ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ನಾಗರಾಜ ಕಾಂಚನ್ (45), ತಂದೆ: ದಿ ಮಂಜುನಾಥ ಕಾಂಚನ್, ವಾಸ: ಶ್ರಿ ಕಾವೇರಿ ನಿಲಯ ಮೇಪು, ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 06/06/2022 ರಂದು 21:30 ಗಂಟಗೆ ಕುಂದಾಪುರ ತಾಲೂಕು 28 -ಹಾಲಾಡಿ ಗ್ರಾಮದ  ಹಾಲಾಡಿ-ಕೊಟೇಶ್ವರ ರಸ್ತೆಯಲ್ಲಿ ಹಾಲಾಡಿ ಸೇತುವೆ ಬಳಿ ಅಪಾದಿತ ಪ್ರವೀಣ್ ಪೂಜಾರಿ KA-20-EG-5110 ನೇ ಮೋಟಾರ್ ಸೈಕಲ್ ನ್ನುಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಮೋಟರ್ ಸೈಕಲ್  ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದು ಪರಿಣಾಮ ಪಿರ್ಯಾದಿದಾರರ ಬಲಕೈ, ಭುಜಕ್ಕೆ ತೀವ್ರ  ಪೆಟ್ಟಾಗಿದ್ದು ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿಯಾದಿದಾರರಾದ ಪ್ರತಾಪ್ ನಾಯ್ಕ್ (28), ತಂದೆ: ಉಪೇಂದ್ರ ನಾಯ್ಕ್, ವಾಸ: ಸಂದೀಪ್ ನಿಲಯ, ಮನೆ ನಂ: 2-69 A, ಸರಳೆಬೆಟ್ಟು, ಶಿವಪಾಡಿ, ಮಣಿಪಾಲ, ಉಡುಪಿ ತಾಲೂಕು ಇವರು ದಿನಾಂಕ 05/06/2022 ರಂದು ಕೆಲಸ ಮುಗಿಸಿಕೊಂಡು ರಾತ್ರಿ 10:30 ಗಂಟೆಗೆ ಸರಳೆಬೆಟ್ಟು ಉಮಾಮಹೇಶ್ವರಿ ರಸ್ತೆಯಲ್ಲಿ ಮೂಕಾಂಭಿಕಾ ಸ್ಟೋರ್ ಬಳಿ ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KL-11-BT-9111 ಮೋಟಾರ್ ಸೈಕಲ್ ನ್ನು  ಅದರ ಸವಾರ ಇಶಾನ್ ಮೊಹಮ್ಮದ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲ ಭಾಗಕ್ಕೆ ಸವಾರಿ ಮಾಡಿಕೊಂಡು ಹೋಗಿ ರಸ್ತೆಯಲ್ಲಿ ಉಮಾಮಹೇಶ್ವರಿ ದೇವಸ್ಥಾನದ ಕಡೆಯಿಂದ ಈಶ್ವರ ನಗರ ಕಡೆಗೆ ಎದುರಿನಿಂದ ಗಣೇಶ್ ನಾಯ್ಕ ಎಂಬುವವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EF-8663 ನೇ ಸ್ಕೂಟರ್ ಗೆ ಮುಕಾಮುಕಿ ಡಿಕ್ಕಿ ಹೊಡೆದ ಪರಿಣಾಮ ಎರಡು  ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ್ ರಸ್ತೆಗೆ ಬಿದ್ದಿದ್ದು ಅಪಘಾತಕ್ಕೊಳಗಾದ ಸ್ಕೂಟರ್ ಸವಾರನಾದ ಗಣೇಶ್ ನಾಯ್ಕ್ ರವರಿಗೆ ಬಲಕೈ ಮೂಳೆ, ಬಲ ಕಾಲ ಬೆರಳಿನ ಮೂಳೆ ಮುರಿತ ಹಾಗೂ ತಲೆಗೆ ತೀವ್ರ ಸ್ವರೂಪದ ಗುದ್ದಿದ ಹಾಯ ಉಂಟಾಗಿದ್ದು ಮಾತನಾಡಿತ್ತಿರಲಿಲ್ಲ, ಹಾಗೆಯೇ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಾದ ಇಶಾನ್ ಮೊಹಮ್ಮದ್ ಗೆ ತಲೆಗೂ ತೀವ್ರ ಸ್ವರೂಪದ ಗಾಯ ಉಂಟಾಗಿದ್ದು ಆತನೂ ಸಹ ಮಾತನಾಡುತ್ತಿರಲಿಲ್ಲ, ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ,   ಗಾಯಳುಗಳನ್ನು ಚಿಕಿತ್ಸೆಯ  ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ವೀಣಾ ರತ್ನಾಕರ ಶೆಟ್ಟಿ(48), ಗಂಡ: ರತ್ನಾಕರ ಶೆಟ್ಟಿ, ವಾಸ:  ಶ್ರೀ ವಾಸ, ಕುದ್ಕುಂಜೆ, ಚೇರ್ಕಾಡಿ ಗ್ರಾಮ,ಪೇತ್ರಿ ಅಂಚೆ ಬ್ರಹ್ಮಾವರ ತಾಲೂಕು ಇವರ ವಿವಾಹವು  ದಿನಾಂಕ 24/05/1999 ರಂದು ಆಪಾದಿತ 1)  ರತ್ನಾಕರ ಶೆಟ್ಟಿ (54̧) ,ತಂದೆ: ದಿ̤ ಭುಜಂಗ ಶೆ̧ಟ್ಟಿ ಎಂಬುವವರೊಂದಿಗೆ ಬ್ರಹ್ಮಾವರದ ಆಶ್ರಯ ಹೋಟೇಲ್‌ನ ಸಭಾ ಭವನದಲ್ಲಿ  ಗುರುಹಿರಿಯರು ನಿಶ್ಚಿಯಿಸಿದಂತೆ ನಡೆದಿದ್ದು ಮದುವೆ  ಸಂದರ್ಭದಲ್ಲಿ ಆಪಾದಿತರು  10 ಲಕ್ಷ ನಗದು ಹಾಗೂ 15 ಪವನ್ ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಿದ್ದು  ಪಿರ್ಯಾದಿದಾರರ  ಮನೆಯವರು ಆಪಾದಿತರ ಒತ್ತಡಕ್ಕೆ ಮಣಿದು 3,60,000/- ನಗದು ಹಾಗೂ 15 ಪವನ್ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿರುತ್ತಾರೆ . ಪಿರ್ಯಾದಿದಾರರು ವಿವಾಹದ ನಂತರ ಒಂದು ತಿಂಗಳು ತಮ್ಮ ವೈವಾಹಿಕ ಜೀವನವನ್ನು ಗಂಡನ ಮನೆಯಾದ ಕುದ್ಕುಂಜೆ ಅರೆಕಲ್ಲು ಎಂಬಲ್ಲಿ  ಪ್ರಾರಂಭಿಸಿದ್ದು ಅಲ್ಲಿ ಆಪಾದಿತರು ವರದಕ್ಷಿಣೆ ಕಡಿಮೆ ನೀಡಿರುತ್ತಾರೆ ಎಂದು ಹೇಳಿ ಮಾನಸಿಕ ಹಿಂಸೆ ನೀಡಿದ್ದು ನಂತರ ಪಿರ್ಯಾದಿದಾರರು ಆಪಾದಿತ 1ನೇಯವರೊಂದಿಗೆ ಮುಂಬೈಯಲ್ಲಿ ವೈವಾಹಿಕ ಜೀವನವನ್ನು ನಡೆಸಿರುತ್ತಾರೆ. ದಿನಾಂಕ 30/08/2000 ರಂದು ಪಿರ್ಯಾದಿದಾರರಾದ  ಗಂಡು ಮಗುವಿಗೆ ಜನ್ಮವನ್ನು ನೀಡಿರುತ್ತಾರೆ . ಆಪಾದಿತ 1ನೇಯುವರು ಆಪಾದಿತ 2) ರಾಜೀವಿ ಆರ್ ಶೆಟ್ಟಿ (65), ಗಂಡ: ರವಿ ರಾಜ್ ಶೆಟ್ಟಿ, 3) ಹೆಚ್ ರವಿರಾಜ್ ಶೆಟ್ಟಿ (68), ಎಲ್ಲರ ವಾಸ: ಸನ್ನಿದಿ, ಅರೆಕಲ್ಲು ಮನೆ, ಕುದ್ಕುಂಜೆ, ಚೇರ್ಕಾಡಿ ಗ್ರಾಮ, 4) ವಸಂತ ಜೆ ಶೆಟ್ಟಿ(49), ತಂದೆ: ಜಗನ್ನಾಥ್ ಶೆಟ್ಟಿ, ವಾಸ: ಉಳ್ತೂರು ಕಂಬಳಗದ್ದೆ, ತೆಕ್ಕಟ್ಟೆ ಅಂಚೆ. ಕುಂದಾಪುರ ತಾಲೂಕು ಇವರ ಪ್ರಚೋದನೆಯಿಂದ ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ  ಬೈಯ್ದು ಮನೆಯನ್ನು ಬಿಟ್ಟು ಹೋಗದೇ ಇದ್ದಲ್ಲಿ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ.  ಪಿರ್ಯಾದಿದಾರರು ಆಪಾದಿತ 1ನೇಯವರೊಂದಿಗೆ ಮುಂಬೈಯಿಂದ ಊರಿಗೆ ಬಂದಾಗ ತವರು ಮನೆಗೆ ಬಂದಾಗ ಅಲ್ಲಿಯೂ ಕೂಡ  ಆಪಾದಿತ 1ನೇಯವನು   ಅಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆದು ದೈಹಿಕ ಮಾನಸಿಕ ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ   43/2022 ಕಲಂ: 498(ಎ), 323, 324, 504 ಐಪಿಸಿ ಮತ್ತು ಕಲಂ: 3, 4 ಡಿಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 08-06-2022 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080