಿನಾಂಕ 03/09/2022 ರಂದು ಮದ್ಯಾಹ್ನ 2:30 ಗಂಟೆಯಿಂದ  ದಿನಾಂಕ 07/09/2022 ರಂದು ಸಂಜೆ 6:00 ಗಂಟೆಯ ಮಧ್ಯಾವದಿಯಲ್ಲಿ ಬ್ರಹ್ಮಾವರ  ತಾಲೂಕು, ಬೈಕಾಡಿ ಗ್ರಾಮದ ವನಜ ಶೆಟ್ಟಿ ರವರ ಮನೆಯ ಜಗಲಿಯಲ್ಲಿ ಮಲಗಿದಲ್ಲಿ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 43/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಾಜೇಂದ್ರ ಎಸ್ ನಾಯಕ್ (54), ಪ್ರಾಂಶುಪಾಲರು, ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೆಶ್ವರ, ಉಡುಪಿ ಜಿಲ್ಲೆ ಇವರು ಕಾಳಾವರ ವರದರಾಜ ಎಂ ಶೆಟ್ಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ದಿನಾಂಕ 05/09/2022 ರಂದು ಸಂಜೆ 05:30 ಗಂಟೆಗೆ  ಕಾಲೇಜಿನ ಕಛೇರಿ ಸಹಾಯಕರು ಕಾಲೇಜಿನ ಕಛೇರಿ ಹಾಗೂ ಗೇಟಿಗೆ ಬೀಗ ಹಾಕಿ ತೆರಳಿದ್ದು, ದಿನಾಂಕ 06/09/2022 ರಂದು ಬೆಳಗ್ಗಿನ ಜಾವ 02:00 ಗಂಟೆಗೆ  ಯಾರೋ ಕಳ್ಳರು ಕಾಲೇಜಿನ  ಒಳಪ್ರವೇಶಿಸಿ ಪ್ರಾಂಶುಪಾಲರ ಕೊಠಡಿ ಮತ್ತು ಆಫೀಸು ಕೊಠಡಿಯ ಬೀಗವನ್ನು ಮುರಿದು ಪ್ರಾಂಶುಪಾಲರ ಕೊಠಡಿ ಮತ್ತು ಆಫೀಸಿನಲ್ಲಿದ್ದ ಕಪಾಟುಗಳನ್ನು ತೆರೆದು ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ: 457, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 07/09/2022 ರಂದು ವಿನಯ್‌ ಎಮ್‌ ಕೊರ್ಲಹಳ್ಳಿ , ಪೊಲೀಸ್‌ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್‌ ನಲ್ಲಿ ಕೆಲವು ಹುಡುಗರು ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಹೋಗಿ ಪರಿಶೀಲಿಸಲಾಗಿ 3 ಜನರು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಆಕಾಶ್‌ ಹಳಿಯಾಳ್, 2) ಸ್ನೇಹಿತ್, 3) ಶಿವಪ್ರಸಾದ್, ಎಂಬುವುದಾಗಿ ತಿಳಿಸಿದ್ದು ಇವರುಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರುಗಳ ಪೈಕಿ   ಆಕಾಶ್‌ ಹಳಿಯಾಳ್ ಎಂಬಾತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2022 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 07/09/2022 ರಂದು ಎಮ್‌ ಕೊರ್ಲಹಳ್ಳಿ , ಪೊಲೀಸ್‌ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಬಳಿ ಪಾರ್ಕ್ ನಲ್ಲಿ ಕೆಲವು ಹುಡುಗರು ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ  ಹೋಗಿ  ಪರಿಶೀಲಿಸಲಾಗಿ 4 ಜನರು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಮಂಜುನಾಥ,, 2) ವಿನೋದ, 3) ಕಾರ್ತಿಕ್, 4) ಪುರುಷೋತ್ತಮ್,  ಎಂಬುವುದಾಗಿ ತಿಳಿಸಿದ್ದು ಇವರುಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಇವರುಗಳ ಪೈಕಿ 1) ಕಾರ್ತಿಕ್, 2) ಪುರುಷೋತ್ತಮ್  ಇವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2022 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-09-2022 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080