ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 07/05/2022 ರಂದು ಮಧ್ಯಾಹ್ನ  12:15 ಗಂಟೆಗೆ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಸಂತೆ ಮಾರ್ಕೆಟ್‌‌ಬಳಿಯ, ಕೆನಾರ ಬ್ಯಾಂಕ್‌‌‌ಎದುರುಗಡೆ  NH 66 ರಸ್ತೆಯಲ್ಲಿ ಆಪಾದಿತ  ರಾಘವೇಂದ್ರ KA-14-B-2393ನೇ ಮಿನಿ ಟಿಪ್ಪರ್‌ ಲಾರಿಯನ್ನು ತಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು  ಬಂದು, ಕೆನಾರ ಬ್ಯಾಂಕ್‌‌‌ಎದುರುಗಡೆ  NH 66 ರಸ್ತೆಯ ಓಪನ್‌ ಡಿವೈಡರ್‌‌ನಲ್ಲಿ ಇಂಡಿಕೇಟರ್‌ ಹಾಕಿ ಯೂ ಟರ್ನ್‌‌ ತೆಗೆದುಕೊಳ್ಳುತ್ತಿದ್ದ  KSRTC ಬಸ್‌‌ನ್ನು  ನೋಡಿ  ಆಪಾದಿತನು ಲಾರಿಯನ್ನು ರಸ್ತೆಯ  ಎಡಬದಿಯ ಅಂದರೆ ಪೂರ್ವ  ಬದಿಗೆ  ಚಲಾಯಿಸಿ,  NH 66 ರಸ್ತೆಯ  ಪೂರ್ವ  ಅಂಚಿನಲ್ಲಿ ಪಿರ್ಯಾದಿದಾರರಾದ ಕೆ. ಭಾಸ್ಕರ್‌ (72), ತಂದೆ  ದಿ. ಅಣ್ಣಪ್ಪಯ್ಯ,  ವಾಸ:  ಎಪಿ.ಎಂ.ಸಿ ಯಾರ್ಡಿನ  ಎದುರುಗಡೆ, ಕಸಬಾ  ಗ್ರಾಮ, ಕುಂದಾಪುರ ಇವರು  ರಸ್ತೆ ದಾಟಲು ನಿಲ್ಲಿಸಿಕೊಂಡಿದ್ದ  KA-20-EB-3875 ನೇ Honda Activa  ಸ್ಕೂಟರ್‌ಗೆ  ಡಿಕ್ಕಿ  ಹೊಡೆದ ಪರಿಣಾಮ  ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದು ಕೈ ಕಾಲುಗಳಿಗೆ  ತರಚಿದ  ಗಾಯವಾಗಿ  ಕುಂದಾಪುರ  ಚಿನ್ಮಯಿ ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2022   ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಅಶೋಕ್ ತೌಡ ಶೆಟ್ಟಿ (50), ತಂದೆ: ತೌಡ ಶೆಟ್ಟಿ, ವಾಸ: ರಾಮೇರ ಗುತ್ತು, ಅಯ್ಯಪ್ಪ ನಿಲಯ, ಮಿಯಾರು ಗ್ರಾಮ, ಕಾರ್ಕಳ ತಾಲೂಕು ಇವರ ಪತ್ನಿ ಶ್ರೀಮತಿ ಶಾಲಿನಿ ಶೆಟ್ಟಿ(43) ಇವರಿಗೆ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿರುವ ಬಗ್ಗೆ ಮುಂಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾಯಿಲೆ ಗುಣಮುಖವಾಗದೇ ಇದ್ದುದರಿಂದ ಮುಂಬೈಯಿಂದ ವಾಪಾಸು ಊರಿಗೆ ಬಂದು ಕಾರ್ಕಳ ಪ್ರತಿಭಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ  06/05/2022 ರಂದು ಬೆಳಗ್ಗೆ 09:00 ಗಂಟೆಗೆ ಕಾರ್ಕಳ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದು ಚಿಕಿತ್ಸೆ ಪಡೆದು ಹೊರ ಬರುವ ವೇಳೆ ಎದೆನೋವು ಕಾಣಿಸಿಕೊಂಡು ಉಸಿರಾಟದ ತೊಂದರೆ ಉಂಟಾಗಿದ್ದು ತಕ್ಕಣ ವೈದ್ಯರು ಚಿಕಿತ್ಸೆ ನೀಡಿದಾಗ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 06/05/2022 ರಂದು ಸಂಜೆ 05:09 ಗಂಟೆಗೆ ಮೃತಪಟ್ಟಿರುವುದಾಗಿ ಶಾಲಿನಿ ಶೆಟ್ಟಿ ರವರ ಜೊತೆ ಚಿಕಿತ್ಸೆಗೆ ಹೋಗಿದ್ದ ಪಿರ್ಯಾದಿದಾರರ ನಾದಿನಿ ಮಲ್ಲಿಕಾರವರು ಪಿರ್ಯಾದಿದಾರರಿಗೆ ತಿಳಿಸಿದ್ದು ಪಿರ್ಯಾದಿದಾರರು ಈ ದಿನ ಮುಂಬೈಯಿಂದ ಬಂದು ದೂರನ್ನು ನೀಡಿರುವುದಾಗಿದೆ. ಪಿರ್ಯಾದಿದಾರರ ಪತ್ನಿ ಶ್ರೀಮತಿ ಶಾಲಿನಿ ಶೆಟ್ಟಿ ರವರು ಸುಮಾರು 3-4 ವರ್ಷಗಳಿಂದ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದು ಅಸೌಖ್ಯದ ಬಗ್ಗೆ ಮದ್ದು ಮಾಡುತಿದ್ದು ಹಾಗೂ ಎದೆನೋವು ಕಾಣಿಸಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಯುಡಿಆರ್  ಕ್ರಮಾಂಕ 18/2022 ಕಲಂ :174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಹಿರಿಯಡ್ಕ: ಪಿರ್ಯಾದಿದಾರರಾದ ಯುವರಾಜ ಆಚಾರಿ (32),ತಂದೆ: ಮಂಜುನಾಥ ಆಚಾರಿ, ಜಯಲಕ್ಷ್ಮಿ ನಿಲಯ ಪಕ್ಕಾಲು ಪೆರ್ಡೂರು ಗ್ರಾಮ ಉಡುಪಿ ಇವರ 4 ನೇ ಅಣ್ಣ ನಾಗರಾಜ ಆಚಾರ್ಯರವರು 2021 ನೇ ಅಗಸ್ಟ ನಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಳಿಕ ಅವರನ್ನು ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ದಿನಾಂಕ 07/05/2022 ರಂದು ಸಂಜೆ 05:30 ಗಂಟೆಗೆ ಪಿರ್ಯಾದಿದಾರರ ಸ್ನೇಹಿತ ಉಮೇಶ್ ಶೆಟ್ಟಿಯವರ ಕರೆ ಮಾಡಿ ಚೌಂಡಿ ನಗರದ ಕೇಶವ ಹೆಗ್ಡೆಯವರ ಹಾಡಿಯಲ್ಲಿ ತಲೆ ಬುರುಡೆ ಮತ್ತು ಎಲುಬುಗಳು ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಮತ್ತು 2 ಖಾಲಿ ಪ್ಲಾಸ್ಟಿಕ್ ಬಾಟಲುಗಳು ಇರುವುದಾಗಿ ತಿಳಿಸಿದ್ದು ಪಿರ್ಯದಿದಾರರು ಅಲ್ಲಿಗೆ ಹೋಗಿ ನೋಡಲಾಗಿ ಕಾಣೆಯಾದ ಪಿರ್ಯಾದಿದಾರರ ಅಣ್ಣ ನಾಗರಾಜ ಆಚಾರಿಯವರು  ಧರಿಸಿದ   ಬಟ್ಟೆ ಹಾಗೂ ಚಪ್ಪಲಿ ಆಗಿದ್ದು ಪಿರ್ಯಾದಿದಾರರ ಅಣ್ಣ ಕಾಣೆಯಾದ ಬಳಿಕ ಮನೆ ಸಮೀಪದ ಕೇಶವ ಹೆಗ್ಡೆಯವರ ಹಾಡಿಗೆ ಹೋಗಿ ತಾನು ತೆಗೆದುಕೊಂಡು ಹೋದ ಹಗ್ಗದಿಂದ ನೇಣು ಬಿಗಿದುಕೊಂಡು ಅಥವಾ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದ್ದು  . ಮೃತ ದೇಹವನ್ನು ಕಾಡು ಪ್ರಾಣಿಗಳು ಅಥವಾ ಇತರ ಜಂತುಗಳು ತಿಂದಿರಬಹುದು ಅಥವಾ ತುಂಬಾ ಸಮಯವಾಗಿದ್ದ ರಿಂದ ಅಸ್ಥಿ ಪಂಜರ ಮಾತ್ರ ಇರುತ್ತದೆ. ಪಿರ್ಯಾದಿದಾರರ ಅಣ್ಣ ಸಾಲ ಮಾಡಿಕೊಂಡು ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ  ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹು ಈ ಬಗ್ಗೆ ಸಂಶಯ ಇದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2022 ಕಲಂ: 174 (3)&( iv) ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಉಡುಪಿ: ದಿನಾಂಕ 31/03/2022 ರಂದು ಬೆಳಿಗ್ಗೆ 08:10 ಗಂಟೆಗೆ 1ನೇ ಆರೋಪಿ ಜಯಲಕ್ಷ್ಮಿ (50) ಇವರು  ಕತ್ತಿ,  ದೊಣ್ಣೆಯನ್ನು ಹಿಡಿದುಕೊಂಡು ಬಾಯಿಗೆ ಬಂದಂತೆ ಬೈದುಕೊಂಡು ಪಿರ್ಯಾದಿದಾರರಾದ ಡಾ. ಸಂತೋಷ್‌ ರಾವ್‌ (46),  ವಾಸ: ಮನೆ ನಂಬ್ರ: 3-113H, ಪದ್ಮನಾಭ ನಗರ, ಡಯಾನ ಥಿಯೇಟರ್‌ ಬಳಿ, ಬೈಲೂರು, ಉಡುಪಿ ತಾಲೂಕು ಇವರ ಮನೆಯ ಆವರಣ ಗೋಡೆಯೊಳಗೆ ಏಕಾಏಕಿಯಾಗಿ ನುಗ್ಗಿ,  32 ಕ್ಕೂ ಅಧಿಕ ಹೂವಿನ ಗಿಡಗಳಿರುವ ಮಡಕೆಯನ್ನು ಒಡೆದು ಹಾಕಿ ನಷ್ಟವನ್ನುಂಟು ಮಾಡಿರುವುದಲ್ಲದೆ, ಪಿರ್ಯಾದಿದಾರರಿಗೆ ಹಾಗೂ ಅವರ ಹೆಂಡತಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ಈ ಕೃತ್ಯಕ್ಕೆ 2ನೇ ಆರೋಪಿ ಸುಬ್ರಹ್ಮಣ್ಯ (55)  ಕುಮ್ಮಕ್ಕು ಇರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2022 ಕಲಂ:  427, 447, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ಪಿರ್ಯಾದಿದಾರರಾದ ಜೀನತ್‌  (23), ತಂದೆ: ಮೊಹಮ್ಮದ್‌ ,ವಾಸ: ಅಲ್ಲಾಸ್‌ ಮಂಜಿಲ್‌, ಇನ್ನಾ ಗ್ರಾಮ, ಕಾರ್ಕಳ ತಾಲೂಕು ಇವರ ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದರಿಂದ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು,  ಕೇಸಿನ ಬಗ್ಗೆ ಪಿಪಿ ರವರನ್ನು ಭೇಟಿ ಮಾಡಲು ಪಿರ್ಯಾದಿದಾರರು ದಿನಾಂಕ 07/05/2022 ರಂದು ಉಡುಪಿ ಕೋರ್ಟ್ ಬಳಿ ಬಂದಿದ್ದು, ಮಧ್ಯಾಹ್ನ 1:30 ಗಂಟೆಗೆ ಕೋರ್ಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಕಾರಿನ ಬಳಿ ಪಿರ್ಯಾದಿದಾರರು ನಿಂತಿರುವುದನ್ನು ನೋಡಿದ 1ನೇ ಆರೋಪಿತ ಮೊಹಮ್ಮದ್‌ ಇಲ್ಯಾಸ್‌  ಓಡಿ ಬಂದಿದ್ದು, ಅಷ್ಟರಲ್ಲಿ ಪಿರ್ಯಾದಿದಾರರು ಕಾರಿನ ಒಳಗೆ ಕೂತಿದ್ದು, ಆರೋಪಿತನು ಕಾರಿನ ಬಾಗಿಲನ್ನು ಎಳೆದು ಪಿರ್ಯಾದಿದಾರರನ್ನು ಹೊರಗೆ ಎಳೆದು, ಮುಷ್ಟಿ ಕಟ್ಟಿ ಪಿರ್ಯಾದಿದಾರರ ಮುಖಕ್ಕೆ ಹೊಡೆದಿದ್ದು, ನೆಲದ ಮೇಲೆ ದೂಡಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕುತ್ತಿಗೆಯನ್ನು ಬಲವಾಗಿ ಒತ್ತಿರುತ್ತಾನೆ, ಜೀನತ್‌  ಮತ್ತು  ಶರೀಫ ರು ಅವಳನ್ನು ಬಿಡಬೇಡ ಎಂದು ಹೇಳಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ:  341, 323, 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಮೊಹಮ್ಮದ್ ಇಲಿಯಾಸ್‌ (36), ತಂದೆ: ಇಬ್ರಾಹಿಂ, ವಾಸ: ದೀನ್‌ ಸ್ಟ್ರೀಟ್‌, ಮೀರ ಕಂಪೌಂಡ್‌ ಫ್ಲ್ಯಾಟ್‌ 06, 2ನೇ ಮಹಡಿ,  ನಡ್ಸಾಲು ಗ್ರಾಮ, ಕಾಪು ತಾಲೂಕು ಇವರು ದಿನಾಂಕ 07/05/2022 ರಂದು ಬೆಳಿಗ್ಗೆ ಉಡುಪಿ ಕೋರ್ಟ್‌ಗೆ ಬಂದಿದ್ದು, ಕೋರ್ಟ್‌ ಕಲಾಪ ಮುಗಿದ ಬಳಿಕ ಉಡುಪಿ ಕೋರ್ಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿರುವಾಗ 13:00 ಗಂಟೆಗೆ ಆರೋಪಿತರಾದ  1) ಕಲಂದರ್ ಶಫಿ, 2)  ಜೀನತ್ ಕಾರಿನಲ್ಲಿ ಬಂದು, 1ನೇ ಆರೋಪಿಯು ಕಾರಿನಿಂದ ಕೆಳಗಿಳಿದು ಏಕಾಏಕಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಕೊಲ್ಲುವ ಉದ್ದೇಶದಿಂದ ಶೂ ಧರಿಸಿದ್ದ ಕಾಲಿನಿಂದ ಪಿರ್ಯಾದಿದಾರರ ಮರ್ಮಾಂಗಕ್ಕೆ ತುಳಿಯಲು ಬಂದಿದ್ದು, ಪಿರ್ಯಾದಿದಾರರು ತಪ್ಪಿಸಿಕೊಂಡಾಗ ಅದು ಪಿರ್ಯಾದಿದಾರರ ಎಡಗಾಲಿನ ತೊಡೆಯ ಭಾಗಕ್ಕೆ ತಾಗಿ ಗುದ್ದಿದ ಗಾಯವಾಗಿದ್ದು, 2ನೇ ಆರೋಪಿತೆಯು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲಿಸ್ ಠಾಣೆ ಅಪರಾಧ ಕ್ರಮಾಂಕ 75/2022 ಕಲಂ:  341, 323, 504, 506, 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಪದ್ಮಾವ ತಿ  (30), ಗಂಡ : ಮಂಜುನಾಥ,  ವಾಸ: ಗುರುಕೃಪಾ ನಿಲಯ , ಹೀರಾಭಾಗ್ ಎದುರುಗಡೆ ದೂಮಾವತಿ 2 ನೇ ಅಡ್ಡ ರಸ್ತೆ ಬನ್ನಂಜೆ ಉಡುಪಿ ಇವರು ಮತ್ತು ಅವರ ಗಂಡ ಇತ್ತೀಚಿಗೆ ಕೆಲವು ದಿನಗಳಿಂದ ಸುಶಿಲಾ ರಾಘವ ಶೆಟ್ಟಿ ವಾಂಟ್ಯಾಳ  ಇವರ ಮನೆಯ ಜಾಗಕ್ಕೆ ಕೆಲಸಕ್ಕೆ ಹೋಗುತಿದ್ದು, ದಿನಾಂಕ 07/05/2022 ರಂದು ಬೆಳಿಗ್ಗೆ 09:45 ಗಂಟೆಗೆ ಅಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ KA-20-MB-7968 ಬ್ರೀಜಾ ಕಾರಿನಲ್ಲಿ ಭರತ್ ಶೆಟ್ಟಿ, ಉಮೇಶ್ ಶೆಟ್ಟಿ, ಮತ್ತು ರೇವತಿ ಶೆಟ್ಟಿ ಅಲ್ಲಿಗೆ ಬಂದಿಳಿದಿದ್ದು ಆ ಸಮಯ ಅಲ್ಲಿಯೇ ಇದ್ದ ಸದಾಶಿವ ಶೆಟ್ಟಿ, ಸುರೇಖಾ ಶೆಟ್ಟಿ, ರೇಖಾ ಶೆಟ್ಟಿ , ರೇಣುಕಾ ಶೆಟ್ಟಿ ಕೂಡಾ ಬಂದಿದ್ದು ಎಲ್ಲರೂ ಒಟ್ಟಾಗಿ ಪಿರ್ಯಾದಿದಾರರನ್ನು ಹಾಗೂ ಅವರ ಗಂಡನ್ನು ಉದ್ದೇಶಿಸಿ ನಿಂದಿಸಿ ಸೊಂಟೆಯಿಂದ ಪಿರ್ಯಾದಿದಾರರ ಗಂಡನ ಕುತ್ತಿಗೆ ಹಿಂದೆ, ಹೊಟ್ಟೆಯ ಭಾಗಕ್ಕೆ, ಕಾಲಿಗೆ ಬಾರಿಸಿದ್ದು ಕೈಗಳನ್ನು ತಿಪ್ಪಿದ್ದು ಆಗ ಪಿರ್ಯಾದಿದಾರರು ತಡೆಯಲು ಹೋದಾಗ ಭರತ್ ಶೆಟ್ಟಿ, ಉಮೇಶ್ ಶೆಟ್ಟಿ, ಸದಾಶಿವ ಶೆಟ್ಟಿ ಕೆನ್ನೆಗೆ ಕುತ್ತಿಗೆ ಭಾಗಕ್ಕೆ ಬೆನ್ನಿಗೆ ಗುದ್ದಿರುತ್ತಾರೆ. ಪಿರ್ಯಾದಿದಾರರ ಗಂಡನನ್ನು ನೆಲಕ್ಕೆ ದೂಡಿ ಆರೋಪಿತರೆಲ್ಲರೂ ಕಾಲಿನಿಂದ ತುಳಿಯತ್ತಾ  ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಮದ್ಯೆ ಅವರ ಬೊಬ್ಬೆ ಕೇಳಿ ಅಕ್ಕ ಪಕ್ಕದವರು ಬರುವುದನ್ನು ಕಂಡು ಆಪಾದಿತರು ಪಿರ್ಯಾದಿದಾರಿಗೆ ಹಾಗೂ ಅವರ ಗಂಡನಿಗೆ ಹೊಡೆಯುದನ್ನು ನಿಲ್ಲಿಸಿ ಅಲ್ಲಿಂದ ಹೋಗಿರುತ್ತಾರೆ. ಹೋಗುವಾಗ ಭರತ್ ಶೆಟ್ಟಿ ಕಾರಿನಲ್ಲಿದ್ದ ತಲವಾರನ್ನು ತೆಗೆದು  ತೋರಿಸಿ ಇವಾಗ ಬಚಾವ್ ಆದ್ರಿ ಇನ್ನೊಮ್ಮೆ ಜೀವ ಸಮೇತ ಬಿಡುವುದಿಲ್ಲ ಗತಿಕಾಣಿಸುತ್ತೇನೆ ಎಂದು ಹೇಳಿ ಹೋಗಿರುತ್ತಾರೆ. ಪಿರ್ಯಾದಿದಾರ ರ ಗಂಡ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಗಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022  ಕಲಂ : 143, 147, 148, 323, 324, 504, 506, 354 ಜೊತೆಗೆ 149 ಐಪಿಸಿ ಮತ್ತು 3(1-r),3(1-s),,3(1-w1), ,3(2-va) SC/ST Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-05-2022 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080