ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 06/07/2021 ರಂದು ಮಧ್ಯಾಹ್ನ 2:30 ಗಂಟೆಗೆ ಕಾರ್ಕಳ ತಾಲೂಕು, ಕಸಬ ಗ್ರಾಮದ ಆನೆಕೆರೆ ಶ್ರೀಕೃಷ್ಣ ದೇವಸ್ಥಾನದ ಬಳಿ ಹಾದು ಹೋಗುವ ಪುಲ್ಕೇರಿ-ಬಂಗ್ಲೆಗುಡ್ಡೆ ರಾಜ್ಯ ಹೆದ್ದಾರಿಯಲ್ಲಿ ಅಂಬುಲೆನ್ಸ್ ವಾಹನ ನಂಬ್ರ KA-21-A-5081 ನೇಯದರ ಚಾಲಕನು, ಪುಲ್ಕೇರಿ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶೇಖರ ಮೂಲ್ಯ (51), ತಂದೆ: ಬಾಬು ಮೂಲ್ಯ, ವಾಸ: 3-114, ಉಗ್ಗೆದಬೆಟ್ಟ ಹೌಸ್, ಸಂಕಲಕರಿಯ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು ಇವರ ದ್ವಿಚಕ್ರ ವಾಹನ ನಂಬ್ರ KA-20-EV-1860 ನೇಯದನ್ನು ಕುಂಟಲ್ಪಾಡಿ ಕಡೆಯಿಂದ ಸವಾರಿ ಮಾಡಿಕೊಂಡು ಬಂದು ಆನೆಕೆರೆ ಕಡೆಗೆ ಹೋಗಲು ರಸ್ತೆಯನ್ನು ದಾಟುತ್ತಿದ್ದ ಸಮಯ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಹಣೆಗೆ, ಬಲ ಕಣ್ಣಿನ ಬಳಿ, ಮೂಗು, ಬಲಕೈ ಹಾಗೂ ಎರಡೂ ಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿದ್ದು, ದ್ವಿಚಕ್ರ ವಾಹನ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ವಿನಯ (26), ತಂದೆ: ತಿಮ್ಮಪ್ಪ ಪೂಜಾರಿ, ವಾಸ: ಗಾಡಿ ನಾರಾಯಣ ಪೂಜಾರಿ ಮನೆ ನೇರಂಬಳ್ಳಿ ಹಂಗಳೂರು ಗ್ರಾಮ ಕುಂದಾಪುರ ತಾಲೂಕು ಇವರ ಅಣ್ಣ ವಿಜಯ (28) ರವರು ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿರುವಾಗ ಕುಂದಾಪುರದ ಮಂಜುಳಾ ಇವರ ಪರಿಚಯವಾಗಿ ಮಂಜುಳಾರವರು ಕೊಟೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ವಿಜಯನು ಮಂಜುಳಾರ ಬಾಡಿಗೆ ಮನೆಗೆ ಆಗಾಗ ಬಂದು ಹೋಗುತ್ತಿರುವುದಾಗಿದೆ. ವಿಜಯನು ಸುಮಾರು 5-6 ವರ್ಷಗಳಿಂದ  ಪಿರ್ಯಾದಿದಾರರ ಮನೆಗೆ  ಬರುವುದನ್ನು ನಿಲ್ಲಿಸಿದ್ದು,  ದಿನಾಂಕ 07/07/2021 ರಂದು ಮಧ್ಯಾಹ್ಮ 1:30 ಗಂಟೆಗೆ ಸಮಯಕ್ಕೆ ಪಿರ್ಯದಿದಾರರ ಅಣ್ಣ ವಿಜಯ  ಮಂಜುಳಾರವರ ಕೋಟ ತಟ್ಟು ಪಡುಕೆರೆಯಲ್ಲಿರುವ ಬಾಡಿಗೆ ಮನೆಯ ಬಾತ್ ರೂಮಿನಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ವಿಚಾರ ತಿಳಿದು ಪಿರ್ಯಾದಿದಾರರ ಅಕ್ಕನೊಂದಿಗೆ ಕೋಟ ತಟ್ಟು ಪಡುಕೆರೆ ಗೆ ಬಂದು ವಿಜಯ ರವರ ಮೃತ ದೇಹವನ್ನು ನೋಡಿದ್ದು ಆತನು ನೇಣು ಬಿಗಿದ ಸ್ಥಿತಿಯಲ್ಲಿ ಮಂಜುಳಾರವರ ಮನೆಯ ಹಿಂಬದಿಯ ಬಾತ್ ರೂಮಿನಲ್ಲಿ  ಇರುವುದು ಕಂಡು ಬಂದಿದ್ದು, ಪಿರ್ಯಾದಿದಾರರ  ಅಣ್ಣನಿಗೆ ಯಾವುದೇ ದುರಭ್ಯಾಸ  ಹಾಗೂ ಸಮಸ್ಯೆಗಳು ಇಲ್ಲದೇ ಇರುವ ಕಾರಣ ಪಿರ್ಯಾದಿದಾರರ ಅಣ್ಣ ವಿಜಯನ ಸಾವಿನಲ್ಲಿ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2021 ಕಲಂ: 174C(iii) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಗಂಗೊಳ್ಳಿ: ದಿನಾಂಕ 06/07/2021 ರಂದು ಗುಜ್ಜಾಡಿ ಗ್ರಾಮದ ಕೊಡಪಾಡಿ, ಭಾರತ್ ನಗರದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಬಗ್ಗೆ ನಂಜಾನಾಯ್ಕ್, ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಆಪಾದಿತರಾದ 1. ರವಿ (30), ವಾಸ: ಭಾರತ್ ನಗರ ಹೋಲಿ, ಕ್ರಾಸ್, ಕೊಡಪಾಡಿ  ಗುಜ್ಜಾಡಿ ಗ್ರಾಮ, 2. ಪ್ರಶಾಂತ (29), ವಾಸ: ಭಾರತ್ ನಗರ , ಕೊಡಪಾಡಿ  ಗುಜ್ಜಾಡಿ ಗ್ರಾಮ, 3. ನಾಗೇಶ (39), ವಾಸ: ಭಾರತ್ ನಗರ  ಕೊಡಪಾಡಿ, ಗುಜ್ಜಾಡಿ ಗ್ರಾಮ, 4. ಇಸ್ಮಿಲ್ಲಾ(27), ವಾಸ: ಭಾರತ್ ನಗರ  ಕೊಡಪಾಡಿ, ಗುಜ್ಜಾಡಿ ಗ್ರಾಮ, 5. ಪ್ರದೀಪ (29), ವಾಸ: ಭಾರತ್ ನಗರ, ಕೊಡಪಾಡಿ  ಗುಜ್ಜಾಡಿ ಗ್ರಾಮ, 6. ರಮೇಶ (31), ವಾಸ : 3ನೇ ಕ್ರಾಸ್ ಭಾರತ್ ನಗರ, ಕೊಡಪಾಡಿ ಗುಜ್ಜಾಡಿ ಗ್ರಾಮ ಇವರನ್ನು ವಶಕ್ಕೆ ಪಡೆದಿದ್ದು, ಬಳಿಕ ಕೃತ್ಯಕ್ಕೆ ಬಳಸಿದ ನಗದು 1,020/- ರೂಪಾಯಿ, ಇಸ್ಪೀಟ್‌ ಎಲೆಗಳು –52, ಹಳೆಯ ನ್ಯೂಸ್‌ ಪೇಪರ್ –1  ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶಾಹಿನ ಬಿ ಫಾತಿಮಾ (28),ಗಂಡ: ಶಾಕೀಬ್ ಶೇಖ್, ವಾಸ:  ಬೆಳಪು,ಕಾಪು  ತಾಲೂಕು,ಉಡುಪಿ ಇವರು ಆಪಾದಿತ 1 ಶಾಕೀಬ್ ಶೇಖ್ ಇವರನ್ನು ದಿನಾಂಕ 20/07/2019 ರಂದು ಬದ್ರಿಯಾ ಜುಮ್ಮಾ ಮಸೀದಿ ಬೆಳಪು ಕಾಪು ಇಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದು ವಿವಾಹದ ಕೆಲವೆ ದಿನಗಳಲ್ಲಿ 1 ನೇ ಆಪಾದಿತ ಮತ್ತು 2ನೇ ಆಪಾದಿತ ಗಂಡನ ತಾಯಿ ನಸೀಮಾ ಬಾನು ಪಿರ್ಯಾದಿದಾರರಿಗೆ ಹಿಂಸೆ ನೀಡಲು ಪ್ರಾರಂಭಿಸಿರುತ್ತಾರೆ. 2ನೇ ಆಪಾದಿತೆಯು ಪಿರ್ಯಾದಿದಾರರೊಂದಿಗೆ ವಿನಾ ಕಾರಣ ಜಗಳ ಮಾಡಿ  ಒಮ್ಮೊಮ್ಮೆ ಚೂರಿ ಹಿಡಿದು ಪಿರ್ಯಾದಿದಾರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದು ಸರಿಯಾಗಿ ಊಟ ನೀಡದೇ ಹಿಂಸೆ ನೀಡಿ ಆಪಾದಿತ 1 ಮತ್ತು 2ನೇಯವರು ಹಲ್ಲೆ ನಡೆಸಿದ್ದು. 3 ನೇ ಆಪಾದಿತ ಗಂಡನ ತಂದೆ ಜುಬೇರ್ ಅಹಮ್ಮದ್ ಮತ್ತು 4ನೇ ಆಪಾದಿತನ ಸಂಬಂಧಿ ಬಿ ಅಬ್ದುಲ್ ಹಮೀದ್ ಸಾಹೇಬ್ ಇವರು 1ನೇ ಆಪಾದಿತ ಹಾಗೂ 2ನೇ ಆಪಾದಿತೆಗೆ ಪ್ರಚೋದನೆಯನ್ನು ನೀಡಿ ಪಿರ್ಯಾದಿದಾರರ ಬಗ್ಗೆ ಇಲ್ಲ ಸಲ್ಲದ ಮಾತನ್ನು ಹೇಳಿ ಪಿರ್ಯಾದಿದಾರರಿಗೆ ಹಿಂಸೆ ಕೊಡುವಂತೆ ಮಾಡಿರತ್ತಾರೆ. ಮಾತ್ರವಲ್ಲದೇ ಆರೋಪಿತರೆಲ್ಲ ಪಿರ್ಯಾದಿದಾರರಿಗೆ ನಿನ್ನ ತಂದೆಯ ಮನೆಯಿಂದ ಹಣ ಹಾಗೂ ಚಿನ್ನವನ್ನು ತರಬೇಕು ಇಲ್ಲದಿದ್ದರೆ ನಮ್ಮ ಮನೆಗೆ ಬರುವುದು ಬೇಡ , ಬಂದಲ್ಲಿ ನಿನ್ನ ಕೈಕಾಲು ಕಡಿದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ     25/2021 ಕಲಂ: 498(A), 323, 504, 506, 109 ಜೊತೆಗೆ 34  ಐಪಿಸಿ ಮತ್ತು ಕಲಂ 3,4 DP Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-07-2021 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080