ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕೋಟ: ದಿನಾಂಕ 05/09/2021 ರಂದು ಕುಂದಾಪುರ  ಕಡೆಯಿಂದ ಉಡುಪಿ ಕಡೆಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದೊಡ್ಡ ಹತ್ತು ಚಕ್ರದ AP-39-TT-5788  ನೇ  ಟ್ಯಾಂಕರ್ ಚಾಲಕನು  ತನ್ನ ಟ್ಯಾಂಕರನ್ನು ಕುಂದಾಪುರ  ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಮಣೂರು ಗ್ರಾಮದ ಬಾಳೆಬೆಟ್ಟು ಎಂಬಲ್ಲಿ  ಬೆಳಿಗ್ಗೆ 4:30 ಗಂಟೆಗೆ ಪಿರ್ಯಾದಿದಾರರಾದ ಯೋಗೀಶ ಕುಮಾರ್, ನವಯುಗ ಉಡುಪಿ ಟೋಲ್ ಲಿಮಿಟೆಡ್ ಸಾಸ್ತಾನ ಇವರು ಕೆಲಸ ಮಾಡಿಕೊಂಡಿದ್ದ  ನವಯುಗ ಕಂಪೆನಿಯವರು ಅಳವಡಿಸಿದ ಕಬ್ಬಿಣದ 21 ಗ್ರಿಲ್ಸಗಳಿಗೆ ಟ್ಯಾಂಕರ್ ಢಿಕ್ಕಿ ಹೊಡೆದು ರಾಷ್ರೀಯ ಹೆದ್ದಾರಿ 66 ಕ್ಕೆ ತಾಗಿರುವ ಸರ್ವಿಸ್ ರಸ್ತೆಯಲ್ಲಿ ಟ್ಯಾಂಕರ್ ಮಗುಚಿ ಬಿದ್ದಿರುತ್ತದೆ ಕಬ್ಬಿಣದ 21 ಗ್ರಿಲ್ಸಗಳು ಜಖಂ ಗೊಂಡಿದ್ದು 1,15,308/- ಮೊತ್ತದಷ್ಟು ನಷ್ಟವುಂಟಾಗಿರುತ್ತದೆ   ಲಾರಿಯು ಜಖಂ ಗೊಂಡಿರುತ್ತದೆ.   ಟ್ಯಾಂಕರ್ ಲಾರಿಯ ಚಾಲಕ ಉಮೇಶ ಚೌಧರಿ ಆಗಿದ್ದು ಅವರಿಗೆ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಂಡೆಕ್ಟರ್ ಪಂಕಜ್  ಎಂಬುವವರಿಗೂ ಕೂಡ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 160/2021 ಕಲಂ: 279 ,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಕಾರ್ಕಳ: ದಿನಾಂಕ 06/09/2021 ರಂದು 19:15 ಗಂಟೆಗೆ ಕಾರ್ಕಳ ತಾಲೂಕು, ಕೆದಿಂಜೆ ಗ್ರಾಮದ ಬಿ.ಎಸ್.ಕೆ. ಫ್ಯಾಕ್ಟರಿ ಬಳಿ ಹಾದು ಹೋಗುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಮೋಟಾರು ಸೈಕಲ್ ನಂಬ್ರ KA-20-EJ-0054 ನೇಯದರ ಸವಾರ ನಾಗರಾಜ ಶೆಟ್ಟಿಗಾರ್ ಎಂಬುವವರು ಕೆದಿಂಜೆ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ತನ್ನ ತೀರಾ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಿನೇಶ್ ಮೊಯಿಲಿ ಎಂಬುವವರಿಗೆ ಢಿಕ್ಕಿ ಹೊಡೆದ ಪರಿಣಾಮ ದಿನೇಶ್ ಮೊಯಿಲಿಯವರ ಬಲಕಾಲಿನ ಮೊಣಕಾಲಿನ ಸಮೀಪ ರಕ್ತ ಗಾಯ ಹಾಗೂ ತಲೆಯ ಹಿಂಬದಿಗೆ ರಕ್ತ ಗಾಯ ಆಗಿದ್ದು, ಅಪಘಾತದಿಂದ ಮೋಟಾರು ಸೈಕಲ್ ಸವಾರನಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಅಬ್ದುಲ್ ಮಲಿಕ್ (62), ತಂದೆ: ದಿ.ಸಾಬುದ್ದೀನ್, ವಾಸ: ಬೈತ್ ಅಲ್ ಸಫಾ, ಸುಭಾಷ್ ರಸ್ತೆ ಬಳಿ,ಸುಜುಕಿ ಶೋ ರೂಂ ಎದುರುಗಡೆ, ಉಚ್ಚಿಲ, ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ವಾಸದ ಮನೆಯ ಮೇಲಿನ ಮಹಡಿಯಲ್ಲಿ ಅವರು ವಾಸವಾಗಿದ್ದು, ಕೆಳಗಿನ ಮನೆಯನ್ನು ಬಾಡಿಗೆಗೆ ನೀಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ  07/09/2021 ರಂದು ರಾತ್ರಿ 7:25 ಗಂಟೆಯ ವೇಳೆಗೆ ಮನೆಗೆ ಬೀಗ ಹಾಕಿ ಉಚ್ಚಿಲದಲ್ಲಿಯೇ ತಮ್ಮ ಮನೆಯ ಸಮೀಪ ಇರುವ ತಮ್ಮ ಸಂಬಂಧಿಕರಾದ ಸಮೀರಾ ಬಾನು ಎಂಬುವವರ ಮನೆಗೆ ಅವರ ಹೆಂಡತಿಯೊಂದಿಗೆ ಹೋಗಿ, ರಾತ್ರಿ 9:15 ಗಂಟೆಯ ವೇಳೆಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ, ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಮೇಲಿನ ಮಹಡಿಗೆ ಹೋಗುವ ಮೆಟ್ಟಿಲಿನ ಕಬ್ಬಿಣದ ಗ್ರಿಲ್ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಜಜ್ಜಿ, ನಂತರ ಮನೆಯ ಹಿಂಬದಿಯ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಮನೆಯೊಳಗೆ ಪ್ರವೇಶಿಸಿ, ಬೀಗ ಹಾಕದ ಕಬ್ಬಿಣದ ಕಪಾಟಿನಲ್ಲಿರಿಸಿದ್ದ ನಗದು ರೂಪಾಯಿ 8,000/, ಅವರ ಹೆಂಡತಿಯ ಪರ್ಸ್‌ನಲ್ಲಿದ್ದ ನಗದು ರೂಪಾಯಿ 3,000/-, ಹಾಗೂ ಟೇಬಲ್ ಮೇಲಿದ್ದ ಪಿರ್ಯಾದಿದಾರರ ಪರ್ಸ್‌ನಲ್ಲಿದ್ದ ನಗದು ರೂಪಾಯಿ 1,000/- ಮತ್ತು ಅದೇ ಟೇಬಲ್‌ ಮೇಲಿದ್ದ ರೂಪಾಯಿ 5,000/- ಬೆಲೆಬಾಳುವ ಸಿಟಿಜನ್ ವಾಚ್‌-1 ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 17,000/- ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  89/2021 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಮೊಹಮ್ಮದ್ ಹುಸೇನ್‌ (43), ತಂದೆ: ಅಬ್ದುಲ್‌ಸಾಹೇಬ್‌, ವಾಸ: ಹೂಡೆ ಉಡುಪಿ ತಾಲೂಕು ಇವರು  ದಿನಾಂಕ  06/09/2021 ರಂದು 16:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಬಸ್‌ನಿಲ್ದಾಣದ ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುತ್ತಿದ್ದಾಗ, ಆಪಾದಿತ ಶೈಲು ಮತ್ತು ನಾಸಿಕ್‌ ರವರು ಪಿರ್ಯಾದಿದಾರರನ್ನು  ತಡೆದು ನಿಲ್ಲಿಸಿ, ಬಸ್ಸಿನ ವೇಳಾ ಪಟ್ಟಿಯ ವಿಚಾರದಲ್ಲಿ ಶಾನ್‌ ಎಂಬುವವನು ಪಿರ್ಯಾದಿದಾರರಿಗೆ  ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಇಡ್ಡಿದ್ದು, ಕೈ ಯಿಂದ ಮುಖಕ್ಕೆ  ಹಲ್ಲೆಮಾಡಿದ್ದು, ಪಿರ್ಯಾದಿದಾರರು ತನ್ನ ಬಸ್ಸನ್ನು ಚಲಾಯಿಸಲು ಚಾಲಕ ಸೀಟಿನಲ್ಲಿ ಕುಳಿತಿದ್ದಾಗ ಆಪಾದಿತ ಶಾನ್‌ ಎಂಬುವವನು ಪುನ: ಪಿರ್ಯಾದಿದಾರರ ಮುಖಕ್ಕೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 112/2021 ಕಲಂ: 341, 323, 504,506,34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 08-09-2021 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080