ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕಾಪು: ಪಿರ್ಯಾದಿ ಸುಧೀರ್ ಕುಮಾರ್ ಶೆಟ್ಟಿ ಪ್ರಾಯ: 40 ವರ್ಷ ಕಂದಾಯ ನಿರೀಕ್ಷಕರು ಕಾಪು ಹೋಬಳಿ, ಕಾಪು ತಾಲೂಕು ಇವರು ಕಾಪು ಹೋಬಳಿಯಲ್ಲಿ ಕಂದಾಯ ನಿರೀಕ್ಷಕನಾಗಿ ಕೆಲಸ ಮಾಡಿಕೊಂಡಿದ್ದು ಅಲ್ಲದೇ ಕಾಪು ತಾಲೂಕು, ಮಲ್ಲಾರು ಗ್ರಾಮದದಲ್ಲಿರುವ ಮುಜುರಾಯಿ ಇಲಾಖೆಗೆ ಒಳಪಟ್ಟ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಯಾಗಿಯೂ ಕೂಡಾ ಕೆಲಸ ಮಾಡಿಕೊಂಡಿರುತ್ತಾರೆ. ದೇವಸ್ಥಾನವನ್ನು ನಿತ್ಯವೂ ಬೆಳಿಗ್ಗೆ 6:00 ಗಂಟೆಗೆ ತೆರೆಯವುದಾಗಿದ್ದು, ರಾತ್ರಿ 9:00 ಗಂಟೆಗೆ ಮುಚ್ಚುವುದಾಗಿದೆ. ಈ ದಿನ ದಿನಾಂಕ:07-08-2022 ರಂದು ಬೆಳಿಗ್ಗೆ 6:00 ಗಂಟೆಗೆ ದೇವಸ್ಥಾನದ ಸಿಬ್ಬಂದಿಗಳಾದ ದಿವಾಕರ್ & ಲಕ್ಷ್ಮೀಕಾಂತ್ ರವರು ನನಗೆ ಕರೆ ಮಾಡಿ ದೇವಸ್ಥಾನದಲ್ಲಿ 3 ಹುಂಡಿಗಳು ಕಾಣುತ್ತಿಲ್ಲವಾಗಿ ಮಾಹಿತಿ ನೀಡಿದ್ದು, ಪಿರ್ಯಾದಿದಾರರು ಕೂಡಲೇ ದೇವಸ್ಥಾನಕ್ಕೆ ಹೋಗಿ ಪರಿಶೀಲಿಸಲಾಗಿ ಹುಂಡಿ ಡಬ್ಬಗಳು ಕಾಣೆಯಾಗಿರುವುದು ಕಂಡುಬಂದಿರುತ್ತದೆ. ನಂತರ ದೇವಸ್ಥಾನದ ಪರಿಸರದಲ್ಲಿ ಪರಿಶೀಲಿಸಲಾಗಿ ದೇವಸ್ಥಾನದ ಎದುರಿನ ಮೈದಾನದಲ್ಲಿ 3 ಹುಂಡಿಗಳು ಬಿದ್ದಿದ್ದು, ಅವುಗಳಲ್ಲಿ ಕೆಲವು ಕಾಯಿನ್ ಹಾಗೂ ನೋಟುಗಳು ಇರುವುದು ಕಂಡುಬಂದಿರುತ್ತದೆ.  ಈ ಬಗ್ಗೆ ದೇವಸ್ಥಾನದ ಸೆಕ್ಯೂರಿಟಿಯಾದ ಹನುಮಂತ ರವರಲ್ಲಿ ವಿಚಾರಿಸಲಾಗಿ ತಾನು ಬೆಳಗಿನ ಜಾವ 3 ಗಂಟೆಯವರೆಗೂ ದೇವಸ್ಥಾನದ ಸುತ್ತಲೂ ತಿರುಗಾಡಿಕೊಂಡು, ಆ ಬಳಿಕ ವಿಶ್ರಾಂತಿಗಾಗಿ ದೇವಸ್ಥಾನದ ಮುಂದೆ ಇರುವ ಜಗುಲಿಯಲ್ಲಿ ಕುಳಿತುಕೊಂಡಿದ್ದು, ಪುನಃ ಬೆಳಗಿನ ಜಾವ 4:30 ಗಂಟೆಗೆ ಎದ್ದು ದೇವಸ್ಥಾನದ ಒಳಗೆ ತಿರುಗಾಡುತ್ತಿರುವಾಗ ದೇವಸ್ಥಾನದ ಒಳಗಿದ್ದ 3 ಕಾಣಿಕೆ ಹುಂಡಿಗಳು ಕೂಡಾ ಕಾಣುತ್ತಿರಲಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಯಾರೋ ಕಳ್ಳರು ಈ ದಿನ ದಿನಾಂಕ:07-08-2022 ರಂದು ಬೆಳಗಿನ ಜಾವ 3:00 ಗಂಟೆಯಿಂದ 4:30 ಗಂಟೆಯ ಮಧ್ಯಾವಧಿಯಲ್ಲಿ ದೇವಸ್ಥಾನದ ಪ್ರಾಂಗಣದ ಮುಖ್ಯ ದ್ವಾರದ ಬೀಗವನ್ನು ಒಡೆದು ಒಳ ಪ್ರವೇಶಿಸಿ ಹುಂಡಿಗಳಲ್ಲಿನ ಹಣ ಕಳವು ಮಾಡಲು ಪ್ರಯತ್ನಿಸಿ ಸ್ವಲ್ಪದಷ್ಟು ಹಣವನ್ನು ತೆಗೆದುಕೊಂಡು ಉಳಿದ ಹಣವನ್ನು ಹುಂಡಿ ಸಮೇತ ದೇವಸ್ಥಾನದ ಮುಂಬಾಗದ ಮೈದಾನದಲ್ಲಿ ಬಿಟ್ಟು ಹೋಗಿವುದಾಗಿರುತ್ತದೆ. ಹುಂಡಿಗಳಲ್ಲಿ ಎಷ್ಟು ಹಣವಿತ್ತು ಎಂದು ನನಗೆ ತಿಳಿದಿರುವುದಿಲ್ಲ ಎನ್ನುವುದಾಗಿ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅಪರಾಧ ಕ್ರಮಾಂಕ 80/2022 ಕಲಂ 457 380  ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಮಿಥುನ್ ಬಂಗೇರ, ಪ್ರಾಯ: 35 ವರ್ಷ, ತಂದೆ: ದಿ. ದಯಾನಂದ ಪುತ್ರನ್, ವಾಸ: ಮನೆ ನಂಬ್ರ.7-68 ಡಿ,  ರಾಮಪ್ಪ  ಕಾಂಚನ್ ಹೌಸ್ ಹೆಜಮಾಡಿ ಇವರ ಮಾವ ಕೃಷ್ಣಪ್ಪ ಬಂಗೇರ ಕಾಪು ತಾಲೂಕು ಹೆಜಮಾಡಿ ಗ್ರಾಮದ ರಾಮಕೃಷ್ಣ ಕಾಂಚನ್ ಹೌಸ್ ಎಂಬಲ್ಲಿ ಪಿರ್ಯಾದಿದಾರರೊಂದಿಗೆ ವಾಸವಿದ್ದು, ಕೃಷ್ಣಪ್ಪ ಬಂಗೇರ ರವರಿಗೆ ಸುಮಾರು 30 ವರ್ಷಗಳಿಂದ ಪೀಡ್ಸ್ ಮತ್ತು ಮರೆವಿನ ಖಾಯಿಲೆ ಇದ್ದು ಈ ಬಗ್ಗೆ ಪ್ರತಿದಿನ  ಔಷಧಿಯನ್ನು ಸೇವಿಸುತ್ತಿದ್ದು, ಪ್ರತಿದಿನ ಸಂಜೆ. 5:00 ಗಂಟೆಯ ನಂತ್ರ ವಾಕಿಂಗ್ ಎಂದು ಸಮುದ್ರ ಕಿನಾರೆಗೆ ಹೋಗುತ್ತಿದ್ದು, ನಿನ್ನೆ ದಿನ ದಿನಾಂಕ:06.08.2022 ರಂದು ಸಂಜೆ. 5:30 ಗಂಟೆಗೆ ಕೃಷ್ಣಪ್ಪ ಬಂಗೇರ ರವರು ಎಂದಿನಂತೆ ವಾಕಿಂಗ್ ಗೆ ಹೋದವರು ಸಂಜೆ.7:00 ಗಂಟೆಯಾದರೂ ಮನೆಗೆ ವಾಪಾಸ್ಸು ಬಂದಿರುವುದಿಲ್ಲ.  ಮಾವನವರಾದ ಕೃಷ್ಣಪ್ಪ ಬಂಗೇರ ರವರನ್ನು ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಸಂಬಂಧಿಕರ, ಸ್ನೇಹಿತರ ಮನೆಯಲ್ಲಿ ವಿಚಾರಿಸಿದರೂ ಈವರೆಗೆ ಪತ್ತೆಯಾಗದೇ ಇದ್ದು, ನಾಪತ್ತೆಯಾದ ಕೃಷ್ಣಪ್ಪ ಬಂಗೇರ ರವರನ್ನು ಪತ್ತೆ ಮಾಡಿಕೊಡುವಂತೆ ಕೋರಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ  97/2022, ಕಲಂ: ಗಂಡಸು ಕಾಣೆ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ: 07/08/2022 ರಂದು  ಪಿರ್ಯಾದಿ ಅಚಿಂತ್ಯ ಎನ್. ಎಸ್. ಪ್ರಾಯ 23  ವರ್ಷ ತಂದೆ: ಎನ್. ಎಸ್. ಸುಬ್ರಮಣ್ಐ ಸ್ವಾಮಿ, ವಾಸ:ಭಾರತೀ ಸ್ಟ್ರೀಟ್ ಶೃಂಗೇರಿ,   ಇವರು  ಅವರ ತಾಯಿ ಉಷಾ ಸ್ವಾಮಿ ಮತ್ತು ದೊಡ್ಡಮ್ಮ ಅನುರಾಧರೊಂದಿಗೆ ಕಮಲಶಿಲೆಯಿಂದ ಶೃಂಗೇರಿಗೆ KA -14- M - 8580 ಸ್ಯಾಂಟ್ರೋ ಕಾರಿನಲ್ಲಿ ಕುಂದಾಪುರ –ಅಗುಂಬೆ ರಾಜ್ಯಹೆದ್ದಾರಿಯಲ್ಲಿ ಹೋಗುತ್ತೀರುವಾಗ   ಕುಂದಾಪುರ ತಾಲೂಕು  76- ಹಾಲಾಡಿ ಗ್ರಾಮದ ದಾಸನಕಟ್ಟೆ ತಿರುವಿನ ಬಳಿ ತಲುಪಿದಾಗ  11:05  ಗಂಟೆಗೆ  ಹೈಕಾಡಿ ಕಡಯಿಂದ  KA-03 –NW- 9845 ರ ಕಾರನ್ನು ಅದರ  ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ತೀರ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಾಲಾಯಿಸುತ್ತಿದ್ದ  ಕಾರಿಗೆ ಡಿಕ್ಕಿ ಹೊಡೆದಿರುತ್ತಾರೆ.  ಪರಿಣಾಮ ಪಿರ್ಯಾದಿದಾರ  ಎದೆಗೆ ಗುದ್ದಿದ ನೋವಾಗಿದ್ದು   ಬಲ ಕೈ ಮೊಣ ಗಂಟಿಗೆ ತರಚಿದ ಗಾಯವಾಗಿದ್ದು ಕಾರಿನ ಹಿಂದ ಶೀಟಿನಲ್ಲಿ  ಕುಳಿತಿರುವ ಪಿರ್ಯಾದಿದಾರರ  ತಾಯಿಗೆ ಹಣೆಗೆ ರಕ್ತ ಗಾಯ, ದೊಡ್ಡಮ್ಮನಿಗೆ ಬಲ ಕಣ್ಣಿನ ಹುಬ್ಬಿನ ಮೇಲೆ ರಕ್ತಾಗಾಯವಾಗಿ ಎರಡು  ಕಾಲಿಗೆ ಗುದ್ದಿದ ನೋವಾಗಿರುತ್ತದೆ. ಈ ಅಪಘಾತದಲ್ಲಿ ಎರಡು ವಾಹನಗಳು ಜಖಂಗೊಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  77/2022 ಕಲಂ: 279,337   ಐ.ಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿ ಗುಂಡು ನಾಯ್ಕ ಪ್ರಾಯ: 42 ವರ್ಷ ತಂದೆ: ಬಾಬಣ್ಣನಾಯ್ಕ, ವಾಸ: ಬಿಲ್ಲಾಡಿ, ಅಂಗಡಿ ಮಕ್ಕಿಮನೆ ಬ್ರಹ್ಮಾವರ ತಾಲೂಕು ಇವರ  ಅಕ್ಕನ ಮಗ ಚೇತನ ಪ್ರಾಯ; 21 ವರ್ಷ ಅಂಗವೀಕಲನಾಗಿದ್ದು,  ದಿನಾಂಕ: 07/08/2022    15:05 ಗಂಟೆ  ಮನೆಯಲ್ಲಿ ಊಟ ಮಾಡಿದ ಬಳಿಕ ಕುಸಿದು ಬಿದ್ದು ಅಸ್ವಸ್ಥಗೊಂಡವನನ್ನು ಕೂಡಲೇ ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಮಹೇಶ್  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚೇತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು  ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ  ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ 24/2022  ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 08-08-2022 10:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080