ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಕುಂದಾಪುರ: ಪಿರ್ಯಾದಿದಾರರಾದ ಆಲ್ ಫರ್ಝಾನ (29), ಗಂಡ: ಮಯ್ಯದಿ ಹಂಝ ಸಾಹೇಭ್, ವಾಸ: 328, ಆಲ್ ಪರ್ಝಾನ ಮಂಜಿಲ್, ನಾವುಂದ, ಕುಂದಾಪುರ ತಾಲೂಕು ಇವರು 1 ನೇ ಆಪಾದಿತ  ಮಯ್ಯದಿ ಹಂಝ ಸಾಹೇಬ್ ರವರೊಂದಿಗೆ ದಿನಾಂಕ 04/10/2015 ರಂದು ಇಸ್ಲಾಮಿಕ್  ಧಾರ್ಮಿಕ ಪದ್ದತಿಯಂತೆ ಮದುವೆಯಾಗಿದ್ದು  ಮದುವೆಯ ಪೂರ್ವದಲ್ಲಿ ಆಪಾದಿತನು 90  ಪವನ್ ಚಿನ್ನವನ್ನು  ಹಾಗೂ 10 ಲಕ್ಷ ರೂಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಬೇಕೆಂದು ಒತ್ತಾಯಿಸಿ ಪಡೆದುಕೊಂಡಿರುವುದಾಗಿದೆ. ಮದುವೆಯಾದ ನಂತರ ಪಿರ್ಯಾದಿದಾರರು 1 ನೇ ಆಪಾದಿತರ ಮನೆಯಾದ 4-201, ಮೈತ್ರಿ ಮನೆ ರಸ್ತೆ, ಅಂಕದಕಟ್ಟೆ,  ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಈ ವಿಳಾಸದಲ್ಲಿ ವಾಸವಾಗಿರುವುದಾಗಿದೆ. 2016ರ ಜುಲೈ ತಿಂಗಳಲ್ಲಿ ಪಿರ್ಯಾದಿದಾರರು ಅವರ ಗಂಡನ ಜೊತೆ ವಿದೇಶಕ್ಕೆ ಹೋಗಿದ್ದು ಅಲ್ಲಿ ಪಿರ್ಯಾದಿದಾರರು ಗರ್ಭಿಣಿ ಆದ ನಂತರ  ಮಾನಸಿಕ ಹಿಂಸೆ ನೀಡಿರುವುದಾಗಿದೆ. 4 ತಿಂಗಳ ನಂತರ ಅಕ್ಟೋಬರ್ ತಿಂಗಳಲ್ಲಿ ಪಿರ್ಯಾದಿದಾರರು ವಿದೇಶದಿಂದ ವಾಪಾಸು ಬಂದಿರುವುದಾಗಿದೆ. 2017 ರ ಜೂನ್ ತಿಂಗಳಲ್ಲಿ ಪಿರ್ಯಾದಿದಾರರ ಗಂಡ 1ನೇ ಆಪಾದಿತ ಊರಿಗೆ ಬಂದಿದ್ದು ಈ ಸಮಯ ಆಪಾದಿತರಾದ 2) ಹಂಝ ಸಾಹೇಬ್ (65),3) ರಝಿಯಾ (42), ಗಂಡ: ಮಜೀದ್ ಸಾಹೇಬ್, ಮೇಲಿನ ಎಲ್ಲರೂ ವಾಸ:4-201, ಮೈತ್ರಿ ಮನೆ ರಸ್ತೆ, ಅಂಕದಕಟ್ಟೆ,  ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರು 10 ಲಕ್ಷ ವರದಕ್ಷಿಣೆ ಹಾಗೂ 100 ಸವರಿನ್ ಚಿನ್ನ ತರುವಂತೆ ಹೇಳಿ ಊಟ ತಿಂಡಿ ಸರಿಯಾಗಿ ನೀಡದೇ ಹಿಂಸೆ ನೀಡಿರುವುದಾಗಿದೆ.  2020 ಫೆಬ್ರವರಿಯಲ್ಲಿ 1ನೇ ಆಪಾದಿತ ಊರಿಗೆ ಬಂದಿದ್ದು, 13/02/2020 ರಂದು ಸಂಜೆ 07:30 ಗಂಟೆಗೆ ಆರೋಪಿತರು ಪಿರ್ಯಾದಿದಾರರ ಮೇಲೆ  ಕಾದ ಎಣ್ಣೆ ಸುರಿಯಲು ಪ್ರಯತ್ನಿಸಿದ್ದು ಪಿರ್ಯಾದಿದಾರರು ತಪ್ಪಿಸಿಕೊಂಡಾಗ ಬಿಸಿ ಎಣ್ಣೆ ಪಿರ್ಯಾದಿದಾರರ ಕಾಲಿಗೆ ಹಾಗೂ ಕೈಗೆ ಬಿದ್ದು  ಸುಟ್ಟ ಗಾಯವಾಗಿರುತ್ತದೆ. ಬಳಿಕ ಕೋಪಗೊಂಡ ಆರೋಪಿತರು ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು  ಕೈಯಿಂದ ಹೊಡೆದು ಕಾಲಿನಿಂದ ತುಳಿದು ದೈಹಿಕ ದೌರ್ಜನ್ಯ ನಡೆಸಿ ಕೊಲ್ಲುವುದಾಗಿ  ಜೀವಬೆದರಿಕೆ ಹಾಕಿರುತ್ತಾರೆ. ವರದಕ್ಷಿಣೆಯಾಗಿ ಪಡೆದ ಚಿನ್ನಾಭರಣಗಳು ಆರೋಪಿತರ ಬಳಿಯಲ್ಲಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 498(a) 323, 504, 506 ಜೊತೆಗೆ 34 ಐಪಿಸಿ , ಕಲಂ: 3,4,6 DP Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಮರಿಯಮ್ಮ (67) , ಗಂಡ: ಟಿ.ಕೆ ಅಬ್ದುಲ್ ಖಾದರ್, ವಾಸ: ಆಲ್‌ಮುಬಾರಕ್ ಮಂಝಿಲ್, ಕನ್ನಂಗಾರ್, ಹೆಜಮಾಡಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ಮಗ ಆರೋಪಿ ಸಾಹುಲ್ ಹಮೀದ್ ದಿನಾಂಕ 04/08/2021 ರಂದು ಬೆಳಿಗ್ಗೆ 11:00 ಗಂಟೆಗೆ ಕಾಫು ತಾಲೂಕು ನಡ್ಸಾಲು  ಗ್ರಾಮದ ಕನ್ನಂಗಾರ್‌ ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ಅಂಗಳಕ್ಕೆ  ಮಣ್ಣು ತಂದು ಹಾಕಿದ್ದು ಅದನ್ನು  ಪಿರ್ಯಾದಿದಾರರು  ಪ್ರಶ್ನಿಸಿದಾದ ಆರೋಪಿ ಸಾಹುಲ್ ಹಮೀದ್  ನು  ಅಲ್ಲೇ ಇದ್ದ  ತೆಂಗಿನ ಸೋಗೆಯ ತುಂಡಿನಿಂದ ಪಿರ್ಯಾದಿದಾರರ ತಲೆ, ಬೆನ್ನಿಗೆ ಹೊಡೆದಿದ್ದು ತಪ್ಪಿಸಲು ಬಂದ ಪಿರ್ಯಾದಿದಾರರ ಗಂಡ ಟಿ.ಕೆ ಅಬ್ದುಲ್ ಖಾದರ್  ಅವರಿಗೂ ಅದರಿಂದ ಹೊಡೆದಿದ್ದು, ಆ ಸಮಯ ಸಾಹುಲ್ ಹಮೀದ್  ನ ಹೆಂಡತಿ ಯಸ್ಮಿನ್‌ಳು ಬಂದು ಪಿರ್ಯಾದಿದಾರರ ಜುಟ್ಟು ಹಿಡಿದು, ಎಳೆದು ಕೈಯಿಂದ ಮುಖ, ಬೆನ್ನಿಗೆ ಹೊಡೆದು ಬೈದಿರುತ್ತಾರೆ. ದಿನಾಂಕ 05/08/2021 ರಂದು ಬೆಳಿಗ್ಗೆ 10:00 ಗಂಟೆಗೆ  ಪಿರ್ಯಾದಿದಾರರ ಮೊಮ್ಮಕ್ಕಳಾದ  ಶಫೀಕ್ ಮತ್ತು ಶಾಜ್ ಎಂಬುವವರು ಬಂದು  ಸಾಹುಲ್‌ನಲ್ಲಿ ಯಾಕೆ ಅಜ್ಜ ಅಜ್ಜಿಯರಿಗೆ ಹೊಡೆದಿರುತ್ತೀರಿ ಎಂದು ಕೇಳಿದಾಗ  ಸಾಹುಲ್ ಹಮೀದ್  ಮತ್ತು ಯಸ್ಮಿನ್  ಅವರಿಗೆ ಬೈದಿದ್ದು ಪಿರ್ಯಾದಿ ಮತ್ತು ಅವರ ಗಂಡ, ಸಾಹುಲ್  ಮನೆ  ಬಳಿ ಹೋಗಿ ಮೊಮ್ಮಕ್ಕಳನ್ನು  ಮಾತನಾಡುವುದು ಬೇಡ ಎಂದು ಕರೆಯುತ್ತಿರುವಾಗ ಸಾಹುಲ್ ಹಮೀದ್  ಮತ್ತೆ  ಕೊತ್ತಳಿಗೆ ತಂದು ಪಿರ್ಯಾದಿದಾರರಿಗೆ  ಹಾಗೂ ಗಂಡ ಟಿ.ಕೆ ಮಹಮ್ಮದ್ ರವರಿಗೆ ಹೊಡೆದಿರುತ್ತಾನೆ. ಅಲ್ಲದೆ  ಟಿ.ಕೆ ಮಹಮ್ಮದ್ ರವರ ಅಪರೇಷನ್ ಆದ ಗಾಯಕ್ಕೆ ಹಾಕಿದ ಹೊಲಿಗೆಯ ದಾರವನ್ನು ಹಿಡಿದು ಎಳೆದು ನೋವು ಮಾಡಿರುತ್ತಾನೆ. ಯಾಸ್ಮಿನ್ ಪಿರ್ಯಾದಿದಾರರ  ಕುತ್ತಿಗೆ ಒತ್ತಿ ಹಿಡಿದಿರುತ್ತಾಳೆ.  ಅಲ್ಲದೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ.  ಗಾಯಗೊಂಡ ಪಿರ್ಯಾದಿದಾರರು ಮತ್ತು ಟಿ.ಕೆ ಮಹಮ್ಮದ್  ಪಡುಬಿದ್ರಿ ಸಿದ್ದಿ ವಿನಾಯಕ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 324, 323, 504, 506,  ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-08-2021 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080