ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿ ಶಂಶೀರ್ ಹುಸೈನ್ ಇವರು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು. ದಿನಾಂಕ: 07.06.2021 ರಂದು ಬೆಳಿಗ್ಗೆ 11:30 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಕಂಚಿನಡ್ಕ ಮಸೀದಿ ಬಳಿ ಇರುವ ಅವರ ಅಕ್ಕನ ಮನೆಗೆ ಹಾಲು ಕೊಡಲು ತನ್ನ ಸ್ಕೂಟರಿನಲ್ಲಿ ಹೋಗಲು ಮನೆಯಿಂದ ಹೊರ ಬರುತ್ತಿದ್ದಂತೆ 1 ನೇ ಆರೋಪಿ ಶಹರಾಜ್ ಎಂಬಾತನು KA-19-HC-7805 ನೇ ನಂಬ್ರದ ಸ್ಕೂಟಿಯಲ್ಲಿ ಬಂದು, ಪಿರ್ಯಾದಿದಾರರ ಸ್ಕೂಟಿಗೆ ಅಡ್ಡವಾಗಿ ತನ್ನ ಸ್ಕೂಟಿಯನ್ನು ನಿಲ್ಲಿಸಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ, “ ನಾವು ವಾಲಿಬಾಲ್ ಆಟ ಆಡುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೀಯಾ ಎಂದು ಪಿರ್ಯಾದಿದಾರರನ್ನು ದೂಡಿದ್ದು, ಇಬ್ಬರೊಳಗೆ ಮಾತುಕತೆಯಾಗಿದ್ದು, ನಂತರ ಆರೋಪಿತನು ಆತನ ಅಣ್ಣ ನೌಶಾದ್ ನಿಗೆ ಫೋನ್ ಮಾಡಿ ಬರಲು ಹೇಳಿದ್ದು, ನಂತರ ಇಮ್ತಿಯಾಜ್, ನೌಶಾದ್, ಹರ್ಷಾಕ್, ಅಜ್ಮಲ್ ಎಂಬುವರು ತಲವಾರ್ ಹಾಗೂ ದೊಣ್ಣೆಗಳೊಂದಿಗೆ ಪಿರ್ಯಾದಿದಾರರ ಮನೆಯ ಕಂಪೌಂಡ್ ಒಳಗೆ ಬಂದು, ನೌಶಾದ್ ಹಾಗೂ ಹರ್ಷಾಕ್ ರವರು ಶಹರಾಜನಿಗೆ ಹೊಡೆಯಲುನಿನಗೆ ಎಷ್ಟು ಧೈರ್ಯ ಎಂದು ಹೇಳುತ್ತಾ ದೊಣ್ಣೆಗಳಿಂದ ಪಿರ್ಯಾದಿದಾರರ ಸೊಂಟಕ್ಕೆ, ಕಾಲುಗಳಿಗೆ ಹೊಡೆದಿದ್ದು, ಅಜ್ಮಲ್ ಮತ್ತು ಶಹರಾಜ್‌‌ ರವರು ಬೈದಿದ್ದು, ಇಮ್ತಿಯಾಜನು ತನ್ನ ಕೈಯಲ್ಲಿರುವ ತಲವಾರನ್ನು ಪಿರ್ಯಾದಿದಾರರಿಗೆ ಹೊಡೆಯಲು ಬೀಸಿದಾದ ಅವರು ಅದರಿಂದ ತಪ್ಪಿಸಿಕೊಂಡಿದ್ದು, ನಂತರ ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಈ ಹಲ್ಲೆಯಿಂದ  ಪಿರ್ಯಾದಿದಾರರ  ತಲೆಗೆ, ಬೆನ್ನು,ಸೊಂಟ,ಕಾಲಿಗೆ ಗುದ್ದಿದ ನೋವಾಗಿದ್ದು, ಬಲಕೈ ತೋರು ಬೆರಳಿಗೆ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 143, 144, 147, 148, 341, 447, 504, 506, 323,  324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ  29-05-2021 ರಂದು  ಪಿರ್ಯಾದಿ ಸತೀಶ್  @ ಸಚ್ಚು  ಇವರು ತನ್ನ  ದ್ವಿ-ಚಕ್ರ  ವಾಹನದಲ್ಲಿ ಮದ್ಯಪಾನ ಇದ್ದ  ಬಗ್ಗೆ  ಅಬಕಾರಿ  ಇಲಾಖೆಯವರು  ಪಿರ್ಯಾದಿದಾರರ  ದ್ವಿ- ಚಕ್ರ  ವಾಹನವನ್ನು  ವಶಪಡಿಸಿಕೊಂಡಿರುತ್ತಾರೆ . ಅಬಕಾರಿ   ಇಲಾಖೆಗೆ  ನೆರೆಮನೆಯ   ಸಂತೋಷ  ಎಂಬವನು   ಮಾಹಿತಿ ನೀಡಿದ   ವಿಚಾರ  ಕೇಳುವ ಬಗ್ಗೆ  ಪಿರ್ಯಾದಿದಾರರು  ದಿನಾಂಕ     06-06-2021 ರಂದು   ರಾತ್ರಿ 10-30 ಗಂಟೆಗೆ   ಸಂತೋಷನ ಮನೆ  ಬಳಿ ಹೋಗಿ  ತನ್ನ  ವಿರುದ್ದ ಅಬಕಾರಿ  ಇಲಾಖೆಗೆ  ಯಾಕೆ  ಮಾಹಿತಿ ನೀಡಿದ್ದಿ  ಎಂದು ಕೇಳಿದಾಗ  ಸಂತೋಷನು ಅವಾಚ್ಯ ಶಬ್ದಗಳಿಂದ  ಬೈದಿದ್ದು ಸಂತೋಷ ಹಾಗೂ  ಪಿರ್ಯಾದಿದಾರರಿಗೆ   ದೂಡಾಟ ಆಗಿ ,ಆ ಸಮಯ ರಾಜೇಶ್  ಎಂಬವನು ಬಂದು  ಪಿರ್ಯಾದಿದಾರರಿಗೆ ಕೈಯಿಂದ ಹೊಡೆದಿದ್ದು, ಸಂತೋಷ    ರಸ್ತೆಯಲ್ಲಿದ್ದ  ಇಂಟಾರ್ ಲಾಕ್  ಕಲ್ಲಿನಿಂದ  ಪಿರ್ಯಾದಿದಾರರ  ತಲೆಯ ಹಿಂಭಾಗಕ್ಕೆ  ಹೊಡೆದ  ಪರಿಣಾಮ  ತಲೆಗೆ  ರಕ್ತಗಾಯ ಆಗಿ  ಉಡುಪಿ ಜಿಲ್ಲಾ  ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 76/2021  ಕಲಂ:323, 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಹಾರಾಡಿ ಗ್ರಾಮದ, ಸಾಲಿಕೇರಿ ಎಂಬಲ್ಲಿರುವ ಪುಷ್ಪಾ ಎಂಬವರ ಬಾಡಿಗೆ ಮನೆಯಲ್ಲಿ ಪಿರ್ಯಾದಿದಾರರಾದ ಶಾಂತ ಎಂಬವರು ತನ್ನ ಇಬ್ಬರು ಗಂಡು ಮಕ್ಕಳಾದ ಸಜಿತ್ ಮತ್ತು ಶಶಾಂಕ ರವರೊಂದಿಗೆ ವಾಸವಾಗಿರುವುದಾಗಿದೆ.  ನಿನ್ನೆ ದಿನಾಂಕ: 06.06.2021 ರಂದು ಸಂಜೆ 6:30 ಗಂಟೆಯ ಸುಮಾರಿಗೆ ಸಜಿತ್ ಮತ್ತು ಶಶಾಂಕ ರವರು ಅವರ ಮನೆಯ ಬಳಿ ನೀರು ಬೇರೆಯವರ ಜಾಗಕ್ಕೆ ಹೋಗದಂತೆ ಸೀಮೆಂಟ್‌ ನಿಂದ ದಂಡೆ ಕಟ್ಟೆ ಕಟ್ಟುತ್ತಿದ್ದು, ಆಗ ಪಿರ್ಯಾದಿದಾರರು ಮಕ್ಕಳಿಗೆ ದಂಡೆ ಕಟ್ಟ ಬೇಡಿ, ಬಾಡಿಗೆ ಮನೆ ಮಾಲಿಕರು ನೋಡಿಕೊಳ್ಳುತಾರೆ ಎಂದು ಹೇಳುತ್ತಿರುವ ಸಮಯ ಸಂಜೆ 7:00 ಗಂಟೆಗೆ  ಅವರ ಮನೆಯ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿರುವ 1ನೇ ಆರೋಪಿ ಮಾಂತೇಶ್ ಎಂಬವರು ಅವರ ಮನೆಯ ಬಳಿ ನಿಂತುಕೊಂಡು, ಸಜಿತ್ ಮತ್ತು ಶಶಾಂಕ ರವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅಲ್ಲದೇ ಪಿರ್ಯಾದಿದಾರರಿಗೂ ಬೈದಿರುತ್ತಾರೆ.  ಅದಕ್ಕೆ ಫಿರ್ಯಾದಿದಾರರು ಯಾಕೆ ಹೀಗೇ ಬೈಯುತ್ತಿರಿ ಎಂದು ಕೇಳಿದ್ದಕ್ಕೆ  1ನೇ ಆರೋಪಿ ಹಾಗೂ ಅವರ ತಂದೆ 2ನೇ ಆರೋಪಿ ಬಸವರಾಜ ರವರು ದಂಡೆಕಟ್ಟುತ್ತಿರುವ ಪಿರ್ಯಾದಿದಾರರ ಮಗ ಶಶಾಂಕನ ಬಳಿ ಬಂದು ದೊಣ್ಣೆಯಿಂದ ಶಶಾಂಕನಿಗೆ ಹೊಡೆದಿರುತ್ತಾರೆ. ಆಗ ತಪ್ಪಿಸಲು ಅಲ್ಲಿಗೆ ಹೋದ ಫಿರ್ಯಾದಿದಾರರಿಗೆ 1ನೇ ಆರೋಪಿಯ ತಾಯಿಯಾದ 3ನೇ ಆರೋಪಿ ಸುಮಾ ಎಂಬವರು ದೊಣ್ಣೆಯಿಂದ ಫಿರ್ಯಾದಿದಾರರ ಎಡ ಕಾಲು ಮಂಡಿ ಬಳಿ ಹಾಗೂ ಬಲ ಕೈಯ ತೋಳಿನ ಬಳಿ ಹೊಡೆದಿರುತ್ತಾರೆ. ಆಗ ಪಿರ್ಯಾದಿದಾರರು ನೋವಿನಿಂದ ಬೊಬ್ಬೆ ಹೊಡೆದಾಗ ಅಲ್ಲಿಗೆ ಬಂದ ಅವರ ಮಗ ಸಜಿತ್‌ನಿಗೂ ಕೂಡ ಮೂವರು ಆರೋಪಿಗಳು ಸೇರಿ ದೊಣ್ಣೆಯಿಂದ ಹೊಡೆದಿದ್ದು, ಅದನ್ನು ನೋಡಿ ಅಲ್ಲಿಗೆ ಬರುತ್ತಿರುವ  ನೆರೆಕೆರೆಯವರನ್ನು ನೋಡಿ ಆರೋಪಿಗಳು ಅಲ್ಲಿಂದ ಹೊಗಿರುತ್ತಾರೆ. ಆರೋಪಿಗಳು ಮಾಡಿದ ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಹಾಗೂ ಅವರ ಮಕ್ಕಳು ಬ್ರಹ್ಮಾವರ ಸರಕಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2021 ಕಲಂ  504, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಹಾರಾಡಿ ಗ್ರಾಮದ, ಸಾಲಿಕೇರಿ, ಹಾರಾಡಿ ಶಾಲೆಯ ಬಳಿ ಇರುವ ಪುಷ್ಪಾ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ಪಿರ್ಯಾದಿದಾರರಾದ ಸುಮಾ ಎಂಬವರು ತನ್ನ ಗಂಡ ಮತ್ತು ಮಗ ಹಾಗೂ ಮಗಳೊಂದಿಗೆ ವಾಸವಾಗಿರುವುದಾಗಿದೆ.  ನಿನ್ನೆ ದಿನಾಂಕ 06.06.2021 ರಂದು ಪಿರ್ಯಾದಿದಾರರು ಮನೆಯಲ್ಲಿ ಇರುವಾಗ ಸಂಜೆ 6:30 ಗಂಟೆ ಸುಮಾರಿಗೆ ಅವರ ನೆರೆಕೆರೆ ವಾಸಿ 1ನೇ ಆರೋಪಿ ಶಾಂತ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದಿದ್ದು, ಅದಕ್ಕೆ ಫಿರ್ಯಾದಿದಾರರು ಯಾಕೆ ಹಾಗೆ ಬೈಯುತ್ತಿ ಎಂದು ಕೇಳಿದ್ದಕ್ಕೆ ಆರೋಪಿಯು ತನ್ನ ಇಬ್ಬರೂ ಗಂಡು ಮಕ್ಕಳೊಂದಿಗೆ ಪಿರ್ಯಾದಿದಾರರ ಮನೆಯ ಬಳಿಗೆ ಬಂದು ದೊಣ್ಣೆಯಲ್ಲಿ ಪಿರ್ಯಾದಿದಾರರ ತಲೆಗೆ ಹೊಡೆದಿರುತ್ತಾರೆ. ಆಗ ಮನೆಯಲ್ಲಿ ಇದ್ದ ಪಿರ್ಯಾದಿದಾರರ ಮಗ ಮಾಂತೇಶ್   ಬಿಡಿಸಲು ಬಂದಾಗ ಮೂವರೂ ಆರೋಪಿಗಳು ಸೇರಿ ಮಾಂತೇಶ್‌ನಿಗೆ ಕೂಡ ದೊಣ್ಣೆಯಿಂದ ಹೊಡೆದಿರುತ್ತಾರೆ. ಆಗ ಇಬ್ಬರೂ ಬೊಬ್ಬೆ ಹೊಡೆಯುವುದನ್ನು ಕೇಳಿ ಮನೆಯಲ್ಲಿದ್ದ ಪಿರ್ಯಾದಿದಾರರ ಗಂಡ ಹಾಗೂ ನೆರೆಕೆರೆಯವರು ಬಂದು ಗಲಾಟೆ ಬಿಡಿಸಿರುತ್ತಾರೆ.  ಆಗ ಆರೋಪಿಗಳು ದೊಣ್ಣೆಯನ್ನು ಅಲ್ಲೇ ಬಿಸಾಡಿ ಹೋಗಿರುತ್ತಾರೆ. ಆಗ ಸಮಯ ಸಂಜೆ 7:00 ಆಗಿರಬಹುದು.  ಬಳಿಕ ಪಿರ್ಯಾದಿದಾರರು ಹಾಗೂ ಅವರ ಮಗ ಮಾಂತೇಶ್ ರವರು ಹಲ್ಲೆ ಯಿಂದ ಗಾಯಗೊಂಡ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2021 ಕಲಂ  504, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 08-06-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080