ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಮಣಿಪಾಲ: ದಿನಾಂಕ :07.08.2022 ರಂದು ಪಿರ್ಯಾದಿ ಸೈಯ್ಯದ್ ಅಜರ್ ,ಪ್ರಾಯ:52 ತಂದೆ:ಸೈಯ್ಯದ್ ಮಹೇಬೂಬ್ ಪಾಷಾ ವಾಸ:5-247ಎ  ನೂಮಾ ಅಪಾರ್ಟ್ ಮೇಂಟ್. ವಿ ಪಿ ನಗರ 3rd ಕ್ರಾಸ್ ಮಣಿಪಾಲ , ಇವರು ರಾತ್ರಿ ಕೆಲಸ ಮುಗಿಸಿಕೊಂಡು  ತಮ್ಮ ಬಾಬ್ತು  KA 20 ES 1703  TVS Acces  ಸ್ಕೂಟರನ್ನು  ರಾತ್ರಿ ಸುಮಾರು 9.30 ಗಂಟೆಗೆ ಮನೆಯ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದು. ಈ ದಿನ ದಿನಾಂಕ 08.08.2022 ಬೆಳಗಿನ ಜಾವ 05.00 ಗಂಟೆಗೆ ಮನೆಯ ಹೊರಗಡೆ ಬಂದು ನೋಡಿದಾಗ ಸ್ಕೂಟರ್ ಅಲ್ಲಿ ಇಲ್ಲದೇ ಇದ್ದು, ಸದ್ರಿ ಸ್ಕೂಟರ್ ನ್ನು ದಿನಾಂಕ: 07.08.2022 ರಿಂದ ರಾತ್ರಿ 09:30 ಗಂಟೆಯಿಂದ ದಿನಾಂಕ : 08.08.2022 ರ ಬೆಳಿಗ್ಗೆ  05:00 ಗಂಟೆಯ ಮದ್ಯಾವಧಿಯಲ್ಲಿ  ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿದೆ, ಕಳವಾದ ಸ್ಕೂಟರ್  ನ ವಿವರ ಈ ಕೆಳಕಂಡಂತಿದೆ: ಸ್ಕೂಟರ್ ಸಂಖ್ಯೆ : KA 20ES 1703  TVS cces  ಬಣ್ಣ : ಗ್ರೇ ಕಲರ್ ಇಂಜಿನ್ ನಂಬರ್ : AF216011754ಚಾಸಿಸ್ ನಂಬರ್ : MB8DP11AJJ8034243 ಅಂದಾಜು ಮೌಲ್ಯ : 50,000/- ಆಗಿರುತ್ತದೆ. ಈ ಬಗ್ಗೆ  ಮಣಿಪಾಲ ಪೊಲೀಸ್‌ ಠಾಣೆ,  ಅಪರಾಧ ಕ್ರಮಾಂಕ  102/2022  ಕಲಂ 379 IPC ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಪಘಾತ ಪ್ರಕರಣಗಳು

  • ಶಂಕರನಾರಾಯಣ: ದಿನಾಂಕ: 07/08/2022 ರಂದು  ಪಿರ್ಯಾದಿ ಸುರೇಶ ಜಿ.ಆ್  ಪ್ರಾಯ 43 ವರ್ಷ ತಂದೆ, ದಿ. ರಾಮ ದೇವಾಡಿಗ ವಾಸ, ಲಕ್ಷೀನಿಲಯ  ಅಂಕದಕಟ್ಟೆ  ಕೊಟೇಶ್ವರ  ಗ್ರಾಮ ಇವರು   ಕೆಎ. 20 .ಇಇ-2552  ನೇ ನಂಬ್ರದ ಮೋಟಾರ್  ಸೈಕಲ್‌‌ನಲ್ಲಿ  ಆರೋಪಿ ಗಣೇಶ  ಈತನೊಂದಿಗೆ ಸಂಬಂಧಿಕರ ಮನೆಗೆ ಹೋಗಲು  ಶಂಕರನಾರಾಯಣಕ್ಕೆ  ಹೋಗಿದ್ದು, ನಂತರ  ವಾಪಾಸು ಮನೆಗೆ   ಕುಂದಾಪುರಕ್ಕೆ ಹೋಗಲು ಸುಮಾರು  20;00  ಘಂಟೆಗೆ   ಕುಂದಾಪುರ  ತಾಲೂಕಿನ  ಶಂಕರನಾರಾಯಣ   ಗ್ರಾಮದ   ಕಲ್ಗದ್ದೆ  ಎಂಬಲ್ಲಿ  ಹೋಗುತ್ತಿರುವಾಗ   ಆರೋಪಿಯು  ಮೋಟಾರ್ ಸೈಕಲ್‌‌ನ್ನು  ಅತೀ   ವೇಗ ಹಾಗೂ  ಅಜಾಗರೂಕೆತೆ ಯಿಂದ  ಚಲಾಯಿಸಿದ ಪರಿಣಾಮ ಮೋಟಾರ್  ಸೈಕಲ್   ಆರೋಪಿಯ ಹತೋಟಿ ತಪ್ಪಿ ರಸ್ತೆಯ  ಮೇಲೆ   ಬಿದ್ದಿದ್ದು  ಈ    ಸಮಯ  ಮೋಟಾರ್  ಸವಾರ  ಹಾಗೂ  ಹಿಂಬದಿ ಸವಾರ  ಎರಡು  ಜನರು   ಮೋಟಾರ್  ಸೈಕಲ್  ಸಮೇತ   ರಸ್ತೆಯ   ಮೇಲೆ  ಬಿದ್ದಿದ್ದು,  ಈ  ಸಮಯ   ವಿಜಯ  ಮಡಿವಾಳ  ಎಂಬುವರು   ಆಟೋ ರಿಕ್ಷಾದಲ್ಲಿ  ಗಾಯಾಳುಗಳನ್ನು    ಶಂ ಕರನಾರಾಯಣ ಡಾ. ಆನಂದ  ಪ್ರಕಾಶ  ಎಂಬುವರಲ್ಲಿಗೆ ಕರೆದು ಕೊಂಡು ಹೋಗಿ  ಪ್ರಥಮ ಚಿಕಿತ್ದೆ ಕೊಡಿಸಿ ಹೆಚ್ಚಿನ  ಚಿಕಿತ್ಸಯ  ಬಗ್ಗೆ   ಫಿರ್ಯಾದಿದಾರರನ್ನು ಕುಂದಾಪುರ ವಿನಯ   ಆಸ್ಪತ್ರಗೆ  ಕರೆದು ಕೊಂಡು ಹೋಗಿರುತ್ತಾರೆ,  ಅಲ್ಲಿ ಗಾಯಾಳುವನ್ನು  ಪರೀಕ್ಷಿಸಿದ    ವೈದ್ಯರು ಚಿಕಿತ್ಸೆ  ನೀಡಿ   ಎಡ ಕೈ   ಭುಜದ ಬಳಿ   ಮೂಳೆ ಮುರಿತದ  ಗಾಯವಾಗಿದೆ ಎಂದು ಒಳರೋಗಿಯಾಗಿ  ದಾಖಲು  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ   78/2022 ಕಲಂ: 279,338  ಐ.ಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಣಿಪಾಲ: ಪಿರ್ಯಾದಿ ಅನಿತಾ ಪ್ರಾಯ: 35  ವರ್ಷ ಗಂಡ: ಸುರೇಶ್‌, ವಾಸ: ಕೆಂಜೂರು ಮೇಲು ಬಾವಿ, ಕೆಂಜೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ಗಂಡ ಸುರೇಶ್ ಪ್ರಾಯ: 43 ವರ್ಷ ಇವರು ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ: 04.08.2022 ರಂದು ಕೆಲಸಕ್ಕೆಂದು ಮಲ್ಪೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿರುತ್ತಾರೆ. ದಿನಾಂಕ: 07.08.2022 ಸಂಜೆ 06:00 ಗಂಟೆಗೆ ಪಿರ್ಯಾದಿದಾರರಿಗೆ ಕರೆ ಮಾಡಿ ಪೋನ್ ಕೆಟ್ಟು ಹೋಗಿರುವುದರಿಂದ ಪೋನ್ ಕರೆ ಮಾಡಲು ಆಗಲಿಲ್ಲ ವೆಂದು ತಿಳಿಸಿರುತ್ತಾರೆ, ಈ ದಿನ ದಿನಾಂಕ: 08.08.2022 ರಂದು ಬೆಳಿಗ್ಗೆ ಸುಮಾರು 08:00 ಗಂಟೆಗೆ ಪಿರ್ಯಾದಿದಾರರ ಗಂಡ ಇಂದ್ರಾಳಿ ರೈಲ್ವೇ ಹಳಿಯ ಬಳಿ ಗಾಯಗೊಂಡು ಬಿದ್ದಿರುವುದಾಗಿ ರೈಲ್ವೆ  ಅಧಿಕಾರಿಗಳಿಂದ ಮಾಹಿತಿ ತಿಳಿದು, ಸಂಬಂದಿಕರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಪಿರ್ಯಾದಿದಾರರ ಗಂಡ ಸುರೇಶ ರವರಿಗೆ ಹಣೆ, ತಲೆ, ಕಾಲುಗಳಿಗೆ ತೀವ್ರವಾದ ಗಾಯವಾಗಿದ್ದು  ಮೃತಪಟ್ಟಿರುವುದಾಗಿ ತಿಳಿಯಿತು, ಪಿರ್ಯಾದಿದಾರರ ಗಂಡ ಸುರೇಶ್ ಯಾವುದೋ ಕಾರಣಕ್ಕೆ ಇಂದ್ರಾಳಿಗೆ ಹೋಗಿದ್ದವರು ಮಂಗಳೂರು-ಕುಂದಾಪುರ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಾರ್ಕೂರು ಕಡೆಗೆ ಬರುತ್ತಿರುವಾಗ ಬೆಳಿಗಿನ ಜಾವ ಸದರಿ ಹಳಿಯಲ್ಲಿ ಸಂಚರಿಸಿದ ಯಾವುದೋ ರೈಲು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ,. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಯುಡಿಆರ್‌‌ನಂಬ್ರ 29/2022 ಕಲಂ: 174 ಸಿ ಆರ್ ಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 08-08-2022 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080