ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

 • ಶಂಕರನಾರಾಯಣ: ದಿನಾಂಕ 06/05/2021 ರಂದು 22;00  ಗಂಟೆಗೆ ಆರೋಪಿತ ವಿನಯ  ಮಡಿವಾಳ   ಕೆಎ,14 ಇಎನ್.6318 ನೇ  ನಂಬ್ರದ ಬಜಾಜ್  ಸ್ಕೂಟಿಯಲ್ಲಿ ಪ್ರಜ್ವಲ್  ಮಡಿವಾಳ  ಪ್ರಾಯ 21 ವರ್ಷ  ಹಾಗೂ ನಾಗರಾಜ  ಮಡಿವಾಳ 18  ವರ್ಷ ಇವರನ್ನು ಸಹ  ಸವಾರನ್ನಾಗಿ ಕುಳ್ಳಿರಿಸಿಕೊಂಡು ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಬೆಳ್ವೆ ಮಸೀದಿಯ ಬಳಿ ಅಲ್ಬಾಡಿ ಕಡೆಯಿಂದ ಬೆಳ್ವೆಕಡೆಗೆ ಅತೀ ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು,ಈ  ಸಮಯ ಸ್ಕೂಟಿಯು ಆರೋಪಿಯ ಹತೋಟಿ ತಪ್ಪಿ  ರಸ್ತೆಯ ಬದಿಯ ಮೋರಿಗೆ ಡಿಕ್ಕಿ  ಹೊಡೆದಿರುತ್ತದೆ , ಇದರ  ಪರಿಣಾಮ  ಬಜಾಜ್  ಸ್ಕೂಟಿಯಲ್ಲಿ  ಇರುವ ಮೂರು ಜನರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ,ಎಮ್,ಸಿಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪ್ರಜ್ವಲ್ ಮಡಿವಾಳ  ಪ್ರಾಯ 21 ವರ್ಷ  ಹಾಗೂ ನಾಗರಾಜ  ಮಡಿವಾಳ 18  ವರ್ಷ ಇವರು  ಚಿಕಿತ್ಸೆ   ಫಲಕಾರಿಯಾಗದೇ   ಮೃತಪಟ್ಟಿರುತ್ತಾರೆ,  ಸ್ಕೂಟಿ  ಚಲಾಯಿಸಿದ ವಿನಯ ಗಂಭೀರ ಗಾಯಗೊಂಡು  ಮಣಿಪಾಲ  ಕೆ,ಎಮ್,ಸಿ   ಆಸ್ಪತ್ರೆಯಲ್ಲಿ   ಒಳರೋಗಿಯಾಗಿ  ದಾಖಲಾಗಿ   ಚಿಕಿತ್ಸೆ  ಪಡೆಯುತ್ತಿದ್ದಾನೆ . ಈ ಬಗ್ಗೆ  ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021   ಕಲಂ:   279, 338,  304 (A) ಭಾ.ಧಂಸಂ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

 • ಕಾರ್ಕಳ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ: 26/04/2021 ರಿಂದ ದಿನಾಂಕ: 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಪಿರ್ಯಾದಿ ತೇಜಸ್ವಿ ಟಿ ಐ ಪಿಎಸ್ ಐ    ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಇವರು ದಿನಾಂಕ: 07/05/2021  ರಂದು ಇಲಾಖಾ ಜೀಪು ನಂಬ್ರ: ಕೆ,ಎ20-ಜಿ-162 ನೇದರಲ್ಲಿ ಚಾಲಕನಾಗಿ ಎ,ಹೆಚ್,ಸಿ, 109 ನೇ ಸತೀಶ್ ನಾಯ್ಕ, ಇವರೊಂದಿಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಚಿರಾಗ್ ಹೋಟೇಲ್ ಬಳಿ ತಪಾಸಣೆ ಮಾಡುತ್ತಿರುವಾಗ ಸಮಯ 13:00 ಗಂಟೆಗೆ 14:00 ಗಂಟೆಯ ತನಕ ಅನಗತ್ಯವಾಗಿ ಓಡಾಡಿ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವ ಆರೋಪಿತರುಗಳಾದ 1) ಶ್ರೀಮತಿ ಸುಮಾ 2) ಸುನಿಲ್ 3) ಸುಧಾಕರ ನಾಯ್ಕ 4) ಮಾಧವ ಶೆಣೈ  5) ಬಸವರಾಜ್  6) ಪ್ರಕಾಶ್ ಲೋಬೋ ಇವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು 1) ಕೆಎ20-ಇ,ಆರ್-8128 ನೇ ನಂಬ್ರದ ಸ್ಕೂಟಿ 2) ಕೆ,ಎ20-ಇ,ಹೆಚ್-4216 ಆ್ಯಕ್ವಿಟ್ ಹೋಂಡಾ ಸ್ಕೂಟಿ, 3) ಕೆ,ಎ20-ಇ,ಪಿ-1566 ನೇ ನಂಬ್ರದ ಬೈಕ್, 4) ಕೆ,ಎ20-ಇ,ಹೆಚ್.-6020 ನೇ ನಂಬ್ರದ ಹೊಂಡಾ ಮ್ಯಾಟ್ರಿಕ್ಸ್ ಸ್ಕೂಟಿ, , 5) ಕೆ,ಎ63-ಜೆ-0624 ನೇ ನಂಬ್ರದ ಹೀರೋ ಹೊಂಡಾ ಸ್ಲೆಂಡರ್ ಮೋಟಾರು ಸೈಕಲ್, 6) ಕೆ,ಎ 20-ಸಿ-0125 ನೇ ನಂಬ್ರದ ರಿಕ್ಷಾವನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  51/2021 ಕಲಂ: 269, ಐ,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸುಂದರ, ಎಎಸ್‌ಐ ಬ್ರಹ್ಮಾವರ ಪೊಲೀಸ್ ಠಾಣೆ. ಇವರು  ದಿನಾಂಕ 07/05/2021 ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ  ತಪಾಸಣೆ ಮಾಡುತ್ತಿರುವಾಗ ಸಮಯ ಮಧ್ಯಾಹ್ನ 12:45  ಗಂಟೆಗೆ ಆರೋಪಿ ಸತೀಶ್ ರವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಚಾಂತಾರು ಗ್ರಾಮದ ಚಾಂತಾರು ಎಂಬಲ್ಲಿ ತನ್ನ ಮಾಲಕತ್ವದ ಗೂಡಂಗಡಿಯನ್ನು ತೆರೆದು ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ  70/2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಗೋಪಾಲ ಪೂಜಾರಿ, ಎಎಸ್‌ಐ ಬ್ರಹ್ಮಾವರ ಪೊಲೀಸ್ ಠಾಣೆ. ಇವರು ದಿನಾಂಕ 07/05/2021 ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ಮೋಟಾರ್ ಸೈಕಲ್‌ನಲ್ಲಿ  ತಪಾಸಣೆ ಮಾಡುತ್ತಿರುವಾಗ ಸಮಯ ಮಧ್ಯಾಹ್ನ 1:30   ಗಂಟೆಗೆ ಆರೋಪಿ ಗಿರೀಶ್ ರವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಚಾಂತಾರು ಗ್ರಾಮದ ಕೃಷಿಕೇಂದ್ರದ ಬಳಿ, ಅವರ ಮಾಲಕತ್ವದ ಪ್ರಥಮ್ ಆಟೋ ವರ್ಕ್ಸ್ ಗ್ಯಾರೇಜ್‌ ಅನ್ನು ತೆರೆದು ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ   ಅಪರಾಧ ಕ್ರಮಾಂಕ  71/2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಗುರುನಾಥ ಬಿ ಹಾದಿಮನಿ, ಪಿಎಸ್‌ಐ ಬ್ರಹ್ಮಾವರ ಪೊಲೀಸ್ ಠಾಣೆ ಇವರ ದಿನಾಂಕ 07/05/2021 ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ತಪಾಸಣೆ ಮಾಡುತ್ತಿರುವಾಗ ಸಮಯ ಮಧ್ಯಾಹ್ನ 1:45  ಗಂಟೆಗೆ ಆರೋಪಿ ದೀಪಕ್ ತಂದೆ: ಯೋಗೀಶ್ ಆಚಾರ್ಯ, ವಾಸ: ಪೇತ್ರಿ , ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ರವರು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಚೇರ್ಕಾಡಿ ಗ್ರಾಮದ, ಗುಂಡಾರಿಕಲ್ಲು ಎಂಬಲ್ಲಿ ಅವರ ಮಾಲಕತ್ವದ ಲಕ್ಷ್ಮೀ ಎಂಟರ್‌ಪ್ರೈಸಸ್ ಎಂಬ ಗ್ಲಾಸ್ & ಫ್ಲೈವುಡ್ ಅಂಗಡಿಯನ್ನು ತೆರೆದು ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ   ಅಪರಾಧ ಕ್ರಮಾಂಕ  72/2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾಪು: ಪಿರ್ಯಾದಿ ಶ್ರೀ ಪ್ರಕಾಶ ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ. ಕಾಪುಇವರು ದಿನಾಂಕ 07.05.2021 ರಂದು ಮಧ್ಯಾಹ್ನ 12.00  ಗಂಟೆಯಿಂದ  14.00 ಗಂಟೆಯವರೆಗೆ ಸಿಬ್ಬಂದಿಯವರಾದ ಹೆಚ್.ಸಿ. 1873 ಸುಧಾಕರ, ಹೆಚ್.ಸಿ. 136 ಪ್ರವೀಣ್ ಹಾಗೂ ಪಿ.ಸಿ. 2442 ಸಂದೀಪ್ ಮತ್ತು ಜೀಪು ಚಾಲಕ ಎ.ಪಿ.ಸಿ 1560 ರಾಘವೇಂದ್ರ ರವರ ಜೊತೆ ಮೂಡುಬೆಟ್ಟು ಗ್ರಾಮದ ಕಟಪಾಡಿ ಒಳಪೇಟೆ ರಸ್ತೆಯಲ್ಲಿ ಲಕ್ಷ್ಮೀ ವೆಂಕಟೇಶ ರೈಸ್ ಮಿಲ್ ಬಳಿ  ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿದಲ್ಲಿ 1) ಗ್ರೇ ಬಣ್ಣದ ಸುಝುಕಿ ಎಕ್ಸೆಸ್ ಮೋಟಾರ್ ಸೈಕಲ್ ನಂಬ್ರ – KA-20-ER-2722 ನ ಸವಾರ ಭುವನ್ ರಾಜ್ ಮತ್ತು ಸಹ ಸವಾರ ಅಭಿಷೇಕ್, 2) ಕಪ್ಪು ಬಣ್ಣದ ಯಮಾಹಾ ಎಫ್‌ಝಡ್ ಮೋಟಾರ್ ಸೈಕಲ್ ನಂಬ್ರ - KA-20-ES-0863 ನೇದರ ಸವಾರ ಲಕ್ಷ್ಮಣ ಪೂಜಾರಿ, 3) ಕಪ್ಪು ಬಣ್ಣದ ಹೀರೋ ಹೊಂಡಾ ಮೋಟಾರ್ ಸೈಕಲ್ ನಂಬ್ರ - KA-20-E-4791 ನೇದರ ಸವಾರ ದಿನೇಶ್ ಎ ಪೂಜಾರಿ, 4) ಬಿಳಿ ಬಣ್ಣದ ಹೊಂಡಾ ಮೇಟ್ರಿಕ್ಸ್ ಮೋಟಾರ್ ಸೈಕಲ್ ನಂಬ್ರ - KA-20-EK-4063 ನೇದರ ಸವಾರ ಸುನೀಲ್ ಕುಮಾರ ಮತ್ತು 5) ಬಿಳಿ ಬಣ್ಣದ ಮಾರುತಿ ರಿಡ್ಜ್ ಕಾರು ನಂಬ್ರ - KA-20-Z-9631 ನೇದರ ಚಾಲಕ ರಾಗೇಶ್ ರವರು ಓಡಾಟದ ಕಾರಣವನ್ನು ವಿಚಾರಿಸಲಾಗಿ ಯಾವುದೇ ತುರ್ತು ಕಾರಣವಿಲ್ಲದೇ ಅನಗತ್ಯವಾಗಿ ಸಂಚಾರ ಮಾಡಿರುವುದು ಕಂಡು ಬಂದಿರುತ್ತದೆ. ಪ್ರಸ್ತುತ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 27/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿ ಜನರ ಅನಗತ್ಯ ಓಡಾಟವನ್ನು ನಿಷೇಧಿಸಿದ್ದರೂ ಸದ್ರಿ ವ್ಯಕ್ತಿಗಳು ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ ಎಂದು ತಿಳಿದರೂ ಕೂಡಾ  ಅನಗತ್ಯ ಓಡಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಠಾಣೆ   ಅಪರಾಧ ಕ್ರಮಾಂಕ  64/2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ: ದಿನಾಂಕ 07.05.2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ರವೀಶ್ ಹೊಳ್ಳ  ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ರೌಂಡ್ಸ್‌ಕರ್ತವ್ಯದಲ್ಲಿರುವ ವೇಳೆ 18:00 ಗಂಟೆಗೆ ಕಾವ್ರಾಡಿ  ಗ್ರಾಮದ ಕುಂದಾಪುರ ಗ್ರಾಮಾಂತರ ಠಾಣೆಯ ಎದುರುಗಡೆ ಆರೋಪಿತ ಮಧುಸೂದನ  ಪ್ರಾಯ 29 ವರ್ಷ ತಂದೆ ಶ್ರೀಧರ ವಾಸ ರಾಹುತ್ ಕೇರಿ ಬಸ್ರೂರು ಗ್ರಾಮ ಕುಂದಾಪುರ ತಾಲೂಕು  ಇವರು KA  20 ES 2893  ನೇ ವಾಹನದಲ್ಲಿ ಸಂಚಾರ ಮಾಡಿ  ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ  ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ  26//2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ :07.05.2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ರವೀಶ್ ಹೊಳ್ಳ   ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ರೌಂಡ್ಸ್‌ಕರ್ತವ್ಯದಲ್ಲಿರುವ ವೇಳೆ 18:25 ಗಂಟೆಗೆ ಕಾವ್ರಾಡಿ  ಗ್ರಾಮದ ಕುಂದಾಪುರ ಗ್ರಾಮಾಂತರ ಠಾಣೆಯ ಎದುರುಗಡೆ ಆರೋಪಿತ ಮಹಮ್ಮದ್ ರಫೀಕ್   ಪ್ರಾಯ 42ವವರ್ಷ ತಂದೆ ಸಯ್ಯಾದಿ ಬ್ಯಾರಿ ವಾಸ ಬೋಳು ಕಟ್ಟೆ ಗುಲ್ವಾಡಿ  ಗ್ರಾಮ ಕೆಎ 20 ಇ  ಜಿ 5865 ನೇ ವಾಹನದಲ್ಲಿ ಸಂಚಾರ ಮಾಡಿ  ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ.   ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಂಡದ್ದಾಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ  ಠಾಣೆ   ಅಪರಾಧ ಕ್ರಮಾಂಕ  27/2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ: ದಿನಾಂಕ 07.05.2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ರವೀಶ್ ಹೊಳ್ಳ   ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ರೌಂಡ್ಸ್‌ಕರ್ತವ್ಯದಲ್ಲಿರುವ ವೇಳೆ ಆರೋಪಿತ ಗೋಪಾಲ    ಪ್ರಾಯ 30 ವರ್ಷ ತಂದೆ ನಾಗ ವಾಸ ಕೂಡಗೀ ಹಳ್ಳಿಹೊಳೆ   ಗ್ರಾಮ ಇವರು  18:50 ಗಂಟೆಗೆ ಕಾವ್ರಾಡಿ  ಗ್ರಾಮದ ಕುಂದಾಪುರ ಗ್ರಾಮಾಂತರ ಠಾಣೆಯ ಎದುರುಗಡೆ ಕೆಎ 20 ಇ  ಎಸ್ 9010  ನೇ ವಾಹನದಲ್ಲಿ ಸಂಚಾರ ಮಾಡಿ  ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ.  ಈ ಬಗ್ಗೆ ಕುಂದಾಪುರ ಗ್ರಾಮಾಂತರ  ಠಾಣೆ   ಅಪರಾಧ ಕ್ರಮಾಂಕ  28//2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ: ಆರೋಪಿಗಳಾದ 1.ಕೆಎ.05 ಎಚ್‌ಡಿ.2468 , 2. ಕೆಎ,20  ಇಎ, 2636, 3. ಕೆಎ,20  ಡಬ್ಲು-7150, 4. ಕೆಎ.20  ಇಎನ್. 4872, 5.ಕೆಎ.20  ಇಬಿ.1656  ನೇ  ನಂಬ್ರದ  ಮೋಟಾರ್  ಸೈಕಲ್‌ ಸವಾರರು ದಿನಾಂಕ  07.05.2021 ರಂದು  16;30  ಘಂಟೆಗೆ  ಕುಂದಾಪುರ ತಾಲೂಕಿನ  28  ಹಾಲಾಡಿ   ಗ್ರಾಮದ ಹಾಲಾಡಿ  ಬಸ್ಸು  ನಿಲ್ದಾಣದ   ಬಳಿಯ  ಸರ್ಕಲ್ ಬಳಿ  1. ಕೆಎ.05 ಎಚ್‌ಡಿ.2468  2. ಕೆಎ,20  ಇಎ, 2636  3. ಕೆಎ,20  ಡಬ್ಲು-7150 4. ಕೆಎ.20  ಇಎನ್. 4872 ,5. ಕೆಎ.20  ಇಬಿ.1656  ನೇ  ನಂಬ್ರದ  ಮೋಟಾರ್  ಸೈಕಲ್‌ ಸವಾರರು   ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣ ಗೊಳ್ಳುತ್ತಿರುವ ಕಾರಣ ಸೋಕನ್ನು ತಡೆಗಟ್ಟುವ ಕಾರಣ ಉಡುಪಿ ಜಿಲ್ಲೆಯಾದ್ಯಂತ ಉಡುಪಿ  ಜಿಲ್ಲಾ ದಂಢಾಧಿಕಾರಿಯರು  ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು,  ಉಡುಪಿ ಜಿಲ್ಲಾ ದಂಢಾಧಿಕಾರಿಯವರು  ಹಾಗೂ   ಘನ  ಸರಕಾರದ ಆದೇಶವನ್ನು  ಉಲ್ಲಂಘಿಸಿ  ಯಾವುದೇ  ಮುನ್ನೆಚ್ಚರಿಕೆ   ಕ್ರಮ ಕೈಗೊಳ್ಳದೆ   ಗುಂಪುಗೂಡಿಕೊಂಡು ನಿಂತುಕೊಂಡಿರುತ್ತಾರೆ.  ಈ ಬಗ್ಗೆ ಶಂಕರನಾರಾಯಣ  ಠಾಣೆ   ಅಪರಾಧ ಕ್ರಮಾಂಕ  47/2021  ಕಲಂ: 269, ಜೊತೆಗೆ  149  ,   ಐ.ಪಿಸಿ  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಹಿರಿಯಡ್ಕ:  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 12/05/2021 ರ ವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ  ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು,  ಈ ಬಗ್ಗೆ ಪಿರ್ಯಾದಿ ಗಂಗಾಪ್ಪ ಎಎಸ್‌ಐ ಹಿರಿಯಡ್ಕ ಪೊಲೀಸ್ ಠಾಣೆ. ಇವರು  ದಿನಾಂಕ 07/05/2021 ರಂದು  ಸಂಜೆ  ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಬೊಮ್ಮರ ಬೆಟ್ಟುಗ್ರಾಮದ ಹಿರಿಯಡ್ಕ ಠಾಣೆಯ ಮುಂಭಾಗ ರಾ.ಹೆ 169 ಎ ರಲ್ಲಿ KA 2 EJ 6603  ನೇ  ನಂಬ್ರದ  ಮೋಟಾರು ಸೂಕಲ್ ಸವಾರ ರಂಜಿತ್  ಯಾವುದೇ  ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ. ಅಪರಾಧ ಕ್ರಮಾಂಕ  25/2021 ಕಲಂ: 269. ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ದಿನಾಂಕ: 07/05/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ  ಸಂಚರಿಸುವವರ ವಿರುದ್ದ  ಕ್ರಮ ಕೈಗೊಳ್ಳುವ ಬಗ್ಗೆ ಮಣಿಪಾಲ ಠಾಣಾ ಪಿ ಎಸ್ ಐ ರಾಜಶೇಖರ್ ವಂದಲಿ, ಹೆಚ್.ಸಿ 164 ಪ್ರಸನ್ನ ,  ಮತ್ತು ಹೆಚ್.ಸಿ 2090 ಮಹೇಶ್ ರವರ ಜೊತೆಯಲ್ಲಿ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿಯಲ್ಲಿ  ವಾಹನ ತಪಾಸಣೆ ಮಾಡುತ್ತಿದ್ದಾಗ ಸಂಜೆ ಸುಮಾರು 4:00 ಗಂಟೆ ಸಮಯಕ್ಕೆ  ಓರ್ವ ಯುವಕ KA 04 MP7136  ನೇ ಬಿಳಿ ಬಣ್ಣದ ಕಾರ್‌‌‌‌ನಲ್ಲಿ ತಿರುಗಾಡುತ್ತಿರುವುದು ಕಂಡು ಬಂದಿರುತ್ತದೆ.  ನಂತರ ನಾವು ಆತನ ಕಾರನ್ನು  ನಿಲ್ಲಿಸಲು  ಸೂಚಿಸಿ  ಆತನ ಬಳಿ ಹೋಗಿ   ವಿಚಾರಿಸಲಾಗಿ ಆಪಾದಿತ ಪ್ರಥ್ವಿ ಲಾಕ್‌‌ಡೌನ್‌ ಸಮಯದಲ್ಲಿ ಸಂಚರಿಸುತ್ತಿದ್ದ  ಬಗ್ಗೆ ವಿಚಾರ ಮಾಡಿದಾಗ ಆತನು ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಸದರಿ ಆರೋಪಿತನು ಕೋವಿಡ್ ರೋಗ ಹರಡುವ ಬಗ್ಗೆ ನಿರ್ಲಕ್ಷ್ಯತನ ವಹಿಸಿರುತ್ತಾನೆ.  ಆದ್ದರಿಂದ ಸದ್ರಿ ಆರೋಪಿ ಅನಾವಶ್ಯಕವಾಗಿ  ಸಂಚರಿಸುತ್ತಿದ್ದ KA 04 MP7136  ನೇ ನೊಂದಣಿ ನಂಬರ್‌ನ  ದ್ವಿಚಕ್ರ ವಾಹನಗಳನ್ನು ವಶಪಡಿಸಿಪಡಿಸಿಕೊಳ್ಳಲಾಗಿರುತ್ತದೆ.  ಈ ಬಗ್ಗೆ ಮಣಿಪಾಲ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಪಡುಬಿದ್ರಿ : ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋರನಾ ವೈರಸ್‌ (ಕೋವಿಡ್-19) ಹರಡದಂತೆ ಮುಂಜಾಗೃತ ಕ್ರಮವಾಗಿ  ಕೋರೋನ ವೈರಾಣುಗಳು  ಹರಡುವುದನ್ನು ತಡೆಗಟ್ಟುವ  ಉದ್ದೇಶದಿಂದ ರಾಜ್ಯ ಸರಕಾರವು ದಿನಾಂಕ 27.04.2021  ರ ರಾತ್ರಿ 09.00 ಗಂಟೆಯಿಂದ  ದಿನಾಂಕ 12.05.2021 ರ  ಬೆಳಿಗ್ಗೆ 06.00 ಗಂಟೆಯ ವರೆಗೆ  ಜನತಾ ಕರ್ಫ್ಯೂ  ವಿಧಿಸಿ  ಜನರ  ಅನಗತ್ಯ ಓಡಾಟವನ್ನು ನಿಷೇಧಿಸಿದ್ದು,ಆ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಮತ್ತು ಇಲಾಖಾ  ಮೇಲಾಧಿಕಾರಿಯವರು ಚೆಕ್ ಪೋಸ್ಟ್  ನಿರ್ಮಿಸಿ ವಾಹನ ತಪಾಸಣೆ ನಡೆಸುವರೇ ಆದೇಶ ಹೊರಡಿಸಿದಂತೆ ಈ ದಿನ ದಿನಾಂಕ 07/05/2021 ರಂದು ಪಿರ್ಯಾದಿ ದಿಲೀಪ್ ಜಿ ಆರ್.ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ  ಪೊಲೀಸ್ ಠಾಣೆ ಇವರು, ಪಿಸಿ-2640, ಪಿಸಿ-27 ಹಾಗೂ ಮಪಿಸಿ-2300 ನೇಯವರೊಂದಿಗೆ ಕಾಪು ತಾಲೂಕು, ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ಕಾರ್ಕಳ  ಜಂಕ್ಷನ್ ನಲ್ಲಿ ರುವ ಚೆಕ್ ಪೋಸ್ಟ್ ನಿರ್ಮಿಸಿ ರಾ.ಹೆ. 66 ರ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಸಮಯ 12:00 ಗಂಟೆಗೆ ಆರೋಪಿ ದಿವಾಕರ  ರವರು KA 20 S 5136  ನೇ ನಂಬ್ರದ   ಟಿವಿಎಸ್ ಸ್ಟಾರ್ ಸಿಟಿ ಮೋಟಾರು ಸೈಕಲ್ ನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದು, ಓಡಾಟದ ಸಮರ್ಪಕ ಕಾರಣ ನೀಡದೇ ಇದ್ದು, ಜನತಾ ಕರ್ಫ್ಯೂ ವಿಧಿಸಿ ಜನರ ಅನಗತ್ಯ ಓಡಾಟವನ್ನು ನಿಷೇಧಿಸಿದ್ದರೂ ಸದ್ರಿ ವ್ಯಕ್ತಿಯು ಸಾಂಕ್ರಾಮಿಕ ರೋಗ ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ  ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ: 269, ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಪಡುಬಿದ್ರಿ : ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ  ಕೋರನಾ ವೈರಸ್‌ (ಕೋವಿಡ್ -19) ಹರಡದಂತೆ ಮುಂಜಾಗೃತ ಕ್ರಮವಾಗಿ  ಕೋರೋನ ವೈರಾಣುಗಳು  ಹರಡುವುದನ್ನು ತಡೆಗಟ್ಟುವ  ಉದ್ದೇಶದಿಂದ ರಾಜ್ಯ ಸರಕಾರವು ದಿನಾಂಕ 27.04.2021 ರ ರಾತ್ರಿ  09.00 ಗಂಟೆಯಿಂದ  ದಿನಾಂಕ 12.05.2021 ರ  ಬೆಳಿಗ್ಗೆ 06.00 ಗಂಟೆಯ ವರೆಗೆ  ಜನತಾ ಕರ್ಫ್ಯೂ  ವಿಧಿಸಿ  ಜನರ  ಅನಗತ್ಯ ಓಡಾಟವನ್ನು ನಿಷೇಧಿಸಿದ್ದು,ಆ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಮತ್ತು ಇಲಾಖಾ  ಮೇಲಾಧಿಕಾರಿಯವರು ಚೆಕ್ ಪೋಸ್ಟ್  ನಿರ್ಮಿಸಿ ವಾಹನ ತಪಾಸಣೆ ನಡೆಸುವರೇ ಆದೇಶ ಹೊರಡಿಸಿದಂತೆ ಈ ದಿನ ದಿನಾಂಕ 07.05.2021 ರಂದು ಪಿರ್ಯಾದಿ ದಿಲೀಪ್ ಜಿ ಆರ್.ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ  ಪೊಲೀಸ್ ಠಾಣೆ. ಇವರು ಪಿಸಿ-2640, ಪಿಸಿ-27 ಹಾಗೂ ಮಪಿಸಿ-2300 ನೇಯವರೊಂದಿಗೆ ಕಾಪು ತಾಲೂಕು, ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ಕಾರ್ಕಳ  ಜಂಕ್ಷನ್ ನಲ್ಲಿ ರುವ ಚೆಕ್ ಪೋಸ್ಟ್ ನಿರ್ಮಿಸಿ ರಾ.ಹೆ. 66 ರ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಸಮಯ 13:30 ಗಂಟೆಗೆ ಆರೋಪಿ ಹವಳಪ್ಪ ರವರು KA 20 EC 1564 ನೇ ನಂಬ್ರದ  ಯಮಹಾ FZ ಮೋಟಾರು ಸೈಕಲ್ ನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದು, ಓಡಾಟದ ಸಮರ್ಪಕ  ಕಾರಣ ನೀಡದೇ ಇದ್ದು, ಜನತಾ ಕರ್ಫ್ಯೂ ವಿಧಿಸಿ ಜನರ ಅನಗತ್ಯ ಓಡಾಟವನ್ನು ನಿಷೇಧಿಸಿದ್ದರೂ ಸದ್ರಿ  ವ್ಯಕ್ತಿಯು ಸಾಂಕ್ರಾಮಿಕ ರೋಗ ಹರಡುವ ಸಂಭವ ಇದೆ ಎಂದು ತಿಳಿದೂ  ಕೂಡಾ  ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40 /2021 ಕಲಂ: 269, ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ: 26/04/2021 ರಿಂದ ದಿನಾಂಕ: 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಪಿರ್ಯಾದಿ ಜನಾರ್ಧನ ಅಪರಾಧ ಪಿಎಸ್ ಐ    ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಇವರು ಈ ದಿನ ದಿನಾಂಕ: 07/05/2021  ರಂದು ಸಿಬ್ಬಂದಿಯವರಾದ ಎ,ಎಸ್,ಐ ನಾಗೇಶ್, ಹೆಚ್,ಸಿ, 2089 ಪ್ರಕಾಶ್ ಗುಡಿಗಾರ್, ಹೆಚ್,ಸಿ, 38 ಸತೀಶ್ ಬಟ್ವಾಡಿ ಇವರೊಂದಿಗೆ 14:00 ಗಂಟೆಯಿಂದ 15:00 ಗಂಟೆಯವರೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡಿ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವ ಆರೋಪಿತರುಗಳಾದ 1) ಚೇತನ್  2) ಆಂಜನೇಯ 3) ನಿತೀಶ್ 4) ಸೋಮಶೇಖರ 5) ಪ್ರಾನ್ಸಿಸ್ ಸೇವಿಯರ್,  6) ಹರೀಶ್ ಆಚಾರ್ಯ 7) ನಿಕೇತ್ ಇವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು 1) ಕೆ,ಎ20-ಯು-8863 ನೇ ನಂಬ್ರದ ಬಜಾಜ್ ಡಿಸ್ಕವರಿ ಬೈಕ್ 2) ಕೆ,ಎ15-ವಿ-5988 ನೇ ನಂಬ್ರದ ಹೀರೋ ಸ್ಮಾರ್ಟ ಬೈಕ್ 3) ಕೆ,ಎ20-ಇ,ಪಿ-0020 ನೇ ನಂಬ್ರದ ಹೋಂಡಾ ಲಿಯೋ ಸ್ಕೂಟಿ 4) ಕೆ ಕೆ,ಎ20-ಇ,ಎನ್-2613 ನೇ ನಂಬ್ರದ ಹೊಂಡಾ ಆ್ಯಕ್ವಿವಾ, 5) ಕೆ,ಎ20-ಡಬ್ಲೂ-5402 ನೇ ನಂಬ್ರದ ಸುಝುಕಿ ಆಕ್ಷಿಸ್ ಸ್ಕೂಟಿ, 6) ಕೆ,ಎ20-ಇ,ಎಸ್-3781 ನೇ ನಂಬ್ರದ ಸ್ಲೆಂಡರ್ ಬೈಕ್ 7) ಕೆ,ಎ20-ಆರ್-6079 ನೇ ನಂಬ್ರದ ಸ್ಲೆಂಡರ್ ಬೈಕ್ ವನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  52/2021 ಕಲಂ: 269, ಐ,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾಪು: ಪಿರ್ಯಾದಿ ರಾಘವೇಂದ್ರ ಸಿ. ಪಿ.ಎಸ್.ಐ. ಕಾಪು ಪೊಲೀಸ್ ಠಾಣೆ ಇರರು 07.05.2021  ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನ ಹೊಯ್ಸಳ ನಂಬ್ರ ಕೆ. ಎ. 20 ಜಿ. 353 ನೇದರಲ್ಲಿ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು, ಆ ಬಗ್ಗೆ ವಾಹನ  ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ದಿನಾಂಕ 07.05.2021 ರಂದು 17.00 ಗಂಟೆಯಿಂದ 19.00 ಗಂಟೆಯವರೆಗೆ ಕಾಪು ಪಡು ಗ್ರಾಮದ ಕಾಪು ಪೇಟೆಯಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ  ವಾಹನಗಳಲ್ಲಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1. ಮಾರುತಿ ಕಂಪನಿಯ ನೀಲಿ ಬಣ್ಣದ ಝನ್ ಕಾರು ನಂಬ್ರ ಕೆ.ಎ.20 ಎನ್. 0106 ನೇದರ ಚಾಲಕನ ಹೆಸರು  ರಿಜ್ವಾನ. 2. ಬಜಾಜ್ ಕಂಪನಿಯ ಕಪ್ಪು  ಬಣ್ಣದ ಆಟೋ ರಿಕ್ಷಾ ನಂಬ್ರ ಕೆ.ಎ.20 ಎ.ಎ. 1827 ನೇದರ ಚಾಲಕ ಅಶ್ರಫ್.  3. ಯಮಹಾ ಕಂಪನಿಯ ಕಪ್ಪು ನೀಲಿ ಬಣ್ಣದ ಎಫ್‌‌ಝಡ್ ಮೋಟಾರು ಸೈಕಲ್ ನಂಬ್ರ ಕೆ.ಎ.20 ಇ.ಆರ್. 9144 ನೇದರ ಸವಾರನ ಹೆಸರು ಸಯ್ಯದ್ ಮುಬೀನ್ ಸದ್ರಿ  ಆರೋಪಿಗಳು ಸಮಂಜಸ ಕಾರಣವಿಲ್ಲದೇ ಅನಗತ್ಯವಾಗಿ ಸಂಚರಿಸುತ್ತಿರುವುದಾಗಿದೆ.  ಸದ್ರಿ ಆರೋಪಿಗಳು  ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  65/2021 ಕಲಂ: 269, ಐ,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಮಲ್ಪೆ : ದಿನಾಂಕ 07-05-2021 ರಂದು ಪಿರ್ಯಾದಿ ಸಕ್ತಿವೇಲು  , ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ, ಮಲ್ಪೆ ಉಡುಪಿ ಇವರು ಇಲಾಖಾ ವಾಹನದಲ್ಲಿ   ಸಿಬ್ಬಂದಿಗಳ ಜೊತೆ ಠಾಣಾ ಸರಹದ್ದಿನ  ರೌಂಡ್ಸ್ ಸಮಯ  18:00 ಗಂಟೆ   ಸಮಯಕ್ಕೆ  ತೊಟ್ಟಂ  ಅಂಬೇಡ್ಕರ ನಗರ ದ 1 ನೇ ಕ್ರಾಸ್  ಬಳಿ  ಮೈದಾನದಲ್ಲಿ   ಆರೋಪಿತರಾದ ಸಚಿನ ಕುಮಾರ್, ಸಚಿನ್ , ಪ್ರಶಾಂತ, ಶ್ರೇಯಸ್  , ಅಜಯ್ , ಸುದೀಪ್ ಇವರುಗಳು  ಕೋವಿಡ್  ಕರೋನಾ  ಕಾಯಿಲೆ ಹರಡದಂತೆ ಯಾವುದೇ  ಸುರಕ್ಷತಾ ಕ್ರಮಗಳನ್ನು  ಅಳವಡಿಸದೆ ,ಕೊರೊನಾ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸ್ವೆಚ್ಚಾಚಾರದಿಂದ ಹಾಗೂ ನಿರ್ಲಕ್ಷ್ಯತನದಿಂದ ಕ್ರೀಕೆಟ್ ಆಡುತ್ತಿದ್ದು ,  ಸದ್ರಿ ಸ್ಥಳಕ್ಕೆ  ದಾಳಿ ಮಾಡಿ ಸಿಬ್ಬಂದಿಗಳ  ಸಹಾಯದಿಂದ ಆರೋಪಿಗಳಾದ ಸಚಿನ್ ಕುಮಾರ , ಸಚಿನ್ , ಸಂದೀಪ್ ರವರನ್ನು ವಶಕ್ಕೆ ಪಡೆದಿದ್ದು ಉಳಿದ  ಆರೋಪಿತರಾದ  ಪ್ರಶಾಂತ , ಶ್ರೇಯಸ್, ಅಜಯ್, ಸುದೀಪ್  ರವರು ಓಡಿಹೋಗಿರುತ್ತಾರೆ  ಹಾಗೂ  ಆರೋಪಿತ ಸಂದೀಪ್  ,ಸಚಿನ್ ಕುಮಾರ, ಸಚಿನ್   ರವರ ಬಾಬ್ತು  ಕೆಎ 20 ಇಕೆ 9161, ಕೆಎ 20 ಇಎನ್ 5586 , ಕೆಎ 20 ಇಕೆ 7649 ನೇ ಸ್ಕೂಟರ್ ಗಳನ್ನು ಮೂಮದಿನ ಕ್ರಮದ  ಬಗ್ಗೆ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಠಾಣಾ  ಅಪರಾಧ ಕ್ರಮಾಂಕ 48/2021  ಕಲಂ  269,  ಐಪಿಸಿ  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಮಲ್ಪೆ: ದಿನಾಂಕ:07-05-2021 ರಂದು ಸಂಜೆ 16:00 ಗಂಟೆಗೆ ಪಿರ್ಯಾದಿ ಸಕ್ತಿವೇಲು, ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ, ಇವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ ಮಲ್ಪೆ ಜಂಕ್ಷನ್ ನಲ್ಲಿ  ರಸ್ತೆಯಲ್ಲಿ ರೌಂಡ್ಸ್ ಸಮಯ   ಕೆಎ 20  EB- 4031 ನೇ ಮೋಟಾರು ಸೈಕಲ್  ನಲ್ಲಿ ಸವಾರನು ಹಿಂಬದಿಯಲ್ಲಿ ಸಹಸವಾರರನ್ನು ಕುಳ್ಳಿರಿಸಿಕೊಂಡು ತಲೆಗೆ ಹೆಲ್ಮೆಟ್ ಧರಿಸದೆ ಸ್ಕೂಟರನ್ನು ಅತೀ ವೇಗವಾಗಿ ಚಲಾಯಿಸಿಕೊಂಡಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದು ಈ ಬಗ್ಗೆ ಆರೋಪಿತರು ಕೊರೊನಾ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸ್ವೆಚ್ಚಾಚಾರದಿಂದ ತಿರುಗಾಡಿಕೊಂಡು ಮುಂಜಾಗೃತ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ   ಮೋಟಾರು ಸೈಕಲ್  ಸವಾರಿ  ಮಾಡಿಕೊಂಡಿದ್ದ ಹನುಮಂತ  , ಕರಿಬಸಪ್ಪ ಇವರುಗಳಿಂದ ಕೊವಿಡ್ 19  ಸೋಂಕು ಸಾರ್ವಜನಿಕರಿಗೆ ಹರಡುವ ಸಂಭವವಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರದ ಸ್ಪಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಕಾನೂನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಠಾಣಾ  ಅಪರಾಧ ಕ್ರಮಾಂಕ 47/2021  ಕಲಂ  ಕಲಂ  269, 279  ಐಪಿಸಿ  ಮತ್ತು  129, 177  ಐಎಂವಿ ಕಾಯ್ದೆ  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಪಡುಬಿದ್ರಿ: ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ  ಕೋರನಾ ವೈರಸ್‌(ಕೋವಿಡ್ -19) ಹರಡದಂತೆ ಮುಂಜಾಗೃತ ಕ್ರಮವಾಗಿ  ಕೋರೋನ ವೈರಾಣುಗಳು  ಹರಡುವುದನ್ನು ತಡೆಗಟ್ಟುವ  ಉದ್ದೇಶದಿಂದ ರಾಜ್ಯ ಸರಕಾರವು ದಿನಾಂಕ 27.04.2021 ರ ರಾತ್ರಿ  09.00 ಗಂಟೆಯಿಂದ  ದಿನಾಂಕ 12.05.2021 ರ  ಬೆಳಿಗ್ಗೆ 06.00 ಗಂಟೆಯ ವರೆಗೆ  ಜನತಾ ಕರ್ಫ್ಯೂ  ವಿಧಿಸಿ  ಜನರ  ಅನಗತ್ಯ ಓಡಾಟವನ್ನು ನಿಷೇಧಿಸಿದ್ದು,ಆ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಮತ್ತು ಇಲಾಖಾ  ಮೇಲಾಧಿಕಾರಿಯವರು ಚೆಕ್ ಪೋಸ್ಟ್  ನಿರ್ಮಿಸಿ ವಾಹನ ತಪಾಸಣೆ ನಡೆಸುವರೇ ಆದೇಶ ಹೊರಡಿಸಿದಂತೆ ಈ ದಿನ ದಿನಾಂಕ 07.05.2021 ರಂದು ಪಿರ್ಯಾದಿ ಜಯ ಕೆ.ಪೊಲೀಸ್ ಉಪನಿರೀಕ್ಷಕರು (ಅಪರಾಧ), ಪಡುಬಿದ್ರಿ  ಪೊಲೀಸ್ ಠಾಣೆ.ಇವರು ಪಿಸಿ-2559 ನೇಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದು, 14:00 ಗಂಟೆಗೆ ಆರೋಪಿ ಹವಳಪ್ಪ ರವರು ಕಾಪು ತಾಲೂಕು, ನಡ್ಸಾಲು ಗ್ರಾಮದ ಪಡುಬಿದ್ರಿಯ  ಎಸ್.ಎಸ್.ಬಾರ್  ಸಮೀಪ  ರಾ.ಹೆ. 66 ರಲ್ಲಿ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ  ಬಂದ KA 20 EW 5368 ನೇ  ನಂಬ್ರದ ಸುಝುಕಿ  ಎಕ್ಸೆಸ್  ಸ್ಕೂಟಿಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದು, ಓಡಾಟದ ಸಮರ್ಪಕ  ಕಾರಣ ನೀಡದೇ ಇದ್ದು, ಜನತಾ ಕರ್ಫ್ಯೂ ವಿಧಿಸಿ ಜನರ ಅನಗತ್ಯ ಓಡಾಟವನ್ನು ನಿಷೇಧಿಸಿದ್ದರೂ ಸದ್ರಿ  ವ್ಯಕ್ತಿಯು ಸಾಂಕ್ರಾಮಿಕ ರೋಗ ಹರಡುವ ಸಂಭವ ಇದೆ ಎಂದು ತಿಳಿದೂ  ಕೂಡಾ  ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುತ್ತದೆ. ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 269, ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26-04-2021 ರಿಂದ 12-05-2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ: 07/05/2021 ರಂದು ಪಿರ್ಯಾದಿ ಸದಾಶಿವ ಆರ್ ಗವರೋಜಿ - ಪಿ ಎಸ್ ಐ –ಕುಂದಾಪುರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ಕುಂದಾಪುರ ಶಾಸ್ತ್ರೀ ಪಾರ್ಕ ವೃತ್ತದಲ್ಲಿ  ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ    ಸುಮಾರು 17.00 ಗಂಟೆ ಸಮಯಕ್ಕೆ ಕುಂದಾಫುರ ಸಿಟಿ ಒಳಗಡೆ ಈ ಕೆಳಕಂಡ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ದ್ವಿಚಕ್ರ ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1) ಕೆ ಎ 20 ಕ್ಯೂ ಇ 0456 ನಿಝಾಮ್ ಪ್ರಾಯ 24 ವರ್ಷ ತಂದೆ ಮೊಹಮ್ಮದ್ ಶರೀಫ್ ವಾಸ: ಬಿ ಫಾತೀಮಾ ಮಂಜಿಲ್ ಕೋಡಿ  ಕುಂದಾಫುರ  ಕಸಬಾ  ಗ್ರಾಮ ಕುಂದಾಪುರ 2) ಕೆಎ 20 ಇಕ್ಯೂ 4504 ಮೊಹಮ್ಮದ್ ಸೈಪ್  ಪ್ರಾಯ 23  ವರ್ಷ  ತಂದೆ ಮೈಯ್ಯದ್ದಿ ವಾಸ:  ಆಶ್ರಯ ಕಾಲೋನಿ, ಟಿಟಿ ರೋಡ್ ವಡೇರಹೋಬಳಿ, ಕುಂದಾಫುರ  3) ಕೆಎ 20 ಎಸ್ 1845 ಡಾಲಫ್ರಡ್ ಪ್ರವೀಣ್  ಡಿಸಿಲ್ವಾ  ಪ್ರಾಯ 33 ವರ್ಷ ತಂದೆ:  ಗಿಲ್ಬರ್ಟ್ ಡಿ ಸೋಜಾ  ವಾಸ:  ಹೇರಿಕುದ್ರು ಆನಗಳ್ಳಿ  ಗ್ರಾಮ  ಕುಂದಾಪುರ 4) ಕೆಎ 20 ಇಎಫ್  1983 ಸುಮಂತ ಪ್ರಾಯ 24 ವರ್ಷ  ತಂದೆ ರವೀಂದ್ರನಾಥ ವಾಸ: ಸುಮಸಿರಿ, ವೇಣುಗೋಪಾಲಕೃಷ್ಣ  ದೇವಸ್ಥಾನದ ಹತ್ತಿರ,ಬಡಾಕೆರೆ  ಕೋಟೇಶ್ವರ  ಗ್ರಾಮ  ಕುಂದಾಫುರ  5) ಕೆಎ 19 ಇಎಲ್ 8142 ಸೈಯ್ಯದ್ ಮಸೀಯುಲ್ಲಾ ಪ್ರಾಯ 45 ವರ್ಷ ತಂದೆ ಸೈಯ್ಯದ್ ಯೂಸೂಬ್ ಸಾಬ್ ವಾಸ: ಬದ್ರಿಯ ಮಸೀದಿ ಬಳಿ ಮಾವಿನಕಟ್ಟೆ, ಗುಲ್ವಾಡಿ ಗ್ರಾಮ, ಕುಂದಾಪುರ  ಸದ್ರಿ  ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ . ಕುಂದಾಪುರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 53/2021  ಕಲಂ 269 IPC, ರಂತೆ ಪ್ರಕರಣ ದಾಖಲಿಸಲಾಗಿದೆ.
 • ಗಂಗೊಳ್ಳಿ : ದಿನಾಂಕ 07/05/2021 ರಂದು ಹೆಚ್‌.ಸಿ 82 ನೇ ಗಿರೀಶ್ ರವರು ಪಿ.ಸಿ 37ನೇ ಹಸನ್ ಹಾಗೂ ಮ.ಪಿ.ಸಿ 2306ನೇ ಸರೋಜ ರವರೊಂದಿಗೆ ಸಂಜೆ 5:00 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್‌ ನಲ್ಲಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ (1) KA05-MK-6940 MARUTHI OMINI (ಚಾಲಕ ನಾಗರಾಜ), (2) KA20EK-0090 HONDA M/C, (3) KA20EA-5690,  FASSION PRO M/C, (4) KA19EH-1457 HONDA SCOOTY, (5) KA20W-1265 FASSION PRO M/C,  (6) KA20-Q-4331 M80, (7) KA20ET-9241 RADEON M/C, (8) KA20W-7797 YAMAHA M/C ಸವಾರರು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿದ್ದರಿಂದ ಹೆಚ್‌.ಸಿ 82ನೇ ಗಿರೀಶ್ ರವರು ಆಪಾದಿತರ ವಾಹನವನ್ನು ವಶಕ್ಕೆ ಪಡೆದು ನೀಡಿದ ದೂರಿನಂತೆ ಪ್ರಕಾಶ್ ಶಾಲಿಯಾನ್ ಪೊಲೀಸ್ ಉಪನಿರೀಕ್ಷಕರುಗಂಗೊಳ್ಳಿ ಪೊಲೀಸ್ ಠಾಣೆ  ಇವರು ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ  39/2021 ಕಲಂ 269 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕೋಟ :ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 12/05/2021 ರವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು  ದಿನಾಂಕ 07/05/2021 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮ ಮಂಟಪ ಹೋಟೆಲ್ ಬಳಿಯಲ್ಲಿ   KA20.EQ.0497 ನೇ ನಂಬ್ರದ  ಎಕ್ಸಸ್ 125 ಸ್ಕೂಟಿ  ಸವಾರ ಕೋಟಿ ಪೂಜಾರಿ ತಂದೆ:ಅಣ್ಣಯ್ಯ ಪೂಜಾರಿ ವಾಸ: ಕೋಡಿ ಕನ್ಯಾನ ಗ್ರಾಮ  ,ಬ್ರಹ್ಮಾವರ ತಾಲೂಕು ರವರು ಯಾವುದೇ  ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದು, ವಾಹನವನ್ನು 19:30 ಗಂಟೆಯ ಸಮಯಕ್ಕೆ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  79/2021 ಕಲಂ: 269 IPC  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕೋಟ :ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 12/05/2021 ರವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು  ದಿನಾಂಕ 07/05/2021 ರಂದು  ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಗಿಳಿಯಾರು  ಗ್ರಾಮದ ಅಮೃತೇಶ್ವರಿ ಜಂಕ್ಷನ್ ಬಳಿಯಲ್ಲಿ KA20.ER.3643 ನೇ ನಂಬ್ರದ  ಬುಲೇಟ್  ಸವಾರ ಮಹಮ್ಮದ್ ಸಾಜನ್ ತಂದೆ:ಕೆ ಹಮ್ಮಾಬ್ಬ   ವಾಸ: ಮೂಡುಗೋಪಾಡಿ ಆಟದ ಮೈದಾನ ಬಳಿ ಮೂಡಗೋಪಾಡಿ ಗ್ರಾಮ, ಕುಂದಾಪುರ ತಾಲೂಕು ಇವರು  ಯಾವುದೇ  ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದು, ವಾಹನವನ್ನು 20:30 ಗಂಟೆಯ ಸಮಯಕ್ಕೆ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  80/2021 ಕಲಂ: 269 IPC  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕೋಟ :ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 12/05/2021 ರವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು  ದಿನಾಂಕ 07/05/2021 ರಂದು  ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಮಣೂರು  ಗ್ರಾಮದ ತೆಕ್ಕಟ್ಟೆ ಜಂಕ್ಷನ್ ನಲ್ಲಿ  KA05EP.1009 ನೇ ನಂಬ್ರದ ಮೋಟಾರು ಸೈಕಲ್   ಸವಾರ ವರದರಾಜು ತಂದೆ:ರಾಮ   ವಾಸ: ಕಲ್ಕೇರಿ  ಬಸ್ರೂರು ಗ್ರಾಮ, ಇವರು ಯಾವುದೇ  ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದು, ವಾಹನವನ್ನು 21:30 ಗಂಟೆಯ ಸಮಯಕ್ಕೆ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  81/2021 ಕಲಂ: 269 IPC  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ :ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26-04-2021 ರಿಂದ 12-05-2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ: 07/05/2021 ರಂದು ಪಿರ್ಯಾದಿ ಸುದರ್ಶನ್ ಬಿ.ಎನ್, ಪಿಎಸ್ಐ, ಕುಂದಾಪುರ ಸಂಚಾರ ಪೊಲೀಸ್ ಠಾಣೆ. ರವರು ಸಿಬ್ಬಂದಿಯವರೊಂದಿಗೆ  ಕುಂದಾಪುರ ಸಂಚಾರ ಠಾಣಾ ಸರಹದ್ದಿನಲ್ಲಿ  ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ    ಬೆಳಿಗ್ಗೆ ಸುಮಾರು 11:00 ಗಂಟೆಯಿಂದ ಸಂಜೆ  19:30 ಗಂಟೆಯ ನಡುವಿನ ಅವಧಿಯಲ್ಲಿ  ಈ ಕೆಳಕಂಡ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ದ್ವಿಚಕ್ರ ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1) KA 31 K 3209 ನೇ ಮಹೇಶ ಪ್ರಾಯ :37 ವರ್ಷ ತಂದೆ : ಯಮುನಪ್ಪ ವಾಸ:ಕೋಡಿ ರೋಡ್ ಚರ್ಚ ಬಳಿ ಕುಂದಾಪುರ, ಕುಂದಾಫುರ  ತಾಲೂಕು 2) KA 20ES 6470 ಸಂತೋಷ ಕುಮಾರ್ ಪ್ರಾಯ 43 ವರ್ಷ ತಂದೆ:ರಾಮ ಕಾಂಚನ್ ವಾಸ:ಆಶಾಲತಾ ನಿಲಯ ಬಟ್ರಾಡಿ ರೋಡ್  ಕುಂದಾಪುರ, ಕುಂದಾಫುರ  ತಾಲೂಕು . 3) KA 20X 8942 ದೇವೇಂದ್ರ  ಪ್ರಾಯ:38 ವರ್ಷ ತಂದೆ : ದಖದಲಾಲ  ಶರ್ಮ  ವಾಸ : ಖಾರ್ವಿಕೇರಿ   ಕುಂದಾಪುರ, ಕುಂದಾಫುರ  ತಾಲೂಕು 4) KA 20 V 6151 ಗಣೇಶ ಪ್ರಾಯ: 63 ವರ್ಷ ತಂದೆ : ಮಂಜುನಾಥಯ್ಯ   ವಾಸ : ಮೂಡುಕೇರಿ ಬಸ್ರೂರು  ಕುಂದಾಫುರ  ತಾಲೂಕು5) KA 20 EP 0314 ಪ್ರಕಾಶ ನಾಯ್ಕ ಪ್ರಾಯ :46  ವರ್ಷ ತಂದೆ : ನರಸಿಂಹ ನಾಯ್ಕ  ವಾಸ : ಹಳವಳ್ಳಿ  ಕುಂದಾಫುರ  ತಾಲೂಕು 6) KA 19  ED  9278  ರಾಮಚಂದ್ರ ಪ್ರಾಯ : 55  ವರ್ಷ ತಂದೆ : ಮಂಜುನಾಥ ಆಚಾರ್   ವಾಸ : ಸರ್ಜನ್ ಆಸ್ಪತ್ರೆ ಕೋಟೇಶ್ವರ ಗ್ರಾಮ ಕುಂದಾಫುರ  ತಾಲೂಕು  7) KA 20 ED 2573  ಸುಮಂತ  ಪ್ರಾಯ : 21 ವರ್ಷ ತಂದೆ : ಗೋಪಾಲ ಪೂಜಾರಿ  ವಾಸ : ಹಳವಳ್ಳಿ  ಕೋಟೇಶ್ವರ ಗ್ರಾಮ ಕುಂದಾಫುರ  ತಾಲೂಕು8) NEW REGISTRATION DEIO TVS SCOOTY ಹರೀಶ   ಪ್ರಾಯ: 39 ವರ್ಷ ತಂದೆ:ಸುಬ್ಬಯ್ಯ ದೇವಾಡಿಗ  ವಾಸ :ಕೋಟೆಕಟ್ಟೆ, ಕೋಟೇಶ್ವರ ಗ್ರಾಮ ಕುಂದಾಫುರ  ತಾಲೂಕು9) KA 20 W 9507 ಗಣೇಶ  ಪ್ರಾಯ 40 ವರ್ಷ ತಂದೆ : ಬಾಬು ಮೊಗವೀರ ವಾಸ :ಬೀಜಾಡಿ  ಕುಂದಾಫುರ  ತಾಲೂಕು 10) KA 20 ET 1871 ಮುಖೇಶ್  ಪ್ರಾಯ 26   ವರ್ಷ ತಂದೆ :ರಾದೇ ಶ್ಯಾಮ್   ವಾಸ : ಮಯ್ಯ ಕಾಂಟೀನ್ ಹತ್ತಿರ ಕುಂದಾಫುರ ಕುಂದಾಫುರ  ತಾಲೂಕು . 11) KA 20 53 HA 3237 ಮಂಜು ಭಾರ್ಗವ   ಪ್ರಾಯ  27 ವರ್ಷ ತಂದೆ : ಕೃಷ್ಣ ರೆಡ್ಡಿ  ವಾಸ :ಎಲ್ ಐ ಸಿ ರೋಡ್ ಕುಂದಾಪುರ ,   ಕುಂದಾಫುರ  ತಾಲೂಕು, ಸದ್ರಿ  ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನಗಳನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ  ಠಾಣಾ ಅಪರಾಧ ಕ್ರಮಾಂಕ  54/2021 ಕಲಂ: 269 IPC  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇರುತ್ತದೆ, ಪಿರ್ಯಾದಿ ದಾಮೋದರ ಕೆ ಬಿ.  ಪೊಲೀಸ್ ಉಪ ನಿರೀಕ್ಷಕರು (ಅಪರಾಧ) ಕಾರ್ಕಳ ನಗರ ಪೊಲೀಸ್ ಠಾಣೆ ರವರು ದಿನಾಂಕ 07/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕಾರ್ಕಳ ಕಸಬ  ಗ್ರಾಮದ  ಮೂರು ಮಾರ್ಗ ಬಳಿ  ಸಾರ್ವಜನಿಕ ರಸ್ತೆಯಲ್ಲಿ  ಸಂಜೆ 16:00 ಗಂಟೆಗೆ ಅನಗತ್ಯವಾಗಿ ವಾಹನಗಳ ಓಡಾಟದ ಬಗ್ಗೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡುತ್ತಿದ್ದ 1) ಜಯಕರ ಪ್ರಾಯ 60 ವರ್ಷ ತಂದೆ: ಶಿವ ದೇವಾಡಿಗ, 2) ಅವಿನಾಶ ಪ್ರಾಯ 29 ವರ್ಷ ತಂದೆ: ಕಿಟ್ಟ ಹಾಂಡ,3) ಕೆ ಸಂತೋಷ್ ಕಾಮತ್ ತಂದೆ: ಯಶವಂತ್ ಕಾಮತ್ 4) ಆನಂದ ಕುಮಾರ್ ತಂದೆ: ಸೆಲ್ವರಾಜ್, 5) ಹರೀಶ್ ಆಚಾರ್ಯ ತಂದೆ: ಲಕ್ಷ್ಮೀ ವಿಠ್ಠಲ ಆಚಾರ್ಯ,6) ಮಹಮ್ಮದ್ ರಿಯಾಜ್, ತಂದೆ: ಇಸ್ಮಾಯಿಲ್,7) ಮಹಮ್ಮದ್ ಆಸಿಫ್ ತಂದೆ:  ರಶೀದ್‌ಅಬ್ದುಲ್‌ ರವರುಗಳ ವಾಹನವನ್ನು ವಶಕ್ಕೆ ಪಡೆದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 55/2021 ಕಲಂ  269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ

ಇತ್ತೀಚಿನ ನವೀಕರಣ​ : 08-05-2021 11:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080