ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಗೌತಮ್ ದೇವಾಡಿಗ (28), ತಂದೆ:ವಾಸುದೇವ ದೇವಾಡಿಗ, ವಾಸ: ಸಾಸ್ತಾನ ಗೋಳಿ ಬೆಟ್ದಟು ಐರೋಡಿ ಗ್ರಾಮ ಇವರ ತಮ್ಮ ಸಚಿನ್  ದಿನಾಂಕ 05/04/2022 ರಂದು ರಾತ್ರಿ ಆತನ ಸ್ನೇಹಿತನ KA-20-EB-7081 ನೇ TVS ವೆಗೋ ಸ್ಕೂಟಿಯಲ್ಲಿ ಆತನ ಮನೆಯಲ್ಲಿನ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದು ಕಾರ್ಯಕ್ರಮ ಮುಗಿಸಿ ದಿನಾಂಕ 06/04/2022 ರಂದು ಮುಂಜಾನೆ ಮನೆಗೆಂದು ವಾಪಾಸ್ಸು ಬರುವಾಗ ರಾಷ್ಟ್ರೀಯ ಹೆದ್ದಾರಿ 66 ಉಡುಪಿ ಕುಂದಾಪುರ ಮುಖ್ಯ ರಸ್ತೆಯಲ್ಲಿ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ  ಮಾಬುಕಳ ಬ್ರಿಡ್ಜ ಬಳಿ ಬರುತ್ತಿರುವಾಗ 02:45 ಗಂಟೆಯ ಸಮಯಕ್ಕೆ ಆತನ ಹಿಂದಿನಿಂದ ಯಾವುದೋ ವಾಹನ ಏಕಾಏಕಿ ಸ್ಕೂಟಿಯ ಬಲ ಪಾರ್ಶ್ಚಕ್ಕೆ ಉಜ್ಜಿಕೊಂಡು ರಭಸವಾಗಿ ಹೋಗಿದ್ದರಿಂದ ತಾನು ಚಲಾಯಿಸುತ್ತಿದ್ದ ಸ್ಕೂಟಿಯನ್ನು ನಿಯಂತ್ರಸಲಾಗದೇ ಸ್ಕೂಟಿ ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ ಆತನ ತಲೆಯ ಹಿಂಬದಿ ಣೆಗೆ ಬಲ ಕಾಲಿನ ತೊಡೆಗೆ ತೀವೃ ಸ್ವರೂಪದ  ರಸ್ತಗಾಯವಾಗಿರುತ್ತದೆ ಅಪಘಾತ ತಿಳಿದ ಸಾಸ್ತಾನ ಟೋಲ್ ಸಿಬ್ಬಂದಿಯವರು ಆಸ್ಪತ್ರೆಗೆ ಚಿಕತ್ಸೆಯ ಬಗ್ಗೆ ದಾಖಲಿಸಿರುತ್ತಾರೆ. ಅಪಘಾತ ಪಡಿಸಿದ ವಾಹನ ಚಾಲಕನು  ಅಪಘಾತದ ಮಾಹಿತಿಯನ್ನು  ಠಾಣೆಗೆ ತಿಳಿಸದೇ  ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸದೇ  ವಾಹನದೊಂದಿಗೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2022  ಕಲಂ: 279, 338 ಐಪಿಸಿ ಮತ್ತು  134 (A) (B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಕ್ರಿಸ್ ಚೆಟ್ಟಿಸೆರಿ, ತಂದೆ: ಅಬ್ರಾಹನ್ ಚೆಟ್ಟಿಸೆರಿ, ವಾಸ: ಚೆಟ್ಟಿಸೆರಿ ಹೌಸ್ ಕೊಟ್ಟಾಯಂ ಕೇರಳ ಇವರು ಕೇರಳದ ಮಂಗಳಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಫ್ರೊಫೆಸರ್ ಆಗಿ ಕೆಲಸ ಮಾಡಿಕೊಂಡಿದ್ದು ಕಾಲೇಜಿನ ವಾರ್ಷಿಕ ಪ್ರವಾಸದ ಬಗ್ಗೆ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಬ್ರಾಂಚಿನ ಒಟ್ಟು 77 ವಿದ್ಯಾರ್ಥಿಗಳು  ಹಾಗೂ 4 ಉಪನ್ಯಾಸಕರು ಪ್ರವಾಸದ ಬಗ್ಗೆ ದಿನಾಂಕ 06/04/2022 ರಂದು ಸಂಜೆ 4:30 ಗಂಟೆಗೆ ಕೇರಳದಿಂದ ಹೊರಟು ದಿನಾಂಕ 07/04/2022 ರಂದು ಮಧ್ಯಾಹ್ನ 12:00 ಗಂಟೆಗೆ ಮಲ್ಪೆ ಬೀಚ್‌ ಗೆ ಬಂದು ಮಲ್ಪೆ ಬೀಚ್‌ನಿಂದ ಬೋಟಿನಲ್ಲಿ ಎಲ್ಲರೂ ಸೈಂಟ್‌ ಮೇರಿಸ್ ಐಲ್ಯಾಂಡ್‌ಗೆ ಹೋಗಿದ್ದು ವಿದ್ಯಾರ್ಥಿಗಳೆಲ್ಲರೂ ಜಾಗರೂಕರಾಗಿರಬೇಕೆಂದು ಪ್ರೊಫೆಸರ್ ರವರು ತಿಳಿಸಿರುತ್ತಾರೆ,  13:15 ಗಂಟೆಗೆ ಐಲ್ಯಾಂಡ್‌ನ ಒಂದು ಕಲ್ಲು ಬಂಡೆಯ ಮೇಲೆ ನಿಂತಿದ್ದ ವಿದ್ಯಾರ್ಥಿಗಳಾದ ಅಮಲ್‌ ಸಿ ಅನಿಲ್(22), ಅಲನ್ ರೆಜಿ (21), ಅಂಟೋನಿ ಶಿನಾಯಿ (21) ರವರಿಗೆ ಅರಬ್ಬಿ ಸಮುದ್ರದ ದೊಡ್ಡ ಅಲೆಯೊಂದು ಬಂಡೆಗೆ ಅಪ್ಪಳಿಸಿದ ಪರಿಣಾಮ ಬಂಡೆಯ ಮೇಲೆ ನಿಂತಿದ್ದ ಮೂರು ವಿದ್ಯಾರ್ಥಿಗಳು ಸಮುದ್ರದ ನೀರಿಗೆ ಆಯತಪ್ಪಿ ಬಿದ್ದಿರುತ್ತಾರೆ, ಬಿದ್ದವರನ್ನು ನೋಡಿದ ಇತರೆ ವಿದ್ಯಾರ್ಥಿಗಳು ಕೂಗಿದ್ದು ತಕ್ಷಣ ಎಲ್ಲರೂ ಅವರನ್ನು ರಕ್ಷಿಸಲು ಮುಂದಾದಾಗ ಅಂಟೋನಿ ಶಿನಾಯಿ  ರವರು ಸಮುದ್ರದ ನೀರಿನಲ್ಲಿ ಸಿಗದೇ ಇದ್ದು ಅಮಲ್‌ ಸಿ ಅನಿಲ್(22), ಅಲನ್ ರೆಜಿ (21) ರವರನ್ನು ಸಮುದ್ರದಿಂದ ಮೇಲೆ ತಂದು ನೋಡಲಾಗಿ ಅವರು ತೀವ್ರ ಅಸ್ವಸ್ಥ್ಯಗೊಂಡಿದ್ದು ಕೂಡಲೇ ಒಂದು ಬೋಟಿನಲ್ಲಿ ಮಲ್ಪೆ ಬೀಚ್‌ ಗೆ ತಂದು ಅಲ್ಲಿಂದ ಅಂಬ್ಯುಲೆನ್ಸ್ ನಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಅಮಲ್‌ ಸಿ ಅನಿಲ್, ಅಲನ್ ರೆಜಿ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ನಂತರ ವಾಪಾಸು ಮಲ್ಪೆ ಐಲ್ಯಾಂಡ್‌ ಗೆ ಸಿಎಸ್‌ಪಿ ಪೊಲೀಸರು ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ರವರ ಸಹಾಯದಿಂದ ಹುಡುಕಾಡುತ್ತಿರುವಾಗ ಸಂಜೆ 17:30 ಗಂಟೆಗೆ ಅಂಟೋನಿ ಶಿನಾಯಿ ರವರ ಮೃತ ದೇಹ ದೊರಕಿರುತ್ತದೆ. ಈ ಬಗ್ಗೆ  ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2022  ಕಲಂ: 174 ಸಿ.ಆರ್.ಪಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಗುಲಾಬಿ (51), ಗಂಡ: ಮರಿಯ, ವಾಸ: ಕಾಸಾಡಿ ಮನೆ ಮಣೂರು ಪಡುಕೆರೆ  ಬ್ರಹ್ಮಾವರ ತಾಲೂಕು ಇವರ ಗಂಡ  ಮರಿಯ ಪೂಜಾರಿ (65) ರವರು ಸುಮಾರು ವರ್ಷ ಗಳಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದು ಅಲ್ಲದೇ ಎಡ ಕಾಲು ಕೂಡ ಊನವಾಗಿದ್ದು ನಡೆಯಲು ಕಷ್ಟ ಪಡುತ್ತಿದ್ದರು .ಇತ್ತೀಚೆಗೆ ಅವರಿಗೆ ಹರ್ನಿಯಾ ಖಾಯಿಲೆ ಜೋರಾಗಿ ನೋವಿನಿಂದ ಬಳಲುತ್ತಿದ್ದರು ಈ ಬಗ್ಗೆ ಶಸ್ತ್ರ ಚಿಕತ್ಸೆ ಕೂಡ ಮಾಡಿಸಿದ್ದು  ಇದೇ ವಿಚಾರದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/04/2022 ರಂದು ಸಂಜೆ 4:00 ಗಂಟೆಗೆ ಗುಂಡ್ಮಿ ಗ್ರಾಮದ ಹಳೆ ಕೋಟೆ ಮೈದಾನದ ಶ್ರೀ ಕಾಶೇಶ್ವರ ಮಯ್ಯಾರವರ ಹಾಡಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2022 ಕಲಂ: 174 ಸಿ.ಆರ್.ಪಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಮೇರಿ ಗ್ಲಾಡೀಸ್‌ ಕ್ವಾಡ್ರಸ್ (55), ಗಂಡ:ಸ್ಟ್ಯಾನಿ ಕ್ವಾಡಸ್‌, ವಾಸ:ಕ್ವಾಡಸ್‌  ವಿಲ್ಲಾ ಅಬಿ  ಕನರಾಡಿ ರೋಡ್‌  ಮಣಿಪುರ  ಗ್ರಾಮ, ಉಡುಪಿ ತಾಲೂಕು ಮತ್ತು  ಜಿಲ್ಲೆ ಇವರು ತನ್ನ ಪತಿ ಹಾಗೂ ಮಕ್ಕಳೊಂದಿಗೆ ಪತಿಯ ತಂದೆಯವರು ನೀಡಿದ ಜಾಗದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಾಗಿದ್ದು,  ಮನೆಗೆ ಹೋಗಲು ಪಿಯಾದಿದಾರರ ಮಾವನವರು ಬದುಕಿರುವಾಗಲೇ 12 ಅಡಿ  ಅಗಲದ  ರಸ್ತೆಯನ್ನು ಪಿರ್ಯಾದಿದಾರರ  ಗಂಡನ  ಹೆಸರಿಗೆ ಬರೆದುಕೊಟ್ಟಿರುತ್ತಾರೆ. ರಸ್ತೆಯ ಎರಡು  ಬದಿಯಲ್ಲಿ ತೋಟವಿದ್ದು ಪಿರ್ಯಾದಿದಾರರ ಮೈದುನ ಆಲ್ಪ್ರೇಡ್‌ ಕೊನ್ರಾಡ್ ಕ್ವಾಡ್ರಸ್‌ ಈ  ತೋಟ ನೋಡಿಕೊಳ್ಳುತ್ತಿದ್ದು, ತೋಟದ ನೀರಿಗಾಗಿ ಸ್ಪಿಂಕ್ಲರ್‌ ಅಳವಡಿಸಿದ್ದು, ಇದರಲ್ಲಿ  ನೀರು  ಬಿಡುವ  ಸಮಯದಲ್ಲಿ ನೀರು  ರಸ್ತೆಗೆ  ಹಾರಿ  ಪಿರ್ಯಾದಿದಾರರು  ಹಾಗೂ  ಅವರ  ಮನೆಯವರ  ಓಡಾಟಕ್ಕೆ  ತೊಂದರೆಯಾಗುತ್ತಿತ್ತು. ಇದನ್ನು  ತೆಗೆಯುವಂತೆ  ಆಲ್ಪ್ರೇಡ್‌ ಕೊನ್ರಾಡ್ ಕ್ವಾಡ್ರಸ್‌ ನಲ್ಲಿ  ಹಲವು  ಬಾರಿ ಹೇಳಿದರೂ ಆತನು  ತೆಗೆದಿರುವುದಿಲ್ಲ. ದಿನಾಂಕ 06/04/2022  ರಂದು 17:30  ಗಂಟೆಗೆ ಪಿರ್ಯಾದಿದಾರರ ಮಗ ಸ್ಟೀಪನ್‌ ಮೂಡುಬೆಳ್ಳೆಗೆ  ಹೋಗಲು ಹೊರಟಿದ್ದು,   ಆ ಸಮಯ ಸ್ಪಿಂಕ್ಲರ್‌ ನಲ್ಲಿ ನೀರು  ಹಾರುತ್ತಿದ್ದುದರಿಂದ ಮಗ  ಒದ್ದೆಯಾಗಬಾರದೆಂದು ಪಿರ್ಯಾದಿದಾರರು ಸ್ಪಿಂಕ್ಲರ್‌ನ್ನು  ಹಿಡಿದುಕೊಂಡಿರುವಾಗ  ಆರೋಪಿ ಆಲ್ಪ್ರೇಡ್‌ ಕೊನ್ರಾಡ್ ಕ್ವಾಡ್ರಸ್‌  ಬಂದು  ಪಿರ್ಯಾದಿದಾರರನ್ನು ಗಟ್ಟಿಯಾಗಿ  ಹಿಡಿದು ಎಡಕೆನ್ನೆಗೆ  ಹೊಡೆದು, ಕೆಳಗೆ  ದೂಡಿ ತುಳಿಯಲು ಬಂದಾಗ ಪಿರ್ಯಾದಿದಾರರು  ಜೋರಾಗಿ  ಬೊಬ್ಬೆ  ಹಾಕಿದ್ದು  ಆಗ  ಪಿರ್ಯಾದಿದಾರರ  ಮಗ  ಬಂದು  ಬಿಡಿಸಿದ್ದು, ಆರೋಪಿಯು  ಪಿರ್ಯಾದಿದಾರರಿಗೆ  ಬೈದು   ಬೆದರಿಕೆ ಹಾಕಿದ್ದು,  ಪಿರ್ಯಾದಿದಾರರ ಗಂಡನ  ತಂಗಿ  ಗ್ರೇಸಿ ಕ್ವಾಡ್ರಸ್‌  ಸ್ವಲ್ಪ ದೂರದಲ್ಲಿ  ನಿಂತುಕೊಂಡು ಬೈದಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2022 ಕಲಂ: 323, 354, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 08-04-2022 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080