ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಕಾರ್ಕಳ: ದಿನಾಂಕ 03/06/2022 ರಂದು 17:30 ಗಂಟೆಗೆ ಕಾರ್ಕಳ ತಾಲೂಕು ಬೆಳ್ಮಣ್  ಗ್ರಾಮದ ಜಂತ್ರ ಎಸ್.ಟಿ ಕಾಲೋನಿ ಸಮೀಪ ಹಾದು ಹೋಗುವ ಬೆಳ್ಮಣ್-ಶಿರ್ವ ರಾಜ್ಯ ಹೆದ್ದಾರಿಯಲ್ಲಿ KA14A5429 ನೇ ನಂಬ್ರದ ಟಿಪ್ಪರ್ ಚಾಲಕ ಯಮುನಾಪ್ಪ ಎಂಬಾತನು ಬೆಳ್ಮಣ್ ಕಡೆಯಿಂದ ಜಂತ್ರ ಕಡೆಗೆ ತನ್ನ ಬಾಬ್ತು ಟಿಪ್ಪರನ್ನು   ಚಲಾಯಿಸಿಕೊಂಡು ಹೋಗಿ, ನಿರ್ಲಕ್ಷತನದಿಂದ ಏರು ರಸ್ತೆಯಲ್ಲಿ ಟಿಪ್ಪರನ್ನು ಒಮ್ಮೆಲೇ ನಿಲ್ಲಿಸಿದಾಗ, ಟಿಪ್ಪರ್ ಏಕಾಏಕಿ ಹಿಮ್ಮುಖವಾಗಿ ಚಲಿಸಿ, ಅದೇ ದಿಕ್ಕಿನಲ್ಲಿ ಜಂತ್ರ ಕಡೆಗೆ ಟಿಪ್ಪರ್ ಹಿಂದಿನಿಂದ ಹೋಗುತ್ತಿದ್ದ KA19EF6833 ನೇ ನಂಬ್ರದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನದ ಸವಾರ ರಾಮಚಂದ್ರ ಭಟ್ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು, ಅವರ ಎಡಕಾಲಿನ ಪಾದಕ್ಕೆ ರಕ್ತಗಾಯ, ಬಲಕಾಲಿನ ಮೊಣಗಂಟಿಗೆ ತೀವ್ರ ಸ್ವರೂಪದ ಗುದ್ದಿದ್ದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ್ದ ನೋವು ಆಗಿರುತ್ತದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 80/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ : ದಿನಾಂಕ 05/06/2022 ರಂದು ಮಧ್ಯಾಹ್ನ 11:45 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ನಿಟ್ಟೆ ಡ್ಯಾಂ ಒಳ ರಸ್ತೆಯಲ್ಲಿ ಪಿರ್ಯಾದಿ ಸುಧಾಕರ ಇವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA20R3195 ನೇದನ್ನು ಡ್ಯಾಂ ಕಡೆಯಿಂದ ಕಾರ್ಕಳ-ನಿಟ್ಟೆ ಮುಖ್ಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮೋಟಾರು ಸೈಕಲ್ ನಂಬ್ರ KA20EK8398 ನೇದರ ಸವಾರ ಅಕ್ಷಯ್ ಎಂಬಾತನು ಕಾರ್ಕಳ-ನಿಟ್ಟೆ ಮುಖ್ಯ ರಸ್ತೆ ಕಡೆಯಿಂದ ಡ್ಯಾಂ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರಿಬ್ಬರೂ ಮೋಟಾರು ಸೈಕಲ್ ಗಳ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರ ಬಲಕೈಗೆ ಮೂಳೆ ಮುರಿತವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 81/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಅಸ್ವಾಭಾವಿಕ ಮರಣ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿ ಪೂಜಾ ಇವರ ಗಂಡ ಅಶೋಕ ವಿ ಮೂಲ್ಯ (39) ಎಂಬುವರು ಕೂಲಿ ಕೆಲಸ ಮಾಡಿಕೊಂಡಿದ್ದು, ಅವರು ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟವ ಸಲುವಾಗಿ ಬ್ಯಾಂಕಿನಿಂದ ಸುಮಾರು 6 ಲಕ್ಷ ರೂ ಸಾಲ ಪಡೆದು, ಅರ್ಧದಷ್ಟು ಕಾಮಗಾರಿ ಮುಗಿಸಿದ್ದು, ಕೊರೋನಾ ಕಾರಣದಿಂದ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದುದರಿಂದ ಬ್ಯಾಂಕಿನವರು ಮನೆ ಮತ್ತು ಜಾಗವನ್ನು ಸೀಜ್ ಮಾಡಿರುತ್ತಾರೆ. ಅದೇ ಚಿಂತೆಯಲ್ಲಿ ಮದ್ಯಪಾನ ಮಾಡುತ್ತಿದ್ದವರು ದಿನಾಂಕ: 07.06.2022 ರಂದು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿ ರಾತ್ರಿ ಬಂದು ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮ ಪೂಂದಾಡು ದರ್ಖಾಸು ನಲ್ಲಿರುವ ಮನೆಯಲ್ಲಿ ರಾತ್ರಿ ಮಲಗಿದ್ದವರು ರಾತ್ರಿ 21:00 ಗಂಟೆಯಿಂದ 22:30 ಗಂಟೆಯ ಮಧ್ಯಾವಧಿಯಲ್ಲಿ ಜೀವನದಲ್ಲಿ ಜಗುಪ್ಸೆಗೊಂಡು ಮದ್ಯಪಾನದೊಂದಿಗೆ  ವಿಷವನ್ನು ಬೆರೆಸಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದವರನ್ನು ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ರಾತ್ರಿ 23:15 ಗಂಟೆಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನವೈದ್ಯರು ಪರೀಕ್ಷಿಸಿ ಸದ್ರಿ ಅಶೋಕ್ ವಿ ಮೂಲ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿ ಶ್ರೀಮತಿ ನಾಗರತ್ನಾ ಇವರ ತಂಗಿ ಸರೋಜಾ 36 ವರ್ಷ ರವರು 14 ವರುಷದ ಹಿಂದೆ ಗದಗ ಮೂಲದ ಗುರು ಹೀರೇಮಠ ಎಂಬಾತನನ್ನು ಮದುವೆಯಾಗಿ 12 ವರ್ಷದ ಮಗನನ್ನು ಹೊಂದಿದ್ದು  ಕಳೆದ 3 ವರುಷಗಳಿಂದ ಗಂಡನಿಂದ ದೂರವಾಗಿ ಕುಂದಾಪುರದಲ್ಲಿ  ವೆಂಕಟೇಶ ಎಂಬಾತನ ಸಹಾಯದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಿರುವುದಾಗಿದೆ. ಹೀಗಿರುತ್ತಾ ಸುಮಾರು 06 ತಿಂಗಳ ಹಿಂದೆ ಸರೋಜಾರವರು ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದು ಇದರಿಂದ ಸರೋಜಾರವರ ಮಗ ನಮ್ಮಭೂಮಿ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿರುವುದಾಗಿದೆ. ದಿನಾಂಕ 07-06-2022 ರಂದು 09:30 ಗಂಟೆಗೆ ವೆಂಕಟೇಶ ಎಂಬುವವರು ಪಿರ್ಯಾದುದಾರರಿಗೆ ಕರೆ ಮಾಡಿ “ಸರೋಜಾರವರು ಮನೆಯ ಬಾಗಿಲು ಲಾಕ್ ಮಾಡಿಕೊಂಡಿದ್ದು ಕರೆದರೂ ಯಾವುದೇ ಪ್ರತಿಕ್ರೀಯೆ ನೀಡದೇ ಇದ್ದು ಈ ಬಗ್ಗೆ ಕಿಟಕಿಯ ಮೂಲಕ ಒಳಗೆ ನೋಡಲಾಗಿ ಸರೋಜಾರವರು ಫ್ಯಾನಿಗೆ ಸೀರೆ ಕಟ್ಟಿ ಸೀರೆಯಿಂದ ಕುತ್ತಿಗೆಗೆ  ನೇಣು ಬಿಗಿದುಕೊಂಡು ನೇತಾಡುತ್ತಿರುವುದು ಕಂಡುಬಂದಿರುವುದಾಗಿ” ತಿಳಿಸಿದ್ದು, ಪಿರ್ಯಾದುದಾರರು ಸ್ಥಳಕ್ಕೆ ಭೇಟಿ ನೀಡಿ ಒಳಗೆ ಹೋಗಿ ನೀಡಲಾಗಿ ಸರೋಜಾರವರು ಅದಾಗಲೇ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 08-06-2022 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080