ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಬ್ರಹ್ಮಾವರ: ದಿನಾಂಕ: 08/08/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಗಾಯತ್ರಿ ಶೆಟ್ಟಿ (40), ಗಂಡ: ನಿಕಿಲ್‌‌ ಶೆಟ್ಟಿ, ವಾಸ: ಪ್ಲ್ಯಾಟ್‌‌ ನಂಬ್ರ 503, ಬ್ಲುಬೆರಿ ಹೈಟ್ಸ್‌‌‌‌‌ ಎದುರು, ಭಟ್‌‌‌ ಆಟೋಕೇರ್‌‌‌‌, ಹರಿಪದವು, ಯೆಯ್ಯಾಡಿ, ಮಂಗಳೂರು ಇವರುಮಂಗಳೂರಿನಿಂದ ಬೆಳಿಗ್ಗೆ 6:15 ಗಂಟೆಗೆ ತನ್ನ KA-19-MG-9927 ನೇ ಮಾರುತಿ ಸುಜುಕಿ ಬೋಲೆನೋ ಕೆಂಪು ಕಾರಿನಲ್ಲಿ ತನ್ನ ಅಣ್ಣನ ಮಗ ಅನಿಶ್‌ ಶೆಟ್ಟಿ ಹಾಗೂ ಪರಿಚಯದ ಶಶಾಂಕ್‌‌, ರಕ್ಷಿತ್‌‌, ಶಶಾಂಕ್‌‌ ಪೂಜಾರಿ ಎಂಬುವವರ ಜೊತೆ ತಾನು ಕಾರನ್ನು ಚಲಾಯಿಸಿಕೊಂಡು ಬ್ರಹ್ಮಾವರಕ್ಕೆ ಹೊರಟು ರಾಹೆ 66 ರಲ್ಲಿ ಬರುತ್ತಾ ಬೆಳಿಗ್ಗೆ 7:20 ಗಂಟೆಗೆ ಹೇರೂರು ಸೇತುವೆ ಮೇಲೆ ಬರುತ್ತಿರುವಾಗ ಹಿಂದಿನಿಂದ KA-04-AB-8280 ನೇ ನಂಬ್ರದ ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಎಡಬದಿಯ ಹಿಂಬದಿಯ ಬಂಪರಿಗೆ ಡಿಕ್ಕಿ ಹೊಡೆದು ಪರಿಣಾಮ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರು ಒಮ್ಮೆಲೆ ಮುಂದಕ್ಕೆ ಹೋಗಿ ವಾಪಾಸು ತಿರುಗಿ ನಿಂತು ಸೇತುವೆಗೆ ಡಿಕ್ಕಿ ಹೊಡೆದಿದ್ದು, ಕಾರು, ಲಾರಿ ಮತ್ತು ಸೇತುವೆಯ ಮಧ್ಯೆ ಸಿಕ್ಕಿ ಸಂಪೂರ್ಣ ಜಖಂ ಗೊಂಡಿರುತ್ತದೆ. ಕಾರಿನೊಳಗಿದ್ದ ಪಿರ್ಯಾದಿದಾರರಿಗೆ ಬಲಕೈಗೆ ರಕ್ತಗಾಯ ಹಾಗೂ ಬಲಕಾಲಿಗೆ ಒಳನೋವಾಗಿರುತ್ತದೆ. ಕಾರಿನಲ್ಲಿದ್ದ ಉಳಿದ ನಾಲ್ಕು ಜನರಿಗೆ ಯಾವುದೇ ರಕ್ತಗಾಯಗಳಾಗಿರುವುದಿಲ್ಲ. ಡಿಕ್ಕಿ ಹೊಡೆದ ಲಾರಿ ಬಲಬದಿಯ ಬಂಪರ್‌‌ ಹಾಗೂ ಡೀಸೆಲ್‌‌ ಟ್ಯಾಂಕ್‌‌‌ ಜಖಂಗೊಂಡಿರುತ್ತದೆ. ಪಿರ್ಯಾದಿದಾರರು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆಪಡೆದಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 151/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಪಾಂಡು ನಾಯ್ಕ ಪ್ರಾಯ : 56 ವರ್ಷ, ತಂದೆ: ದಿ. ಲಕ್ಷಣ್ಮ ನಾಯ್ಕ್ , ವಾಸ: ಸಣ್ಣಕ್ಕಿಬೆಟ್ಟು, ಪರ್ಕಳ ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರ ಮಗ ಪ್ರಸನ್ನ ಪ್ರಾಯ: 24 ವರ್ಷ ರವರು ದಿನಾಂಕ 02/08/2021 ರಂದು 17:00 ಗಂಟೆಗೆ  ಮನೆಯಿಂದ ಕಾಣೆಯಾಗಿದ್ದು ಪಿರ್ಯಾದಿದಾರರು ಸಂಬಂಧಿಕರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿ ಪ್ರಸನ್ನ ರವರನ್ನು ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ . ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2021 ಕಲಂ:ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಶಿರ್ವಾ; ಆರೋಪಿ 1. ಶ್ರೀಮತಿ ಸವಿತಾ ಶೆಟ್ಟಿ, (31) ಗಂಡ: ಪುನಿತ ಪುರಂದರ ಶೆಟ್ಟಿ. ವಾಸ: ಮಚ್ಚೆ, ಬೆಳಗಾವಿ ಇವರು ಪಿರ್ಯಾದಿದಾರರಾದ ಶ್ರೀಮತಿ ಜಯಂತಿ ಶೆಡ್ತಿ, (53), ಗಂಡ: ದಿ. ಪುರಂದರ ಶೆಟ್ಟಿ, ವಾಸ: 365, ಅಂಬಾ ಪ್ಯಾಲೇಸ್‌, ಪಿಲಾರು ಮಜಲುಬೆಟ್ಟು ಅಂಚೆ ಮತ್ತು ಗ್ರಾಮ, ಕಾಪು ತಾಲ್ಲೂಕು  ಇವರ  ಮಗನ ಹೆಂಡತಿ, ಆರೋಪಿ 2.ರಮೇಶ್‌ ಶೆಟ್ಟಿ, ಪ್ರಾಯು: 60. ತಂದೆ: ದಿ. ನಾರಾಯಣ ಶೆಟ್ಟಿ ವಾಸ: ಮಚ್ಚೆ, ಬೆಳಗಾವಿ ಇವರು ಪಿರ್ಯಾದಿದಾರರ ಮಗನ ಮಾವ, ಆರೋಪಿ 3. ರಘುನಾಥ ಶೆಟ್ಟಿ, ಪ್ರಾಯ: 35 ವರ್ಷ. ತಂದೆ: ರಮೇಶ್‌ ಶೆಟ್ಟಿ ವಾಸ: ಮಚ್ಚೆ, ಬೆಳಗಾವಿ ಇವರು ಪಿರ್ಯಾದಿದಾರರ ಮಗನ ಬಾವ ಆಗಿರುತ್ತಾರೆ. ಪಿರ್ಯಾದಿದಾರರ ಮಗ ಪುನೀತ್‌ ಕುಮಾರ ಮತ್ತು 1ನೇ ಆರೋಪಿ ಶ್ರೀಮತಿ ಸವಿತಾ ಶೆಟ್ಟಿ ರವರೊಂದಿಗೆ ದಿನಾಂಕ 24/02/2019 ರಂದು ಕಟೀಲು ಇಂಟರ್‌ನ್ಯಾಶನಲ್‌ ಹೊಟೇಲ್‌ನಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದು. ಆ ಬಳಿಕ ಪಿರ್ಯಾದಿದಾರರ ಮಗನ ಮತ್ತು ಸೊಸೆಯ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಈ ಬಗ್ಗೆ ದಿನಾಂಕ 06/12/2020 ರಂದು ಶಿರ್ವ ಗ್ರಾಮದ ಶಿರ್ವ ಮಿಲನ್‌ ಬಾರ್‌& ರೆಸ್ಟೋರೆಂಟ್‌ನಲ್ಲಿ ಮಾತುಕತೆ ನಡೆಯುವಾಗ ಸಮಯ 15:30 ಗಂಟೆಗೆ ಆರೋಪಿತೆರೆಲ್ಲರೂ ಸಮಾನ ಉದ್ದೇಶದಿಂದ ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿದಾರರ ಅಣ್ಣ ರಮೇಶ್‌ ಶೆಟ್ಟಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಮಾನಕ್ಕೆ ಧಕ್ಕೆ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: 504, 506, 323, 354 RW 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

 

 

 

ಇತ್ತೀಚಿನ ನವೀಕರಣ​ : 08-08-2021 07:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080