ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಗಿರೀಶ್ ನಾಯ್ಕ್ ಇವರು ತನ್ನ ಕೆಲಸ ಮುಗಿಸಿ ತನ್ನ ಮನೆಗೆ ಕಾರಿನಲ್ಲಿ  ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 11: 50 ಗಂಟೆಗೆ ಬೊಮ್ಮರಬೆಟ್ಟು ಗ್ರಾಮದ ಸಧಾನ ಕಂಪೌಂಡ್ ಬಳಿ ಓರ್ವ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದು ತಾನು ತನ್ನ ಕಾರನ್ನು ನಿಲ್ಲಿಸಿ ಇಳಿದು ಹೋಗಿ ನೋಡಲಾಗಿ ಬಿದ್ದ ವ್ಯಕ್ತಿಯು ಅವರ  ಪರಿಚಯಸ್ಥ ರಾಗಿದ್ದ ಶರತ್ ಶೆಟ್ಟಿ (55) ಆಗಿದ್ದು ಅವರ ತಲೆಗೆ ಗಂಭೀರ ರಕ್ತಗಾಯವಾಗಿದ್ದು ಸದ್ರಿಯವರು ತಾನು ಕೆಲಸ ಮುಗಿಸಿ ತನ್ನ ಸ್ಕೂಟಿ ನಂಬ್ರ  KA-20-EH-2245 ನೇದರಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಾ.ಹೆ 169 (ಎ) ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಸ್ತೆಯ ಗುಂಡಿಗೆ ಬಿದ್ದು  ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ  ಕೆಎಂಸಿ ಮಣಿಪಾಲ ಅಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ  ದಿನಾಂಕ: 08/07/2022 ರಂದು ಮುಂಜಾನೆ 00:45 ಗಂಟೆಗೆ ಮೃತಪಟ್ಟಿರುತ್ತಾರೆ ಎಂದು  ಘೋಷಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022    ಕಲಂ:  279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿ ಶೈಲೇಶ್ ಶೆಟ್ಟಿ ಇವರು ನವಯುಗ ಕಂಪನಿಯ ಸೆಫ್ಟಿ ಆಫೀಸರ್‌‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 08/07/2022 ರಂದು ಗೋವಿಂದ ರವರು ತನ್ನ  ಬಾಬ್ತು ಕೆ.ಎ. 03 ಎಮ್. ಜೆ. 8959 ಕಾರನ್ನು  ರಾ ಹೆ 66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಮಯ ಸುಮಾರು ಬೆಳಗ್ಗೆ 06.45 ಗಂಟೆಗೆ  ಕಾಪು ವಿದ್ಯಾನಿಕೇತನ ಶಾಲೆಯ ಬಳಿ ಸರ್ವಿಸ್ ರಸ್ತೆಗೆ ನವಯುಗ ಕಂಪನಿಯವರು ಅಳವಡಿಸಿದ “ಎಲೆಕ್ಟ್ರಿಕಲ್ ಪೊಲ್‌” ಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಬಿದ್ದು, ಪರಿಣಾಮ ಎಲೆಕ್ಟ್ರಿಕಲ್ ಪೊಲ್‌ ಜಖಂಗೊಂಡು ಅದರ ಮೇಲಿದ್ದ “ಎರಡು ಬಲ್ಬ್‌” ಗಳು ಜಖಂ ಗೊಂಡಿದ್ದು. ಢಿಕ್ಕಿ ಹೊಡೆದ ಕಾರು ಸಂಪೂರ್ಣ ಜಖಂ ಗೊಂಡಿರುತ್ತದೆ. ಕಾರಿನಲ್ಲಿದ್ದ ಅರುಣಕುಮಾರ ರವರಿಗೆ ಬಲಭಾಗದ ಪಕ್ಕೆಲುಬಿಗೆ ಗುದ್ದಿದ ಒಳ ನೋವುಂಟಾಗಿರುತ್ತದೆ. ಈ ಅಪಘಾತದಿಂದ ನವಯುಗ ಕಂಪನಿಗೆ ಸುಮಾರು 2,04,000/- ರೂ, ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2022 ಕಲಂ 279 337 427  ಐ.ಪಿ.ಸಿ. ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಉಡುಪಿ: ದಿನಾಂಕ:06.07.2022 ರಂದು ನಾರಾಯಣ, ಪಿಎಸ್‌ಐ, ಸೆನ್ ಅಪರಾಧ ಪೊಲೀಸ್ ಠಾಣೆ,ಉಡುಪಿ ಇವರು ಸಿಬ್ಬಂದಿ ಕೃಷ್ಣ ಪ್ರಸಾದ್ ಮತ್ತು ಜೀವನ್‌ರವರನ್ನು ಕರೆದುಕೊಂಡು, ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ದಾಳಿ ಹಾಗೂ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ ತಾಲೂಕು, ಪುತ್ತೂರು ಗ್ರಾಮದ ಸಂತೆಕಟ್ಟೆ ಬಸ್ಸು ನಿಲ್ದಾಣದ ಬಳಿ, ಸಾರ್ವಜನಿಕ ಸ್ಥಳದಲ್ಲಿ ರೌಂಡ್ಸ್ ನಲ್ಲಿರುವಾಗ  ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ನಕ್ಷಿತ್ ಎಂಬಾತನನ್ನು ಮಧ್ಯಾಹ್ನ 14:30 ಗಂಟೆಗೆ ವಶಕ್ಕೆ ಪಡೆದು, ಠಾಣೆಗೆ ಕರೆತಂದು, ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ಈ ದಿನ ದಿನಾಂಕ: 08.07.2022 ರಂದು  ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು 09:00 ಗಂಟೆಗೆ ಸ್ವೀಕರಿಸಿ, ವರದಿಯಲ್ಲಿ ಸದ್ರಿ ವ್ಯಕ್ತಿಯು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಆರೋಪಿ ನಕ್ಷಿತ್ ವಿರುದ್ಧ  ಈ ಬಗ್ಗೆ ಉಡುಪಿ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.‌
  • ಕೋಟ: ಪಿರ್ಯಾದಿ ನಾರಾಯಣ ಇವರು ಲಕ್ಷ್ಮಿ ವೆಂಕಟೇಶ ಆಯಿಲ್ ಮಿಲ್ ಚೇಂಪಿ ಸಾಸ್ತಾನ ಇದರ ಆಡಳಿತ ಪಾಲುದಾರರಾಗಿದ್ದು,  ಪಿರ್ಯಾದಿದಾರರ ಕಂಪೆನಿಯು  ಕೊಬ್ಬರಿ  ಹಾಗೂ ಕೊಬ್ಬರಿ ಉತ್ಪನ್ನಗಳ  ವ್ಯವಹಾರ ವನ್ನು  ಮಾಡುತ್ತಿರುವುದಾಗಿದೆ. ದಿನಾಂಕ 08/03/2022 ರಂದು  ಅಕೋಲ  ಮಹಾರಾಷ್ಟ್ರ  ಇಲ್ಲಿನ  ನ್ಯೂ ಕ್ವಾಲಿಟಿ   ಟ್ರೇಡಿಂಗ್  ಕಂಪೆನಿ ಯ ಮಾಲೀಕರಾದ ಮಹಮ್ಮದ ಇಕ್ಬಾಲ್  ಪಿರ್ಯಾದಿದಾರರ ಕಂಪೆನಿಯಿಂದ  25 ಕೆ.ಜಿ ಯ 100 ಬ್ಯಾಗ್  ಕೊಬ್ಬರಿ  ಚೀಲಗಳನ್ನು  ರಶೀದಿ  ಸಂಖ್ಯೆ 440   ರಂತೆ 2.15 .775/- ಮೌಲ್ಯ ದಂತೆ 10 ದಿನಗಳ ಕ್ರೆಡಿಟ್  ನಲ್ಲಿ ಖರೀದಿಸಿ  ತೆಗೆದುಕೊಂಡು ಹೋಗಿರುತ್ತಾರೆ. ಸದ್ರಿ ಕೊಬ್ಬರಿ  ಖರೀದಿಯ ಹಣವನ್ನು ಪಾವತಿಗಾಗಿ ವಿಚಾರಿಸಿದಾಗ ಹಾರಿಕೆಯ ಉತ್ತರ ವನ್ನು ನೀಡಿದ್ದು  ನಂತರ ಪೋನ್  ಕರೆಯನ್ನು  ಸ್ವೀಕರಿಸಿರುವುದಿಲ್ಲ.  ವಕೀಲರ ಮೂಲಕ ನೀಡಿದ ನೋಟಿಸ್ ನ್ನು ಸ್ವೀಕರಿಸಿರುವುದಿಲ್ಲ. ಆರೋಪಿ ಪಿರ್ಯಾದಿದಾರರಿಗೆ ನಂಬಿಸಿ ಕೊಬ್ಬರಿಯನ್ನು ಖರೀದಿಸಿ  ಅದರ ಬಾಬ್ತು ಹಣವನ್ನು ಪಾವತಿ ಮಾಡದೇ  ನಂಬಿಕೆ ದ್ರೋಹ ಮಾಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2022 ಕಲಂ: 406.409.417.418.420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ನಾರಾಯಣ  ಇವರು  ಲಕ್ಷ್ಮಿ ವೆಂಕಟೇಶ ಆಯಿಲ್ ಮಿಲ್ ಚೇಂಪಿ ಸಾಸ್ತಾನ  ಇದರ ಆಡಳಿತ ಪಾಲುದಾರರಾಗಿದ್ದು,  ಪಿರ್ಯಾದಿದಾರರ ಕಂಪೆನಿಯು  ಕೊಬ್ಬರಿ  ಹಾಗೂ ಕೊಬ್ಬ ರಿ ಉತ್ಪನ್ನಗಳ  ವ್ಯವಹಾರ ವನ್ನು  ಮಾಡುತ್ತಿರುವುದಾಗಿದೆ. ದಿನಾಂಕ 25/02/2020ರಂದು  ಅಕೋಲ  ಮಹಾರಾಷ್ಟ್ರ  ಇಲ್ಲಿನ  ರಿಯಲ್  ಟ್ರೇಡಿಂಗ್  ಕಂಪೆನಿ ಯ ,ಮಾಲೀಕರಾದ ಮಹಮ್ಮದ ಇಕ್ಬಾಲ್  ಪಿರ್ಯಾದಿದಾರರ ಕಂಪೆನಿಯಿಂದ  25 ಕೆ.ಜಿ ಯ 100 ಬ್ಯಾಗ್  ಕೊಬ್ಬರಿ  ಚೀಲಗಳನ್ನು  ರಶೀದಿ  ಸಂಖ್ಯೆ 440   ರಂತೆ 2.17 .350/- ಮೌಲ್ಯ ದಂತೆ 10 ದಿನಗಳ ಕ್ರೆಡಿಟ್  ನಲ್ಲಿ ಖರೀದಿಸಿ  ತೆಗೆದುಕೊಂಡು ಹೋಗಿರುತ್ತಾರೆ. ಸದ್ರಿ ಕೊಬ್ಬರಿ  ಖರೀದಿಯ ಹಣವನ್ನು ಪಾವತಿಗಾಗಿ ವಿಚಾರಿಸಿದಾಗ ಹಾರಿಕೆಯ ಉತ್ತರ ವನ್ನು ನೀಡಿದ್ದು  ನಂತರ ಪೋನ್  ಕರೆಯನ್ನು  ಸ್ವೀಕರಿಸಿರುವುದಿಲ್ಲ.  ವಕೀಲರ ಮೂಲಕ ನೀಡಿದ ನೋಟಿಸ್ ನ್ನು ಸ್ವೀಕರಿಸಿರುವುದಿಲ್ಲ. ಆರೋಪಿ ಪಿರ್ಯಾದಿದಾರರಿಗೆ ನಂಬಿಸಿ ಕೊಬ್ಬರಿಯನ್ನು ಖರೀದಿಸಿ  ಅದರ ಬಾಬ್ತು ಹಣವನ್ನು ಪಾವತಿ ಮಾಡದೇ  ನಂಬಿಕೆ ದ್ರೋಹ ಮಾಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 108/2022 ಕಲಂ: 406.409.417.418.420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-07-2022 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080