ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಫಿರ್ಯಾದಿದಾರರಾದ ಪಾರ್ವತಿ ಬಿಲ್ಲವ (35) ಗಂಡ: ನಾಗೇಶ ವಾಸ 2/132 ಮಾರಿಕಟ್ಟೆ ಪ್ರದೇಶ ಕೊಲ್ಲೂರು ತಾಲೂಕು ಬ್ಯೆಂದೂರು ಇವರು ದಿನಾಂಕ 06/04/20203 ರಂದು ತನ್ನ ತಾಯಿಯ ಮನೆಯಾದ ಶಿರೂರಿಗೆ ಹೋಗುವರೇ ಮಗಳಾದ ಪಂಚಮಿಯೊಂದಿಗೆ ಕೊಲ್ಲೂರಿನಿಂದ ಬಸ್ಸಿನಲ್ಲ ಹೊರಡು ಬೈಂದೂರಿಗೆ ಬಂದು  ಬೈಂದೂರಿನ ಹೊಸ ಬಸ್ಸ್ ನಿಲ್ದಾಣದ ಬಳಿ ಸರ್ಕಲ್ ಹತ್ತಿರ  ಸಂಜೆ ಸುಮಾರು 06:30 ಗಂಟೆಯ ಸಮಯಕ್ಕೆ ರಸ್ತೆ ದಾಟಲು ರಾಷ್ರೀಯ ಹದ್ದಾರಿ 66 ಪೂರ್ವ ಬದಿಯ ಅಂಚಿನಲ್ಲಿ ರಸ್ತೆ ದಾಟಲು ನಿಂತುಕೊಂಡಿರುವಾಗ ಶಿರೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುವ ಹೋಗುವ ಒಂದು  ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ  ಚಲಾಯಿಸಿಕೊಂಡು ಬಂದು ಪಾರ್ವತಿ ಬಿಲ್ಲವ ಇವರು ಹಾಗೂ  ಅವರ  ಮಗಳಿಗೆ ಡಿಕ್ಕಿ ಹೊಡೆಸಿಯಿಸಿದ್ದು ಪಾರ್ವತಿ ಬಿಲ್ಲವ ರವರು  ಹಾಗೂ ಅವರು ಮಗಳು ರಸ್ತೆಗೆ ಬಿದ್ದಿದ್ದು ಈ ಸಮಯ ಅಲ್ಲಿದ್ದವರು ಪಾರ್ವತಿ ಬಿಲ್ಲವ ರವರಿನ್ನು ಹಾಗೂ ಅವರ ಮಗಳನ್ನು ಎತ್ತಿ ಉಪಚರಿಸಿದ್ದು ಪಾರ್ವತಿ ಬಿಲ್ಲವ ರವರಿಗೆ ಡಿಕ್ಕಿಹೊಡದ ಲಾರಿಯು ಅಲ್ಲೆ ನಿಂತಿದ್ದು ನಂಬ್ರ  KA-63–8445 ಆಗಿರುತ್ತದೆ. ಲಾರಿಯ ಚಾಲಕನ ಹೆಸರು ಕಲ್ಲಪ್ಪ ಎಂಬುವುದಾಗಿ ತಿಳಿದು ಬಂದಿರುತ್ತದೆ. ನಂತರ ಪಾರ್ವತಿ ಬಿಲ್ಲವ ರವರನ್ನು ಹಾಗೂ ಮಗಳನ್ನು ಒಂದು ಅಂಬುಲೆನ್ಸ್ ನಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಪರೀಕ್ಷಸಿದ  ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಯ ವೈದ್ಯಾಧಿಕಾರಿ ಯವರು ಹೆಚ್ಚಿನ ಚಿಕಿತ್ಪೆಯ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದ ಪಾರ್ವತಿ ಬಿಲ್ಲವ ರವರ ಸಂಬಂದಿ ರವಿರಾಜರವರು ಕುಂದಾಫುರ ಚಿನ್ಮಯಿ ಆಸ್ಪತ್ರೆಗೆ ದಾಖಲಿದ್ದು, ಅಲ್ಲಿಯ ವ್ಯದ್ಯಾಧಿಕಾರಿಯವರು  ಪಾರ್ವತಿ ಬಿಲ್ಲವ ರವರನ್ನು ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ.  ಪಾರ್ವತಿ ಬಿಲ್ಲವ ರೌರಿಗೆ ಈ ಅಘಾತತದಿಂದ ಬಲ ಭುಜಕ್ಕೆ ಒಳಜಖಂ ಹಾಗೂ ಕಾಲಿಗೆ ಮೂಳೆ ಮುರಿತ ಗಾಯವಾಗಿದ್ದು ಮಗಳಿಗೆ ತರಚಿದ ಗಾಯ ಉಂಟಾಗಿರುತ್ತದೆ, ಈ ಅಪಘಾತಕ್ಕೆ  KA-63-3445 ನೇದರ ಲಾರಿಯ  ಚಾಲಕ ಕಲ್ಲಪ್ಪ  ರವರ ಅತೀ ವೇಗ ಅಜಾಗರೂಕತೆಯ ಚಾಲನೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 53/2023 ಕಲಂ:  279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 06/04/2023 ರಂದು ಪಿರ್ಯಾದಿದಾರರಾದ ಪ್ರವೀಣ್‌ (33), ತಂದೆ: ಶೇಖರ ಪೂಜಾರಿ, ವಾಸ: ನಿಸರ್ಗ ನಿಲಯ, ಮನೆ ನಂ 2-115, ಹೇರೂರು ಶಾಲೆಯ ಹತ್ತಿರ, 52 ನೇ ಹೇರೂರು ಗ್ರಾಮ, ಬ್ರಹ್ಮಾವರ ರವರು ಅವರ KA-20 EW-9461 ನೇ ಹೊಂಡ ಗ್ರಾಜೀಯ ಸ್ಕೂಟರ್‌ ನಲ್ಲಿ ಮಣಿಪಾಲ ದಿಂದ ಉಪ್ಪೂರು ಮಾರ್ಗವಾಗಿ ಹೇರೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಉಪ್ಪೂರು ಗ್ರಾಮದ ಕೊಳಲಗಿರಿಯಿಂದ ಸ್ವಲ್ಪ ಮುಂದೆ ಉಗ್ಗೇಲ್‌ ಬೆಟ್ಟು ಚಕ್ಕುಲಿಕಟ್ಟೆ ಎಂಬಲ್ಲಿ ಸ್ವಲ್ಪ ತಿರುವು ರಸ್ತೆಯಲ್ಲಿ ತಲುಪುವಾಗ ರಸ್ತೆಯ ಎಡ ಬದಿ ಒಳ ಕಾಂಕ್ರೀಟ್‌ ರಸ್ತೆಯಿಂದ ಆರೋಪಿ ಅರುಣ ಎಂಬವರು ಅವರ KA-19 MB-4855 ನೇ ವೋಕ್ಸ್‌ ವ್ಯಾಗನ್‌ ವೆಂಟೋ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಏಕಾ ಏಕಿ ಮುಖ್ಯ ರಸ್ತೆಗೆ ಚಲಾಯಿಸಿದಾಗ, ಪ್ರವೀಣ್‌ ರವರು ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ಎಡ ಕಾಲನ್ನು ಸ್ವಲ್ಪ ಹೊರಕ್ಕೆ ಚಾಚಿದಾಗ ಕಾರಿನ ಮುಂಭಾಗ ಪ್ರವೀಣ್‌ ರವರ ಕಾಲಿಗೆ ತಾಗಿ ಡಿಕ್ಕಿಯಾಗಿ ಅವರು ಸ್ವಲ್ಪ ಮುಂದೆ  ಸ್ಕೂಟರ್‌ ಸಮೇತ ರಸ್ತೆ ಮೇಲೆ ಬಿದ್ದು, ಪರಿಣಾಮ  ಅವರ ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ತೀವ್ರ ಗಾಯವಾಗಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 72/2023 ಕಲಂ:  279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಗಂಗೊಳ್ಳಿ: ದಿನಾಂಕ 07/04/2023 ರಂದು ಗಂಗೊಳ್ಳಿ ಠಾಣಾ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ರೌಂಡ್ಸ್‌ನಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ ಬಳಿ ಒಬ್ಬ ಹುಡುಗನು ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ಬಾತ್ಮೀದಾರರಿಂದ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 18:30 ಗಂಟೆಗೆ ಹೋಗಿ ಪರಿಶೀಲಿಸಲಾಗಿ ಓರ್ವ ವ್ಯಕ್ತಿಯು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಅಬ್ದುಲ್ ಮುನಾಫ್,  (20), ತಂದೆ: ಅಬ್ದುಲ್ ರೆಹಮಾನ್, ವಾಸ: ನಿರೋಣಿ, ಮರವಂತೆ ಗ್ರಾಮ, ಬೈಂದೂರು ತಾಲೂಕು ಎಂಬುವುದಾಗಿ ತಿಳಿಸಿದ್ದು ಆತನು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಆತನನ್ನು ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2023 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಬ್ರಹ್ಮಾವರ:  ಪಿರ್ಯಾದಿದಾರರಾದ ನಮಿತ್ ಕುಮಾರ್ (30) ತಂದೆ: ಕೆ.ಪ್ರಕಾಶ್ ಪೂಜಾರಿ, ವಾಸ:ತೊಪಕಲ್ ತಿರುವೈ ಗ್ರಾಮ, ವಾಮಂಜೂರು , ಮಂಗಳೂರು, ದಕ್ಷಿಣ ಕನ್ನಡ ಇವರು ನಡೆಸಿಕೊಂಡಿರುವ  ಎ.ವಿ. ಬಾಳಿಗಾ ಕ್ಯಾಂಟೀನ್‌ನಲ್ಲಿ ಮಂಗಳೂರು ಕಣ್ಣೂರು ಪಡೀಲ್‌ ನಿವಾಸಿಯಾದ ಚಿತ್ತರಂಜನ್‌ (50) ಎಂಬವರು ಸುಮಾರು ಒಂದುವರೆ ವರ್ಷಗಳಿಂದ ಕೆಲಸಮಾಡಿಕೊಂಡಿದ್ದರು. ಚಿತ್ತರಂಜನ್‌ರವರಿಗೆ ಕಳೆದ 6 ತಿಂಗಳಿನಿಂದ  ಆರೋಗ್ಯ ಸಮಸ್ಯೆ ಇದ್ದಿದ್ದು, ಅಲ್ಲದೇ ಸ್ವಲ್ಪ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು. ಚಿತ್ತರಂಜನ್‌ರವರು ದಿನಾಂಕ 01/04/2023 ರಂದು  ಮಧ್ಯಾಹ್ನ 3:00 ಗಂಟೆಗೆ ಹೋಟೆಲ್‌ನಿಂದ ಹೊರಗೆ ಹೋದವರು ಇದುವರೆಗೂ ವಾಪಾಸು ಬಾರದೇ ಇದ್ದು, ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾರೆ. ಎತ್ತರ: 5 ಅಡಿ ಕೋಲುಮುಖ, ಗೋಧಿಮೈಬಣ್ಣ, ಬಿಳಿ ಮಿಶ್ರಿತ ಕಪ್ಪು ತಲಡಕೂದಲು, ಕಪ್ಪು ಮೀಸೆ ಇರುತ್ತದೆ. ಕಂದು ಬಣ್ಣದ ¾ ಚಡ್ಡಿ, ಬ್ಲು ಟೈಟ್ಸ್‌, ನೀಲಿ ಚೌಕುಳಿಯ ಅಂಗಿ ಧಿರಿಸಿರುತ್ತಾರೆ. ತುಳು,ಕನ್ನಡ,ಇಂಗ್ಲೀಷ್‌,ಹಿಂದಿ, ಮಲಯಾಳಂ ಭಾಷೆ ಬಲ್ಲವರಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 73/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ದಿನಾಂಕ 07/04/2023 ರಂದು ಬೆಳಿಗ್ಗೆ 07:30  ಗಂಟೆಯಿಂದ 08:30 ಗಂಟೆಯ ನಡುವಣ ಸಮಯ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಇಂದಿರಾ ನಗರ ಎಂಬಲ್ಲಿರುವ  ಚಿರಾಯು ಎಂಬ ಮನೆಗೆ  ಯಾರೋ ಕಳ್ಳರು ಒಳಪ್ರವೇಶಿಸಿ  ಪಿರ್ಯಾದಿದಾರರಾದ  (62) ಗಂಡ : ದಿ. ಸುಧಾಕರ ಕಿಣಿ ವಾಸ: ಪ್ರೆಟ್ಟಿ ಅರ್ಚನಾ 305 ವಿ ಪಿ ನಗರ 1 ನೇ ಮುಖ್ಯ ರಸ್ತೆ 5 ನೇ ಅಡ್ಡ ರಸ್ತೆ ಶಿವಳ್ಳಿ ಗ್ರಾಮ ಉಡುಪಿ ಇವರ ಮನೆ ದೇವರು ಸತ್ಯ ದೇವತೆ ದೇವಿಯ ಪೀಠ ಇರುವ ಕೊಠಡಿಗೆ ಓಳ ಪ್ರವೇಶಿಸಿ ಗಾದ್ರೇಜ್‌ನಲ್ಲಿದ್ದ 44 ಗ್ರಾಂ ತೂಕದ  ಕೈಯ ಡಿಸೈನ್‌ ಇರುವ ಚಿನ್ನದ ಕಡಗ -1, 16 ಗ್ರಾಂ ತೂಕದ ಬಲ ಕೈಗೆ ಹಾಕುವ ರುದ್ರಾಕ್ಷಿ ಮಣಿ ಪೋಣಿಸಿದ ಚಿನ್ನದ ಸರ -1, ಮತ್ತು 16  ಗ್ರಾಂ ತೂಕದ  ಕುತ್ತಿಗೆಗೆ ಹಾಕುವ ರುದ್ರಾಕ್ಷಿ ಮಣಿ  ಪೋಣಿಸಿದ ಚಿನ್ನದ ಸರ -1 ಇವುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 3,30,000/- ಆಗಬಹುದುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 91/2023, ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾಧ ವಿನೋದಿನಿ (36) ಗಂಡ: ಮಂಜುನಾಥ ನಾಯ್ಕ್ ವಾಸ: ಮುನಿಯಲ್ ಬೈಲ್ಲು ಪಾದೆಮನೆ, ವರಂಗ ಗ್ರಾಮ, ಹೆಬ್ರಿ ತಾಲೂಕು ಇವರ ಗಂಡ ಮಂಜುನಾಥ ನಾಯ್ಕ (37) ರವರು ಕೃಷಿಕರಾಗಿದ್ದು ದಿನಾಂಕ 07/04/2023 ರಂದು ಮಂಜುನಾಥ ನಾಯ್ಕ್  ಇವರು ಕೃಷಿಗೆ ಬೇಕಾದ ಸೊಪ್ಪು ತರಲು ಮಧ್ಯಾಹ್ನ ಸಮಯ ಸುಮಾರು 01:30 ಗಂಟೆಗೆ ವರಂಗ ಗ್ರಾಮದ ಮಾತಿಬೆಟ್ಟು ಎಂಬಲ್ಲಿ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿರುವ ಮಾವಿನ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಅವರ ಕಾಲು ಅಕಸ್ಮಿಕವಾಗಿ ಜಾರಿದ ಪರಿಣಾಮ ಅವರು ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಅವರ ಎಡಸೊಂಟದ ಬಳಿ ತೀವ್ರ ಸ್ವರೂಪದ ಮೂಳೆ ಮುರಿತವಾಗಿ ಎದೆಗೆ ಗುದ್ದಿದ ನೋವಾಗಿ ಅವರು ಮಾತನಾಡುತ್ತಿರದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಮಧ್ಯಾಹ್ನ 3:00 ಗಂಟೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಅವರನ್ನು ಪರೀಕ್ಷಿಸಿ ಮಂಜುನಾಥ ನಾಯ್ಕ ರವರು  ದಾರಿ ಮದ್ಯೆ ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 13/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ : ಪಿರ್ಯಾದಿದಾರರಾಧ ಜ್ಯೋತಿಪ್ರಭಾ (52 ವರ್ಷ), ಗಂಡ: ದಿ. ಜಯಪ್ರಕಾಶ್‌, ವಾಸ: ಮಾತೃಛಾಯಾ ನಿಲಯ, ಹೆಗಡೆ ಪೋಸ್ಟ್‌, ಕುಮಟಾ  ತಾಲೂಕು , ಉತ್ತರಕನ್ನಡ ಇವರ ದೊಡ್ಡ ಅಕ್ಕಳಾದ  ಆಶಾಲತಾ (62) ಎಂಬವರು ತನ್ನ ದತ್ತು ಪುತ್ರಿಯಾದ ಶಮೀಕ್ಷಾಳೊಂದಿಗೆ ವಾಸವಾಗಿದ್ದು, ಅವರ ಗಂಡ ಮೃತಪಟ್ಟಿರುತ್ತಾರೆ. ಶಮೀಕ್ಷಾಳಿಗೂ ಹಾಗೂ ಆಶಾಲತಾ ರವರಿಗೂ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಯಾಗಿರುತ್ತದೆ. ಆಶಾಲತಾರವರು ಯಾವುದೋ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/04/2023 ರಂದು ಬೆಳ್ಳಿಗ್ಗೆ 11.24 ಗಂಟೆಯಿಂದ 11.45 ಗಂಟೆಯ ಮಧ್ಯಾವದಿಯಲ್ಲಿ ತನ್ನ ಮಗಳಿಗೆ ತಾನು ಸಾಯುತ್ತೇನೆ ಎಂದು ವಾಟ್ಸಪ್‌ ಮೂಲಕ ಸಂದೇಶ ಕಳುಹಿಸಿ ನಂತರ ವಾಸದ ಮನೆಯ ಹಾಲ್‌ನ ಫ್ಯಾನಿನ ಹುಕ್ಕಿಗೆ ನೈಲಾನ್‌ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆದರೂ ಅವರ ಮರಣದಲ್ಲಿ ಸಂಶಯವಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 26/2023 ಕಲಂ 174 (3) & (iv) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಿನೇಶ್ ಶೆಟ್ಟಿ (47) ತಂದೆ: ಸುಂದರ ಶೆಟ್ಟಿ ವಾಸ: ಸಾನಿಧ್ಯ ಜಾರ್ಕಳ ಕುಕ್ಕುಂದೂರು ಅಂಚೆ  ಕಾರ್ಕಳ ರವರು ಕಾರ್ಕಳ ತಾಲೂಕು, ಕಲ್ಯಾ ಗ್ರಾಮದ ಸರ್ವೆ ನಂಬ್ರ  176/4 ರಲ್ಲಿ  ಪಟ್ಟಾಸ್ಥಳ ಹೊಂದಿದ್ದು, ದಿನಾಂಕ 06/04/2023 ರಂದು ಸಂಜೆ 6:30 ಗಂಟೆಗೆ ಸದ್ರಿ ಜಾಗದಲ್ಲಿ ಹೊಸ ಕ್ರಶರ್ ಪ್ರಾರಂಬಿಸಲು ಸ್ಥಳ ಸಮತಟ್ಟು ಮಾಡುವ ಉದ್ದೇಶದಿಂದ ತನ್ನ ಮಾಲಿಕತ್ವದ ಟಾ ಟಾ ಹಿಟಾಚಿ ಯಂತ್ರವನ್ನು ನಿಲ್ಲಿಸಿದ್ದು, ದಿನಾಂಕ 07/04/2023 ರಂದು ಬೆಳಿಗ್ಗೆ 09:00 ಗಂಟೆಗೆ ಬಂದು ನೋಡಿದಾಗ ಯಾರೋ ಕಿಡಿಗೇಡಿಗಳು ಸದ್ರಿ ಹಿಟಾಚಿ ಯಂತ್ರಕ್ಕೆ ಬೆಂಕಿ ಕೊಟ್ಟಿದ್ದು, ಯಂತ್ರವು ಸುಟ್ಟು ಕರಕಲಾಗಿದ್ದು,  ಸುಮಾರು 15 ಲಕ್ಷ ರೂಪಾಯಿ ನಷ್ಟ ಉಂಟಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 49/2023 ಕಲಂ 435 ಐಪಿಸಿ & 2(ಎ) Prevention Of Destruction And loss Of Property ACT -1981 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 07/04/2023 ರಂದು 15:00 ಗಂಟೆಗೆ ನಿರಂಜನ ಗೌಡ. ಎಸ್ ಪೊಲೀಸ್  ಉಪ ನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ರವರು ಕರ್ತವ್ಯದಲ್ಲಿರುವಾಗ ಪೊಲೀಸ್ ವೃತ್ತ ನಿರೀಕ್ಷಕರಾದ ಸಂತೋಷ್ ಎ. ಕಾಯ್ಕಿಣಿ ರವರು ದೂರವಾಣಿ ಕರೆ ಮಾಡಿ ಪಡುವರಿ ಗ್ರಾಮದ ಒತ್ತಿನಾಣೆ ಹೇನುಬೇರು ಕಡೆಗೆ ಹೋಗುವ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಮೋಟಾರು ಸೈಕಲ್ ನಲ್ಲಿ ಗಾಂಜಾ ಮಾರಾಟ  ಮಾಡುತ್ತಿದ್ದಾನೆ ಎನ್ನುವ  ಬಗ್ಗೆ ಮಾಹಿತಿ ನೀಡಿದ್ದು, ಖಚಿತ ಮಾಹಿತಿಯಂತೆ, ಬೈಂದೂರು ತಾಲೂಕು ದಂಡಾಧಿಕಾರಿಯವರಿಗೆ ಫೋನ್ ಮಾಡಿ ಒಂದು ಗಾಂಜಾ ಪ್ರಕರಣದಲ್ಲಿ ಶೋಧನೆಯ ಬಗ್ಗೆ ತನಿಖೆಗೆ ಸಹಕರಿಸುವಂತೆ ವಿನಂತಿಸಿಕೊಂಡು , ಪಂಚಾಯತುದಾರರನ್ನು ಬರಮಾಡಿಕೊಂಡು  ಇಲಾಖಾ ಜೀಪು ನಂಬ್ರ KA-20-G-338 ನೇದರಲ್ಲಿ ಪಂಚಾಯತುದಾರರನ್ನು ಜೊತೆಯಲ್ಲಿ ಕರೆದುಕೊಂಡು ಹಾಗೂ ತಾಲೂಕು ದಂಡಾಧಿಕಾರಿಯವರು  ಅವರ ವಾಹನದಲ್ಲಿ ಮತ್ತು  ಸಿಬ್ಬಂದಿಗಳೊಂದಿಗೆ ಬೈಂದೂರು ತಾಲೂಕು ಪಡುವರಿ ಗ್ರಾಮದ ಒತ್ತಿನೆಣೆ ಎಂಬಲ್ಲಿ ರಾ.ಹೆ  66 ರಿಂದ  ಪೂರ್ವಕ್ಕೆ   ಹೇನ್ ಬೇರು ರಸ್ತೆಯ 100 ಮೀ ಮುಂದೆ ಹೋದಾಗ  ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದ ರೀತಿಯಲ್ಲಿ ಮೋಟಾರು ಸೈಕಲ್ ನಿಲ್ಲಿಸಿಕೊಂಡು ನಿಂತುಕೊಂಡಿದ್ದು, ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದು, ಆತನು ಮಾಹಿತಿ ಪ್ರಕಾರ ಗಾಂಜಾ ಮಾರಾಟ ಮಾಡುವ ವ್ಯಕ್ತಿ ಎಂಬುವುದನ್ನು ಖಚಿತಪಡಿಸಿಕೊಂಡು 16:00 ಗಂಟೆಗೆ ದಾಳಿ ಆತನ ಹೆಸರು ವಿಳಾಸ  ವಿಚಾರಿಸಿದ್ದು ಆಶಿಕ್ ಖಾರ್ವಿ (20) ತಂದೆ: ಚಂದ್ರ ಖಾರ್ವಿ ಎಂದು ತಿಳಿಸಿದ್ದು ಆತನಲ್ಲಿ ವ್ಯಕ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ವಿಚಾರಿಸಿದಲ್ಲಿ ಆತನು ತಡವರಿಸುತ್ತಾ ಮಾತನಾಡಿದ್ದು, ಆತನ ನಡವಳಿಕೆಯಿಂದ ಆತನ ವಶದಲ್ಲಿ ಗಾಂಜಾ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾನ್ಯ ತಾಲೂಕು ದಂಡಾಧಿಕಾರಿಯವರ ಸಮಕ್ಷಮದಲ್ಲಿ ಆತನ ಅಂಗ ಜಪ್ತಿ ಮಾಡಿದಾಗ ಆತನ ಪ್ಯಾಂಟ್ ಕಿಸೆಯಲ್ಲಿ ಇದ್ದ ಒಂದು ಪ್ಲಾಸ್ಟಿಕ್ ಜಿಪ್ ಕವರ್ ನಲ್ಲಿ ಇರುವ ಒಣಗಿದ ಗಾಂಜಾ ಇರುವ ಪ್ಯಾಕೇಟ್ ನ್ನು ತೆಗೆದು ತೋರಿಸಿರುತ್ತಾನೆ. ಅದರಲ್ಲಿ ಒಣಗಿದ ಎಲೆ,ಕಾಂಡ, ಮೊಗ್ಗು ,ಹೂ ಗಳು  ಮತ್ತು ಬೀಜ  ಇದ್ದಿದ್ದು ಅದರ ವಾಸನೆಯಿಂದ ಗಾಂಜಾ ಎಂಬುದಾಗಿ ದೃಢಪಟ್ಟಿದ್ದು, ಅಲ್ಲದೇ ಆತನಲ್ಲಿ ಕವರಿನಲ್ಲಿರುವ ಒಣಗಿದ ಎಲೆಗಳ ಬಗ್ಗೆ ವಿಚಾರಿಸಿದಾಗ ಆತನು ಇದು ಗಾಂಜಾವಾಗಿದ್ದು, ಗ್ರಾಹಕರಿಗೆ ಮಾರಾಟ ಮಾಡಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿರುತ್ತಾನೆ. ನಂತರ ಗಾಂಜಾವನ್ನು ಮುಂದಿನ ತನಿಖೆಯ ಬಗ್ಗೆ ತೂಕ ಮಾಡಿದ್ದು 44.ಗ್ರಾಂ ಇರುತ್ತದೆ. ಅದರ ಅಂದಾಜು ಮೌಲ್ಯ 1,200/- ರೂ. 44.ಗ್ರಾಂ ಮತ್ತು ಟಿವಿಎಸ್ ಕಂಪನಿಯ KA-20-EW-3212  NTORQ 125 RACE EDITION ಸ್ಕೂಟಿಯನ್ನು ಮುಂದಿನ ನಡವಳಿಕೆ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಯಿತು. ನಂತರ ಸ್ಥಳದಲ್ಲಿ ಮಹಜರು ಮುಖೇನಾ 16-15 ಗಂಟೆಯಿಂದ 17:00 ಗಂಟೆಯ ತನಕ ಸ್ವತ್ತುಗಳನ್ನು  ಸ್ವಾಧೀನ ಪಡಿಸಿಕೊಂಡು, ಆಪಾದಿತನನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 54/2023 ಕಲಂ: 8 (ಸಿ), 20 (ಬಿ) (ii) (ಎ) ಎನ್.ಡಿ.ಪಿ.ಎಸ್. ಕಾಯ್ದೆ-1985ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-04-2023 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080