ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿ ಶ್ರೀಮತಿ ಭವಾನಿ(53) ಗಂಡ: ರಾಮ ವಾಸ: ಸುಂದರ ನಿವಾಸ, ಕೆರೆಕಟ್ಟೆ ಗಣಪತಿ ದೇವಸ್ಥಾನ ರಸ್ತೆ ಅಗ್ರಹಾರ ಏಣಗುಡ್ಡೆ ಗ್ರಾಮ ಕಾಪು ಇವರ, ಗಂಡ ರಾಮ (58) ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮೂಲವ್ಯಾಧಿ ಖಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೇ ವಿಪರೀತ ಮದ್ಯಪಾನ ಕೂಡಾ ಮಾಡುತ್ತಿದ್ದರು. ದಿನಾಂಕ 07/07/2021 ರಂದು ರಾಮ ರವರು ಎಂದಿನಂತೆ ಕೂಲಿ ಕೆಲಸಕ್ಕೆ ಹೋದವರು ಸಂಜೆ 6:30 ಗಂಟೆಗೆ ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದು ಅವರ ಕೋಣೆಗೆ ಹೋಗಿ ಬಾಗಿಲು ಹಾಕಿ ಮಲಗಿದ್ದು , ಈ ದಿನ 08/07/2021 ಬೆಳಿಗ್ಗೆ 05:30 ಗಂಟೆಗೆ ಪಿರ್ಯಾದಿದಾರರು ಎಬ್ಬಿಸಲು ಬಾಗಿಲು ಬಡಿದಾಗ ರಾಮ ರವರು ಬಾಗಿಲು ತೆರೆಯದೇ ಇದ್ದು ನಂತರ ಮನೆಯವರ ಹಾಗೂ ನೆರೆಕರೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ರಾಮರವರ ರೂಮಿನಲ್ಲಿ ಕೋಣೆಯ ಪಕ್ಕಾಸಿಗೆ ಲುಂಗಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು,ಮೃತಪಟ್ಟಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಕಾಪು ಠಾಣಾ ಯು.ಡಿ.ಆರ್‌ ಸಂಖ್ಯೆ 24/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ : ಕಾರ್ಕಳ ತಾಲೂಕು ಕಲ್ಯ ಗ್ರಾಮದ ಕುಂಟಾಡಿ ದಂಡಿಬೆಟ್ಟು ಎಂಬಲ್ಲಿ ವಾಸ ಇರುವ ಪಿರ್ಯಾದಿ ಸತೀಶ ಪೂಜಾರಿ ಪ್ರಾಯ: 49 ವರ್ಷ ತಂದೆ: ಮರ್ದ ಪೂಜಾರಿ ವಾಸ ದಂಡಿಬೆಟ್ಟು ದರ್ಖಾಸ್ ಕುಂಟಾಡಿ ಕಲ್ಯ ಗ್ರಾಮ, ಇವರ ಅಣ್ಣ ಗಣೇಶ ಪೂಜಾರಿ ರವರಿಗೆ ಕೆಲವು ವರ್ಷಗಳಿಂದ ಮಾನಸಿಕ ಖಾಯಿಲೆ ಇದ್ದು, ಇದಕ್ಕೆ ಮದ್ದಿಗೆ ಕರೆದುಕೊಂಡು ಹೋಗುವಾಗ ಬಾರದೇ ಇದ್ದು, ಮನೆಯಲ್ಲಿರುವ ಸಮಯ ಯಾರಲ್ಲಿಯೂ ಮಾತಾಡದೇ ಅವರಷ್ಟಕ್ಕೆ ಮಾತಾನಾಡುತ್ತಿದ್ದು ಖಿನ್ನತೆಯಲ್ಲಿದ್ದರು. ದಿನಾಂಕ 5-7-2021 ರಂದು ಸಂಜೆ 4-30 ಗಂಟೆಗೆ ಗಣೇಶರವರು ಮನೆ ಬಳಿಯ ಹಾಡಿಗೆ ಹೋಗಿ ವಾಪಾಸು ಬಂದು ಶೌಚಲಯಕ್ಕೆ ಹೋಗಿ ಬಂದವರು ತೀವೃ ರೀತಿಯಲ್ಲಿ ಅಸ್ವಶ್ಥಗೊಂಡಿದ್ದು, ಅವರು ಯಾವುದೋ ವಿಷ ಪದಾರ್ಥವನ್ನು ಸೇವಿಸಿದವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಳಿಕ ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 7-7-2021 ರಂದು ರಾತ್ರಿ 11-09 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಯು,ಡಿ,ಆರ್ ನಂಬ್ರ: 21/2021 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

  • ಬ್ರಹ್ಮಾವರ : ಪಿರ್ಯಾದಿ ಗೀತಾ (39), ಗಂಡ: ಲಕ್ಷ್ಮೀ ನಾರಾಯಣ, ವಾಸ: 2-239, ಮಾತೃಶ್ರೀ, ಕುಕ್ಕುಡೆ, ಹಾರಾಡಿ ಗ್ರಾಮ, ಬ್ರಹ್ಮಾವರ ಇವರ ತಂದೆಯಾದ ಶೀನ ಪೂಜಾರಿ , ಪ್ರಾಯ: 75 ವರ್ಷ ಎಂಬವರು 4-5 ವರ್ಷಗಳಿಂದ ಕಾಲು ಗಂಟು ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಂಪೂರ್ಣ ಗುಣಮುಖರಾಗಿರುವುದಿಲ್ಲ. ದಿನಾಂಕ: 30.06.2021 ರಂದು ಬೆಳಿಗ್ಗೆ ಸುಮಾರು 08:15 ಗಂಟೆಗೆ ಶೀನ ಪೂಜಾರಿ ರವರು ಮನೆಯ ಟಾಯ್ಲೆಟ್ ರೂಮ್‌ನ ಸೀಟ್ ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಅವರ ಪಂಚೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಪಿರ್ಯಾದಿದಾರರ ತಾಯಿ ನೋಡಿದ್ದು, ಕೂಡಲೇ ಶೀನ ಪೂಜಾರಿ ರವರನ್ನು ನೇಣಿನಿಂದ ಕೆಳಗೆ ಇಳಿಸಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ದಿನಾಂಕ: 07.07.2021 ರಂದು ಸಂಜೆ 6:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಯು,ಡಿ,ಆರ್ ನಂಬ್ರ: 38/2021 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು 

  • ಗಂಗೊಳ್ಳಿ: ಫಿರ್ಯಾದಿ ರಮೇಶ ಖಾರ್ವಿ(40), ತಂದೆ: ಮಾಚ ಖಾರ್ವಿ, ವಾಸ: ಬಚ್ಚನ ಮನೆ, ತಾರಪತಿ ಪೋಸ್ಟ್‌ ಪಡುವರಿ ಗ್ರಾಮ, ಬೈಂದೂರು ಇವರು ದಿನಾಂಕ 07/07/2021 ರಂದು ಶುಕ್ರ ಖಾರ್ವಿ ರವರು ಸವಾರಿ ಮಾಡುತ್ತಿದ್ದ KA.20.U.8312 ನೇ ಮೋಟಾರ್‌ ಸೈಕಲ್‌ ನಲ್ಲಿ ಸಹಸವಾರರಾಗಿ ಕುಳಿತುಕೊಂಡು ಮರವಂತೆ ಬ್ರೇಕ್ ವಾಟರ್‌ ಕಡೆಯಿಂದ ಸೀಲ್ಯಾಂಡ್‌ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಮರವಂತೆ ಬಂದರು ಸಮೀಪ ತಲುಪುವಾಗ್ಯೆ ಶುಕ್ರ ರವರು ಮೋಟಾರ್‌ ಸೈಕಲ್‌ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಆ ಸಮಯ ರಸ್ತೆಗೆ ನಾಯಿ ಅಡ್ಡ ಬಂದಿದ್ದನ್ನು ನೋಡಿ ಒಮ್ಮೆಲೇ ಮೋಟಾರ್‌ ಸೈಕಲ್ ನ ಬ್ರೇಕ್ ಹಾಕಿದ್ದರಿಂದ ಮೋಟಾರ್‌ ಸೈಕಲ್ ನಿಯಂತ್ರಣ ತಪ್ಪಿ ಅಡ್ಡ ಬಿದ್ದ ಪರಿಣಾಮ ಫಿರ್ಯಾದುದಾರರು ತೀವೃ ತರದ ಗಾಯಗೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 63/2021 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ರಾಕೇಶ್ ಕುಲಾಲ್ ಪ್ರಾಯ: 28 ವರ್ಷ, ತಂದೆ: ಕೃಷ್ಣ ಕುಲಾಲ್ ವಾಸ: ಮನೆ ನಂಬ್ರ.2-197 ಊದು ಮನೆ, ಮಠದ ಕರೆ, ಇನ್ನಾಗ್ರಾಮ ಮತ್ತು ಅಂಚೆ, ಕಾರ್ಕಳ ಇವರು ಮಣಿಪಾಲದ ಡಿ.ಸಿ. ಕಛೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದು, ಪ್ರತಿದಿನದಂತೆ ದಿನಾಂಕ: 06.07.2021 ರಂದು ತನ್ನ ಮಾವನ ಬಾಬ್ತು KA 20 V 3311 ನೇ ನಂಬ್ರದ ಮೋಟಾರು ಸೈಕಲ್ ನ್ನು ಚಲಾಯಿಸಿಕೊಂಡು ಬಂದು ಬೆಳಿಗ್ಗೆ.09:00 ಗಂಟೆಗೆ ನಡ್ಸಾಲು ಗ್ರಾಮದ ಪಡುಬಿದ್ರಿ ನವರಂಗ್ ಬಾರ್ ನ ಪಕ್ಕದ ಓಣಿಯಲ್ಲಿ ನಿಲ್ಲಿಸಿ, ಕೆಲಸಕ್ಕೆಂದು ಬಸ್ ನಲ್ಲಿ ಮಣಿಪಾಲಕ್ಕೆ ಹೋಗಿ, ಕೆಲಸ ಮುಗಿಸಿ ಸಂಜೆ.18:30 ಗಂಟೆಗೆ ಬಸ್ಸಿನಲ್ಲಿ ವಾಪಸ್ಸು ಪಡುಬಿದ್ರಿಗೆ ಬಂದು ಬಂದು ನೋಡಿದಾಗ ಬೈಕ್ ಕಾಣದೇ ಇದ್ದು, ಹುಡುಕಾಡಿದಾಗ ಸಿಗಲಿಲ್ಲ. ಯಾರೋ ಕಳ್ಳರು ದಿನಾಂಕ:06.07.2021 ರ ಬೆಳಿಗ್ಗೆ. 09:00 ಗಂಟೆಯಿಂದ ಸಂಜೆ. 18:30 ಗಂಟೆಯ ಮಧ್ಯಾವಧಿಯಲ್ಲಿ KA 20 V 3311 ನೇ ನಂಬ್ರದ ಮೋಟಾರು ಸೈಕಲ್ ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಮೋಟಾರು ಸೈಕಲ್ ನ ಅಂದಾಜು ಮೌಲ್ಯ ರೂ 30,000/- ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 62/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಶ್ರೀಮತಿ ಸೌಮ್ಯ 939) ಗಂಡ ಶ್ರೀಪಾಧ ವಸ ಮನೆ ನಂ ಬ್ರ 9-453, 11 ನೇ ಕ್ರಾಸ್ , ರಾಜೀವ ನಗರ ಮೂಡುತೋನ್ಸೆ ಗ್ರಾಮ ಇವರು ಮೂಡುತೋನ್ಸೆ ಗ್ರಾಮದ ನಿಡಬಂಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು, ಸುಮಾರು 15 ದಿನಗಳ ಹಿಂದೆ ಸದ್ರಿ ಅಂಗನವಾಡಿ ಗೋಡೆ ಹಾಗೂ ಹಂಚಿನ ಮಾಡು ಕುಸಿದು ಬಿದ್ದಿದ್ದು ಈ ಬಗ್ಗೆ ಮಾಹಿತಿಯನ್ನು ಪಿರ್ಯಾದಿದಾರರು ಸಂಬಂದಪಟ್ಟ ಇಲಾಖೆಗೆ ತಿಳಿಸಿರುತ್ತಾರೆ. ಸದ್ರಿ ಅಂಗನವಾಡಿ ಕೇಂದ್ರದ ಒಳಗೆ ಇದ್ದ ಇಂಡೆನ್ ಕಂಪೆನಿಯ ಗ್ಯಾಸ್ ಸಿಲಿಂಡರ್-1, ರೆಗ್ಯೂಲೆಟರ್ -1, ಗ್ಯಾಸ್ ಸ್ಟೌವ್-1, ಸ್ಟೀಲ್ ಬೋಗಣಿ-1, ಸಣ್ಣ ಗಾತ್ರದ ಸ್ಟೀಲ್ ಲೋಟ-15 ಇಟ್ಟಿದ್ದು ದಿನಾಂಕ 06-07-2021 ರಂದು 13-30 ಗಂಟೆಗೆ ಪಿರ್ಯಾದುದಾರರು ನೋಡಿದ್ದು, ಎಂದಿನಂತೆ ಪಿರ್ಯಾದಿದಾರರು ದಿನಾಂಕ 07-07-2021 ರಂದು ಬೆಳಿಗ್ಗೆ 9-30 ಗಂಟೆಗೆ ಬಂದು ನೋಡುವಾಗ ಅಂಗನವಾಡಿ ಒಳಗೆ ಇಟ್ಟಿದ್ದ ಸದ್ರಿ ಸೊತ್ತು ಇರದೇ ಇದ್ದು, ಸದ್ರಿ ಸೊತ್ತುಗಳನ್ನು ದಿನಾಂಕ 06-07-2021 ರಂದು 13-30 ಗಂಟೆಯಿಂದ ದಿನಾಂಕ 07-07-2021 ರಂದು ಬೆಳಿಗ್ಗೆ 9-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5,000/ರೂಪಾಯಿ ಅಗಬಹುದು ಎಂಬಿತ್ಯಾದಿ ,ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 85/2021 ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

 

 

ಇತ್ತೀಚಿನ ನವೀಕರಣ​ : 08-07-2021 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080