ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ :

  • ಕೋಟ  : ಪಿರ್ಯಾದು ಶಂಕರ (50 ವರ್ಷ), ತಂದೆ  ದಿ: ಮಂಜ, ಕಬ್ಬಿನಹಿತ್ಲು, ನೈಲಾಡಿ, ಬಿಲ್ಲಾಡಿ ಗ್ರಾಮ ಇವರ ತಮ್ಮ ಮೃತ ನರಸಿಂಹ (39 ವರ್ಷ) ರವರು ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ: 06.05.2023 ರಂದು ಬೆಳಿಗ್ಗೆ 7:00 ಗಂಟೆಗೆ ಕೃಷಿ ಕೆಲಸದ ಬಗ್ಗೆ ಮನೆಯಿಂದ ಹೋದವರು ಸಂಜೆ 7:00 ಗಂಟೆಯಾದರೂ ಮನೆಗೆ ಬಾರದೆ ಇದ್ದುದರಿಂದ, ಫಿರ್ಯಾದುದಾರರು ಮತ್ತು ನೆರೆಮನೆಯವರು ಸೇರಿ ಹುಡುಕಾಡಿದಲ್ಲಿ ಕಾಣ ಸಿಕ್ಕದೇ, ದಿನಾಂಕ: 07.05.2023 ರಂದು ಬೆಳಿಗ್ಗೆ ಸುಮಾರು 11:00 ಗಂಟೆ ಸಮಯಕ್ಕೆ ವಾರಾಹಿ ಚಾನೆಲ್‌‌‌‌‌‌ನಲ್ಲಿ ನರಸಿಂಹ ರವರ ಮೃತದೇಹ ನೀರಿನಲ್ಲಿ ತೇಲುವ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ಮೃತರು ತಮ್ಮ ಮನೆ ಕಡೆಗೆ ವಾರಾಹಿ ಚಾನೆಲ್‌‌‌‌‌‌ ಬಳಿಯಿಂದ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲುಜಾರಿ ಚಾನೆಲ್‌‌‌‌‌ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ : 09/2023 ಕಲಂ:174 CRPCರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬೈಂದೂರು: ಪಿರ್ಯಾದಿ ಶ್ರೀಮತಿ ಕಾವೇರಿ  ಪ್ರಾಯ 48 ವರ್ಷ  ಗಂಡ:  ಶಂಕರ  ಖಾರ್ವಿ ವಾಸ: ನವೋದಯ ಕಾಲೋನಿ  ಬವಲಾಡಿ ಬಿಜೂರು ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ:07/05/2023 ರಂದು ಸಂಜೆ ಸುಮಾರು 18-30 ಗಂಟೆಗೆ  ತಮ್ಮ ಮಕ್ಕಳಾದ ಮಾನಸ, ಸುಪ್ರೀತಾ, ಸುಶ್ಮೀತಾ ರವರೊಂದಿಗೆ ಇದ್ದಾಗ ಆಪಾದಿತ ಸಂದೀಪ ಪ್ರಾಯ 22 ವರ್ಷ ತಂದೆ ಸಂಜುಖಾರ್ವಿ  ವಾಸ: ಬವಳಾಡಿ ಬಿಜೂರು ಗ್ರಾಮ ಬೈಂದೂರು ತಾಲೂಕು ಇವನು ಏಕಾಏಕಿ ಮನೆಯ ಬಳಿ ಬಂದು ಕೋಲ್ಡಡ್ರಿಂಕ್ಸ್  ಖಾಲಿ  ಬಾಟಲಿಯನ್ನು ಮನೆಯ ಮಾಡಿಗೆ ಎಸೆದು ಮನೆಯ ಸಿಮೆಂಟ್ ಮಾಡಿನ ಸೀಟು ಒಡೆದು ಬಾಟಲಿ ಒಳಗಡೆ ಬಿದ್ದು ಹುಡಿಯಾಗಿದ್ದು, ಆ ಬಳಿಕ ಆಪಾದಿತನು ಪಿರ್ಯಾದಿದಾರರಿಗೆ ಹಾಗೂ ಅವರ ಮಕ್ಕಳಿಗೆ ಅವಾಚ್ಯವಾಗಿ ಬೈಯುತ್ತಾ, ಆ ಬಳಿಕ  ಮನೆಯ ಒಳಗಡೆ ಬಂದು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ದೂಡಿ ನಿಮಗೆ ಬಿಡುವುದಿಲ್ಲ. ಮನೆಯಿಂದ ಓಡಿಸುತ್ತೇನೆ. ಒಂದು ಗತಿ ಕಾಣೆಸುತ್ತೇನೆ ಎಂದು ಬೆದರಿಕೆ  ಹಾಕಿ ನಂತರ ಪಿರ್ಯಾದಿರವರ ಮನೆಯವರು ಬರುವಷ್ಟರಲ್ಲಿ ಆಪಾದಿತನು  ಮನೆಯಿಂದ ಹೊರಟು ಹೋಗಿದ್ದು, ಆಪಾದಿತನು ಮಾಡಿದ ಕ್ರತ್ಯದಿಂದ ಸುಮಾರು ಎರಡು ಸಾವಿರ ದಷ್ಟು ನಷ್ಟಉಂಟಾಗಿದ್ದು ಹಾಗೂ ಆಪಾದಿತ ಪದೇ ಪದೇ ಹೆಂಗಸರು ಮನೆಯಲ್ಲಿ ಇರುವಾಗ ಬಂದು ಗಲಾಟೆ ಮಾಡುತ್ತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ :  75/2023 ಕಲಂ:448, 427, 354, 504, 506 ಭಾದಂಸಂರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಮಲ್ಪೆ : ದಿನಾಂಕ 07-05-2023  ರಂದು  ಪಿರ್ಯಾದಿ ಅಕ್ಷಯ ದೇವಾಡಿಗ   ಪ್ರಾಯ 21 ವರ್ಷ  ತಂದೆ  ಮಂಜುನಾಥ ದೇವಾಡಿಗ ವಾಸ  ಹೊಂಡದ  ಮನೆ  ಉಪ್ಪುಂದ ಬೈಂದೂರು ತಾಲೂಕು ಇವರು  ತನ್ನ ಅಣ್ಣನ ಮಕ್ಕಳಾದ ಸುಮಂತ್  ಪ್ರಾಯ 17 ವರ್ಷ  ಮತ್ತು  ಸುಶಾಂತ ಪ್ರಾಯ 15 ವರ್ಷ ಇವರೊಂದಿಗೆ ಕೆಮ್ಮಣ್ಣು ತೂಗು ಸೇತುವೆ  ನೋಡುವ ಬಗ್ಗೆ ಸಂತೆಕಟ್ಟೆಯಿಂದ ಆಟೋರಿಕ್ಷಾ ನಂಬ್ರ KA-20-AA-1180 ನೇದರಲ್ಲಿ  ಬಾಡಿಗೆ ಮಾಡಿಕೊಂಡು ಕೆಮ್ಮಣ್ಣು ಕಡೆ ಹೊರಟು 15-00 ಗಂಟೆಗೆ ಕೆಮ್ಮಣ್ಣು ಗುಡಿಯಂ ಎಂಬಲ್ಲಿಗೆ ತಲುಪುವಾಗ ಆಟೋ ರಿಕ್ಷಾ ಚಾಲಕನು ತನ್ನ ರಿಕ್ಷಾವನ್ನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ರಸ್ತೆಯ ಎಡಭಾಗದಲ್ಲಿ ಚಲಾಯಿಸಿಕೊಂಡು ಹೋಗಿ ಒಮ್ಮಲೇ ಬ್ರೇಕ್ ಹಾಕಿ ರಿಕ್ಷಾ ಮಗುಚಿ ಬಿದ್ದ ಪರಿಣಾಮ   ರಿಕ್ಷಾದಲ್ಲಿ ಪ್ರಯಾಣಿಸುತಿದ್ದ ಪಿರ್ಯಾದಿದಾರರ ಎದೆಗೆ ಒಳ ಗುದ್ದಿದ ನೋವು, ಹೊಟ್ಟೆಗೆ ಒಳ ಗುದ್ದಿದ ನೋವು, ಬಲ ಕಿವಿಯ ಬಳಿ ರಕ್ತ ಗಾಯ ಆಗಿರುತ್ತದೆ. ಸುಮಂತ್ ರವರಿಗೆ ತುಟಿಯ ಮೇಲ್ಬಾಗ ರಕ್ತ ಗಾಯ ಹಾಗೂ ತರಚಿದ ಗಾಯ ಆಗಿರುತ್ತದೆ.  ಸುಶಾಂತನಿಗೆ ಹಲ್ಲಿಗೆ ತರಚಿದ ಗಾಯ ಆಗಿರುತ್ತದೆ ಹಾಗೂ ಆಟೋಚಾಲಕ ರೋಬಿನ್ ವಿಲಿಯಮ್ ರವರ ತಲೆಗೆ ರಕ್ತ ಗಾಯ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ :  44/-2023 ಕಲಂ  2̈79̳̳ 337  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 08-05-2023 11:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080