ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಮಲ್ಲಪ್ಪ ಹನುಮಂತ ಹೂಗಾರ (22), ತಂದೆ:  ಹನುಮಂತ ಹೊಗಾರ , ವಾಸ:ನಂದಿಕೇಶ್ವರ ತಾಲೂಕು , ಬಾದಾಮಿ , ಬಾಗಲಕೋಟೆ ಜಿಲ್ಲೆ ಇವರು ದಿನಾಂಕ 07/07/2022 ರಂದು ಸ್ನೇಹಿತರೊಂದಿಗೆ ಮಂದಾರ್ತಿ ದೇವಸ್ಧಾನಕ್ಕೆ ಬರಲು ಸಂತೆಕಟ್ಟೆಯಿಂದ ಹೊರಟು ಪಿರ್ಯಾದಿದಾರರು ಒಂದು ಮೋಟಾರ ಸೈಕಲ್‌ನಲ್ಲಿ ಹಾಗೂ KA-20-EE-1715 ಮೋಟಾರ ಸೈಕಲ್‌ಯನ್ನು ಮಹೇಶ ಸವಾರನಾಗಿ ಲಕ್ಷ್ಮಣ ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಮಂದಾರ್ತಿ ದೇವಸ್ಥಾನಕ್ಕೆ ಬಂದು ವಾಪಸ್ಸು ಮನೆ ಕಡೆಗೆ ಹೊರಟು ಮಧ್ಯಾಹ್ನ 3:30 ಗಂಟೆಗೆ ಹೆಗ್ಗುಂಜೆ  ಗ್ರಾಮದ ಮಂದಾರ್ತಿ ಭಾರತ್‌ ಪೆಂಟ್ರೋಲ್‌ ಬಂಕ್‌ ಎದುರು  ತಲುಪುವಾಗ ಬಾರ್ಕೂರು ಕಡೆಯಿಂದ  KA-41-MA-7954 ನೇ ಕಾರು ಚಾಲಕ ವಿಜಯ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ  ಬಲಭಾಗಕ್ಕೆ ಬಂದು ಪಿರ್ಯಾದಿದಾರರು ಎದುರಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮಹೇಶನ ಮೋಟಾರ ಸೈಕಲ್‌ಗೆ ಡಿಕ್ಕಿ ಹೊಡೆದ  ಪರಿಣಾಮ ಮೋಟಾರ  ಸೈಕಲ್‌ ಸವಾರ ಹಾಗೂ ಸಹಾ ಸವಾರ ಬೈಕ್‌ ಸಮೇತ ರಸ್ತೆಗೆ  ಬಿದ್ದು  ಮಹೇಶನಿಗೆ ಸೊಂಟಕ್ಕೆ ಹಾಗೂ ಎಡ ಕಾಲಿನ ಪಾದದ ಬಳಿ ತೀವ್ರ ಸ್ವರೂಪದ ರಕ್ತ ಗಾಯ ಹಾಗೂ ಸಹಾ ಸವಾರ ಲಕ್ಷ್ಮಣನಿಗೆ ಎಡ ಕಾಲಿನ ಮೊಣಗಂಟಿನ ಬಳಿ ಒಳ ಜಖಂ ಆಗಿರುತ್ತದೆ. ನಂತರ ಗಾಯ ಗೊಂಡವರನ್ನು ಅಂಬುಲೈನ್ಸ್‌ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 115/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಜಗದೀಶ್ (43), ತಂದೆ: ಮಂಜಯ್ಯ, ವಾಸ: ಸಿವಿ ಮನೆ ತೆಂಕಬೆಟ್ಟು  ಕಂಬದಕೋಣೆ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 06/07/2022 ರಂದು ಅವರ ಅಣ್ಣ  ಮಹಾವೀರ ರವರೊಂದಿಗೆ ಅಣ್ಣನ KA-14-EP-0136  ನೇ ಮೋಟಾರು ಸೈಕಲ್ ನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಬಡಾಕೆರೆಯಿಂದ  ಹಳಗೇರಿಗೆ ಮನೆಗೆ ಬರುತ್ತಿರುವಾಗ ಮಹಾವೀರ ರವರು ಮೋಟಾರು ಸೈಕಲ್ ನ್ನು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿಮಾಡಿಕೊಂಡು ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಬಳಿ ತಲುಪಿದಾಗ ಮಧ್ಯಾಹ್ನ 1:15 ಗಂಟೆಗೆ  ಪಿರ್ಯಾದಿದಾರರ ಹಿಂದಿನಿಂದ ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ KA-20-EY-7929 ನೇ ಮೋಟಾರು ಸೈಕಲ್ ಸವಾರನು ಆತನ ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ನ್ನು ಓವರ ಟೇಕ್ ಮಾಡಿ ಯಾವುದೇ ಸೂಚನೆ ನೀಡದೇ ಪಿರ್ಯಾದಿದಾರರ ಮೋಟಾರು ಸೈಕಲ್ ಎದುರಿಗೆ  ಎಡಕ್ಕೆ  ತಿರುಗಿಸಿ ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿದ  ಪರಿಣಾಮ  ಮೋಟಾರು ಸೈಕಲ್ ಸವಾರಿಮಾಡಿಕೊಂಡಿದ್ದ ಪಿರ್ಯಾದಿದಾರರ ಅಣ್ಣ ಮಹಾವೀರ ರವರಿಗೆ ಮೋಟಾರು ಸೈಕಲ್ ನಿಯಂತ್ರಣಕ್ಕೆ ಸಿಗದೇ KA-20-EY-7929 ನೇ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಅಣ್ಣ  ಮಹಾವೀರ ರವರು ಮೋಟಾರು ಸೈಕಲ್ ಸಮೇತ ರಸ್ತೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡ ಭುಜಕ್ಕೆ, ಎಡಬದಿಯ ಸೊಂಟಕ್ಕೆ , ಮೊಣಗಂಟು,ಕಾಲಿನ ಬೆರಳುಗಳಿಗೆ ರಕ್ತಗಾಯ ಹಾಗೂ  ಮಹಾವೀರ ರವರಿಗೆ ಸಣ್ಣ ಪುಟ್ಟತರಚಿದ ಗಾಯವಾಗಿದ್ದು , ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್  ನಲ್ಲಿ ಕುಂದಾಪುರ  ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 139/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ದರ್ಶನ್ (31),  ತಂದೆ: ಸಂಜೀವ  ಮೊಗವೀರ,  ವಾಸ:  ಗದ್ದೆ ಮನೆ ,  ಚಿಕನ್ ಸಾಲ್  ರೋಡ್  ಕುಂದಾಫುರ ಕಸಬಾ  ಗ್ರಾಮ  ಕುಂದಾಫುರ ತಾಲೂಕು  ಉಡುಪಿ ಜಿಲ್ಲೆ ಇವರ  ತಮ್ಮ ಗುರುರಾಜ್  (25)  ಎಂಬುವವರು ಆನಗಳ್ಳಿಯ  ದತ್ತಾಶ್ರಯದಲ್ಲಿ  ಕೆಲಸಮಾಡಿಕೊಂಡಿದ್ದು ಹಾಗೂ  ಪಿರ್ಯಾದಿದಾರರ ತಂದೆಯ  ಅಕ್ಕನ ಮಗನಾದ ಸಂತೋಷನು ಕೂಡಾ ಈ ಹಿಂದೆ ಆನಗಳ್ಳಿಯ  ದತ್ತಾಶ್ರಯದಲ್ಲಿ ಕೆಲಸಮಾಡಿಕೊಂಡಿದ್ದು , 6 ತಿಂಗಳ ಹಿಂದೆ ಕೆಲಸ ಬಿಟ್ಟರುತ್ತಾನೆ. ಆನಗಳ್ಳಿಯ  ದತ್ತಾಶ್ರಯದಲ್ಲಿ ಕೆಲಸ ಮಾಡುವ  ಯುವತಿಯೊಂದಿಗೆ ಸಂತೋಷನು ಸ್ನೇಹದಿಂದ ಇದ್ದು ಈ  ವಿಚಾರದಲ್ಲಿ  ಗುರುರಾಜನಿಗೂ  ಹಾಗೂ  ಸಂತೋಷನಿಗೂ  ವೈಮನಸ್ಸು ಉಂಟಾಗಿ  ಈ  ಹಿಂದೆ  ಹಲವು  ಬಾರಿ  ಬಾಯಿ ಮಾತಿನ  ಗಲಾಟೆ ಆಗಿರುತ್ತದೆ. 2 ದಿನಗಳ ಹಿಂದೆ ಗುರುರಾಜನು ಆನಗಳ್ಳಿಯ ದತ್ತಾಶ್ರಯದಲ್ಲಿ  ಕೆಲಸಮಾಡಿಕೊಂಡಿದ್ದ  ಯುವತಿಗೆ  ಸರಿಯಾಗಿ ಕೆಲಸ ನಿರ್ವಹಿಸಲು ತಿಳುವಳಿಕೆ ನೀಡಿದ್ದಕ್ಕೆ ಸಂತೋಷನು  ಗುರುರಾಜನಿಗೆ  ಪದೇ ಪದೇ  ಮೊಬೈಲ್  ಕರೆ ಮಾಡಿ  ಹೊರಗಡೆ ಸಿಗು, ನಿನ್ನನ್ನು ನೋಡಿಕೊಳ್ಳುತ್ತೇನೆಂದು  ಹೇಳಿ ದಿನಾಂಕ 07/07/2022 ರಂದು  ಕೂಡಾ ಹಲವು ಬಾರಿ ಕರೆ ಮಾಡಿ ದಿನಾಂಕ 07/07/2022 ರಂದು ರಾತ್ರಿ  11:10 ಗಂಟೆಗೆ ಗುರುರಾಜನು ಆತನ ಸ್ನೇಹಿತರೊಂದಿಗೆ  ಕಾರಿನಲ್ಲಿ  ಮನೆಗೆ  ಹೋಗುತ್ತಿದ್ದಾಗ  ಕುಂದಾಫುರ ತಾಲೂಕು ಕಸಬಾ  ಗ್ರಾಮದ  ಸಂಗಮ್ ಜಂಕ್ಷನ್‌  ಬಳಿ  ಸಮೃದ್ದಿ ಪ್ಲಾಜಾದ ಸಮೀಪ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ಸಂತೋಷನ ಕೈಯಲ್ಲಿದ್ದ  ಚೂರಿಯಿಂದ  ಗುರುರಾಜನ ಹೊಟ್ಟೆಗೆ ಮತ್ತು ಎಡಕೈಗೆ  ಕೊಲೆ ಮಾಡುವ ಉದ್ದೇಶ ದಿಂದಲೇ  ಬಲವಾಗಿ  ತಿವಿದು ತೀವೃ ಸ್ವರೂಪದ ಹಲ್ಲೆ ಮಾಡಿದ್ದು  ಗುರುರಾಜನು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2022  ಕಲಂ:  341, 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 08/07/2022 ರಂದು ಬೆಳಗ್ಗಿನ ಜಾವ ಸದಾಶಿವ  ಆರ್ ಗವರೋಜಿ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ  ಕುಂದಾಪುರ ತಾಲೂಕು ಹಂಗಳೂರು ಕಡೆಯಿಂದ ಕೋಡಿ ಕಡೆಗೆ  ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ  ಕುಂದಾಪುರ ಕಸಬಾ ಗ್ರಾಮದ ಎಂ ಕೋಡಿಯ ಎನ್.ಎಂ.ಎ. ಕ್ಲಿನಿಕ್ ಬಳಿ ತಲುಪಿ  ಹಂಗಳೂರು  ಕಡೆಯಿಂದ  ಕೋಡಿ ಕಡೆಗೆ ಬರುತ್ತಿದ್ದ  ಒಂದು ಇಕೋ ಕಾರನ್ನು  ನಿಲ್ಲಿಸಲು ಸೂಚಿಸಿದಾಗ ಕಾರನ್ನು ನಿಲ್ಲಿಸದೇ  ಅಲ್ಲಿಂದ  ರಸ್ತೆಯ ದಕ್ಷಿಣಕ್ಕೆ  ಮಣ್ಣು ರಸ್ತೆಗೆ ತಿರುಗಿಸಿಕೊಂಡು  ಸ್ವಲ್ಪ ಮುಂದಕ್ಕೆ ಹೋಗಿ ಒಂದು ಮನೆಯ ಎದುರಿನ ತೋಟದಲ್ಲಿ ನಿಲ್ಲಿಸಿ ಅದರಲ್ಲಿದ್ದ  ಚಾಲಕನು ಸೇರಿ ಮೂವರು ವ್ಯಕ್ತಿಗಳು  ಕಾರಿನಿಂದ ಇಳಿದು  ಕತ್ತಲೆಯಲ್ಲಿ ಪರಾರಿಯಾಗಿದ್ದು, ವಾಹನವನ್ನು  ಪರಿಶೀಲಿಸಲಾಗಿ KA-20- MD- 3818  ನೇ ಇಕೋ ಕಾರು ಆಗಿದ್ದು  ಕಾರಿನ ಒಳಗೆ  ಒಂದು ದೊಡ್ಡ ಗಂಡು ಕರುವನ್ನು  ನೈಲಾನ್ ಹಗ್ಗದಿಂದ ಕುತ್ತಿಗೆ, ಕಾಲುಗಳನ್ನು ಬಿಗಿದು  ಹಿಂಸಾತ್ಮಕ ವಾಗಿ ಕಟ್ಟಿ ಹಾಕಿದ್ದು, ಸದ್ರಿ ಜಾನುವಾರನ್ನು  ಯಾವುದೇ  ಪರವಾನಿಗೆ  ಇಲ್ಲದೇ ಎಲ್ಲಿಂದಲೋ ಕಳವು ಮಾಡಿ  ಅಕ್ರಮವಾಗಿ ವಧೆ ಮಾಡುವ ಉದ್ದೇಶದಿಂದ  ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿರುತ್ತದೆ. ಅದರ ಚಾಲಕನನ್ನು ಪಿರ್ಯಾದಿದಾರರ ಬಳಿ ಇದ್ದ ಟಾರ್ಚ್‌ ಲೈಟ್ ಬೆಳಕಿನಿಂದ  ನೋಡಿ ಗುರುತಿಸಿದ್ದು,  ಆತನು ಕುಂದಾಪುರ ಪೊಲೀಸ್ ಠಾಣೆಯ  ಜಾನುವಾರು ಕಳ್ಳತನ ಪ್ರಕರಣದ ಹಳೆ ಆರೋಪಿ  ಅಬ್ದುಲ್ ಮುನಾಫ್  ಆಗಿರುತ್ತಾನೆ.  KA-20- MD- 3818 , ನೇ ಇಕೋ ವಾಹನ, ಒಂದು ಗಂಡು ಕರು, ಒಂದು ಕಪ್ಪು ಬಣ್ಣದ  ಪ್ಲಾಸ್ಟಿಕ್  ಟರ್ಪಾಲ್ ನೈಲಾನ್ ಹಗ್ಗ ಮತ್ತು  ಮರದ ಹಿಡಿ ಇರುವ ಉದ್ದದ ತಲವಾರನ್ನು  ಸ್ವಾದೀನಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಜಾನುವಾರುವಿನ  ಮೌಲ್ಯ ರೂಪಾಯಿ 10,000/- ಆಗಿರುತ್ತದೆ. ಈ ಬಗ್ಗೆ  ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2022  ಕಲಂ: 379 ಐಪಿಸಿ, ಕಲಂ: 4, 5 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ಅದ್ಯಾದೇಶ 2020 ಮತ್ತು ಕಲಂ 11(1)(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಮತ್ತು ಕಲಂ: 66 ಜೊತೆಗೆ 192 ಐ.ಎಮ್.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-07-2022 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080